() ದೇಶೀಯ ಶಬ್ದಗಳು

ಅಮಾನಿ ಸರ್ಕಾರಿ ಅಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಇರುವ ಭೂಮಿ ಅಥವಾ ಇತರ ಕಂದಾಯ ಮೂಲ.
ಆಯಗಾರ ಗ್ರಾಮಾಧಿಕಾರಿಗಳು ಹನ್ನೆರಡು ಮಂದಿ ಗೌಡ, ಶ್ಯಾನುಭೋಗ, ಪಂಚಾಂಗಿ, ತಳವಾರ, ತೋಟೆ, ನೀರುಗಂಟೆ, ಅಗಸ, ನಾಯಿಂದ, ಕುಂಬಾರ, ಲೋಹಗಾರ, ಬಡಗಿ, ಮತ್ತು ಅಕ್ಕಸಾಲಿ
ಬಾರಾಬಲೂತಿ ಆಯಗಾರ
ಬೀಜವರಿ ಬಿತ್ತನೆಗೆ ಬೇಕಾಗುವ ಬೀಜದ ಪ್ರಮಾಣಕ್ಕೆ ಅನುಗುಣವಾದ ಭೂವಿಸ್ತಾರ.
ಬಿತ್ತುವಟ್ಟ ಕೆರೆಯ ನಿರ್ಮಾಣ ಹಾಗೂ ಸಂರಕ್ಷಣೆಯ ಸಲುವಾಗಿ ನೀಡಲಾದ ಭೂಮಿ
ಚೌತಾಯಿ ನಾಲ್ಕನೆಯ ಒಂದು ಪಾಲು
ದಶವಂದ ಕೆರೆ ನಿರ್ಮಾಣ ಅಥವಾ ರಿಪೇರಿಗಾಗಿ ನೀಡಲಾದ ಭೂಮಿ, ಬಿತ್ತುವಟ್ಟ ಹಾಗೂ ಕಟ್ಟು ಕೊಡಿಗೆ ಹಾಗೆಯೆ.
ದಸ್ತಬಂದ್ ಮೇಲಿನಂತೆಯೆ
ದಾಮಾಷಾಯಿ, ದಾಮಾಷಿ ಹಿಸ್ಸೆ ಅಥವಾ ಪಾಲಿನ ಪ್ರಮಾಣ
ದೇವಾದಾಯ ದೇವಾಲಯಗಳಿಗಾಗಿ ಕಂದಾಯವಿಲ್ಲದೆ ದಾನಮಾಡಿದ ಭೂಮಿ
ಗದ್ಯಾಣ ಅರ್ಧ ಸವರನ್ನು
ಹಗೇವು ನೆಲದೊಳಗಿನ ಕಣಜ
ಇನಾಂ ಸೇವೆಗಾಗಿ ಸರ್ಕಾರ ನೀಡುವ ಕೊಡುಗೆ, ಪುರಸ್ಕಾರ, ಭೂಮಿ ಅಥವಾ ಹಣದ ನೀಡಿಕೆ
ಇನಾಮತಿ ಕಂದಾಯ ಅಥವಾ ಬಾಡಿಗೆ ಇಲ್ಲದ್ದು
ಜಾಗೀರು ಸರ್ಕಾರಕ್ಕೆ ಮಾಡಲಾದ ಸೇವೆಗಾಗಿ ನೀಡಿದ ಕಂದಾಯ ರಹಿತ ಭೂಮಿ
ಜಮಾಬಂದಿ ರೈತವಾರಿ ಪದ್ಧತಿಯಲ್ಲಿ ಪ್ರತಿವರ್ಷ ನಡೆಯುವ ಕಂದಾಯ ನಿಗದಿ.
ಜೋಡಿ ಪರಿಸ್ಥಿತಿಗೆ ತಕ್ಕಂತೆ ಅಲ್ಪ ಕಂದಾಯದ ಮೇಲೆ ನೀಡಲಾದ ಭೂಮಿ ಅಥವಾ ಗ್ರಾಮ
ಜೋಡಿದಾರ ಕಡಿಮೆ ಕಂದಾಯದ ಮೇಲೆ, ಭೂಮಿ ಅಥವಾ ಗ್ರಾಮ ಉಳ್ಳ ರೈತ.
ಖಂಡಿ, ಖಂಡುಗ ಭೂಮಿಯ ಅಳತೆ : ೧೦ ಸಾವಿರ ಚದರಗಜ ಗದ್ದೆ ಹಾಗೂ ತೋಟ, ಮತ್ತು ೬೪ ಸಾವಿರ ಚದರ ಗಜ ಒಣ ಭೂಮಿ; ಧಾನ್ಯದ ಅಳತೆ : ೪ ಬುಷಲ್ ಅಥವಾ ೧೨ – ೮ ಪಿಂಟ್‌ಗಳು.
ಕಂಬ  ಭೂಮಿಯನ್ನು ಅಳೆಯುವ ಪ್ರಮಾಣ
ಕರ್ನಂ, ಕರಣಂ ಗ್ರಾಮ ಲೆಕ್ಕಿಗ, ಶ್ಯಾನುಭೋಗನಂತೆಯೆ
ಕಟ್ಟುಕಾಲುವೆ ಕೆರೆಗೆ ನೀರು ತರುವ ಕಾಲುವೆ
ಕಸಬಾ ಜಿಲ್ಲೆ ಅತವಾ ವಿಭಾಗದ ಮುಖ್ಯ ಊರು
ಕಟ್ಟುಕೊಡಿಗೆ ಬಿತ್ತುವಟ್ಟ ಹಾಗೂ ದಶವಂದದ ಹಾಗೆಯೆ
ಕೌಲು ಒಪ್ಪಂದ ಕರಾರು
ಕೊಡಿಗೆದಾರ ಕೆರೆ ಕಟ್ಟಿದ್ದಕ್ಕೆ ದುರಸ್ತಿ ಮಾಡಿದ್ದಕ್ಕೆ ಇಲ್ಲವೇ ಜೀರ್ಣೋದ್ಧಾರ ಮಾಡಿದಕ್ಕೆ, ಪ್ರತಿಯಾಗಿ ಮುಫತ್ತಾಗಿ ಇಲ್ಲವೆ ಅತ್ಯಲ್ಪ ಕಂದಾಯದ ಮೇಲೆ ಜಮೀನು ಉಳ್ಳವನು.
ಕೊಳಗ ಖಂಡುಗದ ಇಪ್ಪತ್ತನೆಯ ಒಂದು ಭಾಗ
ಮಹಾಜನರ ಅಗ್ರಹಾರದ ಗ್ರಾಮ ವಿದ್ವಜ್ಜನ
ಮಣೀಗಾರ ಪ್ರತಿನಿಧಿ, ಲೆಕ್ಕಿಗ, ಮೇಲುಸ್ತುವಾರಿ ಮಾಡುವವ
ಮಾನ್ಯ ತೆರಿಗೆ ವಿನಾಯಿತಿ.
ಮರಾಮತ್ತು ಸರಿಪಡಿಸುವುದು ಅಥವಾ ದುರಸ್ತು ಮಾಡುವುದು ಸಾಮಾನ್ಯವಾಗಿ ಲೋಕೋಪಯೋಗಿ ಇಲಾಖೆಗೆ ಬಳಸುವ ಶಬ್ದ.
ಮತ್ತರು ಭೂಮಿ ಅಳತೆ, ಸುಮಾರು ನಾಲ್ಕು ಅಥವಾ ಐದು ಎಕರೆಗೆ ಸಮ
ಮೀರಾಶಿ ರೈತರು ಗ್ರಾಮಾಧಿಕಾರಿಗಳು ಕೊಡುವ ಭತ್ಯ ಅಥವಾ ಭಕ್ಷಿಸು, ಹಣದ ರೂಪದಲ್ಲಿ ಅಥವಾ ವಸ್ತು ರೂಪದಲ್ಲಿ ಸಾಮಾನ್ಯವಾಗಿ ಕೊಡಲಾಗುವುದು.
ಮುಚ್ಚಳಿಕೆ ಕರಾರು ಪತ್ರ
ಮುತ್ಸದ್ಧಿ ಪ್ರತಿನಿಧಿ, ಲೆಕ್ಕಿಗ
ನಿಭಂಧ ಸ್ಥಿರ ಆಸ್ತಿ, ನಿಗದಿಯಾದ ಭ್ಯ
ಪಗೋಡ ಚಿನ್ನದ ನಾಣ್ಯ
ಪಣ, ಹಣ ೫ – ೨೮ ಗ್ರೇನ್ ಚಿನ್ನದ ನಾಣ್ಯ
ಪಟ್ಟಣ ಶೆಟ್ಟಿ ಶೆಟ್ಟಿಗೆ ಎರಡನೆಯವನಾದ ನಗರ ಪ್ರಮುಖನಿಗೆ ನೀಡಿದ ಬಿರುದು. ಶೆಟ್ಟಿ ನಗರಾಧ್ಯಕ್ಷನಾದರೆ ಪಟ್ಟಣ ಶೆಟ್ಟಿ – ಅಲ್ಡರ್ ಮನ್ (ದ್ವಿತೀಯ ಪ್ರಮುಖ)
ಪಟ್ಟಾ ರೈತನಿಗೆ ನೀಡುವ ಗುತ್ತಿಗೆ ಪತ್ರ – ಗುತ್ತಿಗೆ ಷರತ್ತು ಹಾಗೂ ಗುತ್ತಿಗೆ ಭೂಮಿಯ ವಿವರಗಳನ್ನು ಒಳಗೊಂಡದ್ದು.
ಪೇಷ್ಕಾರ್ ಅಮಲದಾರನಿಗೆ ಎರಡನೆಯ ಕಂದಾಯ ಅಧಿಕಾರಿ
ರಾಜೀನಾಮೆ ಒಪ್ಪಿಗೆ ಪತ್ರ,
ಸಲುಗೆ, ಸಲಗೆ ಗಾತ್ರದ ಅಳತೆ, ಖಂಡುಗ ೧೬೦ ಸೇರು
ಸನದು ಆಳುವ ಅಧಿಕಾರಸ್ಥರ ಮೊಹರಿನಿಂದ ವ್ಯಕ್ತಿಗೆ ಸಂಬಳ, ಹಕ್ಕು ಇತ್ಯಾದಿಗಳನ್ನು ನೀಡುವ ದಾಖಲೆ ಪತ್ರ.
ಸರ್ವಮಾನ್ಯ ಪೂರಾ ಮುಫತ್ತಾಗಿ ನೀಡಲಾದ ಜಮೀನು
ಸೇನಬೋವ ಗ್ರಾಮ ಲೆಕ್ಕಿಗ
ಶಿಕಿಮದಾರ ಉಪ ಕೃಷಿಕ
ಶಿರಸ್ತೇದಾರ ಕಂದಾಯ ಅಥವಾ ನ್ಯಾಯಾಂಗ ಕಚೇರಿಯ ಮುಖ್ಯಸ್ಥ
ಶಿವನಿ ಜಮೆ ಸರ್ಕಾರಕ್ಕೆ ಪಾವತಿ ಮಾಡಿದ ಸಾದಿಲವಾರು ಆದಾಯ
ಶ್ರೇಯ, ಶ್ರಾಯ ಕಡಿಮೆ ಪ್ರಮಾಣದಲ್ಲಿ ಆರಂಭವಾಗಿ ವರ್ಷವರ್ಷಕ್ಕೆ ಕ್ರಮವಾಗಿ ಹೆಚ್ಚುತ್ತ ಗರಿಷ್ಟ ಮಿತಿಯನ್ನು ಮುಟ್ಟುವ ಕಂದಾಯ
ಸೌದಿ ನೀರುಗಂಟಿ
ತಳಾರಿ, ತಳಾರ, ತಳವಾರ ಹಳ್ಳಿಯ ಕಾವಲುಗಾರ. ಅಧಿಕಾರಿಗಳಿಗೆ ಮಾಹಿತಿ ನೀಡುವುದು, ಪ್ರವಾಸಿಗಳಿಗೆ ಮಾರ್ಗದರ್ಶನ ಮಾಡುವುದು ಇವನ ಕರ್ತವ್ಯ.
ತೋಟಿ ತಳಾರಿಯ ಕೆಳಗಿನವ ಬೆಳೆಯ ಮೇಲೆ ನಿಗಾ ಇಡಲು ನೇಮಿನಾದವ
ಉಂಬಳಿ ಕಂದಾಯರಹಿತವಾದ ಗ್ರಾಮ ಅಥವಾ ಭೂಮಿ
ವರಹ ಚಿನ್ನದ ನಾಣ್ಯ, ಪಗೋಡ

ಆಧಾರಮೂಲಗಳು:
೧. ರೈಸ್ – ೨
೨. ಎಚ್.ಎಚ್. ವಿಲ್ಸನ್ ಗ್ಲಾಸರಿ ಆಫ್ ಜ್ಯೂಡಿಷಿಯಲ್ ಅಂಡ್ ರೆವಿನ್ಯೂಟರ್ಮ್ಸ್

() ಇಂಗ್ಲಿಷ್ ಪದಗಳಿಗೆ ಸಮಾನ ಕನ್ನಡ ಶಬ್ದಗಳು:

ಅಂತರ್ಜಲ Ground water
ಅಂಗಳ Tank Bed
ಅಚ್ಚುಕಟ್ಟು, ಅಯಕಟ್ಟು Command Area
ಅಗ್ನಿಶಿಲೆ Metamorphic Rock
ಆಕಾರ ರಚನೆ Layout
ಅಲಂಕಾರಿಕ ಚಾಚುಗಲ್ಲು Cornice
ಇಂಗುಕೊಳ Percolation Pond
ಇಳಿಮೇಡು ಪ್ರದೇಶ Watershed Area
ಕಲ್ಲುಕಟ್ಟಡ Revetment
ಕೆಂಪುಮಣ್ಣು Laterite soil
ಕರೀಕಲ್ಲು Basalt
ಕ್ಷಾರೀಯ Saline
ಕರ್ಣರೇಖೆ Diagonal
ಕಂದಾಯ ನಿರ್ಣಯ Revenue Settlement
ಗಟ್ಟಿ ಕಲ್ಲು (ಪದರಗಲ್ಲು) Schist
ಜಲಾನಯನ ಪ್ರದೇಶ Catchment Area
ತಾಮ್ರಯುಗ Chalcolythic Age
ತುದಿ Terminal
ದ್ವಾರಸ್ತಂಭ Jamb
ಪ್ರತಿ ನಿಯೋಜನೆ Delegation
ಬೆಣಚು ಕಲ್ಲು Granite
ಬೃಹತ್ ಶಿಲಾಯುಗ Megalythic Age
ಬಾಗಿಲುವಾಡದ ಮೇಲುಗಲ್ಲು Lintel stone
ಭೂಯಾಂತ್ರಿಕ ಕಲೆ Soil Mechanics
ಮಟ್ಟ ರೇಖೆ Contour
ಮೆಕ್ಕಲು Aluvial
ಮೇಲು ತೆರಿಗೆ Cess
ಮೇಲು ಕಾಲುವೆ Aqueduct
ಮೋಜಣಿ Survey
ಲಂಬಮಟ್ಟ Vertical
ಶಿಖರ Crest
ಸಮವಟ್ಟ Horizontal
ಸುಳಿಗಾಳಿ Eddy
ಸಂರಕ್ಷಣೆ Maintenance
ಹಿಡಿಗೈ Clamp
ಹೊರಗಂಡಿ Outlet