(ಹೇಳಲಾರೆನೋ ಹೇಳದುಳಿಯೆಲರೆನೋ ಎಂಬಂತೆ)

ವಪ್ಪಲಾರೆನೂ ರಾಜಾ ವಪ್ಪಲಾರೆನೂ ಭೋಜಾ
ವಪ್ಪಲಾರೆ ಕಪ್ಪು ಗೊರಳಾ ತಪ್ಪೆದೆಂಬೆನೂ     ೪೭

ವಪ್ಪಲಾರೆ ನೇರ್ಪಧರನೂ ವಪ್ಪಿದಂಥ ಕೆಲ್ಸವಂನು
ತಪ್ಪು ಬಾರದೆಂದು ಮುದ್ದಾವಪ್ಪಿ ಹೇಳಿದಾ   ೪೮

ನರರ…. ತಾದೊಳಗೆ ನೆರ್ಪಾಸ್ತಿರವು ಮಾಡೂಯೆಂದು ಹೇಳೆ
ಭರವಸೆಯೊಳು ನೇಪ್ ಹೇಳೇವುರಿಗೆ ಗೈದನೂ  ೪೯

ಪರರ ಶೇವೆ ಕಷ್ಟವಯ್ಯೆ ನರರುಗಳು ವಪ್ಪುವದಿಲ್ಲಾ
ವರದು ನಿಂದ್ಯ ಮಾಡೋರಯ್ಯೆ ಜರಿದು ನುಡಿವರೂ      ೫೦