ಕೇಳಮ್ಮ ತಾಯೀ ಕೇಳಮ್ಮ ಹೇಳೂವ ಮಾತಾನು
ಕೇಳಮ್ಮ ತಾಯೀ ಕೇಳಮ್ಮಾ

ಧರಿಯೊಳು ಈಗ ಕೆರಿಯಾನು ನೆರಸಾರಿ ಯೆಲ್ಲಾವ
ವರದು ಕಟ್ಟಿಸಿರೇನು ನರಬಲಿಗಳ ಕೊಟ್ಟು ಸ್ಥಿರವಾಗಿ ನೀಲಿಸೀದೆ
ಕೇಳಮ್ಮ ತಾಯೀ ಕೇಳಮ್ಮಾ           ೧೭೨

ಬರುತಿರೆ ಕೆರೆ ಆನುತಿರೆ
ಅರಮನೆಯೊಳು ತಂನೆ
ಯೀರಮ್ಮ ಯೀಹ್ಯಳೈಯ್ಯಾ
ಸರಸಾದಿ ಕರತಂದ ಸೇರಿಶಿಡು ಯೆಂದೀತು        ೧೭೩

ಯೋಳು ಮದಗ ದುಟ್ಟಿ
ನೆಲಮಾಳಿಗೆ ವಲಲಾದ
ಸಕಲ ಸಾಮ್ರಾಜ್ಯ ವಲ್ಲಿಹುದಮ್ಮ    ೧೭೪

ಯೇನು ಹೇಳಲಿ ತಾಯಿ
ನೀನಲ್ಲಿಯಿರಬೇಕು
ಹೀನ ಮಾವನನೆಂಬೆ ಕಂದಮ್ಮ
ಬಾರಮ್ಮ ತಾಯಿ ಬಾರಂಮ್ಮ          ೧೭೫

ಬರುಬೇಕು ತಾಯೆಮ್ಮ
ಯಿರುಬೇಕು ಕೆರಿಯೋಳು
ನರರೀಗೆ ವರಗಳ ಭರದಿಂದ ನಲಿತಾಲೀ
ಕೇಳಮ್ಮಾ ತಾಯೀ ಕೇಳಂಮ್ಮಾ        ೧೭೬

ಮುನ್ನಾ ನೀ ಮಾಡೀದ ಪುಣ್ಯಾದ ಫಲವೀದು
ಚನ್ನಶ್ರೀ ಶಿವನಾಗ್ನೆ
ಮುನ್ನಯಿರುವದಂಮ್ಯಾ ಕೇಳಂಮ
ತಾಯಿ ಕೇಳಮ್ಮ   ೧೭೭

ಯೆಲ್ಲಾ ಮಾನು ಕೇಳೀ ವುಲ್ಲಾಸವಾಯೀತು
ಮಲ್ಲಾನೆ ಕುಷಿಯಾಗಿ
ನಿಲ್ಲಾದೆ ನಗುತಾಲಿ ಬರುವೇನು ಅಣ್ಣಾ ಬರುವೇನೂ    ೧೭೮

ಒಡಹುಟ್ಟಿದಣ್ಣಾನ ವುಡಿಯೋಳು ಮಲಗಿರ್ದು
ದ್ರುಢದಿ ಅಣ್ಣನೆ ಬ್ಯಾಗಾ
ನಡಿಹೋಗೋಣೆಂದಾಳು ಬರುವೇನು ಅಣ್ಣಾ ಬರುವೇನು           ೧೭೯

ಬರುವೇನು ಅಣ್ಣಯ್ಯೆ ಅರಮನಿಯೊಳು ಹೋಗಿ
ಹಿರಿಯೆರಪ್ಪಣಿಗಾಳ ತರುವೇನು
ಭರದಿಂದಾ ಬರುವೇನು ಅಣ್ಣಾ ಬರುವೇನು     ೧೮೦