(ಸತಿಗೆ ಸ್ವಾತಂತ್ರವ ಕೊಡದಿರೋ)

ಬರುಬೇಕೋ ರಾಜಾ
ಬರಬೇಕು ಪರವುಪಕಾರಕ್ಕೆ
ಸ್ತಿರವಾಗಿ ಹುಟ್ಟೀದನರನಲ್ಲಾ ನೀನೀಗಾ       ೫೧

ಅರಮಾನೆ ನಿನ್ನಾದು ವರದ್ರವ್ಯ ನಿನ್ನಾದು
ಪೆರರಿವರಲ್ಲೆಂದು ಜರಿಯಾದೆ ನೀ ಮುನ್ನಾ
ಬರುಬೇಕು ರಾಜಾ ಬ್ಯಾಗಾ ನೀ ಯೀಗಾ          ೫೨

ಹುಟ್ಟರೂದ್ಯಾತಕ್ಕೆ ಶ್ರಿಷ್ಟಿಯೊಳಗೇ ನಾನು
ಶ್ರೇಷ್ಠ ರಾಜಾರು ಬಂದಿಹಿರಿ
ಯಿಷ್ಟದಿಂದಲಿ ನೀವು ಥಟ್ಟನೆ ಬಂದಾರಿಗೆ
ಸುಟ್ಟ ಮಾತುಗಳಾಡಲ್ಯಾಕೆ            ೫೪

ಯಿಂದು ನಾ ಬರುವೇನು ಸಂದೇಹ ಬ್ಯಾಡಿರಿ
ತಂದೆ ತಾಯ ಮನೆಯೆಂದು ನಂಬಿ
ಚಂದಾದಿ ಬರುವೇನು ಮುಂದೆಯೇನಾದರ
ಬಂದದ್ದು ಬರಲೆಂದು ಮುದ್ದಾ       ೫೫

ಸ್ವಾಮಿ ಧ್ಯಾನವ ಮಾಡಿ ಪ್ರೇಮಾದಿ ಹೊರಟಾನು
ಆಮಹಾರಾಜ ಹಿಂದೇ ಗ್ರಾಮಗಳನು ಬಿಟ್ಟು
ಶೀಮೆಗಳನು ಬಿಟ್ಟು ಸಮತಾದಿ ಹೊರಟಾನು ಮುದ್ದಾ  ೫೬

ಬೇಗಸಾಗಿ ಮುದ್ದಣ್ಣ ನಗೆಯಂದ ಹೊರಡಾಲು
ಮಿಗೆ ಹೆಚ್ಚಿ ಕೊಂಡಾಡಿ ರಾಜಾ
ತೆಗೆದು ಅಪ್ಪಿದರು ಅಚ್ಚುತ ಕ್ರುಷ್ಟರಾಯರು
ಬಗೆಬಗೆಯಂದ ಮುದ್ದಾಡೀ            ೫೭

ಸಡಗರದಿಂದಾಲಿ ವಡನೆ ಮಾರ್ಬಲವಾನು
ತಡಮಾಡ ಬ್ಯಾಡ ಹೊರಡೆಂದ
ನುಡಿದಾನು ತಾನಾಗ ಮೃಡನೆ ನೀಗತಿಯೆಂದು
ನಡದಾರು ಸರ್ವಾರು ಬ್ಯಾಗ            ೫೮

ಮುದ್ದಾನ ಕರಕೊಂಡು ಯೆದ್ದಾರು ರಾಜಾರು
ಬದ್ದಾದಿ ಕಟ್ಟಿಸಿದ ಕೆರೆಯಾ
ಯೆದ್ದು ನೀ ನೋಡೆಂದು ಮುದ್ದಾಗೆ ತೋರಿದರು
ಸುದ್ದಾದಿ ಕೆರೆಯಾ ನಿರ್ಮಿತವಾ        ೫೯

ಕೆರೆಯೆ ಯೆಲ್ಲವ ತೋರಿ ಭರದಿಂದ ಹೊರಟಾರು
ಮರಿ ಆನಿಗೊಂದೀಗೆ ಬ್ಯಾಗಾ
ಪರಿಪರಿ ಜನರೀಗೆ ದೊರೆಬಂದನೆಂದ್ಹೇಳಿ
ಕರದೊಯ್ಯು ಸಿಂಹಾಸನವೇರಿ          ೬೦

ಯೇರೀಸಿ ಸಿಂಹಾಸನವಾ ಸರ್ವರೆಲ್ಲರು ನೋಡಿ
ನಾರಿಯೆರು ಆರತಿಯೆ ಬೇಳಗೇ
ಪರ್ವಕಾಲವು ಯಿಂದು ಧೊರೆಯರುವರೆಂದೇಳಿ
ಸರ್ವರಿಗೆ ತಿಳಿಯಾ ಹೇಳಿದನೂ          ೬೧

ತಿಳಿಯೆ ಹೇಳಿದರಾಗ ಘಳಿಲಾನೆಯೆಲ್ಲರಿಗೆ
ಯಿಳೆಯೆನಾಳುವರೆಂದು ಹೊಗಳೇ
ವುಳಿದರೆಲ್ಲವ ತೋರಿ ಬಳದರಮನಿಯಾನು
ಯಿಳೆಯೆನಾಳುವ ಮುದ್ದಕೂಡೇ                  ೬೨

ಯಿದು ದೊಡ್ಡ ಅರಮನೆಯದು ಸಂಣ ಅರಮನೆ
ಯಿದು ಭೋಜನಸಾಲೆ ನೋಡೆಂದ
ಯಿದು ಬೊಕ್ಕಸದರಮನೆಯದೆ ಘನ ದ್ರವ್ಯವು
ಯಿದೆ ಸಕಲ ಸಾಮ್ರಾಜ್ಯವೆಂದಾ        ೬೩

ಒರದು ಯೆಲ್ಲವ ತೋರಿ ಪರಿ ಪರಿಕೀಲಿಗಳಾ
ಸರಗಳ ವಶವ ಮಾಡಿದರೂ

ನೆರೆಶಿ ಬಾದುಂಗರಾ ಕರದು ಬೆರಳಿಗೆ ಯಟ್ಟು
ಸರಸಾದಿ ಹೊರಟಾರು ಆಗ  ೬೪