ಉತ್ತರ ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತದ ಪ್ರಸಾರ ಮಾಡಿ ಖ್ಯಾತಿ ಗಳಿಸಿರುವ ಕಮಾಲಬಿ (ಕಮಲಾಬಾಯಿ) ಕನಾಟಕ ಹಿರಿಯ ತಲೆಮಾರಿನ ಹಿಂದೂಸ್ಥಾನಿ ಗಾಯಕಿಯರಲ್ಲೊಬ್ಬರು. ೧೯೨೩ರಲ್ಲಿ ಬಿಜಾಪುರದಲ್ಲಿ ಜನಿಸಿದ ಶ್ರೀಮತಿ ಕಮಾಲಬಿ ಉತ್ತರ ಕರ್ನಾಟಕದ ಹಿರಿಯ ಹಿಂದೂಸ್ಥಾನಿ ಸಂಗೀತ ಕಲಾವಿದೆ.

ಶ್ರೀ ಕಿಷನ್‌ರಾವ್‌ ರೇಳಿಕರ, ವ್ಯಾಸ ದಿನಕರರಾವ್‌ ಪಾಠೇಕರ್, ಶ್ರೀ ರಾಮಕೃಷ್ಣ ಬುವಾ ವಜೆ ಮುಂತಾದವರು ಕಮಾಲಬಿ ಅವರ ಗುರುಗಳು.

ಕನ್ನಡ, ಹಿಂದಿ, ಮರಾಠಿ ಭಾಷೆಯಲ್ಲಿ ಸುಲಲಿತವಾಗಿ ಹಾಡುವ ಈ ಹಿರಿಯ ಕಲಾವಿದೆ ಆಕಾಶವಾಣಿಯ ಮುಂಬೈ, ಔರಂಗಾಬಾದ್‌, ಧಾರವಾಡ ಕೇಂದ್ರಗಳಿಂದ ತಮ್ಮ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಮುಂಬೈಯ ಕಲ್ಯಾಣ ಗಾಯನ ಸಮಾಜ, ಪುಣೆಯ ಭಾರತ ಗಾಯನ ಸಮಾಜವೂ ಸೇರಿದಂತೆ ಅನೇಕ ಉತ್ಸವಗಳಲ್ಲಿ ಶ್ರೀಮತಿಯವರ ಕಾರ್ಯಕ್ರಮಗಳು ಪ್ರಸಿದ್ಧಿ ಪಡೆದಿವೆ. ಗಂಧರ್ವ ಮಹಾ ವಿದ್ಯಾಲಯದ ಸಂಗೀತದಲ್ಲಿ ಎಂ.ಎ. ಪದವೀಧರರಾದ ಕಮಾಲಬಿಯವರು ಆಕಾಶವಾಣಿಯ ‘ಎ’ ಶ್ರೇಣಿ ಗಾಯಕಿ. ಅನ್ವಟ್‌ ರಾಗದಲ್ಲಿ ವೈಶಿಷ್ಠ್ಯತೆ ಪಡೆದಿರುವ ಇವರ ಧ್ವನಿ ಸುರುಳಿಯನ್ನು ಹೆಚ್‌.ಎಂ.ವಿ. ಕಂಪನಿ ಬಿಡುಗಡೆ ಮಾಡಿದೆ.

ಶ್ರೀಮತಿ ಕಮಾಲಬಿ ತಾಳಿಕೋಟಿ ಅವರ ಸಂಗೀತ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.