ಕರಿಮಾಯಿ’ ಕಾದಂಬರಿ ಇದೀಗ ನಾಲ್ಕನೆಯ ಮುದ್ರಣ ಕಾಣುತ್ತಿದೆ. ಮೊದಲಿಗೆ ಇದು ೧೯೭೦ರ ದಶಕದಲ್ಲಿ ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅನಂತರ ಚಲನಚಿತ್ರವೂ ಆಯಿತು. ಕಾದಂಬರಿ ಪುಸ್ತಕ ರೂಪದಲ್ಲಿಯೂ ಹೊರಬಂದಿತು. ಆದರೆ ಚಲನಚಿತ್ರ ಮಾತ್ರ ಬಿಡುಗಡೆಯಾಗಲೇ ಇಲ್ಲ.

ಈ ಕಾದಂಬರಿಯನ್ನು ನನ್ನಿಂದ ಬರೆಯಿಸಿ, ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟಿಸಿದ ಶ್ರೀ ಪ್ರಹ್ಲಾದ ಕುಳಲಿ ಅವರಿಗೆ ಮತ್ತು ಸಂಯುಕ್ತ ಕರ್ನಾಟಕ ಬಳಗಕ್ಕೆ ಹೃತ್ಪೂರ್ವಕ ವಂದನೆಗಳು.

ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ, ಮುನ್ನುಡಿ ಬರೆದಿರುವ ಶ್ರೀ ಟಿ.ಪಿ ಅಶೋಕ ಅವರಿಗೆ;

ನಾಲ್ಕನೆಯ ಮುದ್ರಣವನ್ನು ಪ್ರಕಟಿಸುತ್ತಿರುವ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೆ;

ಮುದ್ರಿಸಿದ ಸ್ವ್ಯಾನ್ ಪ್ರಿಂಟರ್ಸ್ ಅವರಿಗೆ;

ನನ್ನ ವಂದನೆಗಳು ಸಲ್ಲುತ್ತವೆ.

ದೀಪಾವಳಿ ೨೦೧೧

ಚಂದ್ರಶೇಖರ ಕಂಬಾರ