ನಮ್ಮ ಸಲಹೊ ಧೊರೆಯೆ ಕೇಳಯ್ಯರಾಜಾ
ನಿರ್ಮಿಸಿ ಹೇಳಬೇಕೋ
ಮರ್ಮವ ಮಾಡದೆ ಧರ್ಮದಿಂದಲಿ ನೋಡ ಕರ್ಮಿಗಳ್
ನಮಗೆಲ್ಲ ಧರ್ಮಾವ ಹೇಳಯ್ಯೆ       ೧೦೨

ಹಿರಿಯಾರಿಗೆಲ್ಲವ ಧರಣಾವ ಕೊಡುವೆನು
ಕಿರಿಯೆರಿಗೆಲ್ಲವಚಾಲದುಗುಲವ ಕೊಡುವೆನು  ೧೦೩

ಕರಃರಿಯರಿಗೆಲ್ಲ ಬರಸಿದಾ ಆವಾಗ
ವರಗರ್ಭಿಗಳಿಗೆ ವರಹದ ನೇಮಿಸೆ       ೧೦೪

ಕೇಳಿರೋ ಅಣ್ಣಯ್ಯಾ
ಕೇಳಿರೋ ಅಪ್ಪಯ್ಯ
ಕೇಳಿರೋ ರಾಜ ಹೇಳಿದ
ವಚನವವನು       ೧೦೫

ನೋಡಿರೇ ಅಮ್ಮಯ್ಯ
ನೋಡಿರಕ್ಕಯ್ಗೆಳೆ
ನೋಡಿರೆ ಭೂಪಾನು
ಈಡ್ಯಾಡಿದೊಚವನವ        ೧೦೬

ನೀನೆ ನಮ್ಮಯೆ ತಂದೆ
ನೀನೆ ನಮ್ಮಯೆ ತಾಯಿ
ನೀನೆ ನಮ್ಮಯೆ ಬಂಧು
ಬಳಗವು ರಾಜ      ೧೦೭

ನಿಮ್ಮಂಥ ದೊರೆಗಳ
ನರರೊಳು ಕಾಣೆವು
ನಿಮ್ಮಂಥ ಧೊರೆಗಳು
ಭೂಮಿಯೊಳಗಾರಿಲ್ಲ       ೧೦೮

ಯಿದರಂತೆ ಸಂಬಳ
ವದಗಿ ನಿಶ್ಚಯೆ ಮಾಡೆ
ಪದುಳದಿ ಸರ್ವರು
ಮುದದೊಳಾರಂಭಿಸೆ         ೧೦೯

ಒಂದೆರಡು ಮೂರು
ದಿನವು ಕಟ್ಟಸರ್ವರು
ಬಂದುಸಂಬಳ
ಕೊಡುಯೆಂದು ಕೇಳಿದರಾಗ ೧೧೦

ನಿಂದರಂಗಳದಲ್ಲಿ
ಬಂದರೆಲ್ಲರು ನೋಡಿ
ಛಂದವಾಯತು ಎಂದು
ಬಹಳ ಸತೋಷದಿ ೧೧೧

ಯೇಳು ಸಾವಿರಮಂದಿ
ಮ್ಯಾಳೈಸಿ ಬಂದೀತು
ಹೇಳಯ್ಯೆನಾಗಾನೆ
ತಿಳಿಯೆದಾಲೋಚನೆ           ೧೧೨