ಯೇಳುಮದಗಗಳು ಕೂಡಿಕೊಂಡು
ಕೇಳಿದಾವು ನಿಮ್ಮ ಮಗಳಾ  ಪಲ್ಲಾ

ವಲ್ಲಾಲಿ ಕೆರೆಯೆ ಕಟ್ಟಿಸಿ ಯೆಲ್ಲಾಸ್ಥಿರವ ಮಾಡಿದೇ
ಪರಿಪರಿಯೊಳು ಆಹುತಿಗಳ
ವರದು ಕೊಟ್ಟು ನಿಲ್ಲಿಸಿದೆನೂ         ೧೫೨

ಕೆರೆಯು ಕೇಳಿತು ನೋಡು ನರರಾ ಬಲಿಗಾಳ
ಕುರಿಯು ಮರಿಯು ಕೋಣಗಳು
ವರದು ಹೇಳೊಂದು ಸಾಧ್ಯವಾಯ್ಯಾ ೧೫೩

ನೀತನವದೆಯೋಳು ನಾರೀಯೆರಾನು ಕೇಳೀತು
ಭಾರಿ ಭಾರೀ ವದೆಗಳಲ್ಲಿ
ಮೀರಿದಾಹುತಿ ಕೊಟ್ಟುನೈಯ್ಯಾ      ೧೫೪