ನಾನೆಲ್ಲಿ ಗೋಗುವೆನೇ ತಾಯೆಮ್ಮ ಕೇಳೂ
ನಾನೆಲ್ಲಿಗ್ಹೋಗುವೆನೇ
ನಾನೆಲ್ಲಿಗ್ಹೋಗೂವೆ ನಿಮಗ್ಯಾಕೆ ದುಃಖಾವು
ಘನವಾದ ಕೇರಿಯೋಳು ವಿನಯಾದಿ ಯಿರುವೇನು          ೧೮೯

ನೀನು ನೆನಶಿದಾಗ ಕನಶೀಲಿ ಬರುವೇನು
ಮನಶಿಕುಳನು ತಾಲೇ
ಜನನೀಯೆ ಬ್ಯಾಡಮ್ಮಾ     ೧೯೦

ಜನನಿ ಜನಕರನೂ ವಿನಯಾದಿ ಸಂತೈಸಿ
ಅನುನಯೆದಿಂದಲಿ ಬಂಧೂವಿಗೊಂದೀಸಿ          ೧೯೧

ಯೆಲ್ಲಾರ ಸಂತೈಸಿ ಯೆಲ್ಲರಪ್ಪಣೆಗೊಂಡು
ಬಲ್ಲೀದ ಅಣ್ಣ ನಿದ್ದಲ್ಲೀಗೆ ಬಂದಾಳು         ೧೯೨