ಹೋಗಬ್ಯಾಡಿರೀ ನೀವು ಹೋಗಬ್ಯಾಡಿರೀ
ಹೋಗ ಬ್ಯಾಡಿರಯ್ಯಾ ನಿಮಗೆ
ಸಾಗಿಸುವೆನು ತೆಲ್ಲವನ್ನು ಸಾಗಿರೆಲ್ಲಾ ಬ್ಯಾಗದಿಂದ
ನೀಗಿ ವ್ಯಸನವಾ    ೯೮

ಯೆರಡು ಯೋಳು ವರುಷದಿಂದ
ವರದು ಕೆಲ್ಸವೆಲ್ಲಾ ಮಾಡಿ
ವರುಷವಂದು ಕಳೆದು ನೀವು
ಊರಿಗೆ ಹೋಗಿರಿ  ೯೯

ದೊಡ್ಡನೈಂತ ಕೆರಿಗೆ ಯೇಗ
ವಡ್ಡರೆಲ್ಲ ಬ್ಯಾಗಹೋಗಿ
ಗುಡ್ಡಬುಡದ ವಡ್ಡರೊಳಗೆ ರೂಡಿತಾಲಿಯಾ  ೧೦೦

ಅಚ್ಚುತ ಕ್ರಿಷ್ಣರಾಯೆರ ಕೆರಿಗೆ
……..ದಿಂದ ನೀರು ತಿರಿವಿದೇ
…..ಬಂದ ನೀರುಗಳೆಲ್ಲಾ –ಚಿ ಹೋಗಲೀ        ೧೦೧

ನೀರು ಹೋಗಿ ಕೆರಿಯೆ ತೂಬು
ಪೂರ ಭರ್ತಿಮಾಡಬೇಕು
ತೋರಿಸುವೆನು ಕೆಲಸವಿಲ್ಲಾ ಭೋರಾನೆ ಹೊರಡೆಂದಾ    ೧೦೨

ಶ್ರೀ ಮಂಗಳಂ ಶುಭಮಸ್ತು ಶ್ರೀ ಶ್ರೀ ಶ್ರೀ ಶ್ರೀ ಶ್ರೀ