ಬಾರಕ್ಕ ನಾವಿಬ್ಬರೋಗೋಣ ಬಾ || ವರ ವೀರ ಸದ್ಗುರು ಸೇವೆ ಮಾಡೋಣ ಬಾ || ಪ || ಕಾರಣ ಪುರುಷ ಕರಣ ಸಾಗರವ | ನೀ ಸಾರಿ ಕೈ ಪಿಡಿದೆಮ್ಮ ಪೊರೆವಾನು ಬಾ || ಕಾಮಿತಾ ಫಲಗಳ ಕೊಡುವನು ಬಾ || ಬಹು ಪ್ರೇಮದಿಂದೆಮ್ಮನು ಪೊರೆವನು ಬಾ || ಆ ಮಹಾ ಘನ ತತ್ವ ಮಸಿ ವಾಕ್ಯವನು ಪೇಳಿ | ಸಾಮ ವೇದವ ಪೂರ್ತಿಗೊಳಿಪನು ಬಾ || ಹಿಂದಣ ಪಾಪವ ಸುಡುವನು ಬಾ || ನಮಗಿಂದು ಸೌಖ್ಯವನು ಕೊಡುವನು ಬಾ || ಒಂದು ನಿಮಿಷ ಮಾತ್ರ ಹೊಂದಿ ಅಗಲದಿರೆ ಚಂದಾದಿ ಮುಕುತಿಯ ಕರುಣಿ ಪ ಬಾ || ದೇಹವಾಗಿ ಗುಡಿಯಾಗಿ ಮಾಳ್ಪಾನು ಬಾ | ನಮ್ಮ ಭಾವ ಗದ್ದುಗೆಯಾಗಿ ಹೊಪ್ಪಾನು | ಬಾ || ಸೋಹಂ ಎನಿಪ ದೇವರಲ್ಲಿ ತೋರುವ ಗುರು | ದೇವ ನಂಘ್ರಿಯ ನಾವು ಪೂಜೋಣ | ಬಾ || ಬಯಲು ಭಂಗಲವಾಗಿ ಮಾಳ್ಪಾನು ಬಾ | ನಮ್ಮ ತವರೂರು ಕಡೆಯೆಂದು ಪೇಳ್ವಾನು ಬಾ || ಬಯಲನ್ನೇ ಬೆಳಗುವ ಬ್ರಹ್ಮನೊಡಗೂಡಿ ಬಯಲ ಬೆಂಗಲ ಸುಖಿಸೋಣ ಬಾ || ವರ ರಂಭಾ ಪುರಿಯನ್ನೇ ಸೇರೋಣ ಬಾ || ಅಲ್ಲಿ ಗುರು ರೇಣುಕರ ಪಾದ ನೋಡೋಣ ಬಾ || ಗುರು ಮಂತ್ರೆದಾದಿಷ್ಟ ವಿಧದರ್ಚನೆಯ ಮಾಡಿ ಪರತರ ಮುಕುತಿಯ ಪಡೆಯೋಣ ಬಾ ||