(ಫಾಲಸಯೆನ ಗೌರೀಲೋಲ ಪಾಲಿಸೊಯೆನ್ನ)

ಹೇ ರಾಜಾ ಹೋಗಿ ಬರುವೆ ವೀಗಾ ನಂಟಾರವ ಸಾಗಿ ಹೋಗಿವೆ ಬ್ಯಾಗಾ
ಶೀಮೆ ಭೂಮಿಯು ನಂದು ಗ್ರಾಮದಿ ಸ್ವಾಮಿ ಮುದ್ದನೇ ಅಂದೂ
ಪ್ರೇಮದಿ ನೇಮದ ಶರಣೆಂದು          ೬೫

ಹನ್ನೆರಡುವರ್ಷ ನಾವೀಗ ಮುನ್ನಸಂಚರಿಸುವೆವು
ನಿನ್ನದಯೆದಿ ಚೆನ್ನಾಗಿ ಬರುತಿಹೆವು    ೬೬

ನಾವು ಬರುವ ವರಿಗು ನೀವಿದನು ಭಾವಾದಿ ಸಲಹಬೇಕು
ದೇವನಂದದಿಯಾವೊತ್ತು ನಿಮ್ಮದಯ್ಯಾ        ೬೭

ಯೆಲ್ಲಾವನೊಪ್ಪೀಸಿ ಬಲ್ಲೀದ ರಾಜಾರು
ನಿಲ್ಲಾದೆ ಹೇಳಿ ಹೊರಟಾರು
ಸೊಲ್ಲು ಸೊಲ್ಲಿಗೆ ಸ್ವಾಮಿ ಪಲ್ಲವನ ಮಾಡುತ್ತ
ಮೆಲ್ಲಾನೆ ಹೊರಟೋದ ರಾಗಾ       ೬೮

ಅವರತ್ತ ಹೋಗಾಲು ಯವರಿತ್ತಲಿರುತಿರೇ
ಸುವಿಲಾಸದಿಂದ ಪಾಲಿಸುತಾ
ತವೆಸುಗ್ನಾನದಿ ತಿಳಿದು ಭುವನಾವ ನೋಡೂಕ
ಭವನಾದಿ ಯೋಚೀಸಿ ಮುದ್ದಾ        ೬೯

ವರ ತುರುಗವನೇರಿ ಪರಿಪರಿರಾಜ್ಯಾವ
ಯಿರದೆ ಕೇಳದರಿಲ್ಲಾ ನೀರು ಮೊದಲಿಲ್ಲಾವು
ಉರಿಬಿಸಿಲು ಘನವಾಗಿ ಯಿರಲೂ      ೭೦

ಯಾವ ಗ್ರಾಮವು ಹೋಗಲೂ ಯಾವ ಹೊತ್ತು ಜನ ಬಂದೂ
ಭಾಮಿಲ್ಲಾ ನೀರಿಲ್ಲಾವೆನಲೂ
ಭಾವಾದಿ ಹೇಳೀದ ಯೀವೇನು ಭುವನಾವು
ಕಾಲುಹನ್ನೆರಡೊರಷ ಕೊಡುವೇ       ೭೧

ಹಲಸು ನಿಂಬಿಯು ಕಂಚಿ ಚೆಲುವುಳ್ಳ ತೆಂಗುಗಳೂ
ಫಲವಾಗುವ ಮಾವಿನ ಮರಗಳೂ
ವಲಬುದ್ದಪ್ಪಿಯೆ ನೀವು ಫಲವಾಳ ಮಾಡೆಂದು
ಸುಲಭಾದಿ ಸರ್ವರಿಗೆ ತಿಳಿಸೇ ೭೨

ಯೆಲ್ಲಾ ಗ್ರಾಮದ ಜನರೂ ಸೊಲ್ಲುಗಳಾ ಕೇಳಿದರೂ
ಉಲ್ಲಾಸದಿಂದೂ ಕೊಂಡಾಡೆ
ಬಲ್ಲೀದ ರಾಜರಿಗೆ ಬಲ್ಲಾ ಧೊರೆಗಳು ನೀವು
ಸಲ್ಲುವದು ನಿಮಗೆ ಧಣಿತನವೂ       ೭೩

ನಿಮಗೆ ಬೇಕಾದಷ್ಟು ಭೂಮಿಗಳ ಬರಕಂಡು
ಸಮತಾದಿ ಬಾರೆಂದು ಹೋದಾ
ತಮತಮಗೆ ಬೇಕಾದ ಭೂಮಿಗಳ ಬರಕೊಂಡು
ಜಮೆಯಾಗಿ ವೈದು ಮುಂದಿಡಲೂ    ೭೪

ಕ್ರಮವಾಗಿ ಮೊಹರು ಸಮವಾಗಿ ದಕ್ಕಿತ್ತು
ಮಮತಾದಿ ಮಾಡೀಸಿ ಕಳುಹೇ
ಕಮತಮಗನು ಕೂಲದಿ ಶ್ರಮೆಯಲ್ಲದೆ ದೊರಕಿದವು
ಮನಗೆ ಭಯೆವಿಲ್ಲೆಂದೊಗಳಿದರೂ    ೭೫

ಧೊರೆ ಮುದ್ದ ರಾಜಾರು ವರದ ವಚನಗಳಂತೆ
ಯಿರದೆಲ್ಲಾ ಭಾವಿಗಳ ತೋಡೀ
ನೆರವಿದರು ತೋಪು ಜಝ್ಝರಿತವಾಗಿರುವಂತೆ
ಸರಸಾದಿ ನಾನಾ ದಿನಸುಗಳನೂ         ೭೬

ಯಾವ ಗ್ರಾಮವು ನೋಡೇ ಭಾವಿಗಳು ಮಯೆವಾಗೀ
ಯಾವ ಗ್ರಾಮದಿ ಫಲವೃಕ್ಷಾ
ಯಾವತ್ತು ರಾಜ್ಯಾವು ಅವರ ಗ್ರಾಮಗಳೆಲ್ಲಾ
ತವೆ ಮರೆದವು ನಾನಾ ಫಲವೂ          ೭೭

ಗಡಿಯಾ ಮ್ಯಾಲಿನ ನೀರು ಹಿಡಿಯೆಲಾರೆವು ಯೆಂದೂ
ಗಡ ಬಡಿಸಿದರು ಜನರೆಲ್ಲಾ
ಮಿಡಿತಾಲಿ ಬ್ಯಾಡೀರಿ ದಿಡಿಗಿ ನಿಂದಲಿ ನೀರು
ತಡಿಯಾದೆ ತರುವೆ ನೆಂಬುವನೂ       ೩೮

ಅರ್ಧಭೂಮಿಯು ಕಾಲು ಅರ್ಧಭೂಮಿಯು ಶುಬ್ಬಾ
ಬಿದ್ದಂತೆ ತಂದು ಕೊಡುವಾರು
ಯಿದ್ದು ವಾತಿಕರು ವ್ರುದ್ದ ಬಾಲರನೆಲ್ಲಾ
ಉದ್ಧಾರಮಾಡಿ ಸಲುಹುವವನೂ     ೭೯

ಬಂದ ದುಖ್ಖವನೆಲ್ಲಾ ಕಂಡುವರ ನೆರಕರೆಸಿ
ಚಂದದಿ ಸಂಬಳವ ಕೊಡುವಾನು
ಹೊಂದದ ಬೊಕ್ಕಸದ ವಂದು ಹಣಮುಟ್ಟಾದೇ
ಕುಂದಾದೆ ಯರುವಾನು ರಾಜಾ         ೮೦

ತಾನು ಹೀಗಿರಲಾಗಿ ಹೀನ ಮಾನವರೆಲ್ಲಾ
ಯೇನು ಕೆಡಿಸುವನು ಯೆಂಬುತಲೇ
ಹಾನಿಮಾತುಗಳಿಂದ ಘನವಾಗಿ ನಿಂದ್ಯಗಳ
ಮನಕೆ ಬಂದಂತೆ ಆಡುವರೂ            ೮೧

ಯೆಲ್ಲಾರು ವಂದಾಗಿ ಬಲ್ಲೀದ ಮುದ್ದಾನ
ಶೊಲ್ಲೀಗೆ ಶೇರದಿರುವಾರು
ಮೆಲ್ಲಾನೆ ಮುದ್ದಾನು ಯೆಲ್ಲಭಾವಗಳಂನು
ಸೊಲ್ಲ ಕೇಳ್ತಿಳಿವುತ್ತಲಿಹನೂ           ೮೨

ನರಮಾನವರುಯಿವರು ಪರಮಪಾಪಿಷ್ಟರೂ
ನರಿನಾಯಗಳೆಂದು ಕೊಂಬಂವರೂ
ವರಧರ್ಮಬಿಡದಂತೆ ಸರತೀ ಮಾತೇನೆಂದು
ಸರಿಯಾಗಿ ಆಳುವನು ಮುದ್ದಾ        ೮೩

ಘನತರದಿ ರಾಜನೂ ವಿನಯಾದಿ ಯಿರುತಾಲಿ
ನೆನದು ಮತ್ತೊಂದು ಕಾರ್ಯೆವನೂ
ವನಗಳಾದವುಯಿನ್ನು ಜನವುಪಕಾರಕ್ಕೆ
ಜನ ವೆಲ್ತೆ ಕಟ್ಟಿಸಿದಾ ಕೆರೆಯೂ         ೮೪

ನೀರುಗಳಿಲ್ಲಾದೆ ಬಂದಾಗಿ ಯಿರುತಿಹುದು
ನೀರು ಬರುವಾ ತೆರನ ನೆನದೂ
ಭೋರಾನೆ ಹೊರಟಾಗ ಸಾರಿ ಬಂದನು ಮುದ್ದಾ
ಧೊರೆಗಾಳು ಕಟ್ಟಿಸಿದ ಕೆರೆಗಾಗಿ         ೮೫

ನಿಂತು ನೋಡದೆ ಮುದ್ದ ಕುಂತು ನೋಡಿದನಾಗ
ಯೆಂತು ಯೋಚನೆ ಮಾಡಲೆಂದಾ
ಕಂತುಹರನೆ ಯದಕ್ಕೇನು ಮಾಡಲಿಯೆಂದೂ
ಮುಂಕಾಗಿ ಸುತ್ತಿಟ್ಟು ನೋಡೀ         ೮೬

ಗರಗರಾ ತಿರುಗೀದ ಪರಿಪರಿಯಂದಾಲಿ
ಕೆರೆಯೆ ಮುಂದಿರುವ ಗುಡ್ಡಗಳಾ
ಗಿರಿಗುಡ್ಡ ವೊಡ್ಡಲೊಳು ವರದೊರದು ನೋಡೂತ
ಸರಸಾದಿ ತನ್ನ ಕೆರೆಗಾಗಿ      ೮೭

ಯೆನ್ನ ಕೆರೆಯಾ ನೀರು ಯನ್ನುರಾಯೆರ ಕೆರೆಗೆ
ಯಿನ್ನು ಕೆಡವು ಬೇಕೆಂದಾ
ಮುನ್ನಾಲಿಯೋಳು ಘನದಿಡುಗಳು ಕಟ್ಟುವನ್ತೆಲಕ
ಸನ್ನುತದಿ ಹೋಗೆ ತಾನಾಗಿ  ೮೮

ಸಡಗಾರದಿಂದಾಲಿ ದಿಡುಗುಗಳ ನೋಡುತಾ
ವಡನೆ ಸಂಬಳವತಾ ಕೊಡುತಾ
ಬಿಡದೆಯೆಲ್ಲರ ಕೂಡಿ ಕಡುಹರುಷದಿ ರಾಜಾ
ನುಡಿದಾನು ವಡ್ಡಾರುಗಳಿಗೇ           ೮೯

ಭಲೆ ಭಲೆ ವಡ್ಡಾರ ಬಲಿಯಾಗಿ ಕಟ್ಟಿದಿರಿ
ನೆಲದಲ್ಲಿ ನಿಮಗೆ ಸರಿಯಲ್ಲಾ
ನೆಲೆಯಲ್ಲದ ಕಟ್ಟುಗಳ ನಲುವಿಂದ ಕಟ್ಟಿದಿರಿ
ಸಲೆ ಜನರಿಗುಪಕರಾಗಿರಲೀ  ೯೦

ಯಿಂತು ವಡ್ಡರ ಹರಶಿ ಸಂತೋಷದಲಿ ರಾಜಾ
ಶಾಂತಿಯಂದುಡು ಗೊರೆಯೆ ಕೊಟ್ಟು
ಯೆಂತು ಹೇಳಲಿ ನಾನು ಕಂತುಹರ ತಾ ಬಲ್ಲಾ
ಮುಂಚೆ ಬಡತನ ಹೋಗುವಂತೆ        ೯೧

ಅರಶಿವಡ್ಡರು ಯೆಲ್ಲಾ ಸ್ಮರಿಸಿ ಕೊಂಡಾಡಿದರೂ
ಪರಿಪರಿ ನಾನ ವಿಧವಾಗಿ
ವರಚಂದ್ರ ಸೂರ್ಯರು ಯಿರುವನಕ ದಿಡುಗುಗಳೂ
ಸ್ಥಿರವಾಗಿರಲೆಂದು ಹರಶಿದರೂ        ೯೨

ಅನ್ನ ಶಾಂತಿಗಳಿಂದ ಹೊನ್ನು ಶಾಂತಿಗಳಿಂದ
ಯಿನ್ನುಳಿದಾ ಆಹುತಿಯಾ ಶಾಂತಿಯೆಲೀ
ಚನ್ನಾಗಿ ರಾಜಾರು ವುನ್ನತದಿ ಮಾಡಿಸಿದ
ಯಿನ್ನು ನಾ ಕಾಣೆವೆಂಬಂತೆ  ೯೩