ಈ ರೀತಿಯೊಳು ಮುದ್ದ
ಯಿರು ತೀರಲೊಂದಿನ
ಮರಾರಿ ಕರುಣಾದಿಂದಾ ಸಾನೀತ ಸರ್ಪಾನು
ಸೂರ್ಯಾರಿಗೆ ಮರೆಮಾಡಲಾಗ        ೨೪

ನೆರಳೂ ಮಾಡಿದ ಸರ್ಪಾ ಕರುಣಾದಿ ಕುಳಿತೀರೆ
ವರ ಏಕಾದಶಿಯೇ ಮಂದಿರದಲ್ಲೇನಿಹುದು
ಯೆಂದು ಯೋಚಿಸಿ ಮಲಗಿದಾನು      ೨೫

ಮಂದರಕೆ ಮುದ್ದಣ್ಣ ಬಂದಿದ್ದನೆನುತಾಲಿ
ತಂದೆ ಜಕ್ಕನು ಕೇಳಲಾಗಾ
ಯೆಂದು ತಾ ಕೇಳಲು ಮಂದಿರಕೆ ಬರಲಿಲ್ಲ
ಎಂದು ಹೇಳಿದರು ಮಂದಿರದಿ           ೨೬

ಯಿನ್ನು ತಾ ಬರಲಿಲ್ಲ ಮುನ್ನಿನಂದದಿಯೆಂದು
ಮನ್ನಿಸಿ ಹೇಳಿವಾರುದಾ
ಅನ್ನಕ್ಕೆ ಬರಲಿಲ್ಲ ಮುನ್ನ ಹಸಿದನುಯೆಂದು
ಸಣ್ಣಕಂದನು ಎಂದು ಹೇಳೆ  ೨೭

ಹಶಿದನೂ ಶಿಶುವೆಂದು ಮೊಸರು ಅವಲಕ್ಕಿ
ಯೆವಸದು ಕಟ್ಟಿಸಿ ತಂದನಾಗ
ಕಸಬಿಸಿಗೊಳುತಾಲಿ ಎಸೆದು ಹುಡುಕುತಲಾಗ
ಬಿಸಿಲು ನೆರಳೆನ್ನದಾಗ        ೨೮

ಎಲ್ಲಿ ನೋಡಿದರಲ್ಲ ಎಲ್ಲಿ ಆರಸಿದರಿಲ್ಲ
ಎಲ್ಲಿ ಹೋದನು ಕಂದನೆಂದು
ಬಲ್ಲಂತೆ ನೋಡುತಾ ನಿಲ್ಲದೆ ತಿರುಗುತ
ಕಲ್ಲುಗುಮಡುಗಳ್ಹತ್ತಿ ಯಿಳಿದು      ೨೯

ತಲ್ಲಣಗೊಂಡು ತಾ ನಿಲ್ಲದೆ ನೋಡಲು
ಕಲ್ಲಿನ ನೆರಳಿನಲ್ಲೀ
ಮೆಲ್ಲನೇ ನೋಡಾಲು ಮಲಗೀರೆ ಸಪಾವು
ಉಲ್ಲಾಸದಿಂದಾಡು ತಿರಲೂ           ೩೦

ಕಂಡನು ಸರ್ಪಾನ ಪಂಡಿತ ಜಕ್ಕನು
ದಿಂಡುಗೆಡದು ವುರುಳಿದನು
ಕಂದಾನ ಸರ್ಪಾನು ತಿಂದೀತು ಯೆಂದೆನುತ
ನೊಂದಾನು ತನ್ನ ಮನದೊಳಗೆ         ೩೧

ಬಾರಲೋ ಮುಕ್ಕಂಣ ಮೋರೆ ನೋಡುವೆನೆಂದು
ಸಾರಿ ಕರೆದು ಕೂಗಿದಾನು
ಕರದ ಶಬ್ದವ ಕೇಳಿ ಉರುಗನು ಮಾಯೆದಿ
ಹೊರಟು ಹೋಯಿತು ತನ್ನ ಸ್ಥಳಕ್ಕೆ ೩೨