ಪದನೂ ಚನ್ನ ಕನ್ನೇರಾಶವುನ್ನಾತಪಾವಾದ
ಯಿನ್ನು ಏಳುವದು ಅಸಾಧ್ಯ
ಯಿನ್ನದವುರವೇನು ಆನಿಗೊಂದಿಗೆ ಮುದ್ದಾ
ಮುನ್ನಾಲಿಪುದಂಥ ಕಥೆಯಾ            ೧

ಶೀಯೆ ಆನೆಗೊಂದಿ ಕ್ಷೇಮದಲ್ಲಿರುವೋದು
ಭೂಮಿಯೊಳದಿಕವಾಹದೂ
ಆ ಮಹಾರಾಜ್ಯದ ಪ್ರೇಮದಲಿ ಆಳುವ
ಸ್ವಾಮಿ ಆಚುಕ ತಕ್ರುಷ್ಟರಾಯಾ      ೨

ಯಿರುಕಾಲಿ ರಾಯರೂ ಕೆರೆಯಾನು ಕಟ್ಟಿಸಲೂ
ವರದು ವಡ್ಡರು ಶಾಪ ಕೊಡಲೂ
ಸರಸದಿ ವಡ್ಡರಿಗೆ ನೆರೆ ಕೊಳಗದಿ ಹೊನ್ನು
ಸರಿಯಾಗಿ ಕೊಡುವೆ ನೆಂದಾ ೩

ಭರವಾಸೆವನು ಮಾಡಿ ಯಿರದೆ ಯೆಲ್ಲವ ಹೇಳಿ
ಸರಸಾದಿ ಕಟ್ಟಿಯೆನಲೂ
ಭರದಿಂದ ವಡ್ಡಾರು ಪರಿಪರಿ ಕಷ್ಟಾದಿ
ಧರಿಗೆ ಗುರುತಾಗಿ ಕಟ್ಟಿದರೂ           ೪

ಕಟ್ಟಿ ಕೆರೆಯೆನು ಮುಗಿಸಿ ನೆಟ್ಟ ನೊಡ್ಡರು ಹೋಗಿ
ಧಟ್ಟಾನೆ ವಾಜರಿಗೆ ಹೇಳೇ
ಘಟ್ಯಾಗಿ ಕಟ್ಟಿಹೆವು ಯೆಷ್ಟೆಂದು ಹೇಳಾಲಿ
ಶ್ರೀಷ್ಟಿಗಳ ಶೀನೀ ನೋಡು ಕೆರೆಯಾ   ೫

ನೋಡೆನಲಾಕ್ಷಣ ಕೂಡಿವಡ್ಡರು ಬಂದೂ
ನೋಡಿದರೆಲ್ಲಾ ಪ್ರಜೆಗಳೂ
ಕೂಡೀದ ವಡ್ಡರಿಗೆ ಯೀಡಿಲ್ಲಾ ವೆನುತಾಲಿ
ಹಾಡಿ ಹರಸಿ ಹೊಗಳಿದರೂ ೬

ಚಂದದಿ ಕಟ್ಟಿದಿವಿ ಅಂದು ಹೊಗಳಿತ ತಾಯೆನ್ನು
ಕುಂದಾದ ಇಡುರಾಜನೆನಲು
ಅಂದಾದಿ ನೇದ್ವಾರು ಯಿಂದು ನೀವು ಬಾಯೆಂದು
ಚಂದಾದಿ ಹೇಳಿದನು ರಾಜ  ೭

ಹೇಳಿದಾಕ್ಷಣಯೆಲ್ಲ ಮ್ಯಾಳಾದಿ ವಡ್ಡಾರು
ಸೂಳೈಸಿ ರಾಜನಿಂದೋಗಿ
ತಾಳಿದನ್ನಾನು ತಾಳಾದೆ ಕುಡು ನೀನು
ಬಾಳುವಿಗೆ ನಮಗಿಲ್ಲವೆನಲು           ೮

ಯೆನಲಾಗ ರಾಜಾರು ಧನದ ಕುಳಗವು ತರಿಸಿ
ವಿನಯಾದಿ ಕೊಳ್ಳೀರಿ ಯೆನಲು
ಯೇನಯ್ಯ ರಾಜಾನೆ ನೀನು ಹೇಳದವನನ್ನು
ಮೌನವಿಲ್ಲದೆ ಬ್ಯಾಗ ಕೊಡಿಸು        ೯

ಯಿಷ್ಟು ಹೊನ್ನುಗಳನ್ನು ಸಿಟ್ಟಿನಿಂದಲಿ ರಾಜ
ಯಿಷ್ಟೆ ನಾ ವಚನಗಳು
ಕೊಟ್ಟವಚನಗಳಂತೆ ನೆಟ್ಟಾನೆ ಕೊಡುಯೆಂದು
ಘಟ್ಯಾಗಿ ವಡ್ಡರು ಕೇಳಿದರು           ೧೦

ಆಡಿದು ವಚನಗಳಂತೆ ಕೂಡಿನಾ ಕೊಟ್ಟೆನು
ರೂಢಿಯೊಳ್ ತಪ್ಪದಿಲ್ಲೆಂದ
ನೋಡಿಯೇ ಕೊಳಗೆಂದು ನೋಡಿಕೊಂಡಿಗಿದೆವು
ಕೇಡು ಮಾಡಿದೆ ನಮ್ಮಿಗೆಲ್ಲಾ          ೧೧

ಭತ್ಯಾಗಳಿಲ್ಲದೆ ಮತ್ತೆ ಕೊಳಗದಿ ಮೇಲು
ನಿತ್ಯಾದಿ ಕುಡುತೇನೆಂದೇಳಿ
ವಿಸ್ತೆರಿಸಿ ನಮಗೆಲ್ಲ ಗೊತ್ತು ಮಾಡಿದೆ ನೀನು
ಸತ್ಯವೆಲ್ಲೋಯ್ತು ರಾಜಾ  ೧೨

ಹೇಳಿ ದೊಚನಗಳಂತೆ ಅಳದು ಹೊನ್ನನು ಕೊಡಲು
ತಳದು ಮಾತುಗಳ ನುಡಿವಾರು
ಶಳದು ಯೆಲ್ಲರಯೀಗ ಕೇಳಿ ಆದಿರಿಯೆಂದು
ಘಳಿಲಾನೆ ಘರ್ಜಿಸೆ ರಾಜಾ   ೧೩