ನೋಡೀದೆ ರಾಜಾ ನೋಡೀದೇ
ನೋಡೀದೆ ರಾಜನೆ ಮಾಡೀದ ಕೆರೆಯಾನು

ಹುಟ್ಟೀದ ನೀನು ಕಟ್ಟೀದ ಕಟ್ಟೀದ
ಕಟ್ಟನ್ನು ಎಷ್ಟೆಂದು ಹೇಳಾಲಿ
ಶೃಷ್ಟಿಗಾಶ್ಚರಿಯಾಗಿ ಹುಟ್ಟಿದಾ ಕೆರೆಯಾನು   ೧೫೫

ಸುರರೋಳು ನೀನು ಬೆರೆದೇಳ್
ನರಲೋಕದೊಳಗಿನ್ನೂ ಸರಿಯಾದವರಕಾಣೆ
ಪರಿಪರಿಯಂದಲಿತರಗಳ್ಹೊಂದಿರುವಾದ         ೧೫೬

ಬಂದೀತು ದೋಷಾ ಹೊಂದೀತು ಯಂದು ನೀನೀಗಲಿ
ಬಂದಂತ ಕಾರ್ಯಾವು ಚಂದವಾಯಿತು ರಾಜ
ಕಂದನ ಕರದೊಯ್ಯೋ        ೧೫೭