೫. ದರೋಜಿ ಕೆರೆ :

ಹೊಸಪೇಟೆಯಿಂದ ಬಳ್ಳಾರಿ ರಸ್ತೆಯಲ್ಲಿ ಮಧ್ಯದಲ್ಲಿದೆ, ದರೋಜಿ. ಅಲ್ಲಿ ಇರುವ ದೊಡ್ಡ ಕೆರೆಯಿಂದ ಅದು ಹೆಸರುವಾಸಿ. ಕೆರೆಯನ್ನು ಕಟ್ಟಿದ್ದು ಯಾವಾಗಲೊ ತಿಳಿಯದು. ಆದರೆ ಅದನ್ನು ಟಿಪ್ಪು ಜೀರ್ಣೋದ್ಧಾರ ಮಾಡಿದನೆಂದು ತೋರುತ್ತದೆ.

ನಾರಿಹಳ್ಳಕ್ಕೆ ಅಡ್ಡಲಾಗಿ ಕಟ್ಟಿದ ಭಾರಿ ಕಟ್ಟೆ. ಕಿರ್ಮಾನಿ ಪ್ರಕಾರ ಟಿಪ್ಪುವಿನ ಕಾಲದಲ್ಲಿ “ಸುಮಾರು ಮೂವತ್ತು ಸಾವಿರ ಸಿಪಾಯಿಗಳಿದ್ದ ಮರಾಠರ ದೊಡ್ಡ ರಾವುತ ಪಡೆ ಈ ಕೆರೆಯ ಒಣಗಿದ ಅಂಗಳದಲ್ಲಿ ಅಡಗಿಕೊಂಡಿತ್ತು”. ಏರಿ ಎರಡು ಮೈಲಿಗೂ ಹೆಚ್ಚು ಉದ್ದವಾಗಿದೆ. ಕೆಲವು ಕಡೆಗಳಲ್ಲಿ ಸುಮಾರು ೪೫ ಅಡಿ ಎತ್ತರ ಇದೆ. ಆದ್ದರಿಂದ ಕೆರೆ ಅಂಗಳದಲ್ಲಿ ೩೦ ಸಾವಿರ ರಾವುತರು ಅಡಗಿದ್ದು ಆಶ್ಚರ್ಯವೇನಲ್ಲ.

ಕೆರೆ ಏರಿಯ ಕೋಡಿಯ ಮೇಲೆ ಒಂದು ಶಾಸನವಿದೆ. ೧೮೫೧ರಲ್ಲಿ ಭಾರಿ ಪ್ರವಾಹ ಬಂದು ದರೋಜಿ ಹಳ್ಳಿ ಪೂರ್ಣವಾಗಿ ನಾಶವಾಯಿತೆಂದೂ, ೧೮೫೩ರಲ್ಲಿ ಅದನ್ನು ಮತ್ತೆ ಕಟ್ಟಲಾಯಿತೆಂದೂ ಶಾಸನ ಹೇಳುತ್ತದೆ. ೧೮೫೧ ರಲ್ಲಿ ದರೋಜಿಗೆ ಮೇಲಕ್ಕೆ ಇರುವ ಆವಿನಮಡಗು ಕೆರೆ ಒಡೆದು ಹೋಗಿ ಅದರ ನೀರೆಲ್ಲವೂ ದರೋಜಿಗೆ ಒಮ್ಮೆಲೆ ನುಗ್ಗಿ ಬಂದಿತ್ತು. ದರೋಜಿ ಕೆರೆ ಎರಡು ಕಡೆಗಳಲ್ಲಿ ಒಡೆಯಿತು. ಅದರಿಂದ ನುಗ್ಗಿದ ಅಪಾರ ಜಲರಾಶಿ ಹಳೆಯ ದರೋಜಿ ಗ್ರಾಮವನ್ನು ಪೂರಾ ನಾಶಮಾಡಿತು. ಪ್ರವಾಹ ಕೋಡಿಯ ಮೇಲೆ ೧೪ ಅಡಿ ಇತ್ತು ಎನ್ನಲಾಗಿದೆ. ಕೋಡಿ ಸಂಪೂರ್ಣವಾಗಿ ಹಾಳಾಗಿ ಕೊಚ್ಚಿ ಹೋಯಿತು.

ದರೋಜಿ ಕೆರೆ ಸುಮಾರು ೨ ಸಾವಿರ ಎಕರೆಗಳಿಗೆ ನೀರು ಒದಗಿಸುತ್ತದೆ. ಭತ್ತ, ಕಬ್ಬು ವಿಶೇಷವಾಗಿ ಬೆಳೆಯುತ್ತವೆ. ತುಂಗಭದ್ರಾ ಜಲಾಶಯದ ಮೇಲು ಮಟ್ಟದ ಕಾಲುವೆ ನಿರ್ಮಿತವಾದ ಮೇಲೆ ಈ ಕೆರೆಗೆ ನಾಲೆಯಿಂದ ನೀರು ತುಂಬುತ್ತದೆ.

ಆಧಾರ :

೧. ಮದ್ರಾಸು ಡಿಸ್ಟ್ರಿಕ್ಟ್ ಗೆಜೆಟಿಯರ್, ಬಳ್ಳಾರಿ(ಸಂ)ಡಬ್ಲ್ಯೂ ಫ್ರಾನ್ಸಿಸ್ ೧೯೦೪.

೬. ರಾಯರ ಕೆರೆ ಅಥವಾ ರಾಜಾಪುರಂ ಕೆರೆ :

ಹಡಗಲಿ ಹರಪನಹಳ್ಳಿ ಕೂಡ್ಲಿಗಳಿಗೆ ಹೋಗುವ ರಸ್ತೆ, ಹೊಸಪೇಟೆಯನ್ನು ಬಿಟ್ಟು ಅನತಿ ದೂರದಲ್ಲಿ ರಾಜಾಪುರಂ ಬಳಿ ಒಂದು ದೊಡ್ಡ ಏರಿಯ ಮೇಲೆ ಸಾಗುತ್ತದೆ. ಈ ಬೃಹತ್ ಏರಿಯನ್ನು ಕಟ್ಟಿರುವುದು ಸಂಡೂರಿನ ಬಳಿ ಆರಂಭವಾಗುವ ಎರಡೂ ಬೆಟ್ಟಗಳ ಬಾಯಿಯಲ್ಲಿ. ಈ ಎರಡೂ ಬೆಟ್ಟಗಳ ನಡುವೆ ಒಂದು ಕಣಿವೆ ಹಾದುಹೋಗಿದೆ. ಈ ಕಣಿವೆಗೆ ಅಡ್ಡಲಾಗಿಯೆ ಏರಿಯನ್ನು ಕಟ್ಟಿರುವುದು. ಈ ಏರಿಯಿಂದ ಸಿಗುವ ಕೆರೆಯ ನೋಟ ಒಂದು ಒಣ ಕೆರೆಯ ಅಂಗಳ.

ಈ ಕೆರೆ ಈಗ ಒಣಗಿಹೋಗಿದೆ. ಇದು ಕೃಷ್ಣದೇವರಾಯ ಕಟ್ಟಿಸಿದ ದೊಡ್ಡ ಕೆರೆ. ಇದು ಅನೇಕ ತೋಟ ಉದ್ಯಾನ, ಮರಗಿಡಗಳ ಭಾರಿ ತೋಪುಗಳಿಗೆ ಹಾಗೂ ದ್ರಾಕ್ಷಿ ತೋಟಗಳಿಗೆ ನೀರನ್ನು ಒದಗಿಸುತ್ತಿತ್ತು ಎಂದು ೧೫೨೪ರಲ್ಲಿ ವಿಜಯನಗರಕ್ಕೆ ಭೇಟಿಯಿತ್ತ ಪೋರ್ಚುಗೀಸ್ ಪ್ರವಾಸಿ ಡಾಮಿಂಗೋ ಪೇಸ್ ಮತ್ತು ಕೆಲವು ವರ್ಷಗಳ ನಂತರ ವಿಜಯನಗರಕ್ಕೆ ಬಂದಿದ್ದ ಫರ್ನಾವೋ ನ್ಯೂನಿಜ್ ಎಂಬ ಇನ್ನೊಬ್ಬ ಪೋರ್ಚುಗೀಸ್ ಪ್ರವಾಸಿ ವರ್ಣಿಸಿದ್ದಾರೆ.

ಪೇಸ್ ಪ್ರಕಾರ ಎರಡು ಬೆಟ್ಟಗಳ ಕಣಿವೆ ಬಾಯಿಯಲ್ಲಿ, ‘ಗಿಡುಗ ಹಾರುವಷ್ಟು ಅಗಲವಾದ’ ಕೆರೆಯನ್ನು ದೊರೆ ಕಟ್ಟಿಸಿದ. ಈ ಪಕ್ಕದಿಂದಲೋ, ಆ ಪಕ್ಕದಿಂದಲೋ ಬಂದ ನೀರೆಲ್ಲ ಅಲ್ಲಿ ಶೇಖರವಾಗುತ್ತಿತ್ತು. ಇದಲ್ಲದೆ ಈ ಕೆರೆಗೆ ಇನ್ನೊಂದು ‘ಸರೋವರ’ ದಿಂದಲೂ ನೀರನ್ನು ತರಲಾಗುತ್ತಿತ್ತು. ಹೊರಗಿನ ಬೆಟ್ಟ ಸಾಲಿನ ತಪ್ಪಲಿನ ಉದ್ದಕ್ಕೂ ಹಾಕಲಾಗಿದ್ದ ಕೊಳವೆಗಳ ಮುಖಾಂತರ ಮೂರುಗಾವುದಕ್ಕೂ ಹೆಚ್ಚು ದೂರದಿಂದ ನೀರನ್ನು ತರಲಾಗುತ್ತಿತ್ತು.

ಪೇಸ್ ಪ್ರಸ್ತಾಪಿಸಿದ ಈ ‘ಸರೋವರ’ ಕೂಡ್ಲಿಗಿ ರಸ್ತೆಯ ಎಡಕ್ಕೆ ರಾಜಾಪುರಂ ಬಳಿಯ ದೊಡ್ಡ ಕೆರೆಯಿಂದ ಸುಮಾರು ಹತ್ತು ಮೈಲಿ ದೂರದಲ್ಲಿರುವ ಮರಿಯಮ್ಮ ಹಳ್ಳಿಯ ಬಳಿ ಇರುವ ದಣ್ಣಾಯಕನ ಕೆರೆ ಇರಬಹುದು ಎಂದು ಬಳ್ಳಾರಿ ಜಿಲ್ಲಾ ಗೆಜೆಟಿಯರ್ (೧೯೦೪) ಸೂಚಿಸುತ್ತದೆ.

ಗೆಜೆಟಿಯರ್ ಮತ್ತು ಹೇಳುತ್ತದೆ :

‘ಒಂದಾನೊಂದು ಕಾಲದಲ್ಲಿ ಅದರ (ದಣ್ಣಾಯಕ ಕೆರೆಯ) ಕೋಡಿಯ ನೀರನ್ನು ಸಂಡೂರನ್ನು ಸುತ್ತುವರಿದಿರುವ ಬೆಟ್ಟಸಾಲಿನ ದಕ್ಷಿಣ ತುದಿಯ ಅಂಚಿನಲ್ಲಿ ನಾಲೆಯ ಮೂಲಕ ಭಾರಿ ಏರಿಯಿಂದ ಆಗಿದ್ದ ಕೆರೆಗೆ ಹೀಗೆ ತರಲಾಗುತ್ತಿತ್ತು ಎಂದು ಈಗಲೂ ಜನ ಹೇಳುತ್ತಾರೆ. ಆ ನಾಲೆಯ ಅವಶೇಷಗಳನ್ನು ಈಗಲೂ ನೋಡಬಹುದು. ಬೆಟ್ಟ ಇಳಿಜಾರಿನ ಉದ್ದಕ್ಕೂ ಸಾಗುವ ಹೊಸ ರೈಲು ಹಾದಿ ಹಾಯುವ ರೇಖೆಯ ಬಳಿ ಕಾಣಬಹುದು೧.”

ಕೃಷ್ಣದೇವರಾಯನ(೧೫೦೯ – ೧೫೩೦) ಕೈಕೆಳಗಿನ ಮುದ್ದ ಎಂಬ ಒಬ್ಬ ನಾಯಕ ದಣ್ಣಾಯಕ ಕೆರೆಯನ್ನು ಕಟ್ಟಿಸಿದ ಎನ್ನಲಾಗಿದೆ. ಆ ಕೆರೆಯಲ್ಲಿ ಸಾಕಷ್ಟು ಹೆಚ್ಚುವರಿ ನೀರು ಇರುತ್ತಿತ್ತು. ಅದನ್ನು ದೊರೆ ಕಟ್ಟಿಸಿದ ರಾಜಾಪುರಂ ಕೆರೆಗೆ ತಿರುಗಿಸಲು ಸಾಧ್ಯವಾಗಿತ್ತು. ಬೆಟ್ಟದ ಇಳಿಜಾರಿನಲ್ಲಿ ಸುಮಾರು ಹತ್ತು ಮೈಲಿ ದೂರ ಈ ಹೆಚ್ಚುವರಿ ನೀರನ್ನು ಸಾಗಿಸುವುದು ಇಂಜನಿಯರಿಂಗ್ ಕೌಶಲ್ಯದ ಮಹಾ ಸಾಹಸವೇ ಸರಿ. ಭಾರಿ ಬೆಟ್ಟವೊಂದು ಆ ನೀರನ್ನು ರಾಜಾಪುರಂ ಕೆರೆಯಿಂದ ಪ್ರತ್ಯೇಕಿಸಿತ್ತು. ಆದ್ದರಿಂದ ಬೆಟ್ಟವನ್ನು ಒಡೆದು ಸೀಳಿಯೇ ನೀರನ್ನು ಆ ಕೆರೆಗೆ ಹಾಯಿಸಬೇಕಾಗಿತ್ತು. ಪ್ರಾಯಶಃ “ಕೆರೆಯನ್ನು ನಿರ್ಮಿಸಲು ಕೆರೆಯ ಸ್ಥಳದಲ್ಲಿ ಇದ್ದ ಬೆಟ್ಟವನ್ನು ದೊರೆ ಒಡೆಸಿದ” ಎಂದು ಪೇಸ್ ಹೇಳಿದ್ದು ರಾಜಪುರಂ ಕೆರೆಗೆ ದಣ್ಣಾಯಕನ ಕೆರೆಯ ನೀರನ್ನು ಬಿಡಲು ಬೆಟ್ಟದಲ್ಲಿ ಕೊರೆದು ದಾರಿ ಮಾಡಿದ್ದನ್ನು ಕುರಿತೇ ಇರಬೇಕು. ಬೆಟ್ಟವನ್ನು ಕತ್ತರಿಸಿ ಒಂದು ಕಣಿವೆಯಿಂದ ಇನ್ನೊಂದಕ್ಕೆ ನೀರನ್ನು ಸಾಗಿಸುವುದು ಎಂಥ ಅಶ್ಚರ್ಯಕಾರಕ ಕೆಲಸ, ಅದರ ನಿರ್ವಹಣೆಯಲ್ಲಿ ಎಷ್ಟು ಕೌಶ್ಯಲ್ಯ ಕೂಡಿತ್ತು ಎನ್ನುವುದನ್ನು ತೋರಿಸುತ್ತದೆ.

ಆದರೆ ಸದ್ಯದಲ್ಲಿ ನೆನಪಿರುವಂತೆ ಈ ಕೆರೆ ಎಂದೂ ನೀರನ್ನು ಹಿಡಿದಿಟ್ಟಿಲ್ಲ. ಇಡೀ ಕೆರೆ ಅಂಗಳದಲ್ಲಿ ಈಗ ಒಣಗಿದ ಬೆಳೆಗಳನ್ನು ಬೆಳೆಯಲಾಗುತ್ತದೆ. ಪ್ರಾಯಶಃ ಈ ಬೃಹತ್ ಕೆರೆಗೆ ಮುಖ್ಯ ಜಲಮೂಲವಾಗಿದ್ದ ದಣ್ಣಾಯಕನ ಕೆರೆಯಿಂದ ನೀರು ಬರುವ ವ್ಯವಸ್ಥೆ ವಿಫಲವಾಯಿತೋ ಏನೋ. ಮನುಷ್ಯನಿಂದಲೋ ನೈಸರ್ಗಿಕ ಪ್ರಕೋಪದಿಂದಲೋ ಹಾಳಾಯಿತೋ ಏನೋ. ವಿಜಯನಗರ ಸಾಮ್ರಾಜ್ಯದ ಪತನಾ ನಂತರ ಅದನ್ನು ಯಾರೂ ಸರಿಪಡಿಸಲಿಲ್ಲವೋ ಏನೋ! ಈಗಿನ ಸ್ಥಿತಿ ಏನೇ ಇರಲಿ, ತನ್ನದೆ ಅದ ಅಲ್ಪ ಮೂಲಗಳಿಂದ ಇನ್ನೊಂದು ಕಣಿವೆಯಿಂದ ನೀರನ್ನು ತಿರುಗಿಸಿ ತರುವುದನ್ನು ಆಧಾರಿಸಿದ ನೀರಾವರಿ ಕೆರೆಯ ಯೋಜನೆ ಹಾಗೂ ನಿರ್ಮಾಣಕ್ಕೆ ಇದು ಒಂದು ನಿದರ್ಶನವಾಗಿದೆ. ಈ ತಟಾಕವನ್ನು ನಿರ್ಮಿಸುವಾಗ ಇಂಜನಿಯರ್‌ಗಳು ಎದುರಿಸಬೇಕಾದ ಅಪಾರ ಕಷ್ಟಗಳನ್ನು ಪೇಸ್ ಹಾಗೂ ನ್ಯೂನಿಜ್ ಇಬ್ಬರೂ ವರ್ಣಿಸಿದ್ದಾರೆ.

ಆಧಾರಗಳು :

೧. ಡಬ್ಲ್ಯೂ ಫ್ರಾನ್ಸಿಸ್ ? ಮದ್ರಾಸ್ ಡಿಸ್ಟ್ರಿಕ್ಟ್ ಗೆಜೆಟಿಯರ್ ಬಳ್ಳಾರಿ, ೧೯೦೪ ಪು. ೨೭೯.

೨. ರಾಬರ್ಟ್ ಸೆವೆಲ್ – ಎ ಫರ್‌ಗಾಟನ್ ಎಂಪೈರ್ – ವಿಜಯನಗರ – ಪೇಸ್(ಪು.೨೩೭)ಹಾಗೂ ನ್ಯೂನಿಜ್ (ಪು.೩೪೫ – ೩೪೭) ಅವರ ವರ್ಣನೆಗಳಲ್ಲಿ

೭. ವಾಟದ ಹೊಸಹಳ್ಳಿ ಕೆರೆ :

ವಾಟದ ಹೊಸಹಳ್ಳಿ ಕೆರೆ ಇರುವುದು ಗುಡಿಬಂಡೆಯ ಹತ್ತಿರ ಗೌರಿಬಿದನೂರು – ಗುಡಿಬಂಡೆ ರಸ್ತೆಯಲ್ಲಿ. ಒಂದು ಕಣಿವೆಯ ಕೊನೆಯಲ್ಲಿದೆ. ಕಣಿವೆಯ ಶಿರೋಭಾಗ ಗುಡಿಬಂಡೆಯ ಬಳಿ ಇದೆ. ಕಣೆವೆಯ ನೀರನ್ನೆಲ್ಲ ಕೆರೆ ಪಡೆದುಕೊಂಡು, ಕೆಳಗೆ ಪಶ್ಚಿಮಕ್ಕೆ ಪ್ರದೇಶವನ್ನು ವಿಶಾಲವಾದ ನೀರವಾರಿ ಬಯಲನ್ನಾಗಿ ಮಾಡಿದೆ. ಈ ಸುಂದರ ಜಲವಿಸ್ತಾರದ ತಲೆಭಾಗಕ್ಕೆ ಹೋಗಲು ದಾರಿ, ಗುಡಿಬಂಡೆಯಿಂದ ಇಳಿದು ಬರುವ ಬೆಟ್ಟೆಗಳ ನಡುವಿನ ಕಣಿವೆಯ ಮೂಲಕ. ಕೆರೆ ತುಂಬಿದಾಗ ಜಲವಿಸ್ತಾರ ಬಹುಶಃ ಎರಡುವರೆ ಮೈಲಿ ಉದ್ದ ಹಾಗೂ ಅರ್ಧ ಮೈಲಿಗೂ ಹೆಚ್ಚು ಅಗಲ ಇರುತ್ತದೆ. ಇದು ಮೈಸೂರಿನ ಅನೇಕ ಹಳೆಯ ಕೆರೆಗಳಿಗಿಂತ ಚಿಕ್ಕದು ಅದರೂ ಭಾರಿ ಎತ್ತರದ(೬೦ಅಡಿ) ಏರಿಯಿಂದಾಗಿ ಮಹತ್ವದ್ದಾಗಿದೆ. ಏರಿಯ ಉದ್ದ ೧೨೦೦ ರಿಂದ ೧೩೦೦ ಅಡಿ. ಕಣಿವೆಯ ತುದಿಗೆ ಎರಡೂ ಪಕ್ಕದಲ್ಲಿರುವ ಎರಡು ಬೆಟ್ಟಗಳ ನಡುವೆ ಅತ್ಯಂತ ಸುಂದರವಾಗಿ ಇರುವ ಕೆರೆ ಇದು. ಏರಿಯ ಒಳ ಹಾಗೂ ಹೊರ ಇಳಿಜಾರುಗಳಲ್ಲೂ ಗಟ್ಟಿ ಕಲ್ಲುಕಟ್ಟಡವಿದೆ. ಇದರ ಎತ್ತರವಷ್ಟೆ ಅಲ್ಲ, ಕಾಮಗಾರಿ ನಡೆದಿರುವ ರೀತಿ, ಉದ್ದಕ್ಕೂ ನೇರವಾಗಿ ಕುಶಲ ಕರ್ಮದಿಂದ ನಡೆದಿರುವ ಕೆಲಸ. ಇವುಗಳಿಂದಾಗಿ ಇತರ ಕೆರೆಗಳಿಗಿಂತ ತುಂಬ ಭಿನ್ನವಾಗಿದೆ.

ಇದು ಮಣ್ಣಿನ ಏರಿಯೇ ಆದರೂ ಹೊಳೆಗೆ ಅಭಿಮುಖವಾದ ಪಾರ್ಶ್ವದಲ್ಲಿ ಕಲ್ಲುಗಳಿಂದ ಕಟ್ಟಿರುವ ಅಂದವಾದ ಕಟ್ಟಡವನ್ನು ನೋಡಿದರೆ ಇದೊಂದು ಕಲ್ಲು ಕಟ್ಟಡದ ಕೆರೆಯೇ ಎನಿಸುತ್ತದೆ. ಈ ಕಲ್ಲು ಕಟ್ಟಿದ ಗೋಡೆಕಲ್ಲುಗಳು ಕಟ್ಟೆಯಲ್ಲಿ ಹೊಳೆಯ ಕಡೆಗೆ ನಾನಾ ರೂಪ ನಾನಾ ಆಕಾರದ ಒರಟು ಕಲ್ಲುಗಳಿಂದಾಗಿ ಮೆಟ್ಟಲು ಮೆಟ್ಟಲಾಗಿ ಕಟ್ಟಿದ ಗೋಡೆಯಂತಿದೆ ಇಲ್ಲಿನ ಕಲ್ಲುಕಟ್ಟಡ.

ಈ ಮಣ್ಣು ಕಟ್ಟೆಯ ತಲೆಯ ಅಗಲ ೭೫ ಅಡಿ. ಬುಡದಲ್ಲಿ ಸುಮಾರು ೨೨೦ ಅಡಿ. ಪಕ್ಕದ ಇಳಿಜಾರು ಒಳಕ್ಕೆ ಹೊರಕ್ಕೆ ಎರಡೂ ಕಡೆಗೂ ಲಂಬ ಒಂದಕ್ಕೆ ಅಡ್ಡ ಒಂದುವರೆಯಷ್ಟು. ಆದರೆ ಈ ಕೆರೆಯ ವಿಶಿಷ್ಟವಾದ ಲಕ್ಷಣ ವೆಂದರೆ ಇದರ ನೀರಿನ ಹರವು ಸುಮಾರು ೨೫೫ ಎಕರೆ ಮಾತ್ರ. ಆದರೆ ನೀರಾವರಿ ಪ್ರದೇಶ ೨೪೨೪ ಎಕರೆ.

ಇನ್ನೊಂದು ಸ್ವಾರಸ್ಯಕರ ಅಂಶವೆಂದರೆ ಒಂದೇ ನಾಲೆಗೆ ಎರಡು ತೂಬು ಇರುವುದು. ಮುಖ್ಯ ತೂಬು ಮೇಲುಮಟ್ಟದ್ದು, ಅಲ್ಲಿಂದ ಮುಖ್ಯ ನಾಲೆ ಹೊರಡುತ್ತದೆ. ಇನ್ನೊಂದು ತೂಬು ಕೆಳಮಟ್ಟದಲ್ಲಿದೆ. ಈ ತೂಬಿನಿಂದ ಪ್ರತ್ಯೇಕವಾದ ಒಂದು ನಾಲೆ ಹೊರಟು, ಕಟ್ಟೆಯಿಂದ ಕೆಳಕ್ಕೆ ಕೊಂಚ ದೂರದಲ್ಲಿ ಮುಖ್ಯ ನಾಲೆಯನ್ನು ಸೇರುತ್ತದೆ.

ನೀರು ಮೇಲು ತೂಬಿನ ಮಟ್ಟಕ್ಕಿಂತ ಕೆಳಕ್ಕೆ ಇಳಿದಾಗ ಕೆಳಮಟ್ಟದ ತೂಬನ್ನು ತೆಗೆಯುತ್ತಿದ್ದುದು ಸ್ಪಷ್ಟ. ಪ್ರಾಯಶಃ ಕೆರೆ ಅಂಗಳದಿಂದ ಹೂಳು ಕೊಚ್ಚಿಕೊಂಡು ಹೋಗಲು ಈ ಕೆಳ ತೂಬನ್ನು ಬಳಸುತ್ತಿದ್ದಿರಬೇಕು.

ಮುಖ್ಯ ನಾಲೆಗೆ ನಾಲ್ಕು ಕವಲುಗಳಿವೆ. ಈ ನಾಲೆಗಳ ವ್ಯೂಹ ಹದಿನಾಲ್ಕು ಹಳ್ಳಿಗಳಿಗೆ ನೀರು ಒದಗಿಸುತ್ತದೆ. ಹದಿನಾಲ್ಕು ಹಳ್ಳಿಗಳಲ್ಲೂ ಈ ಎಲ್ಲಾ ನಾಲೆಗಳ ಕೆಳಗೆ ನೀರಿನ ಹಂಚಿಕೆಯನ್ನು ಹೇಗೆ ನಿಯಂತ್ರಿಸಲಾಗುವುದು ಸ್ಪಷ್ಟವಾಗಿಲ್ಲ. ಬಹುಶಃ ನಾಲೆಯ ತುದಿಯ ಪ್ರದೇಶಗಳಿಗೆ ನೀರೇ ಸಿಗುವುದಿಲ್ಲವೋ ಏನೋ.

ಈ ಕೆರೆಯನ್ನು ಕಟ್ಟಿದ್ದು ಯಾವಾಗ? ಯಾರು? ಎಂಬುದು ತಿಳಿದಿಲ್ಲ.

೮. ಬಿಜಾಪುರ ಹಾಗೂ ಚಿತ್ರದುರ್ಗಗಳಲ್ಲಿ ನೀರು ಸರಬರಾಜು ವ್ಯವಸ್ಥೆ :

೧೬ – ೧೭ನೇಯ ಶತಮಾನದಲ್ಲಿ ಆದಿಲ್ ಷಾಹಿಗಳು ತಮ್ಮ ರಾಜಧಾನಿ ಬಿಜಾಪುರಕ್ಕೆ ನೀರು ಪೂರೈಸಲು ಮಾಡಿದ್ದ ವ್ಯವಸ್ಥೆ ಅದ್ಭುತವಾದುದು. ಈ ವಿಷಯದಲ್ಲಿ ಅವರು ವಿಜಯನಗರದ ಕ್ರಮವನ್ನು ಮುಂದುವರಿಸಿ ಅಭಿವೃದ್ಧಿ ಪಡಿಸಿಕೊಂಡಿರುವುದು ಸಾಧ್ಯ. ಅಲ್ಲದೆ ತಾಳಿಕೋಟೆ ಅಥವಾ ರಕ್ಕಸತಂಗಡಿಯ ಯುದ್ಧದ ನಂತರ ವಿಜಯನಗರದ ಶಿಲ್ಪಿಗಳನ್ನು ನೇಮಿಸಿಕೊಂಡಿದ್ದ ಸಾಧ್ಯತೆಯೂ ಉಂಟು.

“ಬಿಜಾಪುರ ನಗರವನ್ನು ರೂಪಿಸುವಾಗ ಒಳ್ಳೆ ದಕ್ಷ ರೀತಿಯಲ್ಲಿನ ನೀರು ಹಂಚಿಕೆಯ ವ್ಯವಸ್ಥೆಯನ್ನು ಒದಗಿಸಲು ಯೋಜಕರು ಗಮನವಿತ್ತಿದ್ದಾರೆ. ವಾಸ್ತುಶಿಲ್ಪಿಗಳು ಎಲ್ಲ ಭವನಗಳಲ್ಲೂ ಕೊಳಾಯಿಂದ ನೀರು ಹರಿಸುವ ವ್ಯವಸ್ಥೆಗಳನ್ನು ಅಳವಡಿಸಿದರು. ನಗರಕ್ಕೆ ನೀರನ್ನು ತಂದು ಬಳಕೆಯ ಸ್ಥಳದ ವರೆಗೂ ಕೊಂಡ್ಯೊಯ್ಯಲು ವಿಶೇಷ ಪ್ರಯತ್ನಗಳನ್ನು ಯೋಜಿಸಿ ರೂಪಿಸಿದರು. ನಿರೀಕ್ಷೆಗೆ ಅನುಗುಣವಾಗಿಯೆ ಬಿಜಾಪುರದಲ್ಲಿ ಆದಿಲ್ ಷಾಹಿ ಕಾಲದ ಅಂಥ ಜಲವಾಹಕ ಕಟ್ಟೋಣಗಳ ಅವಶೇಷಗಳು ಹೇರಳವಾಗಿವೆ. ಕೆರೆ, ಭಾವಿ ಗೋಪುರ, ತೊಟ್ಟಿ, ಚಿಲುಮೆ ಹಾಗೂ ಮಣ್ಣು ಕೊಳವೆಗಳು ಮುಂತಾದವು ಬೇಕಾದಷ್ಟಿವೆ೧.”

ಆದಿಲ್‌ಷಾಹಿ ವಾಸ್ತುಶಿಲ್ಪಿಗಳು ನಗರದ ಹೊರಗೆ ಎತ್ತರದಲ್ಲಿ ಇದ್ದ ಜಲಾಶಯಗಳಿಂದ ಗುರುತ್ಪಾಕರ್ಷಣ ಶಕ್ತಿಯಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಯಾವ ರೀತಿ ತರುತ್ತಿದ್ದರು, ನಗರದ ನಾನಾ ಭಾಗಗಳಿಗೆ ಹೇಗೆ ಒದಗಿಸುತ್ತಿದ್ದರು ಎಂಬುದನ್ನು ಹೆನ್ರಿ ಕಸಿಸ್ಸ್ ವರ್ಣಿಸಿದ್ದಾನೆ೨. ಕೆಲವು ಜಲಾಶಯಗಳ ಅವಶೇಷಗಳು ಇನ್ನೂ ಇವೆ. ಆದರೆ ಅವುಗಳ ಸಂಪರ್ಕ ವ್ಯವಸ್ಥೆಗಳು ಪೂರಾ ಹಾಳಾಗಿವೆ. ಇಲ್ಲವೆ ದುರಸ್ತಿ ಕಾಣದಾಗಿವೆ. ಕೆಲವು ಕೊಳವೆಗಳೇನೊ ಇನ್ನೂ ಕೆಲಸಮಾಡುತ್ತಿವೆ. ಮಣ್ಣಿನ ಕೊಳಾಯಿಗಳನ್ನು ಜೋಡಿಸಿ ಜಲಾಶಯಗಳಿಂದ ನೀರನ್ನು ತರಲಾಗುತ್ತಿತ್ತು. ಅಂಥ ಜಲಾಶಯಗಳು ಪೈಕಿ ಬೇಗಂ ತಲಾಬ್ ಒಂದು ಮಹಾ ಸರೋವರ.

೧೭ – ೧೮ನೆಯ ಶತಮಾನದ ಚಿತ್ರದುರ್ಗದ ಪಾಳೆಯಗಾರರು ತಮ್ಮ ರಾಜಧಾನಿಗೆ ನೀರು ಪೂರೈಸಲು ಹಾಗೂ ಸುತ್ತಲ ಭೂಮಿಗೆ ನೀರಾವರಿ ಒದಗಿಸಲು ಒಂದು ಅದ್ಭುತವಾದ ವ್ಯವಸ್ಥೆಯನ್ನು ಮಾಡಿದ್ದರು. ಅದು ಹೀಗಿತ್ತು. ಜೋಗಿಮಟ್ಟಿ ಬೆಟ್ಟದ ಮೇಲೆ ಬಿದ್ದ ಮಳೆ ನೀರು ದೊಡ್ಡಣ್ಣನ ಕೆರೆ ಎಂಬ ಕೆರೆಯಲ್ಲಿ ಸಂಗ್ರಹವಾಗುತ್ತಿತ್ತು. ಅದು ತುಂಬಿದಾಗ ಅಲ್ಲಿಂದ ನೀರನ್ನು ತಿಮ್ಮಣ್ಣ ನಾಯಕನ ಕೆರೆ ಮತ್ತು ಸಣ್ಣ ಕೆರೆ ಎಂಬ ಕೆಳಗಿನ ಕೆರೆಗಳಿಗೆ ಬಿಡಲಾಗುತ್ತಿತ್ತು. ಅವು ತುಂಬಿದ ಮೇಲೆ ನೀರನ್ನು ಅದೇ ರೀತಿ ಡಬಡಬ ಹಾಗೂ ವಡ್ಡು ಎಂಬ ಇನ್ನೆರಡು ಜಲಾಶಯಗಳಿಗೆ ಬಿಡಲಾಗುತ್ತಿತ್ತು. ಈ ಎಲ್ಲ ಕೆರೆಗಳನ್ನು ತುಂಬಿಸಿದ ನಂತರ ನೀರು ಕೋಟೆಯ ಸುತ್ತಲು ಕಂದಕಕ್ಕೆ ಹೋಗುತ್ತಿತ್ತು.

ಇದೇ ರೀತಿ ಮೇಲುದುರ್ಗ ಅಥವಾ ಮೇಲುಭಾಗದ ಕೋಟೆಯಲ್ಲಿ ಬಿದ್ದ ಮಳೆನೀರು ಒಂದರ ಕೆಳಗೆ ಒಂದು ಇರುವ ಗೋಪಾಲಕೃಷ್ಣ ದೇವರ ಹೊಂಡ, ಅಕ್ಕ ತಂಗೇರ ಹೊಂಡ, ಸಿಹಿ ನೀರಿನ ಹೊಂಡ ಎಂಬ ಸಾಲು ಕೆರೆಗಳನ್ನು ತುಂಬಿ ಕೊನೆಗೆ ಭೂಮಿಯೊಳಗಿನ ಒಂದು ರಹಸ್ಯ ನಾಲೆಯ ಮೂಲಕ ಸಂತೆಹೊಂಡಕ್ಕೆ ಬರುತ್ತಿತ್ತು. ಈ ವಿಸ್ಮಯಕರ ವ್ಯವಸ್ಥೆಯಿಂದಾಗಿಯೇ ಕೋಟೆ ತನ್ನ ದೀರ್ಘ ಇತಿಹಾಸದಲ್ಲಿ ಎಂದೂ ನೀರಿನ ಅಭಾವಕ್ಕೆ ತುತ್ತಾಗಿಲ್ಲ೩.

ಆಧಾರಗಳು :

೧. ಹೈಡ್ರಾಲಿಕ್ ಫೀಚರ್ಸ್ ಆಫ್ ಬಿಜಾಪುರ – ಪಿ.ಎಸ್.ಶ್ರೀರಾಮನ್ ಮತ್ತು ಎಸ್.ಕೆ.ಸಾಮಕ್.ಎ.ಎಸ್.ಐ. ಬೆಂಗಳೂರು ವಲಯ ೯೮೮ ಫ್ರಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಆದಿಲ್ ಷಾಹಿಗಳ ಬಗೆಗಿನ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ.

೨. ಹೆಚ್.ಕಸಿನ್ಸ್ ಬಿಜಾಪುರ ಅಂಡ್ ಇಟ್ಸ್ ಆರ್ಕಿಟಿಕ್ಚರಲ್ ರಿಮೇನ್ಸ್(ಹೆಚ್.ಎಸ್.ಐ. ಇಂಪೀರಿಯಲ್ ಸೀರೀಸ್ ೩೭) ಬಾಂಬೆ ೧೯೧೬, ಪು ೧೨೦ – ೧೨೪.

೩. ರೈಸ್ ೧ ಸಂ ೨ ಪು.೩೯೩.

೯. ಮೆಕೆಂಜಿ ಅವರ ಮೈಸೂರು, ಭೂ ವೈಜ್ಞಾನಿಕ ಹಾಗೂ ಸಂಖ್ಯಾ ಪರಿಶೀಲನಾ ಸಮೀಕ್ಷೆಯ ವರದಿ (೧೭೯೯ – ೧೮೦೬)ಯಲ್ಲಿ ಕೊಟ್ಟಿರುವ ಕೆರೆಗಳ ವಿವರಗಳು.

  ಕೆರೆಗಳು ಕಟ್ಟೆಗಳು ಕುಂಟೆಗಳು ಅಣೆಕಟ್ಟುಗಳು
ದೊಡ್ಡವು ಚಿಕ್ಕವು ಚೆನ್ನಾಗಿರುವವು ಚೆನ್ನಾಗಿಲ್ಲದವು ಚೆನ್ನಾಗಿರುವವು ಚೆನ್ನಾಗಿಲ್ಲದವು ಚೆನ್ನಾಗಿರುವವು ಚೆನ್ನಾಗಿಲ್ಲದವು
೧. ಪಟ್ಟಣ್ಣ ಅಷ್ಟಗ್ರಾಮ ೩೪೭          
೨. ಮೈಸೂರು – ಅಷ್ಟಗ್ರಾಮ ೪೦   ೧೨೦      
೩. ಮೈಸೂರು – ತಲಕಾಡು ೩೨ ೫೬ ೨೯೮      
೪. ಹರದನಹಳ್ಳಿ ೨೮   ೧೫೯ ೧೬೩    
೫. ತೆರಕಣಾಂಬೆ ೩೧   ೩೯೧ ೨೦೪        
೬. ಹೆಗ್ಗಡದೇವನಕೋಟೆ ೪೨   ೨೭೧          
೭. ಪಿರಿಯಪಟ್ಟಣ ೫೦   ೬೮೮        
೮. ಬೆಟ್ಟದಪುರ ೮೪   ೧೬೪        
೯. ತಾಯೂರು ೨೭   ೫೦೯        
೧೦. ಸೋಸಲೆ ೪೧   ೩೭೬        
೧೧. ಎಳಂದೂರು ೨೭   ೨೦೮        
೧೨. ಮೇಲುಕೋಟೆ ೧೩೩       ೧,೧೮೧      
೧೩. ಕೃಷ್ಣರಾಜಪುರ ೩೮       ೨೨೨      
೧೪. ನರಸೀಪುರ ೧೦೬       ೯೩೧      
೧೫. ಯಡತೊರೆ ೧೭       ೨೭೯      
೧೬. ಮದ್ದೂರು ೨೫೨              
೧೭. ಚನ್ನಪಟ್ಟಣ ೨೦೯       ೬೭      
೧೮. ಹುಲಿಯೂರುದುರ್ಗ ೯೯       ೩೨೯      
೧೯. ರಾಮಗಿರಿ ೯೦       ೧೦೧      
೨೦. ಕಾನಕಾನಹಳ್ಳಿ ೧೩೨       ೨೩೮೫      
೨೧. ಮೂಡಿಗಿರಿ ೮೪       ೧೪೨      
೨೨. ಉತ್ತರದುರ್ಗ            
೨೩. ನಾಗಮಂಗಲ ೩೧ ೪೦ ೨೬೯ ೧೨೬        
೨೪. ಮಳವಳ್ಳಿ                
೨೫. ಅರಕಲಗೂಡು                
೨೬. ಮಹಾರಾಯನ ದುರ್ಗ                
೨೭. ನೆಲಮಂಗಲ ೮೦ ೨೫೨          
೨೮. ದೊಡ್ಡಬಳ್ಳ                
೨೯. ನಿಜಗಲ್ಲು ೨೭ ೧೫೨          
೩೦. ಮಂಚೀದುರ್ಗ ೩೩ ೩೬೦           ೧೪
೩೧. ಕೊರಟಗೆರೆ ೩೯ ೧೪೭          
೩೨. ಚಿನ್ನರಾಯದುರ್ಗ ೩೫ ೧೨೫          
೩೩. ದೇವರಾಯದುರ್ಗ ೩೨ ೩೨೦           ೨೦
೩೪. ತುಮಕೂರು ೨೫ ೧೧೬           ೨೦
೩೫. ಹಗಲವಾಡಿ ೩೧ ೧೨೩          
೩೬. ಕಡಬ ೩೦ ೧೩೯            
೩೭. ತುರುವೇಕೆರೆ ೨೫ ೪೮           ೧೨
೩೮. ಬೈರಾದುರ್ಗ ೧೬ ೧೨೦          
೩೯. ಹೆಬ್ಬೂರು ೧೨ ೧೧೦          
೪೦. ಕುಣಿಗಲ್ ೪೨೪           ೧೨
೪೧. ಚಿಕ್ಕನಾಯಕನಹಳ್ಳಿ ೧೬ ೪೨          
೪೨. ನುಗ್ಗೇಹಳ್ಳಿ ೧೭ ೬೮          
೪೩. ಕುಂಡೀಕೆರೆ ೧೯ ೩೪          
೪೪. ಬಾಣಾವಾರ ೧೮ ೯೧          
೪೫. ಹೊನ್ನಾಳ್ಳಿ ೩೩ ೪೩೨          
೪೬. ಹಾರನಹಳ್ಳಿ ೨೮ ೪೩          
೪೭. ಗ್ರಾಮ ೨೧ ೨೦೬          
೪೮. ಹಾಸನ ೪೯ ೬೪೫           ೧೫
೪೯. ಚೆನ್ನರಾಯಪಟ್ಟಣ ೨೪ ೩೩೫           ೧೯
೫೦. ಕಿಕ್ಕೇರಿ ೨೧ ೧೯೫          
೫೧. ಕಡೂರು ೩೯ ೫೯           ೧೬
೫೨. ಬೂದಿಹಾಳ ೨೩ ೩೦          
೫೩. ಗರುಡನಗೆರೆ ೩೧ ೧೫೫          
೫೪. ಅಜ್ಜಂಪುರ ೨೪ ೨೪೧            
೫೫. ಸಕ್ರೆಪಟ್ಟಣ ೫೮           ೧೬
೫೬. ತರೀಕೆರೆ ೩೨ ೨೭೫           ೩೮
೫೭. ಚಿಕ್ಕಮಗಳೂರು ೭೨ ೨೯೫           ೧೨
೫೮. ಬೆಳ್ಳೂರು ೨೧೯ ೧೧೧೧           ೪೫
೫೯. ಬೆಂಗಳೂರು ೨೭೫     ೫೨೪ ೪೨೪     ೯೪
೬೦. ಮಾಗಡಿ ೬೨ ೨೪೯           ೩೪
೬೧. ಕೋಲಾರ ೨೬೧೧.೫     ೫೯೦     ೯೪  
೬೨. ಹೊಸಕೋಟೆ ೭೨೮.೨೫   ೬೭೫.೫   ೧೯೬   ೫೭.೫  
೬೩. ಜಂಗಮಕೋಟೆ ೫೦ ೩೩೨     ೧೬೪     ೧೬
೬೪. ಸಿರಾ ೩೬   ೧೭೨          
೬೫. ಮಧುಗಿರಿ ೬೭   ೧೦೭          
೬೬. ಪಾವಗಡ ೩೨   ೩೫   ೩೭      
೬೭. ಮುಳುಬಾಗಿಲು ೩೩       ೩೨      
೬೮. ಹಾನೇಕಲ್ಲು ೩೪             ೮೮
೬೯. ದೇವನಹಳ್ಳಿ ೬೮       ೪೮    
೭೦. ಪೆದ್ದಬಳ್ಳಾಪುರ                
೭೧. ಚಿನ್ನಬಳ್ಳಾಪುರ ೨೪೩       ೫೨೮     ೨೪
೭೨. ಗೋಮಿಗಪಾಳ್ಯಂ ೭೮       ೧೫೩    
೭೩. ಚಿತ್ರದುರ್ಗ ೨೭       ೪೦೭      
೭೪. ಮಾಯಕೊಂಡ       ೭೦      
೭೫. ಹೊಳಲಕೆರೆ ೩೩       ೪೩      
೭೬. ಹೊಸದುರ್ಗ ೬೩       ೧೯೨      
೭೭. ಹಿರಿಯೂರು ೬೯         ೨೬೩    
೭೮. ಅಣುಜಿ ೪೫              
೭೯. ಕನಕೊಪ್ಪ ೩೦       ೧೭೮      
೮೦. ಮೊಳಕಾಲ್ಮೂರು            
೮೧. ಗುಡಿಕೋಟೆ            
೮೨. ತಳುಕು ೧೫         ೧೩    
೮೩. ದೊಡ್ಡೇರಿ ೧೯       ೯೬      
ಒಟ್ಟು ೧೪,೮೦೩.೭೫     ,೧೭೨.೫ ೮೫೬೨     ೭೪೭.೫

ಮಳವಳ್ಳಿ ಅರಕಲಗೂಡು ಮತ್ತು ಮಹಾರಾಯನದುರ್ಗದ ಬಗ್ಗೆ ನೀರಾವರಿ ಕಾಮಗಾರಿಗಳ ಸಂಖ್ಯೆ ವರದಿಯಲ್ಲಿ ಇಲ್ಲ. ಆದರೂ ಮಳವಳ್ಳಿಯಲ್ಲಿ ಪಶ್ಚಿಮಭಾಗದಲ್ಲಿ ಹಾಗೂ ಕಸಬಾ ಸುತ್ತಮುತ್ತ ಹಲವಾರು ವಿಶಾಲವಾದ ಕೆರೆಗಳಿದ್ದವು, ಅವು ಭತ್ತ ಮಾತ್ರ ವಲ್ಲದೆ ವೀಳ್ಯೆದೆಲೆ, ಅಡಕೆ, ತೆಂಗು, ಬಾಳೆಯ ತೋಟಗಳನ್ನು ಪೋಷಿಸುತ್ತಿದ್ದವು ಎಂದು ವರ್ಣಿಸಲಾಗಿದೆ. ಕಸಬಾದಿಂದ ದಕ್ಷಿಣಕ್ಕೆ ೧೭೯೯ರ ಯುದ್ಧರಂಗದ ಬಳಿ ಕಾವೇರಿ ನದಿಯಿಂದ ಕೆರೆಯ ವರೆಗೂ ಇದ್ದ ಒಂದು ಪುರಾತನ ಅಣೆಕಟ್ಟೆನ ಗುರುತುಗಳೂ ಇದ್ದವು, ಎಂದು ಹೇಳುತ್ತದೆ ವರದಿ.

ಅರಕಲಗೂಡಿನಲ್ಲೂ ಅನೇಕ ಕೆರೆಗಳು ಇದ್ದವು. ಕಸಬಾ ಹಾಗೂ ಕೊಣನೂರಿನ ಕೆರೆಗಳು ಭಾರಿ ವಿಶಾಲವಾಗಿದ್ದವು ಎಂದು ಹೇಳಲಾಗಿದೆ. ಹೆಚ್ಚು ಕಡಿಮೆ ಪ್ರತಿಹಳ್ಳಿಗೂ ಒಂದು ಕರೆ ಇತ್ತು. ಕೆಲವು ಕಡೆ ಎರಡು ಅಥವಾ ಮೂರು ಸಣ್ಣವಾದರೂ ಕೆರೆ ಇದ್ದವು. ಒಟ್ಟಾರೆ ಜಿಲ್ಲೆಯಲ್ಲಿ ಒಳ್ಳ ನೀರು ಒದಗಿತ್ತು.

ಮಹಾರಾಯನದುರ್ಗ ವಿಷಯವಾಗಿ ಗೊರೂರು ಹೋಬಳಿಯಲ್ಲಿ ಕಾಲಕಾಲಕ್ಕೆ ಬೀಳುತ್ತಿದ್ದ ಮಳೆಗಳಿಂದ ಅಸಂಖ್ಯಾತ ಸಣ್ಣ ಸಣ್ಣ ಕೊಳ್ಳಗಳಿಂದ ಭತ್ತ ಸಮೃದ್ಧಿಯಾಗಿ ಬೆಳೆಯುತ್ತಿದ್ದರೂ ಕೆರೆಗಳು ಇದ್ದುದು ಅತ್ಯಲ್ಪ ಎನ್ನಲಾಗಿದೆ.

***

೧೦. ಮೈಸೂರಿನ ನಾನಾ ಜಿಲ್ಲೆಗಳಲ್ಲಿ ಇದ್ದ ಕೆರೆಗಳ ಸಂಖ್ಯೆ (೧೮೭೧ ರಲ್ಲಿ ನಂತೆ)

  ಒಟ್ಟು ಸಂಖ್ಯೆ ಕಂದಾಯ ಹುಟ್ಟದ ಕೆರೆಗಳು ೫೦ರೂಗೆ ಕಡಿಮೆ ಕಂದಾಯ ನೀಡುವ ಕೆರೆಗಳು ೫೦ರಿಂದ ೧೦೦ ರೂ ೧೦೦ ರಿಂದ ೫೦೦ ರೂ ೫೦೦ರಿಂದ ೧೦೦೦ರೂ ೧೦೦೦ ರಿಂದ ೨೦೦೦ರೂ ೨೦೦೦ ರಿಂದ ೩೦೦೦ ರೂ ೩೦೦೦ ರಿಂದ ೪೦೦೦ ರೂ ೪೦೦೦ ರಿಂದ ೫೦೦೦ ರೂ ೫೦೦ ಗಿಂತ ಹೆಚ್ಚು
ನಂದಿದುರ್ಗ ವಿಭಾಗ                      
೧. ಬೆಂಗಳೂರು ಜಿಲ್ಲೆ ೨,೨೨೭ ೨೫೪ ೮೬೨ ೪೦೭ ೬೩೦ ೮೪ ೩೧
೨. ಕೋಲಾರ ಜಿಲ್ಲೆ ೫೨೮೨ ೧೪೨೭ ೨೦೨೮ ೭೮೩ ೮೮೬ ೧೦೮ ೩೩
೩. ತುಮಕೂರು ಜಿಲ್ಲೆ ೨೦೮೧ ೧೦೯೬ ೨೮೫ ೧೭೫ ೩೫೯ ೯೪ ೩೯ ೨೦
ಅಷ್ಟಗ್ರಾಮ ವಿಭಾಗ                      
೧. ಮೈಸೂರು ಜಿಲ್ಲೆ ೧೪೭೪ ೩೬ ೮೭೪ ೨೧೯ ೨೮೦ ೪೫ ೧೪
೨. ಹಾಸನ ಜಿಲ್ಲೆ ೬೩೨೪ ೫೬೬ ೩೯೦೩ ೯೧೦ ೫೪೭ ೬೮ ೨೧  –  –
ನಗರ ವಿಭಾಗ                      
೧. ಶಿವಮೊಗ್ಗ ಜಿಲ್ಲೆ ೮೩೦೪ ೯೩೧ ೩೮೭೧ ೧೪೧೮ ೧೮೫೫ ೧೭೫ ೪೯  –
೨. ಕಡೂರು ಜಿಲ್ಲೆ ೮೩೭೮ ೪೪೫೨ ೨೯೧೦ ೬೪೦ ೬೩೫ ೫೫ ೩೪  –
೩. ಚಿತ್ರದುರ್ಗ ಜಿಲ್ಲೆ ೧೭೮೫ ೧೧೦೩ ೨೬೮ ೯೩ ೨೨೬ ೫೩ ೨೯  –
  ೩೬,೨೬೫ ,೮೬೫ ೧೫,೦೦೧ ,೬೪೫ ,೭೧೮ ೬೮೨ ೨೫೦ ೫೭ ೨೨ ೧೭