(ಅಟ್ಟತಾಳ) ವಿಹಿತವಾಯ್ತೆ

ತರುಳ ನೀನು ತಹರುಗಳ ನೂತಿರುವು ಹೋಗಯ್ಯೆ
ಮರುಳುತನದಿ ದುರುಳ ಹುಡುಗರ
ಸರಸ ಬ್ಯಾಡಯ್ಯಾ ಕರುಗಾಳ ಮರಿಯೆ ಬ್ಯಾಡಯ್ಯಾ ನೀನೂ
ಯಿರದೆ ತಿರುಗೈಯ್ಯಾ        ೧೧

ಕಲ್ಲುತೆಗ್ಗುತೆವರಿನಲ್ಲಿ ಮೆಲ್ಲಗೆ ಮೇಸಯ್ಕೆ
ಕ್ಷುಲ್ಲ ಹುಡುಗರ ಕೂಡ ನೀನು ಸಲ್ಲಾದವನೇಯ್ಯಾ
ನೀನು ಬಲ್ಲಿದವನಯ್ಯಾ
ಬಲ್ಲಾಬುದ್ಧಿ ನೋಡಯ್ಯಾ            ೧೨

ತಂದೆ ನೀನು ಎನ್ನ ಹೆತ್ತ ತಾಯೇ ನೀನಯ್ಯಾ
ಬಂಧು ಬಳಗವೆಂದು ನಾನು
ನಂಬಿದೆನಯ್ಯಾ ಸಲಹೊ ಮತ್ತಯ್ಯಾ
ನಂಬಿದೆ ಬಿಡಲಿ ಬ್ಯಾಡಯ್ಯಾ            ೧೩

ಕರುಣದಿಂದ ಕರದು ಕೈಯಾವಿಡಿದು ಮುದ್ದಿಸೀ
ಪರಿಪರಿ ಪ್ರೀತಿಯಾ ಮಾಡೀ
ಭರದಿ ವೂಟವಾ ಯಿರದೆ ಮಾಡಿಸಿ
ತರುಗಳ ಮೋಹಿಸೀ           ೧೪

ವಲ್ಲಿ ಕಂಬಳಿ ಮುಂಡಾಸವನುಯೆಲ್ಲವ ತಂದನೂ
ಚಲ್ಲಾಣಗಳು ಸಲ್ಲವೆಂದೂ
ಶೀರೆಕಣಗಳಾ
ಮೆಲ್ಲನ ಬಂದವಾಸೊಲ್ಲು ನಯೆನವಾ          ೧೫

ತಾತ ಕೇಳೂ ತರುಳ ನಾನು ಮಾತ ಕೇಳೈಯ್ಯಾ
ಪ್ರೀತಿಯಿಂದ ನಮ್ಮ ಸಲಹೆ
ಶಾತವಿರವೈಯ್ಯಾ ಧಾತ ನೋಡ್ಯೆಯ್ಯಾ
ತೊತ್ತು ನಾವಯ್ಯಾ           ೧೬

ಕರುಳ ಮಗನೂ ಮರುಳು ನಾನೂ ಕರುಣವಿರಲೆಯ್ಯಾ
ಶರಧಿಯೆಂತೆ ಎಮ್ಮ ನೊರೆದು
ವುರುಗಧರನಾ ಕರಣದಿಂದಾ ಶಿರದ ಮ್ಯಾಲೆ
ಕರಣವಿಟ್ಟು ಮರಿಯೆದಂತತೆ ಯಮ್ಮನೋಡೂ            ೧೭

 

(ಪದ) ಮೋಹನ

ಬಾರೆ ನೀ ಗಂಗಾಂಬೆ ಸಾರಿ ಮನಿಯೊಳಿನ್ನು
ಸೇರಿ ನೀ ಕೆಲಸಗಳ ಪೂ
ರೈಸಿ ಮಾಡಮ್ಮ ಸಾರಿ ಹೇಳುವೆ ಯಿನ್ನು
ಮುರಾರಿ ಕರಪೆಯಿಂದಲಿ     ೧೮

ನಿನ್ನ ಮಗನೂ ಮುದ್ದ ಚನ್ನ ಲಕ್ಷಣವುಳ್ಳ
ಉನ್ನಾತದಿಂದಹನು
ಇನ್ನು ನೀ ಬಂದಂಥ ಉನ್ನತಾ ವ್ಯಾಳ್ಯಾವು
ಚೆನ್ನಾಗಿ ಯಿರು ತೀಹುದು   ೧೯

ನರಲೋಕದೊಳಗಿನ್ನು ದೊರೆಯಾಗುವನು ಮುದ್ದ
ಅರಸುತಾನಾಗುವನಮ್ಮ
ಪರಿ ಪರೀ ದ್ರವ್ಯಾವು ದೊರಕೂವದೀತಾಗೆ
ಅರ ಆಯುಷ್ಯವೂ ನೋಡಮ್ಮ        ೨೦

ಇಂತು ನೇಮದ ಕೊಟ್ಟು ಸಂತೋಷದಿಂದೀರೆ
ಚಿಂತೆಯಿಲ್ಲಾದೆ ಸರ್ವರೂ
ಕುಂತು ಹರನಾ ಕೃಪೆಯೆಂತಾಗುವದು ಯೆಂದು
ಯೆಂತು ನಾನರಿಯೆ ತಾತಾ   ೨೧

ತೆಗ್ಗುಕಮರಿನೊಳು ತಗ್ದಾದೆ ಮೇಸೂತ
ತೆಗ್ಗಿಗೆ ತಾನು ಬರುಕಿಹನು
ತೆಗ್ಗಿನೊಒಳಗೆ ದೊಡ್ಡಾ ಗುಂಡೀನ ನೆರಳಿಗೆ
ಮಗ್ಗಲಗುವನು ಮುದ್ದ    ೨೨

ದಿನದಿನದಲಿ ಕರುಗಳ ಬಿಟ್ಟು ನೆರಳೀಲಿ
ಘನ ನಿದ್ರೆ ಮಾಡವನೂ
ನಿದ್ರೆಗೈಯ್ಯೆಲೂ ಸ್ವಪ್ನ ಶುದ್ದಾದಿ ಬೀಳ್ವಾವು
ಎದ್ದು ನೋಡಾಲುಯೇನಿಲ್ಲ          ೨೩