ಶ್ರೀ ಯಿನ್ನು ಮುದ್ದಂಣಾನು ತನ್ನ ಅರಮನೆಗಾಗಿ
ಪನ್ನಂಗ ಧರನೆ ಗತಿಯೆನುತಾ
ಯೆನ್ನಾನು ನೀನೀಗ ಮನ್ನಿಶಿತಾಯೆಂದು
ಭಿನ್ನೈಶಿ ಕುಳಿತಾನು           ೧

ಯೇಳ್ನೂರು ವಡ್ಡ ಭರದಿಂದೆಲ್ಲರು ಬಂದೂ
ವರದು ಹೇಳೈಯೆ ಕೆಲಸಗಳಾ
ಸರಸಾದಿ ಮಾಡುವೆವು ಯಿರದೇನ ತೋರೆಂದು
ಅರಸಾನ ಕೇಳೀದರಾಗಾ      ೨

ಭಾಳ ಹಣವುಳುದಾವೆ ಯೋಳು ದಿಡುಗಗಳನ್ನು
ಮ್ಯಾಳೈಸಿ ಕಟ್ಟೀರಿಯೆಂದಾ
ಹೇಳಿದಾಕ್ಷಣದಲ್ಲಿ ಘೋಳೆಂದು ಸರ್ವಾರು
ಗೊಳ್ಳೆತಗದಂತೆ ಹೊರಟಾರು           ೩

ಮನಿಗ್ಹೋಗಿ ತಾಯೇಗೆ ಅನುನಾಯೆದಿಂದಾಲೀ
ಕನಸಾಯ್ತು ಹೋಗೂವೆನೆಂದಾ
ವಿನಯೆ ಮಾರ್ಗದಿ ಕಂನ್ನೆಯೀರಮ್ಮನಲ್ಲಿಗೆ ಹೋಗಿ
ಕನಶೀನ ಪರಿಯೆಲ್ಲ ಪೇಳೆ   ೪

ಅಣ್ಣಾ ನೀ ಹೋದಂಥ ವುನ್ನತಾ ಕೆಲ್ಸಗಳೂ
ಚನ್ನಾಗಿ ಆಗೂವದೆನಲೂ
ನಿನ್ನ ಕರುಣವುಯೆನಗೆ ಪೂರ್ಣಯಿರಬೇಕೆಂದು
ಭಿನ್ನೈಶಿ ಸಾಷ್ಟಾಂಗ ಮಾಡೀ           ೫

ಯೆರಗಿದಂಣನ ಬಳಿಗೆ ಭರದಿಂದ ಬಂದಾಳು
ಕರುಣದಿಂದೆತ್ತಿ ಹರಶಿದಳೂ
ತಡಂವೇಕೆ – ನೀನೀಗ ಸ್ಥಿರವ ಮಾಡಿಸು ಯೆಂದೂ
ವರದೆಲ್ಲ ಹೇಳಿ ಕಳುಹಿದಳೂ          ೬

ವರವನು ಪಡಕೊಂಡು ಯಿರದೆ ತಾ ಬಂದಾನು
ಅರಮನೆ ಬೀದಿಯೊಳಾಗಾ
ಪರಿಪರಿ ಜನರುಗಳಾ ಕರಶಿಕಂಡನು ರಾಜಾ
ವರತುರುಗವನೇರಿ ನಡದಾ  ೭

ಯತ್ತಾಲಿ ಕನ್ನೇರ ನೆತ್ಯಾವ ನಡಸೂತ
ನಿತ್ಯ ಪಾವಾಡಗಳು ಮೆರಿಯೋ
ಸುತ್ತ ಗ್ರಾಮದ ಜನರೂ ವಿಸ್ತರಿಸಿ ಕೇಳಿದರೂ
ಅರ್ಥಿಯೆಲಿ ಕೊಡುತ ವರಗಳನೂ      ೮

ಘನ ಶುಕ್ರವಾರದಿ ವಿನಯಾದಿ ನಾಂಟ್ಯವಾ
ಅನುವಾಗಿ ಆಡುತಲಿಹಳೂ
ಜನಬಂದು ನೋಡಾಲು ನಾನಾವಾದ್ಯದ ಶಬ್ದ
ಅನುವಾಗಿ ಕೇಳ್ಯೂಕೆ ಜನಬಂದು ನೋಡಾಲು
ನಾನಾವಾದ್ಯದ ಶಬ್ದ ಅನುವಾಗಿ ಕೇಳೂತಲಿಹವೂ        ೯

ಗೌರೀಯೆ ಹುಡುಗರು ಕಡು – ಬಡವರು ಹೋಗಿ
ವರಕಂನೇರಂಮನೆಂದನಲೂ
ಕರದ ಧ್ವನಿಗಳ ಕೇಳಿ ಭರದಿಂದ ತಾಕೂಡಿ
ಕರದಳೂ ಕರಣ ವಾದ್ಯದಲೀ

ತಡವ್ಯಾಕೆ ಹೇಳಿರಿ ಧ್ರುಡದಿಂದ ನೀವೆಲ್ಲ
ನುಡಿಯೆಲೆರಗಿದರು ಚರಣದಲೀ
ಕುಡು ಬಿಡದೆ ಗೌರಿಯೆನಾಡಿ
ಕುಡುವೇವು ಯೆಂದು ಕೇಳಿದರೂ       ೧೧

ತಂದು ನಾ ಕೊಡುವೇನು ಮುಂದಕ್ಕೆ ಹೋಗಿರಿ
ತಂದಿಟ್ಟು ಕರೆವೆ ನಿಂಮಗಳಾ
ತಂದುಗುಂಪಿಯೆ ನಿಡಲೂ ಅಂದಾದಿ ಅವರವರ
ಚಂದಾದಿ ವಿವರೀಸಿ ತಾಯಿ  ೧೨

ನಿಂದು ಕರೆಯೆಲು ಅವರು ಬಂದಾರು ಬೇಗನೆ
ಚಂದಾದಿ ಹರುಷದೊಳಾಗಾ
ಸಂದೋಹ ಗೂಡಿ ತಾ ತಂದು ಗೌರಿಯೆ ನಾಡಿ
ಮುಂದೆ ತಂದಿಟ್ಟರು ಯೆಲ್ಲಾ          ೧೩

ಬಾರಮ್ಮಾ ಕಂನೇರಾ ವೂರೆಲ್ಲಾ ನೋಡಿದರೂ
ಸಾರಿಕೊಂಡಾಡಿ ಹೊಗಳಿದರೂ
ಸರ – ತದೊಳಗೇ ವುಡವೆ ವಸ್ತುಗಳೆಲ್ಲ
ಬೆರಗಾಗಿ ನೋಡಿದರಮ್ಮಾ  ೧೪

ಮಕ್ಕಾಳೆ ಹೋಗೀರಿ ಚಿಕ್ಕಾವರೆಲ್ಲರೂ
ತ್ಯಕ್ಕೊಂಬುವೆನು ವೊಡವೆಗಳನೂ
ಘಕ್ಕಾನೆ ಫಲಹಾರ ಯಕ್ಕಿಯೆಲ್ಲರಿಗಾಗ
ಚಕ್ಕಂದದಿಂದ ಕಳೂಹುತಲೆ ೧೫

ಯಿಂತಿರುತಿರೆ ಬಹಳಾ ಹತ್ತೋತು ಮಳೆಗಾಲ
ವತ್ತರಿಸುತ ಬಂತುಸುರಿಯೆ
ಗೊತ್ತಿಲ್ಲದಳ್ಳಗಳೂ ವಿಸ್ತಾರಿಸುತಬಾರೆ
ಭರ್ತಿತುಂಬೀತು ಕೆರಿಯು ಬೇಗಾ        ೧೬

ಬಂದು ಶ್ರೀ ಗಂಗೇಯು ನಿಂದು ನೋಡಿದಳಾಗ
ಬಂಧೂರದಿಂದಿರುವ ಕೆರೆಯ
ಯಿಂದಿರೇಶನು ಯಾದನೂ ಬಂಧಿಸಿದನಲ್ಲಾದೆ
ಅಂದಳಿನ್ಯರಿಂದಲರಿದೂ      ೧೭

ಸಂದೇಹ ಗೊಳುತ್ತಾಲೆ ಸಂದೂಗಳ ಹುಡುಕೂಕ
ಬಂದಾಳ ತನ್ನೀರನೆಡಿಗೇ
ಯಿಂದು ಯೆನಗೆ ದಾರೀ ಬಂದು ತೋರಿಸುತಾಯಿ
ಯೆಂದು ಕೈಮುಗಿದು ಕೇಳಿದಳೂ       ೧೮

ದಾರಿಯೆಲ್ಲಿ ಹುದಮ್ಮಾ ಮರಾರಿವೇಲೀ
ಪುರ ಮುದ್ದಂಣ ಕಟ್ಟಿಸಿದಾ
ಮಾರದ ಕೆರೆಯೆಂದು ಸಾರ ಗಂಗಾಂಬಿಕೆ
ಸಾರ ಸಾಷ್ಟಾಂಗ ಮಾಡಿದಳೂ         ೧೯