ಹನ್ನೆರಡು ವರುಷಾವು ಯೀನ್ನುಯೇರಾಜ್ಯಾವ
ಚನ್ನಾಗಿ ಪಾಲಿಸುವ ಧೊರೆಯಾ
ಮುನ್ನಾವ ಕೋಳೀರಿಯನ್ನು ನೆತ್ಯದುಳಗ
ವುನ್ನತದಿ ಆಳುವ ಧೋರೆಯರು       ೩೦

ಪರರ ದ್ರವ್ಯಕೆ ಆಶೆಯಿರದರಾಗಲಿಬೇಕು
ಪರಸ್ತ್ರೀಯೆರಿಗೆ ಮನಸಿಡದೆ
ವೆರಶತ್ತವೆಲ್ಲಾಕೆ ವಿರಲಾತರಾಗಿರಬೇಕು
ವರನೆತ್ಯಾದಿಂದಾಳ ಬೇಕು    ೩೧

ಯೀರೀತಿ ಯಿಂದಾಲಿ ದೊರಿಗಾಲು ಯೋಚಿಸೆ
ಯಿರದ ವೋಳಿದನುಜ್ಜ ಬಾಮ್ಮಾ
ವರಮುದ್ದು ರಾಜಾನು ಯಿರುವಾನು ನೆತ್ಯಾದೆ
ಪರಶಿವನಾವರದಿಂದಾಲಿ ಹ್ಯಾನ        ೩೨

ಮೂರು ಗುಣಗಳು ಮೀರಿ ಆರುವರ್ಗವ ತರಿದು
ಶೇರಿಯೆನು ಶರಣಾನೆಂತಲಿ ಯೀ
ವರಢಣಾಯ್ಕೆನ ತೆರೆಮರದಲ್ಲಿ ಯಿರುವಾನು
ಸರಸದಿಂ ಧರ್ಮಿಷ್ಟನೆನಿಸೀ  ೩೩

ಕರೆದರೆ ಬರುವಾನು ತೀರಗರ್ವಿಯೆಲ್ಲವೂ
ಬರಿಶೀರಿ ವಾಲೇಗಳೆಂದೂ
ಬರದಾರೆ ಬರುವಾನು ವರನೆತ್ಯವಂತಾನು
ಭರದಿಂದ ನಾವು ಹೋಗುವೆವೂ        ೩೪

ಪಟ್ಟದಾ ಆನೇಯಾ ನೆಟ್ಟನೇ ಸಿಂಗರಿಸೀ
ಥಟ್ಟಾನೆ ಮರ್ಬಾಲದಿಂದಾ
ಧಿಟ್ಟ ಅಚ್ಚುತ ಕ್ರಿಷ್ಟರಾಯೆರುಗಳೆಲ್ಲಾರು
ಬಿಟ್ಟೀಯೆ ಹಿಡಿದು ದಳ ಸಹಿತಾ       ೩೫

ಬಂದಾರು ಮುದ್ದಂಣ ನಂದಾದ ಕೆರೆಗಾಗಿ
ಚಂದ ಚಂದದಲೀ ನೋಡಿದರೂ
ಯಿಂದು ಯೀತಗೆ ಸೇರಿಯೆಂಈ ಗುಣವಲ್ಲಾ
ವಂದಿಪೆವು ಯಿಂದು ಪದಗಳಿಗೇ         ೩೬

ವರಸತ್ಯದ ಮುದ್ದಂಣ ನರಮನೆಗೆ ಬ್ಯಾಗದೀ
ಸರಸಾದಿ ಮಾರ್ಬಲಾ ಸಹಿತಾ
ಭರದಿಂದ ಬರಲಾಗ ಬೆರಗಾಗಿ ಮುದ್ದಂಣ
ಪರಮೇಶನಿರದೆ ಸ್ತುತಿಸಿದನೂ          ೩೭

ಬಂದ ರಾಜರ ನೋಡಿ ಸಂದೇಹಗೊಳುತಲೀ
ಬಂದು ಪಾದಕೆ ವಂದಿಸಿದನೂ
ಚಂದ ಚಂದದಿ ಮಾನ ಬಂದವರಿಗೇ ಕೊಟ್ಟು
ನಿಂದುಪಚರಿಶಿದನಾಗಾ       ೩೮

ಬಂದ ಕಾರ್ಯೆಗಳನ್ನು ಅಂದಾದಿ ನೀವೀಗ
ಚಂದಾದಿ ಹೇಳಬೇಕೆಂದೂ
ವಂದೀಸಿ ತಾನಾಗ ನಿಂದು ಕರಗಳ ಮುಗಿಯೆ
ಮುಂದಾಣ ಕಾರ್ಯೆಹೇಳುವೆವೂ       ೩೯

ಇನ್ನು ಯೀ ರಾಜ್ಯಕ್ಕೆ ವುನ್ನಾತ ದೊರಿಗಾಳು
ಆನೆಗೊಂದಿಯು ನಮ್ಮ ಸ್ತಲವೂ
ಮುನ್ನ ಅಚ್ಚುನ ಕೃಷ್ಣ ರಾಯೆರೆಂದೆಂಬುವರೂ
ನಿನ್ನ ಕರೆಯೆಲು ಬಂದೆವೈಯ್ಯಾ        ೪೦

ಕೆರೆಯೆ ಕಟ್ಟಿಶಿದೇವು ಪರಿಪೂರ್ಣ ತುಂಬುವದೂ
ನೀರು ನಿಂದ್ರದೆ ಹೋಗುತಿಹುದೂ
ಪರಿಯದು ಅಲ್ಲಾದೆ ವರರಾಜ್ಯ ನೋಡುವದೂ
ಪೂರೈಶಿರುವದು ಮನಸಿನಲ್ಲೀ        ೪೧

ನಾವು ಹನ್ನೆರಡೊರುಷ ಭಾವಾದಿ ಹೋಗುವೆವೂ
ಈವೇವು ನಿಮಗೆ ಧೊರೆತನವಾ
ನಾವು ಬರುವರೆಗಿಂನು ಯಾವತ್ತು ರಾಜ್ಯಾವ
ಭಾವಾದಿ ಸಲಹಬೇಕಯ್ಯೆ   ೪೨

ಯೆಲ್ಲಾ ಹೇಳಲು ಮುದ್ದಾ ತಲ್ಲಾಣಿ ಗೊಳುತಾಲೀ
ಸೊಲ್ಲು ಸೊಲ್ಲಿಗೆ ಶಿವಾಯೆನುತಾ
ಬಲ್ಲೀದ ರಾಜಾರೆ ಸಲ್ಲಾದು ರಾಜ್ಯಾವು
ವಲ್ಲೆ ವಲ್ಲೆಂದು ನುಡಿದಾನು          ೪೩

ನಾನು ಮೂಢನು ರಾಜಾ ನಾನು ಮೂರ್ಖನು ತೇಜಾ
ನನಗ್ಯಾಕೆ ರಾಜ್ಯಭಾರಗಳೂ
ನನಗೀರಾಜ್ಯವನಾಳೊ ಯೋಚನೆಯು ತಿಳಿಯೆದೂ
ನನಗ್ಯಾಕೆ ಬಡವಗೆಂದೆನಲೂ ೪೪

ಯೆನಲೂ ರಾಜರು ಕೇಳಿ ವಿನಯಾದಿ ಸಂತೈಸಿ
ಘನಮಾಡಿ ಕೊಂಡಾಡಿದರೂ
ನೀನು ಮಾನ್ಯವನಲ್ಲಾ ಮಾನಾವಧೀಶನೂ
ಘನಸತ್ಯವಂತಾನು ಯೆಂದೂ            ೪೫

ಬಗೆ ಬಗೆಯಂದಾಲಿ ಮಿಗಿಲಾದ ನೀತಗಳಾ
ತಗದು ಹೇಳಿದರೆಲ್ಲಾ ವರದೂ
ಸೊಗಸಾಗಿ ನೀವಿದಕೆ ಮಿಗೆ ಪವಲು ಬೇಕೆಂದು
ತ್ಯಗದು ಕೈ ಹೆಗಲ ಮೇಲಿಡಲೂ       ೪೯