ಪರಹೀತ ಕಾರ್ಯೆಕ್ಕೆ ನೆರೆದೊಡ್ಡಿ ಕೆರೆಯಾನು
ವರದು ನಿರ್ಮಿಶಿದಿಯೊ ಅಣ್ಣಾ
ಪರಹೀತಕ್ಕಿಲ್ಲಾದ ಶರೀರ ವಿದ್ಯಾಕೆಂದು
ಕರುಣೀಶಿ ನುಡಿದಳು ಮಾತೆ ೧೮೧

ಆಡಿದ ಮಾತುಗಳ ಮಾಡೀತು ಪ್ರಜೆಯೆಲ್ಲಾ
ಪಾಡಿ ಕೊಂಡಾಡಿ ಹೊಗಳಿದರೂ
ರೂಢಿಯೊಳಗೆ ನಿಮಗೆ ಯೀಡಿಲ್ಲವೆನುತಾಲಿ
ಜೋಡಿಸಿ ಕರಗಾಳ ಮುಗಿದರಾಗಾ     ೧೮೨