ಯಿತ್ತ ಚೋಳನು ಬಹಳ ಸಂತೋಷದಿಂದಿರಲೂ
ಅತ್ತಲಾಗುವ ಕಥೆ ಕೇಳೋ
ಪರಮ ರಷಿಯು ಒಂದೂ ಎರಳೇಯೆ ಸಾಕಿರಲೂ
ವರಗರ್ಭದಿನಗಳು ತುಂಬಿರಲೂ        ೫೪

ಸರುವಾರದೊಳಗಲ್ಲಿ ಹೊರಬಿದ್ದು ಮೇಯ್ತಿರಲೂ
ಭರದಿ ಬ್ಯಾನಿಗಳು ಬಂದಿರಲೂ
ಪರಕಷ್ಟತರವಾಗಿ ಎರಳೇಯೆ ಯಿರುತೀರೆ
ಭರದಿಂದ ಬೇಡ ಬೆಂಟಯ್ಯನೂ         ೫೫

ಸರುವಾರ ಗಿರಿಗಳಲೀ ಎರಳೇಯೆ ಹಿಂಡುಗಳಾ
ತಿರುವೀ ಹೊಡಿಯುತ ಬಂದಾನಾಗಾ
ಎರಳೇಯೆ ಹಿಂಡುಗಳೂ ಭರದಿ ಓಡುತ್ತಿರಲೂ
ಹರಯಂದೂ ಬೆದರೀ ಕಲಿತೋಯ್ತು  ೫೬

ಯೆಲ್ಲಾಯೆರಳೆಗಾಳು ತಲ್ಲಾಣಗೊಳುತಾಲೀ
ಬಲ್ಲೀದ ಚೋಳಾನಮುಂದೇ
ನಿಲ್ಲಾದೆ ವೋಡೂವಾ ಎರಳೆ ಹಿಂಡಿನೊಳೊಂದಾ
ತಲ್ಲಾನಗೊಳುವ ಎರಳೆಯೆನೂ        ೫೭

ಅರ್ಧಪಿಂಡವೂ ಹೊರಗೆ ಅರ್ಧದೇಹ ಒಳಗೇ
ಅರ್ಧಾಪಿಂಡಾಂಡ ಹೀಗಿರಲೂ
ಯಿಂಥಾ ಎರಳೇಯಾಕಂಡೂ ಚಿಂತಿಯಾದಿತು ಮನಕೇ
ಸಂತೋಷದಿಂದಾ ಕರದಾನು ೫೮

ಕರದಾರೆ ಎರಳೇಯು ಧೋರೆಗಳ ಹತ್ತಿರಕೆ
ನೆರೆನನ್ನ ಧಣಿಯೆಂದು ಬರಲೂ
ಕರೆದು ವುಪಚರಿಸುತಾ ಪರಿಪರಿಯೆಲೆ ರಾಜಾ
ಯಿರುತೀರೆ ಜನನವಾಯ್ತಾಗಾ          ೫೯

ಪರಮ ಋಷಿಯು ತಾನು ಸಮರಾತ್ರಿಯೊಳಗಿನ್ನು
ಹೊರಳುತ ಹುಡುಕುತಾಯಿರಲು
ಅರಸುವ ಧ್ವನಿಕೇಳಿ ವೀರರಾಜ ಚೋಳನೂ
ಪರಮ ಋಷಿಯೆ ಬಾಯೆಂದನಲೂ    ೬೦

ಮಹರಾಜ  ಕೇಳಯ್ಯಾ ಬಹುದಿವಸ ಸಾಕಿರ್ದಾ
ಬಹುಬುದ್ಧಿಯುಳ್ಳಾಯೆರಳೇಯು
ಬಹುಹಿಂಡಾ ಎರಳೇಯಾ ಕೂಡಿತಾ ಹೋಯತೂ
ಗಹನ ವಾಯ್ತೆಯ್ಯಾ ಮನಸೀಗೆ         ೬೧

ಮನ ಋಷಿ ಕೇಳಯ್ಯಾ ಕಾನನಕೇ ಹೋದವು ಎರಳೇ
ವಿನಯೆದಿ ಕರಕೊಂಡೇ ನಾನು
ಜನನವಾಯ್ತೈಸ್ವಾಮಿ ಅನುನಯೆದಿ ಉಪಚರಿಸಿ
ಗುಣದಿಂದ ನಾನು ಸಲಹಿದೆನು          ೬೨

ಎಲ್ಲಿಹ್ಯದು ಹೇಳಯ್ಯಾ ತಲ್ಲಾಣವಾಗೀದೆ
ಬಲ್ಲೀದ ಎರಳೆಯಾ ಮರಿಯಾ
ಉಲ್ಲಾಸದಿಂದಾಲೀ ಮೆಲ್ಲಾನೆ ರಾಜಾನು
ಅಲ್ಲಿದ್ದಾ ಎರಳೇ ತೋರಿದನೂ       ೬೩

ಮುನಿಪ ಎರಳೇಯೆ ನೋಡಿ ಘನ ಹರುಷಾವತಾಳಿ
ಜನಪತಿ ಬೇಡು ಬೇಡೆಂದಾ
ಮಾನೈವಾಪತಿ ಕೇಳು ಯೇನಬೇಡಿದ ಡೀವೆ
ನಿನಗೆ ಬೇಕಾದ ಪದವೀಯೆನೂ          ೬೪

ಪಾಳ್ಯಗಾರರ ಹೊಡೆದು ಏಳು ಕೊಪ್ಪರಿಕೆಗಳಾ
ಬಾಳದ್ರವ್ಯವನೂ ತಂದೀರುವೆ
ಹೇಳೂವೆ ಕೇಳಯ್ಯೆ ಹಾಳಾದ ದ್ರವ್ಯವೂ
ಹೂಳಿ ಹೋಗಯ್ಯೆ ಭೂಮಿಯೊಳೂ  ೬೫

ಯಿದು ನಿನ್ನದಲ್ಲಾವು ಯಿದು ಪರದ್ರವ್ಯಾವು
ಯಿದಕೆ ನೀಮನಗೊಡ ಬೇಡ
ಯಿದಕಾವೆಗೂಡಲು ವದಗಿ ಬರುವದು ಪಾಪಾ
ಸದರಾವಲ್ಲವು ರಾಜಾ ಬೆಡಾ          ೬೬

ಯಿದಕೊಬ್ಬ ಅಧಿಪತಿ ಒದಗೀಬರುವನು ಮುಂದೇ
ಸದಮಲಹರನಾ ಅಗ್ನಿಯೆಲೀ
ಯಿದರಂತೆ ಹೇಳಲು ಮುದದೀ ಚೋಳಾನು ದ್ರವ್ಯಾ
ವರಗಿ ಹೂಳಿದನೂ ಭೂಮಿಯೊಳೂ   ೬೭

ಈ ಪರಿಯಾಯತು ಭೂಪಕೇಳ್ ಮುದ್ದಣ್ಣ
ಶಾಪವು ಬಂದೊದಗಿತೂ
ನಾಪೂರ್ವ ಜನ್ಮಾದಿ ವಿಪ್ರನು ಕೇಳೈಯ್ಯಾ
ಈ ಪರಿಯಾದ ಕಥೆಕೇಳೂ    ೬೮

ಉಸುರವೆ ಕೇಳಯ್ಯಾ ವಸುಧೆಯೋಳ್ ಋಷಿಯಾಗಿ
ಪಶುಪತಿ ಧ್ಯಾನದಲ್ಲಿರಲೂ
ಮಸದಾ ಸೂಜಿಯೆಮೇಲೆ ವಸರುತದೆಯಾ ಸೂರಿ
ಕುಶಲಾದಿ ತಪವಾಮಾಡಿದೆನೂ         ೬೯

ರೀ ರೀತಿಯೊಳು ನಾನು ನೂರಾರು ವರ್ಷವು
ಬ್ಯಾರೊಂದು ಮನಸಿಲ್ಲದಂತೆ
ಮರಾರಿ ಧ್ಯಾನದ ಮರಿಯೆದೆ ಮಾಡಿದೆ
ಪರಮೇಶ ನಿಜರೂಪದೋರೆ            ೭೦

ನಿನ್ನ ಭಾವಕೆ ಮೆಚ್ಚಿದೆ ಏನ ಬೇಡುವಿಯೆಂದು
ಚೆನ್ನಾಗಿ ಕೇಳಿದರಾಗ
ನನ್ನ ಕೈಲಾಸಕ್ಕೆ ನನ್ನಿಯಂ ಕರೆದೊಯ್ವೆ
ಉನ್ನಂತ ಪದವಿಕೇಳಿದೆನು   ೭೧

ಪದವೀಯೆ ಕೊಟ್ಟಾನು ಪದುಳದಲ್ಲಿರುತಿಹೆನೂ
ಪದಯದಿ ಪತ್ರೆ ಪುಷ್ಟಗಳ
ಮೊದಲಾಗಿ ನಾ ತಂದು ಸದಮಲನ ಪೂಜೆಗೆ
ಒದಗಿಕೊಂಡಿರುವೆ ನಾ ಮುದದಿ        ೭೨

ಯಿರುತಿರಲೊಂದಿನ ಮರವೆಯೆ ಮದದಿಂದ
ಬೆರದೊಂದು ಹುಸಿಯೆ ಹೇಳಿದೆನು
ಪರಿಯೆಂದು ಹುಸಿಬಂತು ಧರೆಯೊಳು ನೀ ಹೋಗಿ
ಉರಗನಾಗೆಂದ ಪರಮೇಶ   ೭೩

ಚೋಳಾನಾ ಏಳು ಕೊಪ್ಪರಿಕಿಗಳಾ ದ್ರವ್ಯದ
ಹೂಳಿಹೋಗಿಹನೂ ಭೂಮಿಯೊಳು
ಮಾಳೈಸಿದ್ರವ್ಯವ ಕಾಯ್ದು ಕೊಂಡಿರುವೆಯೆಂದು
ಹೇಳಿದರು ಸತ್ಯವಚನದಲೀ ೭೪

ನನ್ನ ಶಾಪ ವೆಂದೀಗೆ ನಿಶ್ಯಾಪವು ಯೆಂದು
ಬಿನ್ನಹ ಮಾಡಿಕೊಂಡೇ
ನೀನು ಅಲ್ಲಿರುವಗ ಮಾವನಪತಿ ಬಂದು
ಅನುದಿನ ನಿದ್ದೆ ಮಾಡುವನು           ೭೫

ನರಯಿವ ನೆನಬೀಡ ದೊರೆಯೆಂದು ನೀ ತಿಳಿದು
ಕರೆಕುಮಟೆ ಕಟಟೀಸುಯೆಂದು
ಪರಿಯೆನೆಲ್ಲವಾನು ವಿಸ್ತರಿಸಿ ಒಪ್ಪಿಸಿ ನೀನು
ಯಿರದೆ ಬಾರಯ್ಯಯೆಂದಿಹರೂ        ೭೬

ಯಿಂದಿಗೆನ್ನಯೆ ಶಾಪ ಸಂಗೀತೋ ಮುದ್ದಣ್ಣ
ಬಂದೆ ನೀ ಧಣಿಯಾಗಿ ಈಗ
ಮುಂದೆ ಮಾಡುವ ಕಾರ್ಯೆ ಒಂದಾಗಿ ಹೇಳುವೆ
ಸಂದೇಹವಿಲ್ಲದೆ ಕೇಳೂ     ೭೭

ಕೆರೆಕುಂಟಿ ಕಟ್ಟಿಸು ಪರಿಪರಿಯಿಂದಾಗಲಿ
ನರರಿಗೆಲುಪಕಾರಾರ್ಥದಲಿ
ಯಿಮತ ಹೆಚ್ಚಾದ ದ್ರವ್ಯಗಳೆಲ್ಲಿ ನೀನು
ಪರಹಿತವಾಗಿ ಮಾಡಯ್ಯಾ  ೭೮

ನಾನು ಅರಿಯೆದ ಮೂರ್ಖ ನಾನು ಅಜ್ಞಾನಿಯು
ನಾನು ಬಹುಶುದ್ಧ ಪಶುವೆಂದ
ನನಗೇನು ತಿಳಿಯೆದೂ ನನಗೇನು ಬಾರದು
ನನಗೆ ಯಿದನೆಲ್ಲ ಹೇಳೆಂದ  ೭೯

ನಾನು ಹೋದಂತೆ ನೀ ಕಲ್ಲುಗಳಿಡುಯೆಂದು
ಮೌನವಿಲ್ಲದೆ ಹೇಳಿದಾಗ
ಯಿದು ಸಣ್ಣ ಕೋಡಿಯು ಯಿದು ಏಳು ಮದಗವು
ಯಿದು ಸಣ್ಣ ತೂಬು ನೋಡಯ್ಯೆ     ೮೦

ಯಿದು ದೊಡ್ಡ ತುಂಬಯ್ಯೆ ಯಿದು ಅರದೋಟಯು
ಯಿದು ದೊಡ್ಡಕೋಡಿಯೆಂದೆನಲೂ
ಯಿದರಂತೆ ನೀನೆಲ್ಲ ಸದಮಲನ ಒರದಿಂದ
ಒದಗಿ ಕಟ್ಟಿಸುಯೆಂದನಾಗ  ೮೧

ನೀನು ಮಲಗುವವಂಥ ಸ್ಥಳದಲ್ಲಿ ಯಿರುವದು
ಘನಕರದ ದ್ರವ್ಯವುಯೆಂದ
ನಿನಗೆ ತಿಳಿಯೆದಂಥ ಘನತರದ ಕಾರ್ಯೆಕ್ಕೆ
ಕನಸಿಲಿ ಅನುವಾಗಿ ಪೇಳ್ವೆ   ೮೨

ಎಲ್ಲಾವನೊಪ್ಪಿಸಿ ಬಲ್ಲಿದ ಸರ್ಪನು
ಮೆಲ್ಲನೆ ಕೇಳಿತು ಆಗ
ಉಲ್ಲಾಸದಿಂದಲಿ ಗಲ್ಲನ ಪಿಡಕೊಂಡು
ಎಲ್ಲ ಕೆಲಸಗಳ ಮಾಡೆಂದ  ೮೩

ಧರ್ಮದಿ ಕಟ್ಟಿಸು ಕರ್ಮಮಾಡಲಿ ಬೆಡ
ದುರ್ಮತಿ ಬ್ಯಾಡೆಲೊ ಕಂದ
ಮರ್ಮನ ಮಾಡಿ ಬಡಜನಕೆ ಸಂಬಳ ಕೊಡದೆ
ಸರ್ಮಿಯೆಂದೆನಿಸಿಕೊ ಬ್ಯಾಡ            ೮೪

ಉರಗಾನು ಎಲ್ಲವ ವರಬುದ್ದಿಯೆನು ಹೇಳಿ
ಹೊರಟೀತು ಕೈಲಾಸಪುರಿಗೆ
ತಿರುಗಿ ನಡಿದ ಮುದ್ದ ವರಶ್ರೇಷ್ಠ ಸರ್ಪನು
ಮುರುಗಿ ಹೋಯ್ತೆಂದು ದುಃಖಿಸಿದ   ೮೫

ಚಿಕ್ಕ ಕರುಗಳನೆಲ್ಲ ಫಕ್ಕನೆ ಕರಕೊಂಡು
ಹೊಕ್ಕನು ತನ್ನ ಮಂದಿರವ
ಚಿಕ್ಕ ತಾತನು ಕಂಡು ಚಕ್ಕಂದವಾಡಲು
ಚಿಕ್ಕ ಮುದ್ದನು ಪಾದಕೆರಗಿ ೮೬

ಮುನ್ನ ನೀ ಹೇಳಿದ ಉನ್ನತ ಸಂಪತ್ತ
ಚೆನ್ನಾಗಿ ದೊರಕಿತೊ ತಾತಾ
ಯಿನ್ನು ನೀನಿದಕಿನ್ನು ಮನುಷ್ಯ ಗಣಕಿನ್ನು
ಭಿನ್ನವಿಲ್ಲದೆ ಮಾಡುಯೆಂದಾ         ೮೭

ಭಲರೆ ಭಾಪುರೆ ರಾಜ ಸುಲಭವಾಯಿತು ಈಗ
ನಲವಿಂದ ಸಲಹೊ ಬಡವರನಾ
ವಲಿದು ನಿನಗೊರೆವೆನು ಮಲಹರನ ಕರುಣದಿ
ಭಲರೆಂದು ಜಕ್ಕ ಹೇಳಿದನೂ            ೮೮

ನೀವು ಧನ್ಯರು ತಾಯ ನೀನು ಅರಸುಗಳೆಮ್ಮ
ನೀವೆಮ್ಮ ಕೆಲಸ ಬ್ಯಾಡೆಂದಾ
ನೀವು ನಿಮ್ಮ ರಮನೆಗೆ ನೀವು ತೆರಳುವದಮ್ಮಾ
ನಾವು ನಿಮ್ಮಿಂದ ಬದುಕುವರೂ        ೮೯

ಹೀಗೆಂದ ಮಾತಿಗೆ ಆಗ ಇಬ್ಬರು ಬಂದು
ಬಾಗಿ ಸಾಷ್ಟಾಂಗ ಮಾಡಿದರೂ
ಹೋಗಿ ನಮ್ಮ ರಮನೆಯೊಳಿರಲು ನಿಮ್ಮಯೆ ಸೇವೆ
ಬಾಗಿ ಮಾಡುವೆ ಎಂದರವರು           ೯೦

ಯಿಂತೆಲ್ಲ ಹಾಗಿರಲಿ ಮುಂದಾಗೊ ಕೆಲಸಗಳ
ಸಂತೋಷದಿಂದ ಮಾಡಯ್ಯಾ
ಚಿಂತೆಯಿಲ್ಲದೆ ನೀನು ಕಂತುಹರನ ದಯೆದಿಂ
ನಿಂತು ಮಾಡೆಂದನಾ ಜಕ್ಕ   ೯೧

ಕರಸಯ್ಯೆ ಬ್ರಾಹ್ಮಣರ ತರಿಸು ಪಂಚಾಂಗವನು
ವರಶ್ರೇಷ್ಠವರ ಮುಹೂರ್ತದಲ್ಲಿ
ಬರಸಯೆಯೆ ಓಲೆಯೆ ಪರಿ ಅಷ್ಟದಿಕ್ಕಿಗೆ
ಬರಲಿ ವಡ್ಡರು ಕಾಮಾಟಿಗರೂ        ೯೨

ಬರೆಸಿದರು ಓಲೆಗಳ ವರಮೂಹೂರ್ತಗಳ ನೋಡಿ
ಕೆರೆಕುಂಟಿ ಕಟ್ಟಿಸಬೇಕೆನುತ
ಕರಸಿದರು ಸರ್ವರ ವರವಿಶ್ವಕರ್ಮರ
ಕರಸಿದರು ನಾನಾಜಾತಿಗಳ   ೯೩

ನೀವೀಗ ಕರಸಿದ ಭಾವವು ತಿಳಿಯೆದು
ಯಾವ ಕಾರ್ಯೆಗಳನ್ನು ಧೊರೆಯೆ
ನೀವುವರವಿನ ಧೊರೆಗಳೆಂಬಾ ವಾರ್ತೆಯೆ ಕೇಳಿ
ನಾವು ಕುಟುಂಬ ತಂದಿಹೆವು  ೯೪

ಏಳ್ನೂರು ವಡ್ಡಿಕೆ ಏಳ್ನೂರು ಬ್ಯಾಡಿಕೆ
ಏಳ್ನೂರು ಭಂಡಿಗಳಿಂದ ಹೇಳು
ಮುದ್ದೈರಾಜ ಯೇಳ್ನೂರು ವೀಳ್ಯವ
ಹೇಳಿ ಕೊಡಬೇಕೈಯೆ ಧೊರೆಯೇ      ೯೫

ಕೆರೆಯನ್ನು ಕಟ್ಟಿರಿ ಪರಿಪರಿಯಿಂದಾಲಿ
ಪುರಪುರುಷಾರ್ಥಕ್ಕೆ ಈಗ
ಭರದಿಂದ ನೀವೆಲ್ಲ ಸರಸದಿಂದಲಿ ದೊಡ್ಡ
ಕೆರೆಯೆ ಕಟ್ಟರಿಯೆಂದರಾಗ   ೯೬

ಕೆರೆಯೆನು ಕಟ್ಟುವ ಪರಿಯೆನು ಹೇಳಯ್ಯೆ
ಕೆರೆಯೆ ಕಟ್ಟುವರಾವ ನಮಗೆ
ಒರೆದು ತೋರೈಯೆ ಮುಂದೆ ಸರಸಾದಿ ಕಟ್ಟುವೆವು
ಭರದಿ ತೋರಿಸುಯೆಂದರಾಗ            ೯೭

ಪರಿಯೆನ್ನೆಲ್ಲವ ಹೇಳಿ ಕರದು ವೀಳ್ಯವ ಕೊಟ್ಟು
ಕರೆಕೊಂಡು ಹೋದನು ರಾಜಾ
ವರಶಿಲ್ಪಿ ಬಲ್ಲವರ ವರಗುರು ಹಿರಿಯೆರವರ
ಜಕ್ಕಸಹ ಕೂಡಿ ಹೋಗಿ      ೯೮

ಸರಸಾಗಿ ಕಲ್ಲುಗಳ ವರದಿಂದಲಿಟ್ಟಿರುವೆ
ಧರದಂತೆ ಕಟ್ಟು ನೀವೆಂದ
ಪರಮೇಶನ ದಯೆದಿಂದ ಸರಿಯಾಗುವದು ಕೆರೆಯು
ವರಪ್ರಸಿದ್ದವು ಅದೆಂದ      ೯೯

ಯಿದೆ ಸಣ್ಣ ಕೋಡಿಯು ಯಿದೆ ನೆಲ್ಲಮಾಳೀಗೆ
ಯಿದೆಯೇಳು ಮದಗಗಳೆಂದ
ಯಿದೆಸೋ ಮದಗ ಯದ್ದ ಸ್ಥಳವು ಯಿದೆ ಸಣ್ಣ ತೂಬಯ್ಯ
ಯಿದೆ ದೊಡ್ಡಕೊಬ್ಬ ಕೇಳಯ್ಯೆ        ೧೦೦

ಯಿದೆ ಅರಕೆರೆ ವಿಯೆ ಯಿದೆ ದೊಡ್ಡಕೋಡಿಯು
ಯಿದೆ ಹಿಂದೆ ವದ್ದಗುಣೆಗಳೂ
ಸದಮಲನದಯೆದಿಂದ ಹೋಗಿ ಕಟ್ಟರಯೆಂದು
ಪದುಳದಿಯಲ್ಲಿ ಹೇಳಿದನು            ೧೦೧