(ಕಂಗಳಿದ್ಯಾತಕೋ ಕಾವೇರಿ ರಂಗನ)

ಯೇನೆ ಮಾಡಿದ್ಯಾ ರಾಜಾ ಯೇನೆ ಮಾಡಿದ್ಯಾ
ಘಾಶೀ ಮಾಡಿ ಯೆಲ್ಲಾ ಜನರ
ಮೋಸದಿಂದ ಕಟ್ಟಸೀದ ಯೀಶ ನೋಡಿ ಕೊಳ್ಳಾಲೆಂದು
ರೋಷದಿಂದ ನುಡಿದಾರೆಲ್ಲ ಮೂನೆ ಮಾಡಿದ್ಯಾ           ೧೪

ಬಡವರನ್ನಾವ ನೀನು ನುಡಿದು ಕೆಡಿಸಿದ್ಯಾ
ವಡಿಯೆರೆಂದು ನಂಬೀ ನಾವು
ತಡೆಯೆದೆಲ್ಲಾ ಜನರೂ ಕೂಡಿ ಬಿಡದೆ ಕಟ್ಟಿದಂತಾ ಕೆರೆಯೂ
ಒಡೆದು ಹೋಗಲಯ್ಯಾ ಯೀಗ        ೧೫

ಕೆರೆಯು ತುಂಬಾಲಿ ಮೂರುದಿನಕೆ ಹೋಗಾಲಿ
ನೀರು ನಿಲ್ಲಾ ಬ್ಯಾಡಾವೆಂದು
ಸಾರಿ ಸಾರಿ ಶಾಪ ಕೊಟ್ಟು ಸೂರೆಯಾಗಾಲಿವನ ದ್ರವ್ಯ
ಭೋರನೇ ಹಾಳಾಗಲಯ್ಯೆ  ೧೬

ಕೆರಿಗೆ ಬಿತ್ತಾಯ ಫಲವು ಭರದಿ ಬೆಳಿಯಾಲು
ಕೇರಿ ಕೇರಿಯೆಲೀ ರಾಜ್ಯದಲ್ಲಿ
ಬರವು ತಪ್ಪಾ ಬ್ಯಾಡವೆಂದು ವಿರಸದಿಂದಾ ಮಣ್ಣು ತೂರಿ
ಕರದ ಬೆರಳಾ ಚಟಕಾ ತಾ ಮುರಿದು   ೧೭
ಘನದೀ ತುಂಬಾಲಿ ಮನಕೇ ಹರುಷವಾಗಾಲೀ
ವಿನಯೆದಿಂದಾ ರಾಜಾ ನೋಡಿ
ಕನಸಿನಂತೇ ಬರಿದು ಯಿರಲಿ
ಜನರು ದೋಷಾದಲ್ಲೀ ಹೊರಳೆ ನಿನಗೆ ಬಹಳ ಪಾಪಾ ಬರಲಿ       ೧೮

ಯಿಂತು ಶಾಪೀಸಿ ವಡ್ಡರು ಚಿಂತೆಯಿಂದಾಲಿ
ಭ್ರಾಂತು ಗೊಂಡು ಮೂರ್ಖರಂತೇ
ಕಂತುಹರನಾ ಧ್ಯಾನದಲ್ಲಿ ಮಾತೆ ಮಾರ್ಗಹಿಡಿದು ರಾಜನೆ
ಸಂತುನೆ ಪಂತೋಗಾಲಯ್ಯೆ ೧೯

ವಡನೆ ವಡ್ಡಾರು ಸೇರ್ಯಾರು, ಬಿಡದೆ ಶಾಪೀಸಿ
ಘುಡು ಘಡಿಸಿ ನಿನ್ನಾಯೆವೆದಲಿ
ಸುಡು ಸುಡೆಂಬೂತಾಲಿಯೆಲ್ಲ ಬಡಿದು ಮಾರ್ಗಾ
ಹಿಡಿದುಕೊಂಡು ನಡದರಾಗಾ ತಮ್ಮಾ ಪುರಿಗೇ  ೨೦

ಅವರತ್ತಾಲೆ ಬಾಗಾಲು ಭುವನಾದಿ ಮಳೆ ಸುರಿದು
ತವಕಾದಿ ತುಂಬಲಾ ಕೆರಿಯು
ಭುವನ ಕಧಿರೆ ಅಚ್ಯುತಾ ಕ್ರಿಷ್ಟಾರಾಯಾರು
ತವಕೆರಿಯಾ ನೋಡಿ ಹಿಗ್ಗಿದರೂ       ೨೧

ಮೂರು ದಿನಕೆ ಕೆರಿಯು ಬರಿದಾಗಿ ಹೋಗಲು
ಅರಸುಗಳೂ ವ್ಯಸನಾದೊಳಾಗಾ
ನಾರಿ ಶ್ರಾಪವ ಕೊಟ್ಟವರ ವಡ್ಡರ ಪಾಪಾವು
ಭೋರಾನೆ ಬಂದೀತು ಯೆಂದೂ         ೨೨

ಯಿಷ್ಟು ರಾಜ್ಯಗಳನ್ನು ಶ್ರೇಷ್ಠದಿಂದಾಳೆದೆವೂ
ಯೆಷ್ಟಿದ್ದರೇನು ಚೆಲವದೂ
ಥಟ್ಟನೆ ದೋಷಾವ ದೃಷ್ಟಿ ಪಾಪಗಳಂನ್ನು
ನೆಟ್ಟನೆ ಕಳತುಂಬುವವೇರಿ ಮ್ಯಾಗೆ    ೨೩

ವಂದು ದಿನ ರಾಜಾರು ಸೆಂದೂ ವಾದೊಳಗಾಗ
ವಂದೀ ವ್ಯಾರೆಂಡೀ ಕರುಗಳಾ
ಯಿಂದು ಯೇನಾದಾರು ಕೊಂದಿ ಪಾಪವು ಬರಲೂ
ಮುಂದೆ ತಳ ತುಂಬವವೇರಿ ಹ್ಯಾಗೆ     ೨೪

ಕೇಳಿದಾ ರಾಜರಿಗೇ ಹೇಳಿದರು ಪಂಡಿತರು
ಯೀಳೆ ಹಂನ್ನೆರಡೊರುಷ ಸೆಂಚರಿಸೇ
ತಳದು ಹೋಹೂದು ಪಾದೆ ಘಳಿಲಾನೆ ವಿವರೀಶೀ
ತಿಳಿದು ಹೇಳಿದರು ಪಂಡಿತರೂ          ೨೫

ಯಿನ್ನು ರಾಜ್ಯವು ಸುಡಲಿ ಮುನ್ನ ಭೂಮಿಯು ಸುಡಲಿ
ಯೆನ್ನ ಬಾಳುವಿಗೇತಿ ಬಿಡಲಿ
ಯಿನ್ನು ನಾ ಹೋಗುವವು ಮುನ್ನಯೇ ರಾಜ್ಯಾವ
ಚನ್ನಾಗಿ ಪಾಲೀಸುವರ್ಯಾರು         ೨೬

ಆದ ಯೇನು ಪೇಳಲಿ ಬೇಕುರಾಜಾ ನಮಗೆಲಾನ
ವದಗೀತು ಸೂರ್ಯೆತೇಜಾ
ಮೌನದಿಂದಲಿ ನಾವು ಶೀಮೆ ಭೂಮಿಯೆ ಬಿಟ್ಟು
ಶೀಮೆ ಭೂಮಿಯೆ ಬಿಟ್ಟು ವರುತೆಯೆರ ಮನೆಯೆನ್ನು ಘನದ್ರವ್ಯಗಳನೀಗಿ     ೨೭

ಯದೆನೆಲ್ಲವೆನುಗೇ ಸ್ವಾದೀನವನು ಮಡಿ
ಸದನವನು ಬಿಟ್ಟು ಮುದದಿಂದ
ಹೋಗಲಿಬೇಕು    ೨೮

ದೋಷಗಳು ಬರುತವೆಂಬುವದು ನಾವು ತಿಳಿಯೆದಲೆ
ಭಾಷೆಯೆನು ಕೊಟ್ಟು ತಪ್ಪಿದುದರಿಂದಾಲೀ     ೨೯