ಒಂದು ದಿನ
ಥಳಥಳ ಹೊಳೆವ ಬೆಳ್ಳಿರೂಪಾಯೊಂದು
ಬಿದ್ದಿತ್ತು ಬೀದಿಯಲ್ಲಿ.
ಚರಂಡಿಯೊಳಗಿಂದ ಕುಪ್ಪಳಿಸಿಕೊಂಡು ಬಂದ
ಕಪ್ಪೆಯೊಂದು ಗಪ್ಪನೆ ಹಾರಿ
ಕೂತುಕೊಂಡಿತು ಆ ಬೆಳ್ಳಿರೂಪಾಯಿ ಕುರ್ಚಿಯಲ್ಲಿ.
ಕೂತದ್ದೆ ತಡ, ಅದಕ್ಕೆ ಅನ್ನಿಸಿತು
ನನಗೆ ಸಮಾನರಾರು ಈ ಹೊತ್ತಿನಲ್ಲಿ ?

ಆನೆ ಬಂತೊಂದಾನೆ, ನಿಧಾನವಾಗಿ
ಹೆಜ್ಜೆಯಿಡುತ್ತಾ ಅದೇ ಬೀದಿಯಲ್ಲಿ.
ಇನ್ನೇನು ಕಾಲಿಡಬೇಕು ಮುಂದಕ್ಕೆ
‘ಹೋ, ನಿಲ್ಲು
ಯಾರೆಂದು ತಿಳಿದೆ ನೀ ನನ್ನ’?

ಸಣ್ಣಗೆ ಕಣ್ಣಿಳಿಸಿ ನೋಡಿತು ಆನೆ :
‘ಹೌದಲ್ಲ ! ಬೆಳ್ಳಿ ರೂಪಾಯಿ ಮೇಲೆ
ವಿರಾಜಮಾನವಾಗಿದ್ದೀರಿ ತಾವು
ನಮಸ್ಕಾರ ನಿಮಗೆ,