ಹೋಗುವೆನು ತಾಯಿ ಬಾಗಿ ಅಣ್ಣಾ ಕರೆಯೆ ಬಂದಾ
ಹೋಗುಬೇಕು ಬ್ಯಾಗ ಹೇಳಿ ಬಂಧು ಜನಗಳೇ   ೧೮೩

ಅಂದವಾದ ಮಾತುಗಳನೂ ಬಂಧುಜನರು ಕೇಳಿತಾವು
ಯಿಂದಂಧರನಾ ರಾಣಿ ನೀನು ಯೆಂದು ಪೊಗಳಾಲು        ೧೮೪

ಚಂದದಿಂದ ತಂದೆ ಬಂದುವರ್ಗ ಜನಗಳನ್ನು
ಕಂದ ನಿನಗೆ ಯಂಥಾಗುಣವು ಯಿಂದು ದೊರಕಿತು           ೧೮೫
ಸುರರು ದೇವತೆಗಳು ನೀವು ನರರುಗಳಲ್ಲವಮ್ಮಾ
ಪರಿಪರಿಯೊಳು೭ ವಚನಕೊಟ್ಟು ಅರಸಿ ಹೋಗಮ್ಮಾ    ೧೮೬

ಅಂದ ಮಾತಿಗಾಗಿ ಊರ ಚಂದದಿಂದ ಹರುಷವಾಗಿ
ಬಂಧುಬಳಗ ತಂದೆ ತಾಯ್ಗೆಳ ಪಾದ ಕೊಂದಿಸೇ ೧೮೭

ಒಂದಿಸಿದಾಗ ತಂದೆ ತಾಯ್ಗೆಳ ನೊಂದು ದುಃಖ ಮಾಡಲೂ
ತಂದೆ ದುಃಖ ಬ್ಯಾಡವೆಂದು ಕಂದ ಹೇಳೊ        ೧೮೮