ಷಡ್ಬ್ರಹ್ಮದಿಂದೈದು ಭೂತಂಗಳುದಿಸಿದವು
ಷಡ್ಬ್ರಹ್ಮದಿಂ ದಂಡ ಕೋಟಿಗಳು ನಿಮಿರ್ತವು
ಷಡ್ಬ್ರಹ್ಮದಿಂದೆ ಹರಿಯಜರಿಂದ್ರ ಮೇರು ಸಾಗರ ತಾರೆ ಶಶಿಭಾಸ್ಕರಂ
ಷಡ್ಬ್ರಹ್ಮದಿಂದೆ ಮನುಮುನಿಸಿದ್ದ ಸಾಧಕರು
ಷಡ್ಬ್ರಹ್ಮದಿಂದೆ ಸುರದನುಜಮರರು ನರರು
ಷಡ್ಬ್ರಹ್ಮದಿಂದೆ ಮಾಯಾಜನನ ಸ್ಥಿತಿ ಲಯವು ಸ್ವರ್ಗವಾದುದು ಶಂಕರೀ*||

 

* ಕರ್ನಾಟಕ ಕವಿಚರಿತೆ (ಆರ್. ನರಸಿಂಹಾಚಾರ್)ಯಿಂದ ಎತ್ತಿಕೊಳ್ಳಲಾಗಿದ್ದು, ಅಲ್ಲಿ ಇದನ್ನು ವಚನವೆಂದು ಕರೆದಿದ್ದಾರೆ. ಆದರೆ ಇದು ಷಟ್ಪದಿ ಸ್ವರವಚನದ ಭಾಗವಾಗಿರಬಹುದು.