ಅಂಗೇಂದ್ರಿಯ : ಶಬ್ದ, ಸ್ಪರ್ಶ, ರೂಪು, ರಸ ಮತ್ತು ಗಂಧಗಳನ್ನು ಗ್ರಹಿಸುವ ಅವಯವಗಳು

ಅನಾದಿ : ಆತ್ಮ, ದೇಹಿ

ಅರಿಷಡ್ವರ್ಗ : ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ

ಅಷ್ಟತನು : ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಸೋಮ, ಸೂರ್ಯ, ಜೀವಾತ್ಮ

ಅಷ್ಟದಳ ಕಮಲ : ಹೃದಯಸ್ಥಾನದಲ್ಲಿರುವುದೆಂದು ಹೇಳಲಾಗುವ ಇಂದ್ರ, ಅಗ್ನಿ, ಯಮ, ನೈರುತ್ಯ, ವರುಣ, ವಾಯು, ಕುಬೇರ ಮತ್ತು ಈಶಾನ್ಯ ಎಂಬ ಎಂಟು ಅಧೋಮುಖವಾದ ಎಸಳುಗಳು

ಅಷ್ಟವಿಧಾರ್ಚನೆ : ಜಲ, ಗಂಧ, ಅಕ್ಷತೆ, ಪತ್ರ, ಪುಷ್ಟ, ಧೂಪ, ದೀಪ, ನೈವೇದ್ಯ, ತಾಂಬೂಲ

ಅಷ್ಟಾವರಣ : ಷಟ್ಸ್ಥಲಾಚರಣೆಗಳ ಮೇರೆಗೆ ನಿರ್ವಹಿಸಲ್ಪಡುವ ಕಾರ್ಯಗಳಿಗೆ ಸಹಾಯಕವಾಗಿರುವ ಗುರು ಲಿಂಗ ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಎಂಬ ಎಂಟು ಬಗೆಯ ಆವರಣಗಳು

ಇಷ್ಟಲಿಂಗ : ಗುರುವು ತನ್ನ ಶಿಷ್ಯನಿಗೆ ದೀಕ್ಷೆಯ ಮೂಲಕ ಅನುಗ್ರಹಿಸುವ ಲಿಂಗ

ಉನುಮನಿ : ಯೋಗಕ್ಕೆ ಸಂಬಂಧಿಸಿದಂತೆ ಶಿರಸ್ಸಿನಲ್ಲಿ ಅಧೋಮುಖವಾಗಿರುವ ಸಹಸ್ರದಳ ಕಮಲವನ್ನು ಹೋಲುವ ಒಂದು ಬಗೆಯ ಕುಹರ

ಏಕವಿಂಶತಿ ದೀಕ್ಷೆ : ದೀಕ್ಷಾ ಸಮಯದಲ್ಲಿ ಗುರುವು ತನ್ನ ಶಿಷ್ಯನಿಗೆ ಕೊಡುವ ಇಪ್ಪತ್ತೊಂದು ಬಗೆಯ ದೀಕ್ಷೆಗಳು. ಕಾಯಕ್ಕೆ ಉಪದೇಶಿಸುವ ಆಜ್ಞಾದೀಕ್ಷೆ, ಉಪಮಾದೀಕ್ಷೆ, ಸ್ವಸ್ತಿಕಾರೋಹಣ, ಕಳಶಾಭಿಷೇಕ, ವಿಭೂತಿಯ ಪಟ್ಟ, ಲಿಂಗಾಯತ ಮತ್ತು ಲಿಂಗಸ್ವಾಯತ, ಪ್ರಾಣಕ್ಕೆ ಉಪದೇಶಿಸುವ ಸಮಯ, ನಿಸ್ಸಂಸಾರ, ನಿರ್ವಾಣ, ತತ್ವದೀಕ್ಷೆ, ಆಧ್ಯಾತ್ಮ, ಅನುಗ್ರಹ ಮತ್ತು ಶುದ್ಧವಿದ್ಯೆ, ಮನಸ್ಸಿಗೆ ಉಪದೇಶಿಸುವ ಏಕಾಗ್ರಚಿತ್ತ, ಧೃಢವೃತ ಪಂಚೇಂದ್ರಿಯಾರ್ಪಿತ, ಅಹಿಂಸೆ, ಮನೋಲಯ, ಲಿಂಗನಿಜ ಮತ್ತು ಸದ್ಯೋನ್ಮುಕ್ತಿ ಎಂಬ ಇಪ್ಪತ್ತೊಂದು ದೀಕ್ಷೆಗಳು

ಏಕಾದಶ ಪ್ರಸಾದ : ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಪ್ರಸಾದಿಪ್ರಸಾದ, ಆಪ್ಯಾಯನಪ್ರಸಾದ, ಸಮಯಪ್ರಸಾದ, ಪಂಚೇಂದ್ರಿಯವಿರಹಿತ ಪ್ರಸಾದ, ಅಂತಃ

ಕರಣಚತುಷ್ಟಯ ವಿರಹಿತ ಪ್ರಸಾದ, ಸದ್ಭಾವ ಪ್ರಸಾದ, ಸಮತಾ ಪ್ರಸಾದ, ಜ್ಞಾನ ಪ್ರಸಾದ

ಕರಣ : ಮನಸ್ಸು ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ನಾಲ್ಕು ಅಂತರಿಂದ್ರಿಯಂಗಳು

ಕರಸ್ಥಲ : ಶರೀರದಲ್ಲಿ ಶಿವಲಿಂಗವನ್ನು ಧರಿಸುವ ಆರು ಎಡೆಗಳಲ್ಲಿ ಒಂದು, ಅಂಗೈ

ಚತುರ್ವಿಧ ಫಲಪದವಿಗಳು : ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯ

ಚತುರ್ದಶ ಭುವನಂಗಳು : ಭೂಲೋಕ, ಭುವಲೋಗ, ಮಹಲೋಕ, ಜನರ್ಲೋಕ, ಸತ್ಯಲೋಕ, ಬ್ರಹ್ಮಲೋಕ, ಇವು ಏಳು ಉರ್ದ್ವಲೋಕಗಳು, ಅತಲ ವಿತಲ ಸುತಲ ರಸಾತಲ, ತಲಾತಲ, ಮಹಾತಲ.ಪಾತಾಲ ಇವು ಏಳು ಅಧೋ ಲೋಕಗಳು.

ತ್ರಿದೇವತೆ : ಬ್ರಹ್ಮ, ವಿಷ್ಣು, ರುದ್ರ.

ದಶವಾಯು : ಯೋಗ ಪ್ರಕ್ರಿಯೆಯಲ್ಲಿ ಪ್ರಮುಖವಾಗಿರುವ ಪ್ರಾಣ, ವ್ಯಾನ, ಅಪಾನ, ಉದಾನ ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯ ಎಂಬ ಹತ್ತು ಬಗೆಯ ವಾಯುಗಳು

ದಶವಿಧ ಪಾದೋದಕ : ಗುರುಪಾದೋದಕ, ಲಿಂಗಪಾದೋದಕ, ಜಂಗಮ ಪಾದೋದಕ, ಅವಧಾನ ಪಾದೋದಕ, ಅಪ್ಯಾಯನೋದಕ, ಹಸ್ತೋದಕ, ಪರಿಣಾಮೋದಕ, ನಿರ್ನಾಮೋದಕ, ಸತ್ಯೋದಕ.

ದಾಸೋಹ : ದಾಸೋಹಂಭಾವದ ಪರಿಪಕ್ವಾವಸ್ಥೆ

ದ್ವಾದಶಾದಿತ್ಯರು : ಧಾತೃ, ಆಯುರ್ಮಾನ್‌, ಮಿತ್ರ, ವರುಣ, ಇಂದ್ರವಿವಸ್ವಾನ್‌, ಪರ್ಜನ್ಯ, ಪೂಷಾ, ಅಂಶುಮಾನ್‌, ಭಗಸ್ತಿಮಾನ್‌, ತೃಷ್ಟೃ, ವಿಷ್ಣು

ನವಚಕ್ರಗಳು : ಯೋಗಶಾಸ್ತ್ರದ ಪ್ರಕಾರ ಮಿದುಳಿನಲ್ಲಿರುವ ಬ್ರಹ್ಮ ಚಕ್ರ, ಶಿಖಾಚಕ್ರ, ಪಶ್ಚಿಮ ಚಕ್ರ ಎಂಬ ಮೂರು ಚಕ್ರಗಳೂ, ಶರೀರದಲ್ಲಿರುವ ಆಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣಿಪೂರಕ ಚಕ್ರ, ಅನಾಹತ ಚಕ್ರ, ವಿಶುದ್ಧಿ ಚಕ್ರ, ಆಜ್ಞಾ ಚಕ್ರ ಎಂಬ ಆರೂ ಚಕ್ರಗಳು ಸೇರಿ ದೇಹದಲ್ಲಿರುವ ಒಂಬತ್ತು ಚಕ್ರಗಳು

ನವಬ್ರಹ್ಮರು : ಆಚಾರಲಿಂಗ, ಗುರುಲಿಂಗ, ಶಿವಲಿಂಗ ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ

ನಿಃಕಲ : ಅಖಂಡವಾದುದು, ನಿರಾಕಾರವಾದುದು, ಶಿವಪಾರಮ್ಯವನ್ನು ಸಾರುವುದು

ನಿಃಶೂನ್ಯಲಿಂಗ : ಬಯಲೇ ರೂಪವಾಗಿರುವ ಲಿಂಗ, ನಿರಾಕಾರಲಿಂಗ

ಪಂಚಕರ್ಮೇಂದ್ರಿಯಗಳು : ವಾಕು, ಪಾಣಿ, ಪಾದ, ಪಾಯು, ಗುಹ್ಯ

ಪಂಚಪ್ರಾಣವಾಯುಗಳು : ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ

ಪಂಚಬುದ್ಧೀಂದ್ರಿಯಗಳು : ಶ್ರೋತ್ರ, ನೇತ್ರ, ಘ್ರಾಣ, ಜಿಹ್ವೆ, ತ್ವಕ್ಕು

ಪಂಚಮಹಾಪಾತಕಗಳು : ಬ್ರಹ್ಮಹತ್ಯೆ, ಸುರಾಪಾನ, ಸ್ವರ್ಣಸ್ತೇಯ, ಗುರುಪತ್ನೀಗಮನ ಮತ್ತು ಇಂಥ ಪಾಪಕಾರ್ಯಗಳನ್ನು ಮಾಡಿದವರ ಸಹವಾಸ ಎಂಬ ಐದು ಬಗೆಯ ದೊಡ್ಡ ಪಾಪಕಾರ್ಯಗಳು

ಪಂಚಮಹಾಭೂತಂಗಳು : ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ

ಪಂಚವರ್ಣ : ನಮಃಶಿವಾಯ ಎಂಬ ಐದು ಅಕ್ಷರಗಳಿಂದ ಕೂಡಿರುವ ಮಹಾಮಂತ್ರ ಪಂಚಾಕ್ಷರಿ.

ಪಂಚವಿಂಶತಿ ಲೀಲೆ : ಶಿವನು ಲೋಕೋದ್ಧಾರಕ್ಕಾಗಿ ಭೂಮಿಯಲ್ಲಿ ಮಾಡಿದ ಪ್ರಸಿದ್ಧವಾದ ಸೋಮಧರಲೀಲೆ, ಉಮಾಮಹೇಶ್ವರಲೀಲೆ, ವೃಷಭಾರೂಢಲೀಲೆ, ತಾಂಡವಲೀಲೆ, ಗಿರಿಜಾಕಲ್ಯಾಣಲೀಲೆ, ಭಿಕ್ಷಾಟನಲೀಲೆ, ಮಾರಹರಲೀಲೆ, ಕಾಲಹರಲೀಲೆ, ತ್ರಿಪುರದಹನಲೀಲೆ, ಜಲಂಧರಲೀಲೆ, ಅಜಾರಿಲೀಲೆ, ವೀರಭದ್ರಲೀಲೆ, ಶರಭಲೀಲೆ, ಅರ್ಧನಾರೀಶ್ವರ ಲೀಲೆ, ಕಿರಾತಲೀಲೆ, ಕಂಕಾಳಲೀಲೆ, ಚಂಡೇಶಾನುಗ್ರಹಲೀಲೆ, ವಿಷಧರಲೀಲೆ, ಚಕ್ರದಾನಲೀಲೆ, ವಿಘ್ನಪ್ರಸಾದಲೀಲೆ, ಉಮಾಸ್ಕಂದಲೀಲೆ, ಏಕಪಾದಲೀಲೆ, ಸುಖಾವಹಲೀಲೆ, ದಕ್ಷಿಣಮೂರ್ತಿಲೀಲೆ ಮತ್ತು ಲಿಂಗೋದ್ಭವಲೀಲೆ ಎಂಬ ಇಪ್ಪತ್ತೈದು ಲೀಲೆಗಳು.

ಬ್ರಹ್ಮರಂಧ್ರ : ಅಣವ, ಮಾಯಾ, ಕಾರ್ಮಿಕ ಎಂಬ ಮೂರು ಬಗೆಯ ದೋಷಗಳು

ಲಿಂಗಸ್ವಾಯತ : ಲಿಂಗವನ್ನು ಬ್ರಹ್ಮರಂಧ್ರ ಪ್ರದೇಶದಲ್ಲಿ ನೆಲೆಗೊಳ್ಳುವಂತೆ ಮಾಡುವುದು.

ಲಿಂಗಾಂಗಿ : ಅಂಗದಲ್ಲಿ ಲಿಂಗಸಂಬಂಧವನ್ನು ಮಾಡಿಕೊಂಡಿರುವವನು ಲಿಂಗವಂತ

ವರ್ಣ : ಯೋಗಶಾಸ್ತ್ರಕ್ಕೆ ಸಂಬಂಧಿಸಿದಂತೆ ದೇಹದಲ್ಲಿರುವ ಒಂಬತ್ತು ಚಕ್ರಗಳಿಗೆ ಇರುವ ಬಣ್ಣ

ಷಡುಚಕ್ರ : ಶರೀರದ ಒಳಗಿರುವುದೆಂದು ಹೇಳಲಾಗುವ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ ಮತ್ತು ಆಜ್ಞೆ ಎಂಬ ಆರು ಚಕ್ರಗಳು.

ಷಟ್ಸ್ಥಲ : ಭಕ್ತ ಸಾಧಿಸಬೇಕಾದ ಭಕ್ತ, ಮಾಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಮುಕ್ತಿ ಮಾರ್ಗದ ಆರು ಹಂತಗಳು

ಷೋಶೋಪಚಾರ : ಪಾದ್ಯ, ಆರ್ಘ್ಯ, ಆಚಮನ, ಪತ್ರಪುಷ್ಪ, ಗಂಧ, ಅಕ್ಷತೆ, ರುದ್ರಾಕ್ಷಮಾಲೆ, ಛತ್ರಚಾಮರ, ವ್ಯಜನ, ಶೀತ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ, ಸ್ತೋತ್ರ.

ಸಪ್ತದ್ವೀಪಗಳು : ಜಂಬೂದ್ವೀಪ, ಪ್ಲಕ್ಷದ್ವೀಪ, ಶಾಲ್ಮಲಿದೀಪ, ಕಲಶದ್ವೀಪ, ಕಾಂತದ್ವೀಪ, ಶಕದ್ವೀಪ, ಪುಕ್ಷರದೀಪ.

ಸಪ್ತಸಾಗರಗಳು : ಲವಣಸಮುದ್ರ, ಇಕ್ಷುಸಮುದ್ರ, ಮಧುಸಮುದ್ರ, ಘೃತಸಮುದ್ರ, ದಧಿಸಮುದ್ರ, ಕ್ಷೀರಸಮುದ್ರ, ಸ್ವಾದೋದಕಸಮುದ್ರ.