ಶ್ರೀ ಗುರುವಿಗೆ ನಾನು ಬಾಗಿ ಸಾಷ್ಟಾಂಗಾವ ಮಾ
ಡೀಗ ಲೊರೆವೆನೀ ಕೃತಿಯಾ
ಸಾಗೀಸಿಕೊಡು ನಿಮ್ಮ ಯೋಗಾದ ಬಲದಿಂದ
ಬ್ಯಾಗಾದಿ ಯೆನಗೆ ಸುಮತಿಯಾ        ೧

ಶ್ರೀ ಗಣಾನಾಥನೇ ಆಗಮಾತೀತನೇ
ಯೋಗೀಗಳಿಂದ ವಂದಿಪನೇ
ಸಾಗಿಸಿಕೊಡು ನೀನು ಸಾಗೂವ ಚರಿತೆಯೆನೂ
ಬ್ಯಾಗಾನೆ ಮತಿಗೆ ಮಂಗಳವಾ           ೨

ಶ್ರೀ ಶಾರದಾಂಬಳೇ ಶ್ರೀ ಸರಸ್ಪತಿ ದೇವಿ
ವರ ಬ್ರಹ್ಮನ ರಾಣಿಯೆ ನೀನೂ
ಭರದಿಂದ ಕೃತಿಗಾಳನೊರೆವೇನು ನಾನೀಗ
ಸುರಿ ಎನ್ನ ಜಿಹ್ವೆಗ ಮೃತವನೂ       ೩

ಇದು ಸತ್ಯ ಶರಣಾನ ಸದಮಾಲ ಚರಿತಾವು
ಹೃದಯೆ ಶುದ್ಧವ ಮಾಡಿ ಕೇಳಿ
ಇದು ಪರರುಪ ಕಾರಾರ್ಥಕಾಗಿ ಮಾಡೀದ
ಪದುಳಾದಿಂ ಕಥೆಯೇ ನೊರೆವೇನೂ    ೪

ಇದರಲ್ಲಿ ದೋಷಾವು ಮುದದಿಂದಾ ತೋರಾಲು
ವದಗಿ ತಿದ್ದುವದು ಉತ್ತಮರೂ
ಛಂದಸ್ಸು ಅಕ್ಷಾಣಾ ಒಂದರಿಯೆದಾ ಕಂದಾ
ಯಂದು ನಿಮಗೆ ವಂದಿಸುವೆನೂ        ೫

ಮಳೆ ಹೋಗಿ ಕೆರೆಯೊಣಗಿ ಬೆಳೆಯು ಇಲ್ಲದೆಯರಲೂ
ತಿಳಿದು ಯಚರಿತೆ ನೋದಿದರೇ
ಮಳೆಯಂದ ಕರೆತುಂಬಿ ಬೆಳೆಯಿಂದ ಒಲವಿಂದ
ನೆಳಲಾಗಿ ವೊಲ್ಯಾಡುವುರೂ ೬

ಇದರಲ್ಲೇನಿಹುದೆಂದು ಮದದಿಂದಾ ಜರಿದರಿಗೆ
ಒದಗುವದು ಪಾಪ ನಿಮಿಷದಲೀ
ಚತುರ ಚೇಷ್ಟೆಯೆ ಬಿಟ್ಟು ಯುದರಲ್ಲಿ ಮನಸಿಟ್ಟು

ಸದಯೇಕ ಚಿತ್ತದಲಿ ಕೇಳಿ    ೭