ಜಯೆಮಂಗಳಂ ಕನ್ನಿರಾಂಬತಾಯೆ
ಜಯಾ ಮಹಾಭಕ್ತರಿಗೇ ವರವಿತ್ತೆಯೋ
ಯೋಳೂ ಮಡಿಯಾ ಸರ್ವಯೊಳು
ತುಪ್ಪಾರತಿಹನತಾಳಿ ಮುದ್ದಂಣಗೆ ತೋರಲಾಗೀ
ಯೋಳ್ನೂರು ವಡ್ಡಿತಿಯೆ ತರಶಿ ಮುದ್ದಂಣನೂ
ಯೋಳು ವದಗದಿಯೋಳು ವರುಷಕಟ್ಟ          ೨೩೪

ಯೋಳು ನಬರಬಲಿಯೆನ್ನು ಮ್ಯಾಲೆ ಹೈದಾಹುತಿಯಾ
ಯೋಳು ಬಿಂದಿಗಿಯೆ ಹಣ ಅವರಿಗಿಟ್ಟು
ಯೋಳ್ನೂರು ವರಹವನೂ ತಂದವರಿಗಿದಿರಿಟ್ಟು
ಯೇಳು ವರುಷದ ಕನ್ನಿಕಾಂಬನಿಟ್ಟು ಜಯೆ      ೨೩೫

ಯೋಳು ಸಾವಿರ ಜನಕೆ ದಾಸೋಹವನುಯಿಟ್ಟು
ಯೋಳೇಳು ವರಹ ಧರ್ಮವನ್ನು ಕೊಟ್ಟು
ಯೋಳು ಕೆರೆಗಳ ಕೆಳಗೆ ತನ್ನ ಕೆರೆಯೆನು ಕಟ್ಟಿ
ಲೋಲಾಕ್ಷಿ ವೀರಮ್ಮ ನೀನೇ ಧಿಟ್ಟಿ    ೨೩೬

ಯೇಳು ಗ್ರಾಮಗಳೆಲ್ಲಲ್ಲಾ ಬಾಳಲಿದರಿಂದಲೀ
ಯೇಳು ವರುಷಕೆವಂಮೆ ಕೂಳೋಗಲೀ
ಯೊಳ್ಕೊರು ವರುಷಕ್ಕೆ ತಂತ್ರವು ಆಗಲೀ
ಯೋಳು ಭಾಗದಿವಂದು ಸರ್ವದಿರಲೀ ಜಯೆ     ೨೩೭

ಮುದ್ದರಾಜನೆ ನೀನು ಯಿದ್ದಲ್ಲಿ ಢಣ ಢಣಾ
ಶಬ್ದವಾಗುತ್ರೈತೆ ಯವಾಗಲೂ
ಮುದ್ದರಾಜರು ಅಲ್ಲಾ ಢಣಾಕ್ಮುದ್ಧರಾಜರು
ಬುದ್ದವವೆಂದು ವಡ್ಡರು ಪಾಡಿಪೊಗಳೆ ಜೇಯೆ            ೨೩೮

ನರಬಲಿಗಳೇಳೂ ದೇವರಿಗೆಲ್ಲ ಅಧಿಕವಾಗಿ
ಪರಬ್ರಹ್ಮಕನ್ನೀರಮ್ಮ ಹಿರಿಯೆಳೆಂದೂ
ಪರಹಿತಕ್ಕಾಗಿ ಸವರೂ ಕೂಡಿ ಸತ್ಯದಲೀ
ನೆರೆಧರ್ಮದಿಂದ ಕಟ್ಟಿಸಿದ ಕೆರೆಯೆಂಮ್ಮ          ೨೩೯

ಧರ್ಮದಿಂ ಕೆರೆಯಿರಲೂ ಧರ್ಮದಿಂಗ್ರಾಮವು ಯಿರಲೀ
ಧರ್ಮದಿಂ ಮಳೆ ಬೆಳೆಯು ಸಂತೃಷ್ಟಿಯಿರಲೀ
ಧರ್ಮದಿಂದ ವುಲುಸಿರಲಿ ಧರ್ಮದಿಂ ಜನಯಿರಲೀ
ಧರ್ಮಕರ್ಮಗಳನೇ ನೋಡೆ ತಾಯೇ   ೨೪೦

ಯೋಳ್ನೂರ ವರುಷ ಪ್ರಮಾಣ ತುಂಬಿದ ಮ್ಯಾಲೆ
ಯೊಳಿರಲೀ ವಂದು ಭಾಗವು ವುಳಿಯೆಲೀ
ಮಳೆಯು ಯಿದ್ದಂತಿರಲಿ ಬೆಳೆರಯು ಯದರಂತಿರಲೀ
ಫಲಗಳೂ ಸರ್ವವೂ ವುಲುಶಿರಲಂಮ್ಮಾ          ೨೪೧

ವದಗಿ ಹೇಳಿತು ಸರ್ವಮುದದೀ ಮುದ್ದಂಣಾಗೆ
ಪದುಳದಿಂ ನಮಗೆ ಯೆಲ್ಲವ ಹೇಳಲೂ
ಯಿದರಂತೆ ನಾವೀಗ ವದಗಿದಾ ಪ್ರಜೆಯೊಳಗೇ
ಬೆದರದೆ ಸರ್ವರಿಗು ತಿಳಿಸಿದೆವಂಮ್ಮ   ೨೪೨

ನೀನು ಯೀ ರಾಜ್ಯಕ್ಕೆ ಘನಪ್ರಸಿದ್ಧಿಯು ಯೆನಿಸಿ
ನೀನು ಕೊಟ್ಟುದವು ತಪ್ಪದಂತೆ ಯಿನ್ನು ಯೀ ಕೆರೆಯು
ಯರುವ ಪರಿಯೆಂತ್ರಕ್ಕು ಕನ್ನೇರಂ ಮನೆಂದದಧಿಕ
ವೆನ್ನೂವುದಂಮ್ಮ ೨೪೩

ಯೋಳ್ನೂರು ವಡ್ಡಿಕೆಯು ತಾಳಮೇಳದಿ ಕೂಡಿ
ಹೇಳಿದೆವು ಯೀ ಮಂಗಳಾರತಿಯೆನ್ನೂ
ತಿಳಿದೂ ಢಣಾಯ್ಕೆನ ಕೆರಯೆಂದು ಹೆಸರಿಟ್ಟು
ವಲಿದು ಬಂದರುಹೆ ಹರಿಕೆಯೆ ಕೊಟ್ಟಿವಮ್ಮ ಜಯೆಮಂಗಳಂರಾಂಬತಾಯೆ   ೨೪೪

ಸಂತೆ ಅಂಗಡಿಯೆಂತೆ ಅಂತೆ ತಿಳಿದು ನೋಡಾಲು
ಮುಂಚೆ ಮಾಡಿರಿ ಧರ್ಮಗಳನೂ       ೨೪೫
ಶ್ರೀಅಂತು ಸಂಧಿ ೨ ಪದನು ೨೪೫ಕ್ಕಂ ಮಂಗಳ ಮಹಾ