ಏಳು ಮುದ್ದಣ್ಣನೆ ಭಾಳನೇತ್ರನ ವರಪಾ
ತಾಳದಾ ವರಪುತ್ರನೆ
ಮೇಲಾದ ಶರಣನ ಸ್ಥಳಕೆ ಹೊಂದಿದಿ ನೀನು
ಶೂಲಪಾಣಿಯೆ ದಯೆದಿ     ೩೩

ಈ ಪರಿಯೆಲೀ ಜಕ್ಕ ಬಳಲೂವ ಧ್ವನಿಗೇಳಿ
ಭೂಪಾಧಿಗ್ಗನೆಯೆದ್ದಾನಾಗಾ
ಯೆದ್ದು ನೋಡಿದನಾಗ ಬುದ್ಧಿಯೆ ತಿಳಕೊಂಡು
ಉದ್ದಾರ ಮಾಡೋತಾತ    ೩೪

ತಪ್ಪಾಯ್ತೊ ತಾತಯ್ಯೆ ನಿಪ್ಪಸುವಾಗಿತ್ತು
ಒಪ್ಪಿ ಕೊಳ್ಳಿರಿಯೆನ್ನ ಗುಣವ

ಯಿನ್ನೊಮ್ಮೆ ಯಿಂಥ ದುರ್ಬುದ್ಧಿಯೆ ಮಾಡಿದರೆ
ಭಿನ್ನವಿಲ್ಲದೆ ಕೊಲ್ಲೊ ತಾತಾ         ೩೫

ಕೊಲ್ಲೋದು ಬ್ಯಾಡಯ್ಯಾ ಫುಲ್ಯಲೋಚನ ವರವ
ಸಲ್ಲೀಸಿ ಕೊಟ್ಟ ನಿನಗಯ್ಯೆ
ನಿನ್ನ ಕೊಲ್ಲುವದಕ್ಕೆ ನನಗೆಲ್ಲೋತ್ರಾಣವು
ನೀನು ಸತ್ಯದ ಶರಣಾನು     ೩೬

ಕೊಟ್ಟು ಹುಟ್ಟದೆ ನೀನು ಕೊಟ್ಟು ಪಡಿದೆಯಾ ಕಂದಾ
ತೊಟ್ಟ ಬಾಣಗಳಿರಲುಂಟೆ
ಥಟ್ಟನೆ ಬಾರಯ್ಯಾ ನೆಟ್ಟಾನೆ ಮನಿಗೋಗಾ
ಬಟ್ಟೀಯೆ ಹಿಡಿಯೆನು ನಾಗಾ           ೩೭

ನನ್ನ ಮನೆಯೆ ಕೆಲಸಯಿನ್ನು ಮಾಡಲಿ ಬ್ಯಾಡಾ
ನಿನ್ನ ಕೆಲಸಗಳು ಮಾಡುವೆವೂ
ನಾನೆಷ್ಟರವನೈಯ್ಯಾ ಮಾನ ನಿಧಿಯು ನೀನು
ಹೀನುಗುಣದವರೆನ್ನಬ್ಯಾಡಾ           ೩೮

ನಿನ್ನದು ಮನೆಯೆಲ್ಲಾ ನಿನ್ನ ಕರುಮಗಳೆಲ್ಲಾ
ನ್ನ ಬದುಕು ಬಾಳ್ವೆ ತಾತಾ
ನಿಮ್ಮಂಥ ದೊಡ್ಡವರು ನನ್ನಂಥಾ ಮೂಢಗೆ
ನನ್ನಿಯೆಂದೆನುವಾರೆ ಮಾತ್ಯಾ          ೩೯

ಪರರಾ ಬದುಕೀಗೆ ಕರುಗಳೂ ಬಿಟ್ಟು ನಿನಗೊಮ್ಮೆ
ಕರದೃಷ್ಟ ಮಾತುಗಳಾ ತಂದೇ
ಪರಮ ಪಾತಕಿ ನಾನು ನರಕೀಯುನಾನೆಂದೂ
ವರಲೀ ಹೇಳಿದನೂ ತಾತಂಗೇ           ೪೦

ಕರುಗಳು ಹೋಗಿಲ್ಲಾ ಮರಿಗಳೂ ಹೋಗಿಲ್ಲಾ
ಪರರಿಂದ ಮಾತು ಬಂದಿಲ್ಲಾ
ಶರಣನು ನೀನಯ್ಯಾ ಉರಗನು ಕರುಣಿಸಿ
ಮರಿಮಾಡಿತಯ್ಯಾ ಹೆಡೆಗಳನೂ       ೪೧

ನನ್ನಂಥ ಪಾಪಿಗೆ ಉನ್ನಥಾ ಸರ್ಪಾನು
ತನ್ನೆಡೆಗಳ ಮರೆಮಾಡೋರುಂಟೇ
ನನಗನು ಬಾರದೆಂದನುಸರಿಸುವೆ ತಾತ
ನನಗೆ ತಿಳಿಸಯೀತು ಮುತ್ಯಾನೇ        ೪೨

ನಿಲಿಸಿ ಮಾತುಗಳನ್ನು ಫಲಹಾರ ಮಾಡೆಂದೂ
ತಲೆದೂಗಿ ಮುದ್ದಾಡಿದನೂ
ವಿನಯಾ ಮಾತುಗಳಿಂದಾ ತನುಜಾನ ಕೈವಿಡಿದೂ
ಮನೆಗೆ ಬಂದನು ಜಕ್ಕಪಯ್ಯಾ          ೪೩

ನಗಿ ಮಾತಿನಲಿ ಬಂದು ಹೋಗಿಸೀದ ಭವನಾವ
ಮಿಗಿಲಾಗಿ ಮಂಚಹಾಕಿಸಿದಾ
ಸೊಗಸಾಗಿ ನಾವಿನ್ನು ಪಗಡೀಯೆ ನಾಡೆಂದು
ಮಿಗೆ ಹೇಳಿದನು ಯಿಬ್ಬರೀಗೆ           ೪೪

ತಂದೆ ಯಿಷ್ಟಂದ್ಯಾಕೆ ಮುಂದ್ಯಾಗವಡತಿನ್ನೂ
ಮಂದೀರ ನಮ್ಮದೊ ತಾತಾ
ಯಂದಿ ನಂದದಿಕೆಲ್ಸಿ ಯೆಂದೀಗೆ ಬಿಡಲರಿಯೆ
ಸಂದೇಹ ಬ್ಯಾಡೈಯ್ಯಾ ತಾತಾ         ೪೫

ಮುನ್ನೀನಂತೆ ತನ್ನ ಕರುಗಾಳ ಕರಕೊಂಡು
ಚನ್ನಾಗಿ ನಡದನಾ ಸ್ಥಳಕೇ
ದಿನಕರದ ನೆರಳೀಲಿ ಅನುವಾಗಿ ಮಲಗಾಲು
ದಿನದಂತೆ ಸರ್ಪಾಬಂದಿರಲೂ            ೪೬

ನಾನು ಸರ್ಪನು ನೋಡು ನೀನು ಬೆದರದೆಯಿರೂ
ತಾನಾನವೆಂದು ನೀ ತರುಳಾ
ಮಾನ ನಿಧಿಯೇ ನೀನು ಘನತರದ ಮಹಿಮೆಗಳಾ
ನಾನು ಹೇಳುವೆ ವಿಪ್ರನಾಗೀ ೪೭

ಕೇಳಯ್ಯಾ ಮುದ್ದುಣ ಹೇಳೂವೆ ನಾನೊಂದಾ
ಏಳು ಹೆಡೆಯಾ ಸರ್ಪನೆಂದೂ
ಏಳು ಕೊಪ್ಪರಿಗೆಗಳೂ ದ್ರವ್ಯವಿಲ್ಲಿಹುದೆಂದೂ
ಹೇಳೀದಾಕಪಟಬ್ರಾಹ್ಮಣನೂ          ೪೮

ನೀ ಸರ್ಪಾವಾದಾರೆ ನಿನ್ನಾ ವೃತ್ತಾಂತಾವ
ಮೋಸವಿಲ್ಲದೆ ಹೇಳೂತಂದೇ
ಘಾಸಿಯಾಗದೆ ಕೇಳೂ ಮೋಸಾದೆ ಹೇಳುವೆನೂ
ಈಶಮಾಡಿದ ಆಜ್ನೆಗಳನ್ನು ೪೯