ನಿನ್ನ ವಚನಗಳಂತೆ ಹೊನ್ನು ಲೆಕ್ಕವ ಮಾಡಿ
ಭಿನ್ನಾವಿಲ್ಲದ ಹುರುಳಿ ತರಿಸಿ ಚೆನ್ನಾಗಿ
ಕೊಪ್ಪರಿಕೆಯೊಳು ಬೇಸಿ ಹೊನ್ನುಗಳ್ ಬೆರಸಿ
ಅನ್ಯೋನ್ಯದಿಂದ ಕೊಡು ನೀನು        ೧೧೩

ಒಂದೊಂದೂ ಬೋಗುಸೆಯೆನು ಬಂದವರಿಗೆ ಕೊಡು
ಅಂದಾಜಿನಮತೆ ದೊರಕುವದು
ಬಂಧುರದಲಿ ಕಷ್ಟಮಾಡಿದ ಜನರಿಗೆ
ಸಂದೇಹವಿಲ್ಲದೆ ದೊರಕುವವು        ೧೧೪

ಯದತೆ ಸ್ವಪ್ನವು ಮುದದಿಂದ ಬೀಳಾಲು
ಚದುರ ಮುದ್ದನು ಕೊಟ್ಟನಾಗ
ಒದವೀದ ಹೊನ್ನನು ನಿಧಿಯೋಳು ಬೆರಸೀದ
ಸದವಲ್ಲೇಲೀ ಯಚನಗಳಿರಾ           ೧೧೫

ಕರಕರ ಕೊಟ್ಟರೆ ಬೆರತದ್ರವ್ಯಗಳೆಲ್ಲ
ಸರಸಾದಿ ಅವರವರ ತೆರದೀ
ಕರಕಷ್ಟದಿಂದಲಿ ಸರಿಯಾಗಿ ಮಾಡಿರಲು
ದೊರಕುವದು ವರಸತ್ಯದಿಂದ           ೧೧೬

ಕಳ್ಳತನದಿಂದಾದಲಿ ನೆರಳಾಗ ಕುಳಿತರಿಗೆ
ಸುಳ್ಳೀಲೆ ಬೈಗುಗಳ ತೆರಿಗೆ
ಎಳ್ಳುಕಾಳಷ್ಟು ಹೊನ್ನುಹಣ ದೊರಕದೆ
ಅಲ್ಲಲ್ಲಿ ತಾವು ಗುಜುಗುಜಿಸೆ         ೧೧೭

ಅವರವರಗ್ಹತ್ತಿದಾ ಬಾಧಕಾಯ್ತೆದರಿಂದ
ಸುವಿಲಾಸದಿಂದ ಕಟ್ಟಿದರು
ಭುವನ ಕಧಿಕವಾಗಿ ನಮನೂತನದಿಂದಾಲಿ
ಭವನ ಬಾಧಿಕನಂತೆ ಮಾಡೆ   ೧೧೮

ಯಿಂತು ಸರ್ವರು ಕೂಡಿ ಸಂತೋದಿಂದ
ಕಂತುಹರ ತಲೆದೂಗುವಂತೆ
ಅಂತು ಏಳು ವರ್ಷಕ್ಕೆ ನೀಂತು ಕಟ್ಟಿದರೆಲ್ಲ
ಚಿಂತೆಯಿಲ್ಲದೆ ಸರ್ವಜನ    ೧೧೯

ಕೇಳಯ್ಯೆ ರಾಜಾನೆ ಹೇಳೀದ ತರದೊಳು
ಏಳು ವರ್ಷವು ತುಂಬಿತಯ್ಯೆ
ಬಾಲೇರು ಸಹವಾಗಿ ಬಾಲರು ಸಹವಾಗಿ
ಮೇಲಗಿ ಕಟ್ಟಿಹೆವೆ ನಾವು    ೧೨೦

ಇನ್ನು ನೀ ಕೇಳಯ್ಯೆ ಹನ್ನೆರಡು ಆಹುತಿಯೆ
ಮುನ್ನನರಬಲಿಯೆ ಕೇಳುವದು
ನಿನ್ನಿನ ಸ್ಪಪ್ನದಿ ಉನ್ನತದಿಂದಲಿ
ಚೆನ್ನಾಗಿ ಹೇಳಿತ ಕೆರೆಯೆ      ೧೨೧

ಕೇಳುವರೆ ಕೇಳು ನರಬಲಿಗಳನು
ಲೋಲುಪ್ತೆಯಂದ ಕೊಡು ಧೂರಿಯೆ
ಹೇಳಿತೈ ಸ್ವಪ್ನದಿ ಆಲೋಚನೆಯ ಬ್ಯಾಡ
ಹೇಳುವಾ ಮಾತು ದಿಟವಯ್ಯೆ          ೧೨೨

ನಿನ್ನಿನ ದಿವಸಾದಿ ನನ್ನ ಸ್ವಪ್ನದಿ ಬಂದು
ಹನ್ನೆರಡಾಹುತಿಯಾ ಕೇಳಿದಾದು
ನನ್ನ ನಿನ್ನೆಯೆ ಸ್ವಪ್ನ ಉನ್ನತವಾಯಿತು
ಬಿನ್ನವಿಲ್ಲದೆ ತರಿಸಯ್ಯಾ   ೧೨೩

ಏಳು ಆಹುತಿಗಳ ತಾಳಾದೆ ಸರಸೀರಿ
ಕೇಳಿದ ದ್ರವ್ಯಗಳ ಕೊಡುವೊ
ಏಳ್ನೂರು ವರಾಹವ ಮ್ಯಾಲೆನಾ ಕೊಡುವೆನು
ಯೇಳು ಆಹುತಿಯೆ ತಂದವರಿಗೆ        ೧೨೪

ನಾನು ತರುವೇನೆಂದು ನೀನು ತರುವೇನೆಂದು
ನಾನು ನೀನೆಂದುದೆನೂರು
ನಾನಾ ದೇಶದ ತಿರುಗಿ ನಾನಾ ಜಾತಿಯೆ ಜನರ
ಹನ್ನೊಂದಾಹುತಿಯೆ ತಂದಿಡಲು      ೧೨೫

ಬಂದು ನಿಂತವರೆಲ್ಲ ತಂದೆ ತಾಯಗಳು
ಈಗ ವಂದೀಸಿದರು ತಮ್ಮತಮಗೆ
ಛಂದದಿ ಸಲಹೈಯ್ಯಾ ತಂದೆ ಮೂದ್ದೈರಾಜ
ಕುಂದದೆ ಕೊಡು ದ್ರವ್ಯಗಳನೂ          ೧೨೬

ಬಂದು ಕೇಳಿದರವರು ನಿಂದು ಕರಗಳ ಮುಗಿದು
ಸಂದೇಹವಿಲ್ಲದೆ ಕೊಡು ಧೊರೆಯೆ
ಅಂದ ತಕ್ಷಣದಲ್ಲಿ ಬಂದು ಮುದ್ದನು ತೀವ್ರ
ದಿಂದ ಬಿಂದಿಗೆಯೆಲೀ          ೧೨೭

ಏಳು ಬಿಂದಿಗೆ ಹೊನ್ನ ಕೇಳಾದೆ ಕೊಟ್ಟಾನು
ಏಳ್ನೂರು ವರಹ ಮೇಲ್ಕೊಟ್ಟಾನು
ಕೇಳಿದ ಕಿಂತಾಲು ಮೇಲಾಗಿ ಕೊಟ್ಟೆ ನೀ
ಬಾಳಯ್ಯೆ ಧೊರಿಯೆ ಖ್ಯಾತಿಯೆಲಿ     ೧೨೮

ಇನ್ನಾಲ್ಕು ಬಲಿಗೂ ಇನ್ನುತಾ ವಿರುವಾವು
ಮುನ್ನ ನೀ ಕೊಡು ಧೊರಿಯೆ ಯೆನಲು
ನಾನು ಹೇಳಿದಕಿಂತು ಯನ್ನು ಹೆಚ್ಚಿಗೆಯಾಯ್ತೆ
ಉನ್ನತ ಕೆಲ್ಸವ ಮಾಡಿದಿರಿ ೧೨೯

ಬಿದ್ದ ಸ್ವಪ್ನದ ತೆರದಿ ಯದ್ದರೀತಿಯೆಲಿನ್ನು
ಶುದ್ದಾಗಿ ತಂದಿರುವೆನೆನಲೂ
ಬದ್ಧಾದಿ ಕೊಟ್ಟಾನು ಯಿದ್ದವರಿಗೆ ದ್ರವ್ಯ
ಉದ್ಧಾರವಾಗಲೆಂದು ಹೊಗಳೇ       ೧೩೦

ನೀನು ಮಾಡಿದ ಕಾರ್ಯೆ ಘನಕೀರ್ತಿಯಾಗಲೀ
ದಿನ ಶಶಿಗಳಿರುವ ಪರಿಯಂತರ
ಮಾನನಿಧಿಯೆ ನಾವು ಜ್ಞಾನದಿಂದಲೆಯಲ್ಲಿ
ಮೌನದಿಂದಲಿ ಹೋಗುವೆವೂ           ೧೩೧

ಆಹುತಿಗಳ ಕೊಟ್ಟರೆ ದೇವತೆಗಳಾಗುವರೂ
ದೇವಾತ ಕೆರೆಯರುವತನಕಾ
ನೀವನುಮಾನವ ಮಾಡಿದೆ ಸರ್ವರು
ಭಾವಾದಿ ಸಾಗಿರಿ ನೀವೆಂದಾ ೧೩೨

ಬಂದವರನೂ ತಂದು ಒಂದೊಂದು ಠಾವಿಗೆ
ಛಂದಾದಿಯಡುತಾಲಿ ಬರಲ್ಣೂಂಗ
ಬಂದರವರ ಸಣ್ಣ ಕೋಡಿಯಾಳ್ ವರವುಡಚಲಮ್ಮ
ನೀನೆಂದೂ           ೧೩೩

ನಿಜ ಕಬ್ಬಿಗರ ಮಗನ ಅಜನೆಂದು ನೇಮಿಸಿ
ಭಜಿಸಿ ಯಟ್ಟರು ಮಧ್ಯದಲಿ
ನಿಜ ಮಾಡಿವಾಳರ ಮಗಳ ಚೆನ್ನಮ್ಮನ
ನಿಜವಾಗಿ ಸಂಣತುಂಬಿನೋಳು          ೧೩೪

ಬಾಲಬ್ಯಾಡರ ಮಗನ ಮೂಲಿತ ಹಾಕಿದರು
ಸೂಲದ ರಾಯೆಮ್ಮಯೆನೆಂದೂ
ಗೊಲ್ಲರ ಕುವರಿಯೆ ಬಲ್ಲಿದ ತಾಯೆಂದು
ಗೊಲ್ಲತ್ಯಾಮೆಂದು ಅಲ್ಲಿಡಲೂ      ೧೩೫

ನೀರಿನವರಿಯೆಂದು ನಾರಿ ಮಾದಿಗ ಮಗಳ
ನಾರಿ ಪದ್ಮಪ್ಪ ಯೆಂದಿಡಲೂ
ಲಿಂಗವಾಳರ ಮಗಳ ಹಿಂಗಾದ್ದಿರೆ ತುಂಬಿನೋಳು
ಗಂಗಾಂಬೆಯೆಂದು ನೇಮಿಸಿದಾ          ೧೩೬

ಸೋಸಿದ? ದಂತಿರುವಬ್ಬ ಬ್ರಾಹ್ಮಣನೂ
ಬಾಶಿಂಗಗಳ ಕಟ್ಟುವನೂ
ಘಾಶಿಯಾಗದೆ ಹಿರೆಕೊಂಡಿವ (-)ಳಿಟ್ಟರು
ಬಾಶಿಂಗರಾಯೆ ನೆಂದೆನಿಶೀ   ೧೩೭

ಎರಡೊದ್ದ ಗುಣೆಗಳಿಗೆ ಎರಡು ಆಹುತಿಕೊಟ್ಟು
ಅರದೋಟಿಯೊಳೊಬ್ಬಾನನಿಟ್ಟು
ನೀರಿನೊದೆಗಳ ನೋಡಿ ಸರಿಯಾ ದಾಹುತಿಕೊಟ್ಟು
ವೋಲೈಸಬೇಕೆಂದು ನಮಿಸೀ            ೧೩೮

ಅಷ್ಟದಿಕ್ಕುಗಳಿಗೆ ನಿಷ್ಠೆಯಂದಲಿ ನಿಲಿಸ
ಭಟ್ಟಂಗಿ ಕೂಡ ಹೊಗಳಿ
ನೆಟ್ಟಾಗೆ ಮನೆಯೊಳಿಟ್ಟೀಯೆ ನಿಡಿದೂ ಬರುವಾಗ
ಥಟ್ಟನೆ ಮದಗಗಳೊಡೆಯೆ  ೧೩೯

ಯಿದುಯೇನು ಚೋದ್ಯಾವು ಯಿದು ಏನುಯೆಂದೆನುತಾ
ವದಗಿ ಬಂದರು ಮದಗದೆಡಿಗೇ
ಬೆದರಾದೆ ತಾನಿಂದು ಮುದದಿಂದ ಕೇಳೀದಾ
ಚದುರ ಮುದ್ದನು ಬೇಗದಿಂದಾ       ೧೪೦

ಹೇಳೂವೆ ಮುದ್ದಣ ಕೇಳೀಗ ನಮಗೊಂದು
ಏಳು ವರುಷದ ಕನ್ಯಬೇಕೋ
ಮೇಲಾಗಿ ಬ್ರಾಹ್ಮಣರ ಕುಲದಲ್ಲ್ಯಾಗಲಿ ಬೇಕು
ಭೋಲೋಕಧಿದೊಕವಾಗವಳು         ೧೪೧

ಯಿಂಥಾಯಿ ಕನ್ಯಾವ ಯೆಂತುನೋಡಲಿ ದೇವಾ
ಚಿಂತೆಯಾದೀತಾ ಮನದೊಳಗೆ
ಮುಂಚೆ ನೀನಿದ್ದಂಥ ಸೊಂತಮನೆಯೊಳಗಿನ್ನು
ಕಾಂತೆ ಯಿರುವಳೂ ಬ್ಯಾಡ ಚಿಂತೆ      ೧೪೨

ಅವರ ಮನೆಯೊಳಗಿದ್ದು ಅವರ ಅನ್ನವನುಂಡು
ಅವರಿಂದ ದೊಡ್ಡಾವನಗೀ
ಅವರ ಮನೆಯೊಳೂ ಕನ್ಯನಾ ಹ್ಯಾಗೆ ಕೇಳಲೀ
ಅವಿವೇಕವಾಯ್ತೆಯ್ಯಾ ಸ್ವಾಮಿ        ೧೪೩

ನೀನಂಜ ಬ್ಯಾಡಜ್ಯೆ ಮಾನಾವಧೀಶನೇ
ತಾನಿದಕ್ಕಾಗಿ ಹುಟ್ಟಹಳೂ
ನೀನೀಗ ಹೋಗಿ ಘನಮನದಿಂದ ಕರಿಯಾಲೂ
ತಾನೇತಾನಾಗಿ ಬರುವಳು    ೧೪೪

ಛಂದಾಗಿ ಬಂದೋನು ನಿಂದಾನಂಗಳದಲ್ಲಿ
ತಂದೆ ಜಕ್ಕಯ್ಯೆ ಎಂದು ಕರೆದೂ
ನಿಂದ ತಾನಾನಯ್ಯೆ ಬಂದೇ ನಿಮ್ಮಡಿಗಳಿಗೆ
ಯೆಂದು ವಂದಿಸಿ ನಿಂತನಗಾ  ೧೪೫

ಹೀಗ್ಯಾಕೆ ಬಂದಾನು ಬ್ಯಾಗನಮ್ಮನಿಗಳಿಗೆ
ಯೋಗಾದ ನೋಡಿ ಬಂದಿಹನೂ
ಹ್ಯಾಗೆ ಮಾಡಲಿ ನಾನು ಆಗ ಮಾಡಿದ ದೋಷ
ನೀಗ ಆಡಿದೆನು ಗರ್ವದಲೀ  ೧೪೬

ಸಂದೇಹಗೊಳುತಲೀ ಬಂದ ರಾಜನ ನೋಡಿ
ವಂದೀರಂದು ಪ್ರಜೆಗಳಿಗೆ
ಛಂದಛಂದದಿ ಮಾಸ ಬಂದಾವರಿಗೆ ಕೊಟ್ಟು
ಬಂದು ಸೇರದೆಗತಿಯೆಂದು   ೧೪೭

ಬಾರೋ ಮದುದೈರಾಜಾ ಬಾರೊ…ಯೊಳಿನ್ನು
ಬಾರಯ್ಯೆ ಕುಂಡ್ರೆಂದು ಕರವಿಡಿಯೋ
ಯರುವ ನನ್ನಯ್ಯೆ ಪೂರ್ವಸ್ಥಿರವಾದ ಠಾವಿನೊಳು
ಬರಬಾರದೊ ತಾತ ಮ್ಯಾಲೆ ೧೪೮

ನನಗೆ ಧಣಿತನ ಬರಲೂ ನಿನಗೆ ಸರಿಯೆಹುದೇ
ಘನಮಾಡುವರೆ ತಾತಾ ಯಾನ್ಯಾ
ಖಿನ್ನವಾಗಿ ಯಿರುವಂಥಾ ಮನಸು ನನಗಿರಲೂ
ಚಿನುಮಯಾ ಶಿವನು ಮೆಚ್ಚುವನೂ   ೧೪೯

ಬಂದಂಥಾ ಕಾರ್ಯೆವು ಛಂದಾದಿ ಹೇಳೈಯ್ಯಾ
ಬಂದೀರಿ ಜಗದಾ ಜನರೆಲ್ಲಾ
ಅಂದಾಗ ನೀವೀಗ ಮುಂದಾಗುವಾ ಕಥಾನಾವ
ಕುಂದಾಗ ಹೇಳೈಯಾ ರಾಜಾ           ೧೫೦

ಯೇನು ಹೇಳಲಿ ತಾತ ಮೌನವಾಯಿತು ಈಗ
ಹೀನವಾಗಿದೆ ಯೆನ್ನ ಮನಕೆ
ನಾನು ಹೇಳಿದ ಮಾತಿಗೇ ನಂಬುವೆಯೊ ಮುತ್ಯಾ
ಹೀನಗುನದವನೆನ್ನ ಬ್ಯಾಡಾ            ೧೫೧