(ಭಾಗ್ಯದ ಲಕ್ಷ್ಮಿ ಬಾರಮ್ಮಯೆಂಬಂತೆ)
(ಮುದ್ಧ ರಾಜನವರ)

ಬಾರಮ್ಮ ತಾಯೇ ನಾರೀನೀ
ಬಾರಮ್ಮ ತೋರಮ್ಮ ಮುಖಗಾಳ
ವಾರೀಜ ಮುಖಿನೀನು ಭೋರಾನೆ ಬೇಗಾದಿ
ಬಾರಮ್ಮ ಯೇವೂರಗೇವ   ೧೫೮

……..ವಡಯಾರು ನೀವು ಕೂಡಂಮ್ಮಾ
ಬಡವಾನು ವೊಡಹುಟ್ಟದವರಂತೆ
ಬಡಮತಿಗಳ ನೀಗಿ ಧ್ರುವದಿಂದ ಬರತೀನಿ
ತಡಮಾಡ ಬ್ಯಾಡಂಮ       ೧೫೯

…..ಬಂದಿ ಹೇನಮ್ಮ ನುರಿಧಾಕಲಾ ಯದು
ಎಂದೀಡೆ ನಿಂಮ ಚಂದ್ರಮುಖಿಯೇ ನೀನು
ಸಂದೇಹವಿಲ್ಲದೆ ಮುಂದಾದೆ ನೀನೀಗಿ
ಛಂಧಾದಿ ಬೇಗಾವೆ            ೧೬೦

ಕರದನ್ನೆರಗಾಳಾ ಯೀರಮ್ಮನು
ವರದು ಕೇಳಿದಳೂ
ಅರಮನೆಯೊಳಗಿಂದ ಭರದಿಂದ ಬಂದಾಳು
ಕರದಾಳೂ ತಂನ್ನಾಯ ತರುಣವಾತ್ಯಂ ಮಾತೆ  ೧೬೧

ಬಾರಂಣ ಬ್ಯಾಗವಳೆಗೆ ಯೀಗ ಬಾರಣ್ಣ ಬ್ಯಾಗ
ಬಾರಣ್ಣ ಯೆನುತಾಲಿ
ಭರದಿಂದ ತಾಬಂದೂ ಕೊರಳೀಗೆ ಕೈಹಾಕಿ
ಪರಿಪರಿ ಆಡೂತ   ೧೬೨

ದಿನದಿನ ನಾನು ಅಣ್ಣಾಯೆಂದು ನೆನಸುತ್ತಲಿಹೆನು
ನನ್ನನೆನಶಿ ತೀರಿಂದ – ಅಂಣ್ಣಾ
ಬೇಗನೇ ಬಂದ್ಯಾ ಉಣ್ಣು ಬಾರಣ್ಣಯ್ಯೆ
ಹಂಣ್ಣು ನೆತ್ಕಾರಿಹಾಲಾ     ೧೬೩

ಉಲ್ಲಾಸದಿಂದ ಅಂಣಾ ನೀನು ಎಲ್ಲಿದ್ದೆಯೆನುತಾ
ಗಲ್ಲಾವ ಪಿಡಿ…ದು
ಯೆಲ್ಲಿ ಹೋಗಿದ್ದೆಂದು ಮೆಲ್ಲಾನೆ ನಲುವಿಂದ
ನಿಲ್ಲಾದೆ ಕುಷಿಯಾಗಿ ಬಾರಂಣ ಬ್ಯಾಗಾ         ೧೬೪

ತಿರುಗಿ ನೋಡಿದಳೂ ಯಿರುವಜನ
ಪರಪರಿಯರಲೂ ಕೈತಳಕಯ್ಯೆನು ಬಿಟ್ಟು
ವರಿಗಿ ತುಡಿಯೊಳಾಗ ಭರದಿಂದ ಅಣ್ಣಾನ
ಯಿರುವೆಲ್ಲಾ ಹೇಳು ನೀ ಬಾರಂಣ ಬ್ಯಾಗ       ೧೬೫

ಯಿನ್ನೂ ಯೀಜನರೂ ನಿಂನಯೆ ಹಿಂದೆ
ಘನವಾಗಿ ಯಿಹರೂ ಯೇನು ಕಾಯ್ವುವುಂಟು
ಯೇನಣ್ಣ ತಿಳಿಯಾದು ಮವುನದಿಂದಲಿ ಬಂದೂ
ಯೆನ್ನಾನು ಕರದೊಯ್ಯೊ ಬಾರಂಣ ಬೇಗವಳಗೆ ಯೀಗಾ  ೧೬೬