ಅಪ್ಪಣೆ ಕೊಟ್ಟಾರು ವಪ್ಪದೆ ನಾನೀಗ
ತಪ್ಪಾದೆ ಬರುವೇನು ಅಣ್ಣಾ
ಅಪ್ಪಯ್ಯೆಗಳೆ ನೀವು ವಪ್ಪೀದ ತಾಯೀಗ
ತಪ್ಪಾದೆ ಅಂದಣವ ತರುವೇನೊ      ೧೯೩

ಅಂದ ತಕ್ಷಣದಲ್ಲಿ ಬಂದಾರು ಬೇಗನೆ
ತಂದಾರು ತಾವ್ಹೋಗಿ ಚರರೂ
ತಂದು ಯಟ್ಟಾರು ಚರರೂ ಕುಂದಾಣ ಕೆತ್ತನೆ
ಅಂದಾಣ ಪಲ್ಲಕ್ಕಿ ತೀವ್ರದಲೆ          ೧೯೪

ಬಂದು ಯೇರಮ್ಮಾನ ಕುಂದಾಣ ಕೆತ್ತಿದ
ಅಂದಾಣ ಪಲ್ಲಕ್ಕಿ ಯೇರಿಸಿದಾ
ಅಂದಳವಾ ಯೇರಿದಾ ತಂದ ಊರಮ್ಮಗೆ
ಕುಂದಾದಾರತಿಯೆ ಮಾಡಿದರೂ        ೧೯೫