ಜಯೆ ಮಂಗಳಂ ಮಹಾ ಶುಭಮಂಗಳಂ ಜಯೆ ಜಗನ್ಮಾಯೆಳಿಗೆ
ಜಯೆ ಜಗನ್ಮಾತೆಗೆ ಜಯೆ ಜಯೆತು ಕನ್ನೆ ಕಾವೇರಾಂಬಗೇ ಜಯೆ ಮಂಗಳಂ

ಭೂಮಿಯೊಳು ಭೂಸುರರ ಗರ್ಭದಿಂ ಜೆನಿಸುತ್ತ
ಕಾಮಿತಾರ್ಥವ ಪಡೆದ ಕನ್ನೇರಿಗೇ
ಪ್ರೇಮದಂತೆಂಬುವಾ ಸುಗಣಾತ್ಯವನು ಯಿತ್ತು
ಕಾಮಿನೀ ರಕ್ಷಿಸೇ ನಿಜ ಭಕ್ತರಾ           ೫೫

ಜಕ್ಕಚಟುಲತೆ ಕೂಡಿ ಅಕ್ಕಾರದಿಂ ನೋಡಿ
ಘಕ್ಕಾನೆ ವೀರಮ್ಮ ಬಾಕಿ ಯೆಂದೂ
ಕ್ರಮದಿಂದ ಕರಿಯೆಲೂ ಕಾಂತೆ ಕನ್ನಿಕೆ ಮಣಿಯು
ಅಕ್ಕಯ್ಯ ಬಂದುತಾ ನಿಂತಳಾಗಾ ಜಯ           ೫೬

ಚನ್ನಾರ ಚಲುವ ಕೇಳಂಣ ಮುದ್ದನು ಬ್ಯಾಗು
ಯನ್ನು ತಾಟೀತ ನಿಮ್ಮೀತವೆವಗೆಲಿದು
ಉನ್ನಾತದಿಂದಿರಲೂ ನಿನ್ನ ನರಬಲಿಯೆನ್ನ
ಕನ್ನೆ ಕೇಳುವ ಕಾಮೀನಿಗೆ ಜಯೆ         ೫೭

ಯೋಳು ವರಷದಿ ಕೇಳಿ ಆ ವಚನಗಳಾ
ಆಲೋಚನೆಯೆ ಮಾಡದಂಥ ತಾಯೇ
ಮೇಲಾದ ಕಾರ್ಯೆಕ್ಕೆ ಮಿಕ್ಕ ಮಾತ್ಯೇಕೆಂದು
ಲೋಲಾಕ್ಷಿ ವೀರಮ್ಮ ವಪ್ಪಿದಳೂ ಜಯ        ೫೮

ವಪ್ಪೀದ ಕೂಸಿನ್ನೂ ವರಸಂಭ್ರಮದಿಂದಾ
ತಪರೇ ಧರಣೀಯೆ ಜನರು ನೋಡೀ
ಕಪ್ಪುಗೊರಳನಕಾಂತೆ ಕನ್ನಿಕಾ ಮಣಿಯೆಂದು
ವಪ್ಪಿಯಟ್ಟರು ವೀರ ತಪತದ ಗ್ರಹದಲೀ       ೫೯

ಯಿಷ್ಟ ಮ್ಯಾಲೇ ಬ್ಯಾಗ ಅಷ್ಟಗುಣಗಳು ಮೆಟ್ಟಿ
ಸೃಷ್ಟಿಯೊಳಧಿಕವೆಂದೆನುತಾಲೀ
ಕೊಟ್ಟ ಸರವುಗಳೆಲ್ಲ ತ್ರಿಂಹತೆಯಾಗದೆಯೇಗ
ಘಟ್ಯಾಗಿ ನಡಿಸೂವು ವೀರಾಂಬಗೇ     ೬೦

ಕಾಣರೇ ವಾಲ್ಮೀಕ ಕೆರೆಯೆ ಮ್ಯಾಲಿರುತಿರಲು
ವೇಣಾಕ್ಷಿ ಶ್ರೀ ಗಂಗೆ ಪ್ರಾಣದಿಂದಾ
ಜಾಣೆ ತುಂಬಿರಲೂ ಸೈರಿಸಲಾರೆ ನಿಂತೆದು
ನೀನುಜಲವನು ಯಿತ್ತೆ ನಿಜವಂತಿಯೋ            ೬೧

ಬರುವ ಪರಿಯೆಂಕರಾ ಸ್ಥಿರವಾಗಿ ಯಿಲ್ಲಿರುವೆ
ಕರದು ಬಾರಲು ಮತ್ತೆ ಗ್ರಾಮದವರಾ
ಪರಿಪರಿಯೆ ವಚನಗಳಾ ವದು ಹೇಳ ಬ್ಯಾಗಾ
ಸರಸನಿಂತಿಹ ಸರೋಜಾಕ್ಷಿಗೇ            ೬೨

ಢಣಾಯ್ಕೆನ ಕೆರೆಯೊಳಗೆ ಢಂಢಣಿಶಿ ಭೇರಿಯೆನೂ
ತಾಸು ಹೊಡೆಸುತ ಬೇಗ ವಾಸಗೈದು
ಜಾಣೆ ಬಗೆಳಾಂಬಿನಾ ಚಂದದಿಂದ ಸ್ಮರಿಸುತ್ತ
ನೀನು ಪೂಜೆಗೊಂಬ ನಿಜವಂತಿಯೋ ಜಯೆಮಂಗಳ ಮಹಶುಭಮಂಗಳಂ      ೬೩