ಚೋಳರಾಯೆ ದಂಡನೆತ್ತಿ ಪಾಳ್ಯಗಾರರ
ಮ್ಯಾಲೆ ಹೋಗೀ
ಹಾಳು ಮಾಡಿ ಅವರನೆಲ್ಲಾ ಬೀಳಕಡಿದಾನೂ
ಖೂಳಾರ ತರಿದಾನೂ         ೫೦

ತಾಳಿ ಕೋಪದಿ ಕಾಳು ಗೆಡಿಸಿ ಸೇಳಗೈದನೂ
ಏಳು ಕೋಪ್ಪರಿಗಿಯೆ ದ್ರ್ಯದ
ಜಾಳ ಮಾಡೀದಾ ಪಾಳ್ಯಕ್ಕೆ ಸಾರಿದಾ
ವ್ಯಾಳ್ಯವಾಯ್ತೆಂದು ಹೊರಡೆಂದಾ    ೫೧

ಎಲ್ಲದ್ರವ್ಯವ ಹೇರಿಸಿಕೊಂಡು ಬಲ್ಲಿದ ಚೋಳನೂ
ಘಲ್ಲು ಘಲ್ಲುಯೆನುತ ದಂಡ
ನಿಲ್ಲದೆ ತಂದನೂ ಮೆಲ್ಲನೆ ಬಂದನೂ
ಯಿಲ್ಲಿ ನಿಂತನೂ  ೫೨

ಅಸ್ತಮಿಸಿತು ಹೊತ್ತು ಹೋಯ್ತು ಕತ್ತಲಾದೀತೂ
ಸುತ್ತದಂಡ ಬಿಡಿಸಿಕೊಂಡು
ಮತ್ತೆ ಮಧ್ಯದಿ ಉತ್ತಮಧೈರ್ಯದಿ
ವಸ್ತಿಕನಂದದೀ     ೫೩