(ಆನಂದ ಭೈರವಿ – ನೀನೆದಯಾಳೋ ಎಂಬಂತೆ – ಏಕತಾಳ)

ದಾರಿಯೆನು ಕೇಳಬ್ಯಾಡೇ ಗಂಗಾ
ಊರು ಈ ಬಳಿಯೊಳಿರುವೆ ವಂಮ
ಮರಾರಿ ನಿನ್ನ ವಲ್ಲಭನು ಮುದ್ದಣ್ಣಗೇ
ತೋರಿ ವರವನು ಕೊಟ್ಟು ಕೆರೆಯೆ ಕಟ್ಟಿಸಿದಾ   ೨೦

ಸರ್ವಕಾಲದೊಳು ಕನ್ನೆರಾ ಪೂರ್ವದಲಿ ಹೋಗುವಂತೆ
ದಾರಿಯೆನು ಬಿಡದಂತೆ ನಾರಿ ಹಳ್ಳದಿ ಬಂದೆ
ಮೀರಿನನಗಿನ್ನು ಗುರಿಯಾಗಿ ನಿಂತಿಹೆ ನೀನು
ದಾರಿಯೇನು ಕೊಡುತಂನರನೆ ನಾನು ಮೀರಿಬಂದಿಹೆನು ನೋಡೇ    ೨೧

ಕೋಡೆರಡು ಮದಗವೇಳೂ ಗಂಗಾ ನೋಡಿ ಬಿಟ್ಟಹರೆ ತಾಯಿ
ವಡನೇ ನೀನಿದರಲ್ಲಿ ನಡಿಯೆಂದು ಕನ್ನೇರ
ನುಡಿದು ಗಂಗಾಂಬಿಗೆ ಕಡುದೈನ್ಯದಲ್ಲಿ ಹೇಳೆ ದಾರಿಯೆನು ಕೇಳ
ಬ್ಯಾಡೆ ಗಂಗಾ ಮಾರು ಹೇಳಿರುವೆವಮ್ಮ         ೨೨

ಯಷ್ಟುಸ್ಥಳ ಕನ್ನೆರನೇ ಯೆನಗೇ ಬೆಟ್ಟು ಯಿಡಲಿಕ್ಕಾಗದೇ
ಬೆಟ್ಟದಂದದಿಯರುವೆ ಯಿಷ್ಟದಿಂದಲಿ ಕಂಡೂ
ಥಟ್ಟನೆ ಹೋಗುವೆನು ಘಟ್ಟಿಮನಸನೆ ಮಾಡಿ ದಾರಿಕೊಡು ಕನ್ನೆರಸಿ
ನಾನು ಮೀರಿ ಬಂದಿಹೆನು ನೋಡೇ     ೨೩

ಕೊಡುಬೇಕು ಕೋಡಿಗಳೊಳು ಗಂಗಾ ಕೊಡುಬೇಕು ಮದಗಗಳೇಳಲಿ
ಕಡಿಮೀಯೆ ಸ್ಥಳದಲ್ಲಿ ವಡನೆದಾರಿಯೆಕಂಡಲೂ
ಕೆಡಗಾಗುವದು ನಾನು ನೋಡಲಾರೆನೇ ತಾಯೀ
ದಾರಿಯೆನು ಕೇಳ ಬ್ಯಾಡೆ ತಾಯಿವೂರು ಯೋಳಿರುವೆವಂಮ್ಮ       ೨೪

ಕೇಡು ಮಾಡುವದಿಲ್ಲ ವೇ ಕನ್ನೆರಾ ನೋಡು ನೀನಂತು ಯೀಗಾ
ಬೇಡಿಕೊಂಬುವೆ ತಾಯೀ ತಡಮಾಡ ಬ್ಯಾಡಮ್ಮ
ರೂಢಿ ಜನರಿಗೆ ನಾನು ಕೇಡುಮಾಡುವದಿಲ್ಲಾ
ದಾರಿತೋರು ಕನ್ನರಸೇ ನಾನು ಮೀರಿ ಬಂದಿಹೆನು ನೋಡೇ          ೨೫

ತಿರಿಗಿ ಹೋಗಮ್ಮಾ ಗಂಗಾ ಯೆನಗೆ ಗುರುವಿನಪ್ಪಣೆಯಿಲ್ಲ ವೂ
ಕೆರೆಯೆನೊಪ್ಪಿಳಿಯೆನಗೆ ಹರಸು ವರಗಳು ಕೊಟ್ಟು
ಸ್ಥಿರವಾಗಿಯರುಯೆಂದು ಶರಣು ನೇಮಿಸಿದನೂ
ದಾರಿಯೆನು ಕೇಳ ಬ್ಯಡೆ ಗಂಗಾ ವೂರುಯೋಳಿರುವೆವಮ್ಮಾ          ೨೬

ಬರುವುದೊಂದೇ ಬಲ್ಲೇನೇ ಕನ್ನೇರ ತಿರಗಿ ಹೋಗುವದರಿಯೆನೇ
ಅರಿಯೆದಲೆ ನಾ ಬಂದ ದಾರಿಯೆನು ಕೊಡುಯೀಗ
ಬರುವದಿಲ್ಲವು ಮೀರಿ ಸರಿದು ಹೋಗುವೆ ತಾಯೀ
ದಾರಿಬಿಡು ಕನ್ನರಸೆ ನಾನು ಮೀರಿ ಬಂದಿಹೆನು – ಕೇ       ೨೭

ಸುಲಭವಲ್ಲವು ಗಂಗನೆ ನೀನು ಮಲತುನಿಂತಿರುವೆ ಯೀಗಾ
ಹುಲಿ ಹಶಿದು ಮಂತ ಕುರಿಹಿಂಡು ತಲಕುವತ್ಯರದಿ
ಸಾಲೇಳು ಗ್ರಾಮಗಳು ತೇಲಿ ಕಲಕುವ ವಮ್ಮದಾರಿಯೆನು
ಕೇಳಬ್ಯಾಡೆ ಗಂಗಾ ವೂರುಯೊಳಿರುವೆವಂದು    ೨೮

ಅರಿಯೆದಲೆ ಬಂದೆ ನಂಮ ಕಂನೇರ ದಾರಿಯೆನು ಬಿಡದಿದ್ದರೇ
ಮೀರಿ ಹೋಗುವೆ ನೋಡು ನರಿ ಸೈರಿಸಲಾರಿ
ಸಾರಿ ಹೇಳುವೆ ಕೇಳು ತೂರಿವೆನು ಖಂಡಿತವು
ದಾರಿ ಬಿಡುಕಂನರನೆ ನಾನು ಮೀರಿ ಬಂದಿಹೆನು ನೋಡೇ   ೨೯

ಹೇಳಿ ಕಲುಹುವು ಗ್ರಾಮಕೆ ಗಂಗಾ ತಳಿ ಸೈರಿಸೆಂಝಾವದಿ
ಯೋಳು ಗ್ರಾಮಗಳಿಂನು ಹಾಳಾಗುವುವು ಯೀಗ
ಹೇಳಲಿನ್ನೇನೆಂದು ಘಳಿಲನೇ ತುಗಿದಳು ದಾರಿಯೇನು
ಕೇಳಬ್ಯಾಡ ಗಂಗಾವೂರು ಯೋಳಿರುವೆವಂಮ   ೩೦

ಬಾರಲೇ ವಾಲ್ಮೀಕ ಶೇರಿರುವೆರ್ಯರೆಂದು
ಕರದಾಳು ಮೂರು ಧ್ವನಿಯಂದಾ
ಕರದ ತಕ್ಷಣದಲ್ಲಿ ಭರದಿಂದ ಬಂದಾನು
ಯೆರಗಿ ಸಾಷ್ಟಾಂಗ ಮಾಡಿದನೂ      ೩೧

ಕರಗಾಳ ಜೋಡೀಸಿ ಬೆರಗಾಗಿ ತಾನಾಗ
ಢರಢರ ನಡುಗೂತ ನಿಂದೂ
ಶರಣೆಂದು ಕೇಳಾಲು ಸಾರಿ ಹೇಳಿದಾಳಾಗಾ
ನೀರೆ ನಾಯರುವುದಿಲ್ಲೆಂದೂ           ೩೨

ಊರೀಗೆ ಹೋಗೆಲೂ ಸೈರಿಸಲಾರೆನೂ
ಕರದು ಬಾರಲು ಗ್ರಾಮದವರಾ
ಮೀರಿ ಬಂದಳು ಗಂಗಾ ತೋರೆನೇ
ಹೋಗೆಂದು ಸಾರಿ ಹೇಳಿದಳು ಕನ್ನೇರಾ           ೩೩

ಅಮ್ಮನೇ ನೀವೀಗಾ ಘಮ್ಮನೇ ಕಳಿಹೀಸಿ
ಮರ್ಮ್ಮಾವಾ ಮಾಡುವಿರಿ ಹ್ಯಾಗೂ
ಸಮ್ಮತವಿಲ್ಲಮ್ಮ ನಿಮ್ಮ ಮಾತಿನ ಮ್ಯಾಲೆ
ಸುಮ್ಮನೇ ಓಗೋದಿಲ್ಲೆನಲೂ         ೩೪

ಬಾರಯ್ಯೆ ವಾಲ್ಮೀಕ ಯೇರೂಪು ನಿಜರೂಪೆ
ಸರಸಾದಿ ಕೊಡುವೆ ಭಾಷೆಗಳಾ
ಹರಷಾದಿ ವಾಲ್ಮೀಕ ಶರಗೊಡ್ಡಿ ರೆಂದಾಗ
ಸ್ಥಿರವಾಗಿ ಕೊಡು ತಾಯಿ ಯೆನಲೂ  ೩೫

ಬರುವ ಪರಿಯೆಂತರವೂ ಸ್ಥಿರವಾಗಿ ಯಿರುವೇನು
ಕರದು ಶರಗೊಡ್ಡು ಯೆಂದಾಗ
ತರುಣಿ ಭಂಗರದ ತೆರವೆತ್ತಿ ನೀರಾನು
ಯೆರದಾಳು ಮೂರು ಬೊಗುಶಿಯೆನೂ            ೩೬

ನಿನ್ನ ಕಾಣದೆ ನಾನು ಯಿನ್ನು ಕಡಿಯುವದಿಲ್ಲಾ
ಪನ್ನಂಗಧರನಾಣೆ ಹೋಗೂ
ಸನ್ನೂತದಿಂದಾಲಿ ಯೆನಗೆ ಭಾಷೆಯು ಯೇಗ
ದೊರಕೀತು ಯೆನುತಾಲಿ ಹೊರಟಾ    ೩೭

ವೂರೀಗೆ ತಾ ಬಂದು ಭರದಿಂದ ಯೆಲ್ಲಾರ
ಸಾರಿ ಭೋರೆಂದು ತೂಗಿದನೂ
ಈ ರಾತ್ರಿಯೊಳಗಿನ್ನು ಸಾರೂದೇನೆಂದು
ಭೋರಾನೆ ಬಂದಾರು ಜನರೂ          ೩೮

ಯಿನ್ನು ಯಿದು ಯೇನೆಂದು
ಮನ್ನೀಶಿ ಸರ್ವಾರು
ಚೆನ್ನಾಗಿ ಕೇಳಿದರಾಗಾ ಯಿನ್ನು ನೀವೆಲ್ಲಾರು
ಮುನ್ನಾಲಿ ಗುಳೇವು ಚನ್ನಾಗಿ ಜಾಗ್ರತೆ ಯದರೆಂದಾ       ೩೯

ಕೇರಿಯೆ ತುಂಬಿತು ಕೇಳಿ ಪರಿಪೂರ್ಣ
ತೆರೆಗಾಳು ಯೇರೀಯೆ ಮ್ಯಾಲೆ
ಹೊರಳುವವೂ ಊರಿಗೆ ಹೋಗಿನೀ
ಭೋರಾನೆ ಹೇಳೆಂದು ಸಾರಿ ಹೇಳಿದಳು ಕಂನೇರಾ           ೪೦

ಅಂದ ಮಾತಿಗೆ ಆಗ ಬಂದ ಜನರುಗಳೆಲ್ಲಾ
ಸಂದೇಹಗೊಂಡು ಕಳುವಳಿಸೇ
ಅದರಲ್ಲಿ ವಬ್ಬಾತ ಚದುರ ಬುದ್ಧಿಯೆಲೆಂದು
ಯಿದು ಯೇನು ವಿವರ ಹೇಳೆನಲೂ    ೪೧
ವಿವರೀಸಿ ಹೇಳಿದನೂ ತವಕದಿಂ ವಾಲ್ಮೀಕಾ
ಕವಲಿಲ್ಲದಂತೆ ಯೆಲ್ಲವನೂ
ನೀವು ಸರ್ವರು ಕೂಡಿ ದೇವಿಗ್ಹೇಳುವ ಮಾತು
ಯಾವದು ಹೇಳೆಂದನಾಗಾ   ೪೨

ಕೇಳಯ್ಯೆ ವಾಲ್ಮೀಕಿ ಹೇಳುವೆವು ನಿನಗೊಂದು
ಭಾಳಾದಿನವು ಯರುವವೂತಾ
ಜಾಳನೆ ಬ್ಯಾಡಯ್ಯಾ ಹೇಳಿದೀ ಮಾತನೂ
ತಿಳಿದು ನೋಡೆನಲೂ ಮನದೊಳಗೇ   ೪೩
ಯೇನು ಹೇಳಲಿ ನೀವು ನಾನೀಗ ಕೇಳುವೆನು
ಘನ ದೈವ ಯೆನಗೆ ದೇವತವೂ
ಯೆನಲಗ ಹೇಳಿದರೂ ನಿನ್ನಾನು ಹತಮಾಡಿ
ಚಿನುಮಯಾ ಶಿವನಾ ಸ್ತುತಿಸುವೆವೂ  ೪೪

ಹೇಳತ ಮಾತುಗಳಾ ಕೇಳಿ ಹರುಷಿತನಾಗಿ
ತಾಳಾದೆಲ್ಲಿ – ರೆಂದೆನಲೂ
ಯೇಳೂರು ಬದುಕುವವೂ ಮೂಳ ಜೀವನವಂದೂ
ಬಾಳೀ ನಾನಿದ್ದೇನು ಫಲವೂ           ೪೫

ಯೆಂದು ಹೇಳಲು ಆಗಾ ತಂದ ಖಡ್ಗಗಳಿಂದಾ
ಕೊಂದುಹೂಳಿದರು ಅಗಸಿಯೆಲೀ
ಚಂದಾನ ಯಿದು ನಿಮಗೇ ಕಂದಾನ ಕೊಲ್ಲುವದು
ಯೆಂದು ಬಂದರು ತಂದೆ ತಾಯೀ       ೪೬

ನೀವು ಕೋಪಿಸಬ್ಯಾಡ ಯಾವತ್ತಿ ಬಂಧುವಿಗೆ
ಯಿವೇವು ಅರಿಯೆದ ಬೇಡವಾ
ನಾವೀಗ ಹೇಳುವೆವು ಭಾವಾದಿ ಕೇಳಿರಿ
ಭುವನಕ್ಕೆ ಪ್ರಖ್ಯಾತನಾದಾ  ೪೭

ಪರವುಪಕಾರಕ್ಕೆ ಯಿರದೆ ಶೇರಿರೆವ
ಕೊಟ್ಟು ಸತ್ಯಲೋಕದಲೀ
ಪರಿಪರಿ ವುಡುಗರೆ ಯರಿಸಿ ಕೊಟ್ಟರು
ಸರಸಾದಿ ಸಂತೈಸಿ ಕಳಿಹಿ      ೪೮

ಲೆಖ್ಖವಿಲ್ಲದೆ ಕೋಣಾ ಯಿಕ್ಕಿದರು ಕುರಿಗಳಾ
ಘಕ್ಕಾನೈಕೊಂಡು ಕೆರೆಗ್ಹೋಗಿ
ಚಕ್ಕಚಕ್ಕನೆ ಕಡಿದು ದಿಕ್ಕೂದಿಕ್ಕಿನೊಳೆಲ್ಲಾ
ವಕ್ಕಲಿಕ್ಕಿದರು ಆಹುತಿಯಾ ೪೯

ಊರು ಜನರೆಲ್ಲಾರು ಭೋರಾನೆ ಬಂದಾಗ
ಮೀರಿದಾ ಹುತಿಗಾಳ ಕೊಟ್ಟೂ
ವೀರ ಕನ್ನೀರಾಗೆ ನರೆಹಂಣು ಕಾಯ್ಗೆಳಾ
ವೂರೆಲ್ಲ ಕೊಡಿಸೀದರಾಗಾ ೫೦

ತಾಯ ಕನ್ನೀರಾಂಬ ಮಾಯಾದಿ ಹೊರಹೊಂಟು
ಆಯಾತವಾಗಿ ನೋಡಿದಳೂ
ಕಾಣಾದೆ ವಾಲ್ಮೀಕಿ – ಮಾಯೆ ಮಾಡಿದರೆಂದು
ತಾಯ ಗಂಗಾಂಬೆಗೇ ಹೇಳಿದಳೂ       ೫೧

ಅಂದು ವಾಲ್ಮೀಕಾಗೆ ಚಂದಾದ ಭಾಷೇಯ
ಬಂಧೀಸಿ ಕೊಟ್ಟಹೇ ನಿಂದು
ಯಂದೀಗ ದಾರೀಯೆ ಯೆಂದೀಗು ಕೊಡಲಾರೇ
ಹಿಂದಕ್ಕೆ ಹೋಗು ಗಂಗಾಂಬೇ          ೫೨

ಹೇಳಿದ ಮಾತನೂ ಕೇಳೀ ಗಂಗಾಂಬೆಯೂ
ತಾಳಿಹರು ಹದಿಬ್ಯಾಗ ಸರಿಯೇ
ಯೋಳೂರು ದೈವವೂ ಬಾಳೀರಿ ಭಯೆವಿಲ್ಲೆಂದು
ಹೇಳೆ ಕನ್ನೀರಾಂಬೆ ಮಯೆದಲೀ        ೫೩

ವರದು ಹೇಳಿದ ವಚನ ಬೆರಗಾಗಿ ಕೇಳುತ
ಪರಿಪರಿಯಂದ ಕೊಂಡಾಡಿ
ಸರಸಾದಿ ನಾನಾ ವಾದ್ಯಗಳೆಲ್ಲ ಬಾರಿಸುತ
ಯಿರದೆ ಮಾಡಿದರೂ ಆರುತಿಯಾ     ೫೪