ಮಂಗಳಾರತಿ ಮಾಡಿ
ಅಂಗನೆಯೆರಲ್ಲಾರು ಶೃಂಗಾರದಿಂದ ಹೊಗಳಿದರೂ
ಜಂಗಮರನು ಕರದು ಹಿಂಗದರ್ಚಿಸಿದಾಳು
ನೆಂಗ ಸೆಲಹೆಂದು ಬಿನ್ನವಿಸೇ ೨೦೧

ಅಂದಾಣ ಪಲ್ಲಕ್ಕಿ ಮುಂದಕ್ಕೆ ಹೊರಡಾಲು
ಅಂದೂಗೆ ಘಂಟೆ ಢಣರೆಂದು
ನಿಂದ ದೇಶದ ಜನರು ವಂದೀಸಿ ಕರಗಳಾ ಮುಗಿದು ಘೋ
ಳೆಂದು ಚಪ್ಪಳೆಯೆನಿಡಲೂ  ೨೦೨

ನಾನಾವಾದ್ಯಗಳಿಂದ ನಾನಾ ಜಾತಿಗಳಿಂದ
ನಾನಾ ದೇಶದ ಪರಿಶೆಯಂದಾ
ನಾನಾ ಬಿರಿದಾವಳಿಯೆ ಹೊಗಳಿಸುತ ಬರುವಾಗ
ಭಾನವಿಗೆ ಕೆಂದೂಳಿ ವಡರೇ  ೨೦೩

ಬರುಬರುತ ಅಂದಳವ ತಾನು ತರುಬಿಸಿ
ವೂರಾತಡಿಗೆ ತರುಹಿ ಕೂಡಿ
ಹಿರಿಯೆರಿಗೆ ಶರಣಾರ್ತಿ ಗುರುಗಳಿಗೆ ಶರಣಾರ್ತಿ
ಕಿರಿಯೆರಿಗೆ ಶರಣಾರ್ತಿಯೆಂದೂ         ೨೦೪

ಕರಗಾಳು ಮುಗಿದಾಳು ವರಧ್ರುಢದಿಂರಾತ
ನೆನೆಶಿಕೊಂಡಳು ಮನದೊಳಗೇ
ಹಿರಿಯೆರಾಶೀರ್ವಾದ ಪರಿಪೂರ್ಣವಿರುಬೇಕು
ಗುರು ನಿಮ್ಮ ದ್ರಿಷ್ಟಿಯರಬೇಕು        ೨೦೫

ಯೆಲ್ಲರಿಗೆ ವಂದೀಶಿ ಅಲ್ಲಿಂದ ತಿರುವಿದಳೂ
ನಲ್ಲೆ ತನ್ನ(ವ)ರಾನು ಆಗ
ಪಲ್ಲಕ್ಕಿಯೆನು ತಾನು ಮೆಲ್ಲಾನೆ ನಡಸೂತ
ಸೊಲ್ಲು ಸೊಲ್ಲಿಗೆ ಸ್ವಾಮಿಯೆನುತಾ            ೨೦೬

ಯಿಂತು ಉತ್ಸಾಹದಿ ಕಾತೆಯು ಬರುವಾಗ
ನಿಂತು ನೋಡೀತು ಜಗದ ಜನವೂ
ಭ್ರಾಂತಿಯಂದಲಿ ಜನವು ಬಾಗಿ ನೊಡಲು ದೇವೀ
ನಿಮಂತಲ್ಲಿ ಮಾಯೆವಾಗುತಲೀ       ೨೦೭

ವಂಮ್ಮೆ ಕಾಣುಸುತಲೀ ವಂಮ್ಮೆ ಮಾಯದಿಂದಾಲೆ
ವಂಮೆ ನೋಡಲು ಬಟ್ಟಾ ಬಯೆಲೂ
ವಂಮ್ಮೆ ನೋಡಲು ಬಯೆಲು ಬಯೆಲಗಿ ಬರುತಿಹಳೂ
ವರ್ಮವಾ ತಿಳಿವುದಸಾಧ್ಯ   ೨೦೮

ತಾಯೆಂದು ಕರಿದಾರೆವೋಯೆಂದು ನುಡಿವಾಳು
ಮಾಯೆವಾಗುವಳು ನಿಮಿಷದಲೀ
ಸಹಾನದಿಂದಲೀ ಆಯಾಸವಾಯ್ತೆಂದು
ಬಾಯಬಿಡುತ – ರುವುವರೂ           ೨೦೯

ಅಂಮ್ಮ ಬಹಳೂಲವಾಯ್ತು ನಿಂಮ್ಮ…ಲಾರಿವಿ
ಮರ್ಮಾವು ತಿಳಿಯಾದೆ ತಾಯ
ಯನ್ನೊಮ್ಮೆ ನೋಡಿರಿಯೆನುತ ಅವರೂಳಗೆಯೆನ್ನು
ಅನುವಯ್ತು ಯೆಂಬುವರೂ ೨೧೦

ಯಂತ ಪವಾಡಗಳಾ ಮುಂತೆ ಅನೇಕಗಳಾ
ಕಾಂತೆ ಮಾಡುತ ಬಂದಳಾಗ
ಕಂತು ಹರನಾರಾಣಿ ಸಂತೋಷದಿಂದಾಲಿ
ಅಂತಕ ನಂತಹ ಕೆರೆಗಾಗಿ      ೨೧೧

ಅಂದಾಳ ದೊಳು ತಾನು ನಿಂದು ನೋಡಿದಳಾಗ

ಅಂದಾದ ಕೆರೆಯೆ ಚಂದದಲೇ
ತಂದೆ ಮುದ್ದಂಣಾನೆ ವಂದೀಪೆ ನಿಮಗಿನ್ನು
ಮುಂದೆ ನಿಮಗ್ಯಾರು ಶೆರಿಯಲ್ಲಾ     ೨೧೨

ಯೇನು ಹೇಳಲಿ ಅಂಣಾ ನೇನು ಮಾಡಿದಕೀರ್ತಿ
ದಾನವರು ಸುರರು ಪೊಗಳುವರು
ಮಾನವಾಧೀಶನೆ ಯನ್ನು ನಿಮಗೆಣೆಯಿಲ್ಲಾವೆನುತಾಲಿ
ಗ್ನಾನದಿಂ ಕೊಂಡಾಡಿ         ೨೧೩

ನಾನೆಷ್ಟರವನಮ್ಮಾ ಮಾನವನರನಾನು
ನಿನ್ನದಯೆದಿಂದ ಕಟ್ಟಿದರೂ
ನಿನ್ನ ಕರುಣಿಲ್ಲಾದ ಮನ್ನ ತಾಕೆರೆಯೆನೂ
ಮಾನವರು ಕಟ್ಟೂವದುಂಟೆ            ೨೧೪

ನಿಲ್ಲದೆ ತಿರುಗೂತ ಯೆಲ್ಲಾವನೋಡೂತ
ಉಲ್ಲಾಸದಿಂದಾದಲಿ ದೇವಾ
ಮಲ್ಲಾನೀವಿದ್ದಲಲ್ಲಿಗೆ ಬಂದಾಳು
ಸಲ್ಲಲಿತಾಂಗೀ ಬ್ಯಾಗದಲೀ            ೨೧೫

ಅಂದಳವಾನಿಳಿದಾಳು ನಿಂದು ನೋಡಿದಳಾಗ
ಚಂದದಿಂದಿರುವ ಮಾಳಿಗೆಯಾ
ಅಂದಾದೀ ಅಂಣಾನು ಬಂತು ತಾ ತೋರದಾ
ಸುಂದರಿಯೆಂಯದು ನಿನ್ನ ಮನಯ್ಯು ೨೧೬

ನಿಂನ್ನ ಮನೆ ಯೆನಲಗ ಕನ್ನೆಹರುಷಿತಳಾಗಿ
ತಾನೆ ತಾನಾಗಿ ಒಳಹುಗಲೂ
ವುನ್ನತಾ ನವರತ್ನಾ ಹೊನ್ನಮಯೆವಾರಿರಲೂ
ಕನ್ನೆಮಾರಮ್ಮ ಹೊಗಲಾಗಿ ೨೧೭

ದಿಕ್ಕು ದಿಕ್ಕಿಲಿ ರತ್ನ ಲೆಖ್ಖವಿಲ್ಲದೆ ಹೇಳಲಾಗಾ
ಘಕ್ಕಾನೆ ನೋಡಿದಳಾಗಾ
ಚಿಕ್ಕ ತನ್ನವಾನು ಚಕ್ಕನೆ ತಾ ಬಂದೂ
ಲೆಖ್ಖವಿಲ್ಲದೆ ಹೇಳಲಾಗಾ  ೨೧೮

ಕಲ್ಲು ಮಣ್ಣುಗಳಿಂದ ಯೆಲ್ಲಾವ ಕಟ್ಟಿದರೂ
ಮಲ್ಲಾವ ಮಾಡಿದ್ದರಿಂದು
ಕಲ್ಲಿಲ್ಲ ಕನಕಾವು ಯೆಲ್ಲೆಲ್ಲಿ  ನೋಡಾಲು
ಅಲ್ಲಲ್ಲಿ ನವರತ್ನ ಮಯೆವೂ         ೨೧೯

ತಾಯಿ ತಾ ಬರಲಾಗಿ ಮಾಯಾದರ ಮನೆಯಾಗಿ
ಮಾಯಾವು ತಿಳಿಯೆದೆ ತಾಯೀ
ನೆಯಾಸದಿಂದಾಲೆ ಭಾಯಾದಿ ಅಂಣಾನ
ಬಾಯೆಂದು ಕರದಾಳು ದೇವೀ          ೨೨೦

ಅಣ್ಣಾನೇ ನಾನಿಲ್ಲಿ ಚನ್ನಾಗಿ ಯರುವೇನು
ಯಿನ್ನುನರಮಾನವರಿಹರೂ

ಸನ್ನುತದಿ ಬಾಗಿಲಿಗೆಯಿನ್ನು ಯಿಡಿರೂತಿಯೆನೂ
ಭಿನ್ನವಿಲ್ಲದೆ ಕಟ್ಟಿನೆಂಣಾ   ೨೨೧

ಕಟ್ಟಿರೆಂದಾಕ್ಷಣಕ್ಕೆ ಥಟ್ಟಾನೆ ಕಟ್ಟಿದರೂ
ಘಟ್ಯಾದ ಕಲ್ಲೂಗಳಿಡಿದೂ
ನಿಷ್ಠೆಯಂದಲಿ ಅರಗಿನ ಮುದ್ರೆ ತಾನಾಗಾ
ಧಿಟ್ಟ ಮುದ್ದಂಣ ಮಾಡಿದನೂ       ೨೨೨

ಆಗಷ್ಟ ದಿಕ್ಕುಗಳ ಬ್ಯಾಗಾನೆ ನೋಡಾಲು
ಕೂಗಿದವು ಭೂತಗಳು ಯಿರದೇ
ಬ್ಯಾಗನ್ನ ಕೊಡು ನೀನು ಯೀಗಲುಂಬುವೆವೆಂದು
ಸಾಗಿ ಮಾತುಗಳ ನುಡಿದಾವು            ೨೨೩

ಅನ್ನ ಶಾಂತಿಗಳನ್ನು ಚೆನ್ನಾಗಿ ಮಾಡೆಂದು
ಅಣ್ಣ ಮುದ್ದಗೆ ಹೇಳಲಾಗಾ
ಇನ್ನು ಜಂಗಮರನ್ನು ಮುನ್ನಬ್ರಾಹ್ಮಣರನ್ನು
ಇನ್ನುಳಿದ ಸಕಲ ಜಾತಿಗಳಾ ೨೨೪

ಉನನ್ತದಿ ಪಾತಿಗಳ ಚೆನ್ನಾಗಿ ಬರಿಯೆಂದು
ಭಿನ್ನವಿಲ್ಲದೆ ಮುದ್ದ ಹೇಳೇ
ಅನ್ನ್ಯೋನ್ಯದಿಂ ಬರಲೆಮುನ್ನಲೆ ದಂಗೂರಾ
ಸನ್ನೂತದಿಂದ ಹೊಡಶಿದರೂ          ೨೨೫

ದಿಕ್ಕು ದಿಕ್ಕಿನ ಜನರೂ.. ಭಯೆವಿಲ್ಲದೆ ಬರಲು
ಘಕ್ಕನೇ ಅಡಿಗೆ…ಡರಿದರೂ
ಕಕ್ಕುಲಾತಿಯು ಬ್ಯಡ ತಕ್ಕ ಪದಾರ್ಥಗಳಾ
ಯಕ್ಕಿರಿಯೆಂಧು ಕೂಗಿಸಿದಾ ೨೨೬

ಮನದಿಚ್ಛೆಯೆನು ತೊಟ್ಟು ಅನುವಾಗಿ ದಾಸಾಹ
ವನುಮಾಡಿ ದಿನಯೇಳರಲ್ಲಿ
ಮನಮುಟ್ಟಿ ಸರ್ವಜಾತಿಯೆ ಜನರು ಹೊಗಳಿದರೂ
ಜನಕ ನಿನಗ್ಯಾರು ಸರಿಯಲ್ಲಾ          ೨೨೭

ಹಾಡಿ ಹರದಿಸರಾಗ ಪಾಡಿಕೊಂಡಾಡಿದರೂ
ರೂಢಿಯೆ ಜಗದ ಜನರೆಲ್ಲಾ
ಮಾಡಿದಾರಾಧನೆ ಬೇಡಿದ್ದು ಕೊಟ್ಟೆ ನೀ
ಮಾಡೀದ ಕೆರೆ ಸ್ಥಿರವಿರಲೀ  ೨೨೮

ಕೆರೆಯೆ ಶಾಂತಿಯೆ ಮಾಡೀ ವರಹಣ್ಣು ಕಾಯ್ಗೆಳಾ
ವರಕನ್ನೆರಾನ ಸನ್ನಿಧಿಗೆ
ವರವು ಬೇಡಿದರಾಗಾ ನರರೂಗಳೆಲ್ಲಾರು
ಪರಿಪರಿಯಂದ ಪೂಜಿಸಲೂ ೨೨೯

ಅಷ್ಟವಿಧ ಪೂಜೆಗಳಾ ನಿಷ್ಟೆಯಂದಲಿ ಮಾಡಿ
ಘಟ್ಯಾಗಿ ಬೇಡಿ ವರಗಳನೂ
ಧಿಟ್ಟಿ ನೀ ನಮ್ಮಾಗೆ ಯಷ್ಟಾರ್ಥ ಕುಡುಯೆಂದು
ಸೃಷ್ಟೀಯೆ ಜನರೂ ಜಯೆವೆನಲೂ    ೨೩೦