ಭೂಮೀಯೆ ಮಧ್ಯದಲ್ಲಿರುವೋದು ಬಿದರಳ್ಳಿ
ಗ್ರಾಮಾದಿ ಬ್ರಾಹ್ಮಾಣಾರಿಹರೂ
ಬ್ರಾಹ್ಮಾಣಾ ಜಕ್ಕಾಚಾರ್ಯಾರು ತಾವು ಯಿರಲಾಗಿ
ಪ್ರೇಮಾದ ಸತಿಯೂ ಜಯೆಲಕ್ಷ್ಮಿ       ೮

ಅರಸಿ ಜಯೆಲಕ್ಷ್ಮೀಗೆ ಪುರುಷಾನು ಜಕ್ಕಪ್ಪ
ಹರುಷದಿ ವಬ್ಬಮಗಳಾಗೀ
ಪರ ಉಪಕಾರಿಯಾಗಿರುವಾಳು ಭುವನಾದಿ
ಸರಸಾದಿ ಶಿವನಾ ವರದಿಂದಾಲೀ        ೯

ಭರದಿಂದ ಜನಿಸಿಹಳು ವರಪುತ್ರಿಯಾಗಿ ಹಳೂ
ವರದೊರದೂ ಕರುಣಾ ತೋರುವಳೂ
ಯಿರುತೀರೆ ಸರ್ವಾರು ವರಸಂತೋಷದೋಳಾಗ
ನೊರೆವೇನು ಮುಂದಾಣ ಕಥೆಯಾ     ೧೦

ಜಕ್ಕಪ್ಪಾಚಾರ್ಯೆರೂ ವಕ್ಕಲ ತನದಲೀ
ಮಿಕ್ಕೀದ ಭಟರಿಹ್ಯರೂ      ಪಲ್ಲಾ

ಚಿಕ್ಕಂದಾದಿಂದಾಲಿ ಚಿಕ್ಕ ಹುಡುಗರಿಗೆಲ್ಲ
ಸಕ್ಕರೆಯೆನ್ನು ಕೊಡುತಿಹರು
ಮಕ್ಕಾಳ ಕಂಡರೆ ತೆಕ್ಕಿಲಿ ಪಿಡಿಕೊಂಡು
ಗಕ್ಕನೆ ಹೋಗುವರು          ೧

ಕಂದನ್ನ ಕಂಡರೆ ತಂದು ಕೊಡುವರು ಹಾಲು
ಮುಂದೆ ಕೂಡ್ರಿಸಿ ಕೊಂಬುವರು
ಛಂದದಿ ಮಾತಾಡಿ ಮನ್ನಿಸಿ ಕಳುಹೋರು
ಕುಂದದೆ ಇರುತಿಗರು          ೨

ಒಂದು ದಿನಾವು ತನ್ನ ಮಂದಿರ ದೊಳಿರೆ
ಬಂದನನಂದದಿಂದಾ
ತಂದೇ ಅನ್ನಾವ ಕೊಡು ಯೆಂದೆನುತಾಗಲಿ
ಬಂದು ಕುಳಿತನಾಗಲು        ೩

ಕಂದ ಬಾರಯ್ಯೆ ನೀನ್ಯಾರೆಂದು ಕೇಳಲು
ಬಂದಳು ಮಾತೆ ಆಗಾ
ಬಡವಿಯೆ ಮಗವಿನ ಒಡಲಿಗನ್ನಗೊಳಿಲ್ಲ
ಒಡೆಯೆರೆ ಬಂದೆವೆಂದು       ೪

ಬಂದ ವ್ಯಾಳ್ಯಾವು ಬಹಳ ಅಂದವಾಗಿದೆ ತಾಯಿ
ಚಂದದಿ ಹೊಂದಿರಮ್ಮ
ಅಂದಿನ ದಿನದೊಳು ಹೊಂದಿಕೊಂಡಿರಿ ಯೆಂದು
ಮುಂದಾಗಿ ಹೇಳಿದರು        ೫

ನಿನ್ನ ಹೆಸು ಹೇಳು ನನ್ನ ಮನೆಯೊಳಿರು
ಭಿನ್ನ ವಿಲ್ಲೈ ನಮಗೆ
ನನ್ನ ಹೆಸರು ಮುದ್ದಯೆಂದೆಂಬುವರು ಮುತ್ತಾತ
ನಿನ್ನೂರಲ್ಲಿರುವೆವು          ೬

ನನ್ನೂರು ಮಲೆ ಸೀಮೆ ನಾವು ಕಬ್ಬಿಲಗಾರು
ನನ್ನ ಗಂಗಮ್ಮ ಯೆಂಬುವರು
ಸನ್ನುತದಿಂದಲಿ ಪನ್ನಂಗ ಗತಿಯೆಂದು
ಖಿನ್ನವಿಲ್ಲದೆ ಬಂದೆವೂ      ೭

ಯಿದ್ದುಕೊಂಡಿರು ಮುದ್ದ ಶುದ್ಧನಾಗಿಯೆ ನೀನು
ಶಬ್ದತಾರದೆ ಮನಿಯೊಳು
ಶಬ್ದನು ತರುವರನು ಲುಬ್ದ ಮನುಷ್ಯನು
ಶುದ್ಧಯರುವೆವು ನಾವು     ೮

ತಂದೆಯಿಲ್ಲದ ಮಗನು ಬಂದನು ನಿಮ್ಮಲ್ಲಿ
ಚಂದದಿಸಲಹೊ ತಂದೆ
ಬಂದು ನಿನ್ನುದರದಿ ಕುಂದದಿಬ್ಬರು ಯಿರುವೆವು
ಮುಂದೆ ನೀಗತಿ ಹೊಂದಿಸಯ್ಯ         ೯

ನಿತ್ಯದಿಂದಲಿ ನಾನು ಭತ್ಯಗಳನ್ನು ಕೊಡುವೆ
ಸತ್ಯದಿಯಿರು ಹೋಗಿರಿ
ಮುತ್ಯ ನಮ್ಮಿಬ್ಬರಿಗೆ ತಕ್ಕಂಥ ಕೆಲಸವ ಒತ್ತೀ
ನೀಹೇಳಬೇಕೊ     ೧೦