ಕೊಡು ಕೊಡು ಬ್ಯಾಗಾ ಅಪ್ಪಣೆ ಯೀಗ
ಕುಡು ಕುಡು ಬ್ಯಾಗಾನೇ ಥಡವ್ಯಾಕೆ ನಮಗಿನ್ನು
ದಿಡಿಗೇಳು ಮುಗಿದವು ವಡಿಯೆರೆ ನೀವೀಗಾ      ೯೪

ಯೆರಡೇಳು ವರುಷ ಸರ್ವರು ಬಂದು
ಪರಿಪೂರ್ಣವಾಯ್ತು ಮರತೆವು ನಾವು
ಧೊರೆ ನಾಮದಯೆದೀ
ವರಗ್ರುಹ ಶೀಮೆ ಭೂಮಿಯೆ ಬಿಟ್ಟು ಯಿರುವೇವು
ಜರಿಯೆದೆ ಭರದಿಂದ ಯಿರದ ಮಾಡಿದೆ ವೀಗಾ   ೯೫

ಮುಂದೆಲ್ಲಾ ಕೆಲ್ಸಾ ಯಿಂದಿಗೆ ನಾವು
ಚಂದಾದಿ ನಾವು ಮುಗಿಸಿ
ಬಂಧಸೀ ಕಟ್ಟಿ ವಂದಿಸೀ ನಮಿಸೀ
ಬಂದೀಹೆವೆಲ್ಲಾರು ತಂದೆ ಮುದ್ದೈರಾಜಾ
ಕುಂದದೆಲ್ಲರಿಗಿಂನು ಸುಂದರ ವಚನಾ ೯೬

ವಸುಧೆಯೊಳೆಲ್ಲಾ ನಿಮ್ಮಯೆ ಕೀರ್ತಿ
ಪೆಸರಾಯ್ತು ಬಲ್ಲಾ ಭೂಸುರರಿಗೇ
ಆಸೆನಂದಿತೆಲ್ಲಾ ಹಸನಾಗಿ ನಿಮ್ಮಯೆ
ಶಿಶುವಾಗಿ ನಾವಿದ್ದು ನೆಡಾಣಾಯ್ಯೆನ
ಮುದ್ದ ಪೆಸರಿಟ್ಟಿವೆಲ್ಲಾರು            ೯೭