೧೧.೧೯೦೨ರಲ್ಲಿ ಮೈಸೂರು ಸಂಸ್ಥಾನದಲ್ಲಿ ಇದ್ದ ಕೆರೆಗಳ ಸಂಖ್ಯೆಸರ್.ವಿ.ವಿ. ಮಾಧವರಾವ್ ವರದಿಯಲ್ಲಿನಂತೆ

ಕರ್ನಾಟಕದಲ್ಲಿ ಕೆರೆ ನೀರಾವರಿಕರ್ನಾಟಕದಲ್ಲಿ ಕೆರೆ ನೀರಾವರಿ   ಪೂರ್ವವಿಭಾಗ ಪಶ್ಚಿಮವಿಭಾಗ
  ಸಂಖ್ಯೆ ವಿಸ್ತಾರ ಎಕರೆಗಳು ಕಂದಾಯ ನಿಗದಿ ರೂ. ಸಂಖ್ಯೆ ವಿಸ್ತಾರ ಎಕರೆಗಳು ಕಂದಾಯ ನಿಗದಿ ರೂ.
೧. ೫೦೦೦ ರೂಗೆ ಹೆಚ್ಚಿನ ಅಚ್ಚುಕಟ್ಟು ಉಳ್ಳ ೧ನೇ ವರ್ಗದ ಕೆರೆಗಳು ೨೩ ೩೧,೮೭೧ ೧೭೬,೪೦೬ ೭೪೪೪ ೩೬,೦೬೨
೨. ೧೦೦೦ ದಿಂದ ೫೦೦೦ ರೂ ವರೆಗೆ ಅಚ್ಚುಕಟ್ಟು ಉಳ್ಳ೨ನೇ ವರ್ಗದ ಕೆರೆಗಳು ೩೮೮ ೧೨೩,೪೬೪ ೬೫೫,೪೫೫ ೯೫ ೩೧,೮೯೪ ೧೫೩,೧೫೮
೩. ೫೦೦ ರಿಂದ ೧೦೦೦ ರೂ ವರೆಗೆ ಅಚ್ಚುಕಟ್ಟು ಉಳ್ಳ ೩ನೇ ವರ್ಗದ ಕೆರೆಗಳು ೫೧೨ ೭೨,೭೧೩ ೩೪೪,೪೨೦ ೨೯೮ ೪೯,೨೧೭ ೨೦೨,೪೧೩
೪. ೩೦೦ ರಿಂದ ೫೦೦ ರೂ ವರೆಗೆ ಅಚ್ಚುಕಟ್ಟು ಉಳ್ಳ ೫ನೇ ವರ್ಗದ ಕೆರೆಗಳು ೬೪೪ ೫೪,೦೦೩ ೨೪೮,೯೩೬ ೪೮೩ ೪೩,೪೭೫ ೧೮೨,೯೯೭
೫. ೧೦೦ ರಿಂದ ೩೦೦ ರೂ ವರೆಗೆ ಅಚ್ಚುಕಟ್ಟು ಉಳ್ಳ ೫ನೇ ವರ್ಗದ ಕೆರೆಗಳು ೨೨೨೧ ೯೨,೫೪೫ ೩೯೭,೪೮೩ ೨೪೫೦ ೧೧೨,೩೪೭ ೪೩೦,೪೧೯
೬. ೧೦೦ರೂ ಗಿಂತ ಕಡಿಮೆ ಅಚ್ಚುಕಟ್ಟು ಉಳ್ಳ ೬ನೇ ವರ್ಗದ ಕೆರೆಗಳು ೪೪೭೮ ೫೫,೭೩೬ ೧೯೯,೦೬೯ ೧೦೪೩೭ ೧೩೦,೭೩೯ ೪೫೩,೯೮೭
  ೮೨೬೬ ೪೩೦,೩೩೨ ೨೦೨೧,೭೬೯ ೧೩;೭೬೬ ೩೭೫,೧೧೬ ೧೪೫೬,೦೩೬

ಟಿಪ್ಪಣಿ: ಬೆಂಗಳೂರು ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳು ಸೇರಿ ಪೂರ್ವ ವಿಭಾಗ. ಮೈಸೂರು, ಹಾಸನ, ಶಿವಮೊಗ್ಗ, ಕಡೂರು ಜಿಲ್ಲೆಗಳು ಸೇರಿ ಪಶ್ಚಿಮವಿಭಾಗ

ಕೆರೆಗಳ ಸ್ಥಿತಿ

ವರ್ಗ ಒಡೆದಿರುವುದು ಸ್ಥಿತಿ ಚೆನ್ನಾಗಿರುವುದು ವಿಸ್ತಾರ ಎಕೆರೆಗಳು ಕಂದಾಯ ನಿಗದಿ ರೂ.
ಸರ್ಕಾರಿ ಕೆರೆಗಳು ೬೫೦೭ ೨೦೦,೧೭ ೭೫೨,೯೧೬ ೩೨೪೪,೩೫೬
ಕೊಡಿಗಿ ಕೆರೆಗಳು ೯೨ ೧೦೧೪ ೨೭,೪೫೭ ೧೩೭,೧೯೫
ಇನಾಮತಿ ಕೆರೆಗಳು ೩೩೬ ೧೦೪೯ ೨೪,೯೭೬ ೯೯,೨೫೭
  ,೯೩೫ ೨೨,೦೮೦ ೮೦೫,೩೪೯ ೩೪೮೦,೮೦೮

೧೨. ೧೮೮೦ – ೮೧ ರಿಂದ ೧೯೫೦ – ೫೧ರ ವರೆಗೆ ಮೈಸೂರು ರಾಜ್ಯದಲ್ಲಿದ್ದ ಕಾಲುವೆ ಹಾಗೂ ಕೆರೆಗಳಿಂದ ನೀರಾವರಿ ಆಗುತ್ತಿದ್ದ ಪ್ರದೇಶದ ಸಾಲಿಯಾನ ವಿವರ.

(ಎಕರೆಗಳಲ್ಲಿ)

  ನೀರಾವರಿ ಪ್ರದೇಶ
ವರ್ಷ ಕಾಲುವೆ ಕೆರೆಗಳು
೧೮೮೦ – ೮೧ ೫೯,೭೮೪ ೨೩೩,೨೦೧
೮೧ – ೮೨ ೫೯೩೪೩ ೨೪೯೭೪೭
೮೨ – ೮೪ ೬೧,೨೫೯ ೨೮೬,೭೯೮
೮೪ – ೮೫ ೬೪,೯೨೫ ೨೮೭,೨೨೦
೮೫ – ೮೬ ೬೬,೬೯೫ ೨೯೨,೧೨೩
೮೬ – ೮೭ ೭೨,೪೨೨ ೩೦೪,೭೫೬
೮೭ – ೮೮ ೭೩,೫೮೬ ೩೧೭,೦೪೮
೮೮ – ೮೯ ೭೩,೮೪೨ ೩೨೦,೭೯೦
೮೯ – ೯೦ ೭೭,೭೨೬ ೩೩೦,೮೮೧
೯೦ – ೯೧ ೭೮,೬೯೮ ೩೫೪,೨೮೨
೯೧ – ೯೨ ೯೧,೮೦೫ ೪೨೮,೮೭೭
೯೨ – ೯೩ ೮೯,೮೦೩ ೪೭೪,೫೨೫
೯೩ – ೯೪ ೯೪,೮೨೧ ೫೧೪,೭೬೬
೯೪ – ೯೫ ೯೯,೧೭೭ ೪೯೦,೯೫೦
೯೫ – ೯೬ ನಿಂದ ೧೮೯೮ – ೯೦೦ ಅಲಭ್ಯ ಅಲಭ್ಯ
೧೯೦೦ – ೦೧ ೧೦೬,೦೪೫ ೪೯೯,೮೧೫
೦೧ – ೦೨ ನಿಂದ ೦೪ – ೦೫ ಅಲಭ್ಯ ಅಲಭ್ಯ
೦೫ – ೦೬ ೧೦೬,೩೧೬ ೫೦೬,೮೬೦
೦೬ – ೦೭ ೧೧೦,೪೭೬ ೫೩೭,೬೧೦
೦೭ – ೦೮ ೧೧೨,೦೫೩ ೫೨೨,೮೪೮
೦೮ – ೦೯ ೧೧೩,೨೬೯ ೪೮೪,೯೪೦
೦೯ – ೧೦ ೧೧೭,೦೯೩ ೫೨೧,೨೪೨
೧೦ – ೧೧ ಅಲಭ್ಯ ಅಲಭ್ಯ
೧೧ – ೧೨ ೧೧೮,೩೨೪ ೫೫೦,೩೨೦
೧೨ – ೧೩ ೧೧೯,೯೪೭ ೫೬೫,೩೧೮
೧೩ – ೧೪ ಅಲಭ್ಯ ಅಲಭ್ಯ
೧೪ – ೧೫ ಅಲಭ್ಯ ಅಲಭ್ಯ
೧೫ – ೧೬ ೧೧೫,೮೩೫ ೫೪೬,೮೪೫
೧೬ – ೧೭ ೧೧೮,೪೧೫ ೫೭೭,೯೯೧
೧೭ – ೧೮ ೧೨೬,೬೦೦ ೫೭೭,೨೭೭
೧೮ – ೧೯ ೧೦೯,೦೧೩ ೪೯೩,೮೯೫
೧೯ – ೨೦ ೧೧೬,೬೨೨ ೫೪೦,೬೪೪
೨೦ – ೨೧ ೧೧೬,೨೨೪ ೫೧೩,೮೩೨
೨೧ – ೨೨ ೧೧೯,೦೩೨ ೫೨೨,೦೧೪
೨೨ – ೨೩ ೧೨೬,೭೮೫ ೫೨೩,೫೫೮
೨೩ – ೨೪ ೧೩೬,೫೨೯ ೪೬೫,೫೪೪
೨೪ – ೨೫ ೧೪೦,೮೦೯ ೪೭೯,೬೭೫
೨೫ – ೨೬ ೧೩೬,೧೯೭ ೫೧೭,೩೦೦
೨೬ – ೨೭ ೧೩೬,೯೨೨ ೫೩೦,೪೪೬
೨೭ – ೨೮ ೧೩೭,೬೫೧ ೫೩೮,೮೮೬
೨೮ – ೨೯ ೧೪೨,೩೨೬ ೫೫೪,೨೧೬
೨೯ – ೩೦ ೧೪೬,೬೫೮ ೫೭೨,೩೩೧
೩೧ – ೩೧ ೧೬೫,೩೦೭ ೫೭೭,೩೬೪
೩೧ – ೩೨ ೧೪೯,೩೫೮ ೫೬೧,೯೧೭
೩೨ – ೩೩ ೧೫೦,೬೦೧ ೬೦೨,೧೫೮
೩೩ – ೩೪ ೧೬೨,೨೩೦ ೬೦೪,೨೧೯
೩೪ – ೩೫ ೧೬೪,೦೫೪ ೫೨೯.೧೨೭
೩೫ – ೩೬ ೧೮೨,೦೬೨ ೫೮೧,೩೮೪
೩೬ – ೩೭ ೧೯೩,೦೦೨ ೫೭೫,೨೦೫
೩೭ – ೩೮ ಅಲಭ್ಯ ಅಲಭ್ಯ
೩೮ – ೩೯ ೧೯೯,೬೪೯ ೫೭೦,೦೭೭
೩೯ – ೪೦ ೨೫೩,೪೪೧ ೫೫೭,೬೦೩
೪೦ – ೪೧ ೨೧೬,೫೯೪ ೫೯೯,೪೧೪
೪೧ – ೪೨ ೨೧೯,೩೯೨ ೫೮೨,೪೪೧
೪೨ – ೪೩ ೨೩೨,೨೭೦ ೫೮೪,೨೫೪
೪೩ – ೪೪ ೨೪೦,೩೦೪ ೬೨೦,೪೫೯
೪೪ – ೪೫ ೨೪೫,೯೬೫ ೬೧೧,೬೬೦
೪೫ – ೪೬ ೨೬೨,೫೮೭ ೫೬೮,೦೬೫
೪೬ – ೪೭ ೨೬೭,೫೪೦ ೬೧೯,೪೯೧
೪೭ – ೪೮ ೨೭೫,೩೩೦ ೬೧೦,೬೭೮
೪೮ – ೪೯ ೨೬೯,೯೧೮ ೫೮೨,೨೦೬
೪೯ – ೫೦ ೨೭೮,೧೮೩ ೫೪೭,೭೯೯
೫೦ – ೫೧ ೨೭೬,೩೭೭ ೫೩೮,೫೪೬

 

ಜಲನಿರ್ವಹಣೆಯ ಪದ್ಧತಿಗಳು

೧೩. ಮಹಾರಾಷ್ಟ್ರದಲ್ಲಿನ ಜಲವಿತರಣೆ ಹಾಗೂ ನೀರಾವರಿ ವ್ಯವಸ್ಥೆಯ ಸಂರಕ್ಷಣೆಯ ‘ಫಡ್’ ಪದ್ಧತಿ :

ಪೀಠಿಕೆ : ‘ಫಡ್’ ಎನ್ನುವುದು ನೀರಾವರಿ ಮೂಲಕ ಒಂದೇ ಬೆಳೆಯನ್ನು ಬೆಳೆಯುವ, ಪಕ್ಕ ಪಕ್ಕವಾಗಿರುವ ಕೃಷಿಕ್ಷೇತ್ರಗಳ ಒಂದು ಗುಂಪು. ‘ಫಡ್’ ಪದ್ಧತಿ ಎಂದರೆ ಫಲಾನುಭವಿಗಳ ತಂಡವೊಂದು ನೀರಾವರಿಯನ್ನು ನಿರ್ವಹಿಸುವುದು. ಮಹಾರಾಷ್ಟ್ರದ ವಾಯುವ್ಯಭಾಗದಲ್ಲಿ ಇನ್ನೂರು ವರ್ಷಗಳಿಗೂ ಹಿಂದಿನಿಂದ ಸಣ್ಣ ನೀರಾವರಿ ಕಾಮಗಾರಿಗಳಲ್ಲಿ ಈ ನೀರಾವರಿ ನಿರ್ವಹಣೆಯ ಪದ್ಧತಿ ಆಚರಣೆಯಲ್ಲಿದೆ. ಕೃಷಿಕ್ಷೇತ್ರಗಳು ಸಣ್ಣವು. ಭೂಮಿಮಟ್ಟ ಸಮವಾಗಿಲ್ಲ – ಆದರೂ ಸಹ ಜಲಪ್ರಮಾಣ ನಿಗದಿ, ನ್ಯಾಯಯುತವಾದ ಜಲ ವಿತರಣೆ, ಬೆಳೆಗಳ ಸರದಿ ಹಾಗೂ ನೀರಾವರಿ ವ್ಯವಸ್ಥೆಯ ಸಂರಕ್ಷಣೆಗಳನ್ನು ರೈತರು ಸಾಮೂದಾಯಿಕ ಪ್ರಯತ್ನದ ಮೂಲಕ ನಿರ್ವಹಿಸುತ್ತಿದ್ದಾರೆ.

ಜಲ ನಿರ್ವಹಣೆಯ ಈ ಪದ್ಧತಿಯನ್ನು ಮಹಾರಾಷ್ಟ್ರದ ವಾಯುವ್ಯಭಾಗದ ತಾಪಿ ನದಿಯ ಜಲಾನಯನ ಪ್ರದೇಶದ ಪಂಜರಾ, ಮೋಸಮ್ ಹಾಗೂ ಆರಾಂ ನದಿಗಳಲ್ಲಿ ಆಚರಿಸಿಕೊಂಡು ಬರಲಾಗಿದೆ. ಈ ನದಿಗಳ ಮೇಲೆ ಬಂಧಾರಾ ಅಥವಾ ಒಡ್ಡುಗಳ ಸಾಲುಗಳಿವೆ. ಇವುಗಳಿಗೆ ಮಳೆಗಾಲದಲ್ಲಿ ಹರಿದು ಬರುವ ನೀರು ಬರುತ್ತದೆ. ಜೊತೆಗೆ ಮಳೆಗಾಲ ಮುಗಿದ ಮೇಲೆಯೂ ಗಮನಾರ್ಹ ಪ್ರಮಾಣದಲ್ಲಿ ನೆರೆ ಬಂದು ಚಳಿಗಾಲ ಹಾಗೂ ಬೇಸಿಗೆ ಕಾಲಗಳಲ್ಲೂ ಸಾಕಷ್ಟು ಪ್ರಮಾಣದ ನೀರಾವರಿಗೆ ಆಧಾರವಾಗಿದೆ. ಈ ವ್ಯವಸ್ಥೆಗಳನ್ನೆಲ್ಲ ಫಲಾನುಭವಿಗಳೇ ‘ಫಡ್’ ಪದ್ಧತಿ ದ್ವಾರಾ ನಿರ್ವಹಿಸುತ್ತಾರೆ, ನಡೆಸುತ್ತಾರೆ. ಹಾಗೂ ಸಂರಕ್ಷಿಸುತ್ತಾರೆ. ಪ್ರತಿಯೊಂದು ವ್ಯವಸ್ಥೆಯಲ್ಲೂ ನದಿಗೆ ಅಡ್ಡಲಾಗಿ ನೀರನ್ನು ತಿರುಗಿಸಲು ಒಂದು ತಗ್ಗು ಒಡ್ಡು, ದಡದ ಮೇಲೆ ಒಂದು ಕಾಲುವೆ ಹಾಗೂ ನೀರಾವರಿಗಾಗಿ ಹಂಚಿಕೆ ಏರ್ಪಾಡು ಇರುತ್ತದೆ. ಪ್ರತಿಯೊಂದು ಒಡ್ಡಿನ ಕೆಳಗಿನ ನೀರಾವರಿ ಪ್ರದೇಶ ೪ ರಿಂದ ೧೯೨ ಹೆಕ್ಟೇರ್‌ಗಳ ವರೆಗೆ ಇರುತ್ತದೆ. ಫಲಾನುಭವಿಗಳು ಈ ಉದ್ದೇಶಕ್ಕಾಗಿ ದೇಣಿಗೆ ನೀಡುತ್ತಾರೆ. ಹಾಗೂ ಹಳ್ಳಿಯಿಂದ ಸಾಮುದಾಯಿಕ ಶ್ರಮಿಕರನ್ನು ಒಟ್ಟುಗೂಡಿಸುತ್ತಾರೆ. ಇದರಿಂದ ವ್ಯವಸ್ಥೆ ರಕ್ಷಿತವಾಗುತ್ತದೆ. ಸಂರಕ್ಷಣಾ ನಿಧಿಯ ನಿರ್ವಹಣೆಯೂ ಫಲಾನುಭವಿಗಳದೇ. ಈ ಪದ್ಧತಿಯನ್ನು ಫಲಾನುಭವಿಗಳು ಹೇಗೆ ಜಾರಿಗೆ ತರಬೇಕು? ಲೆಕ್ಕಗಳನ್ನು ಹೇಗೆ ಇಡಬೇಕು? ಎಂಬ ಬಗ್ಗೆ ಸರ್ಕಾರ ಮಾರ್ಗದರ್ಶಕ ಸೂಚನೆಗಳನ್ನು ಮಾತ್ರ ರೂಪಿಸಿತು ? ಎಚಿದು ದಾಖಲೆಗಳ ತೋರಿಸುತ್ತವೆ.

ಜಲನಿರ್ವಹಣಾಶ ಸಮಿತಿ :

ಪ್ರತಿಯೊಂದು ಕಟ್ಟೆಯ ಅಚ್ಚುಕಟ್ಟಿನಲ್ಲಿ ನೀರಾವರಿಯ ನಿರ್ವಹಣೆಗಾಗಿ ಪಂಚರ ಸಮಿತಿ ಇರುತ್ತದೆ. ನೀರಾವರಿ ರೈತರೆಲ್ಲ ಚುನಾಯಿಸುವ ಸಮಿತಿ ಅದು. ಸಮಿತಿಯ ಸದಸ್ಯರು ಅಂದರೆ ಪಂಚರು ಫಡ್‌ನಲ್ಲಿ ನೀರಾವರಿ ರೈತರಾಗಿರಬೇಕು. ಸಮಿತಿ ವರ್ಷ ವರ್ಷಕ್ಕೂ ನೀರಾವರಿ ಸಿಬ್ಬಂದಿಯನ್ನು ನೇಮಿಸುತ್ತದೆ. ರೈತರ ಹಾಗೂ ನೀರಾವರಿ ಸಿಬ್ಬಂದಿಯ ದೂರುಗಳನ್ನು ಗಮನಿಸುತ್ತದೆ, ಹಾಗೂ ನೀರನ್ನು ನಿಗದಿ ಮಾಡುವುದರ ಬಗ್ಗೆ ಮತ್ತು ವ್ಯವಸ್ಥೆಯ ಸಂರಕ್ಷಣೆಯ ಬಗ್ಗೆ ಕಾರ್ಯನೀತಿಯನ್ನು ನಿರ್ಧರಿಸುತ್ತದೆ.

ಜಲ ನಿರ್ವಹಣೆ :

ಇಡೀ ಅಚ್ಚುಕಟ್ಟು ಪ್ರದೇಶವು “ಫಡ್” ಗಳಾಗಿ ವಿಭಜಿಸಲಾಗಿದೆ. ಫಡ್‌ಗಳ ವಿಸ್ತಾರ ಭೂಮೇಲ್ಮೈ ಲಕ್ಷಣಕ್ಕೆ ಅನುಸಾರವಾಗಿ ಕೆಲವೇ ಹೆಕ್ಟೇರುಗಳಿಂದ ಹಿಡಿದು ೫೦ ಹೆಕ್ಟೇರುಗಳ ವರೆಗೆ ಇರುತ್ತದೆ. ಒಂದು ಫಡ್‌ನಲ್ಲಿ ಒಂದೇ ಬಗೆಯ ಬೆಳೆ ಇಡಲಾಗುವುದು. ನಾನಾ ಫಡ್‌ಗಳಲ್ಲಿ ಯಾವ ಯಾವ ಬೆಳೆ ಇಡಬೇಕು ಎನ್ನುವುದನ್ನು ಮಳೆಗಾಲಕ್ಕೆ ಬಹಳ ಮುಂಚೆಯೇ ರೈತರ ಸಭೆ ತೀರ್ಮಾನಿಸುತ್ತದೆ. ನೀರಾವರಿ ಆಗುವ ಕ್ರಮ ತಲೆಭಾಗದಿಂದ ತುದಿಯ ವರೆಗೆ. ಮೇಲಿನ ಅಂಚಿನಲ್ಲಿರುವ ಫಡ್‌ಗೆ ನೀರಾವರಿ ಮಾಡಲಾಗುವುದು. ಕಾಲುವೆಯ ಎಲ್ಲ ನೀರನ್ನೂ ಅದೇ ಫಡ್‌ಗೆ ಬಿಡಲಾಗುವುದು. ಫಡ್ ತಲೆಭಾಗದ ಕ್ಷೇತ್ರಗಳಿಗೆ ಮೊದಲು ನೀರಾವರಿ. ಅನಂತರ ಪಕ್ಕದ ಕ್ಷೇತ್ರಕ್ಕೆ. ಹೀಗೆಯ ತುದಿಯ ವರೆಗೂ ನೀರಾವರಿ ಆಗುತ್ತದೆ. ಮಳೆಗಾಲ ಮುಗಿದ ಮೇಲೆ ರೈತರ ಇನ್ನೊಂದು ಸಭೆ ಸೇರುತ್ತದೆ. ನದಿಯಲ್ಲಿ, ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಆಧರಿಸಿ ನೀರನ್ನು ಹೇಗೆ ಹಂಚಬೇಕು ಎಂಬ ಬಗ್ಗೆ ಸ್ಥೂಲವಾದ ಮಾರ್ಗದರ್ಶನ ಸೂಚನೆಗಳನ್ನು ರೂಪಿಸಲಾಗುತ್ತದೆ. ನೀರಿನ ಹಂಚಿಕೆ ನಡೆಯುವುದು ಫಡ್ ನೀರಾವರಿ ಸಿಬ್ಬಂದಿಯಿಂದ. ಬೆಳೆ ಸರದಿಯ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ನಿಯಮಗಳನ್ನು ಮೀರಿದವರಿಗೆ ಸಮಿತಿ ಜುಲ್ಮಾನೆ ಹಾಕುತ್ತದೆ. ಕ್ಷೇತ್ರಗಳಲ್ಲಿ ನೀರು ಪ್ರತ್ಯಕ್ಷವಾಗಿ ಹೇಗೆ ಬಳಕೆಯಾಗುವುದೊ ಅದನ್ನು ನೀರಾವರಿ ಸಿಬ್ಬಂದಿ ನೋಡಿಕೊಳ್ಳುತ್ತೆ. ಭೂಮಾಲೀಕನಿಗಾಗಲಿ ಅಥವಾ ಆತನ ಕುಟುಂಬ ದವರಿಗಾಗಲಿ ತಮ್ಮ ಕ್ಷೇತ್ರಗಳಲ್ಲಿ ನೀರನ್ನು ಹಾಯಿಸುವ ಅಧಿಕಾರ ಇಲ್ಲ.

ಸಂರಕ್ಷಣೆ :

ಒಡ್ಡಿನ ಕಟ್ಟಡದ ಸಂರಕ್ಷಣೆ ಹಾಗೂ ದುರಸ್ತಿಯ ಹೊಣೆ ಸರ್ಕಾರದ್ದು. ಕಾಲುವೆ ವ್ಯವಸ್ಥೆಯ ರಕ್ಷಣೆಯಾದರೂ ನೀರಾವರಿ ರೈತರಿಗೆ ಸೇರಿದ್ದು. ಕಾಲುವೆ ಜಾಲವನ್ನು ವರ್ಷಕ್ಕೆ ಎರಡು ಸಲ ಮೇ ಹಾಗೂ ಅಕ್ಟೋಬರ್‌ನಲ್ಲಿ ಚೊಕ್ಕಟ ಮಾಡಲಾಗುವುದು. ಏಪ್ರಿಲ್ ಮೇ ನಲ್ಲಿ ಸಭೆ ಆದ ಒಡೆನೆಯೆ ಸಂರಕ್ಷಣೆಯ ಅಗತ್ಯಗಳ ಬಗ್ಗೆ ರೈತರಿಗೆ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಯಪಡಿಸಲಾಗುವುದು. ಪ್ರತಿಯೊಂದು ಫಲಾನುಭವಿ ಕುಟುಂಬವೂ, ಎತ್ತುಗಳನ್ನು ? ದೈಹಿಕಶ್ರಮವನ್ನು ನೀಡಬೇಕು. ಹಾಗೆ ಎತ್ತು ಮತ್ತು ಶ್ರಮ ನೀಡದ ಕುಟುಂಬಗಳು ನಗದು ಸಲ್ಲಿಸಬೇಕು. ಹಂಚಿಕೆಯ ಕಾಲುವೆಯಿಂದ ಕ್ಷೇತ್ರಕ್ಕೆ ನೀರು ಹಾಯಿಸುವ ಜಲಮಾರ್ಗದ ಸಂರಕ್ಷಣೆಯನ್ನು ನೀರಾವರಿ ರೈತರೇ ವೈಯುಕ್ತಿಕವಾಗಿ ವಹಿಸಕೊಳ್ಳಬೇಕು. ಕಾಲುವೆಯಿಂದ ಹಿಡಿದು ತನ್ನ ಕ್ಷೇತ್ರಕ್ಕೆ ನೀರು ತಲುಪುವ ವರೆಗಿನ ಜಲಮಾರ್ಗವನ್ನು ಸಂರಕ್ಷಿಸುವುದು ರೈತನ ಜವಾಬ್ದಾರಿ.

ನೀರಾವರಿ ಸಿಬ್ಬಂದಿ :

ನೀರಾವರಿ ಸಿಬ್ಬಂದಿಯಲ್ಲಿ ಸಾಮಾನ್ಯವಾಗಿ ಮೇಲ್ವಿಚಾರಕರು, ನೀರಾಳುಗಳು (ವಾಟರ್ ಮೆನ್)ಮತ್ತು ಕಾವಲುಗಾರರು ಇರುತ್ತಾರೆ. ಇವರನ್ನು ಸಮಿತಿ ನೇಮಿಸುತ್ತದೆ. ಇವರು ಜಲ ವಿತರಣೆ ಹಾಗೂ ಸಂರಕ್ಷಣಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ನೀರಾವರಿ ಕಾಲದಲ್ಲಿ ಯಾವ ಫಡ್‌ಗೆ ನೀರು ಹಾಯುತ್ತದೆಯೊ ಅದರಲ್ಲಿ ಎಲ್ಲರೂ ಕೆಲಸಮಾಡುತ್ತಾರೆ. ಪ್ರತ್ಯೇಕ ಕ್ಷೇತ್ರಗಳಿಗೆ ನೀರು ಹಾಯಿಸುವುದು ನೀರಾಳಿನ ಕೆಲಸ. ರೈತರು ಅದನ್ನು ಮಾಡುವಂತಿಲ್ಲ. ಮೇಲ್ವಿಚಾರಕರು, ನೀರಾಳು ಹಾಗೂ ಕಾವಲುಗಾರ ಕೆಲಸದ ಮೇಲೆ ಉಸ್ತುವಾರಿ ಮಾಡಬೇಕು. ಸಿಬ್ಬಂದಿ ವೇತನ ಸಲ್ಲುವುದು ನಗದಾಗಿ ಇಲ್ಲವೆ ವಸ್ತುರೂಪದಲ್ಲಿ. ಕೆಲವು ಸಲ ಭಾಗಶಃ ನಗದಾಗಿ, ಭಾಗಶಃ ವಸ್ತುರೂಪದಲ್ಲಿ. ಪ್ರತಿಯೊಬ್ಬ ರೈತನೂ ಫಡ್‌ನಲ್ಲಿ ಬೆಳೆಯಲಾದ ಫಸಲಿಗೆ ಅನುಗಣವಾಗಿ ಸಂದಾಯ ಮಾಡಬೇಕು. ಸಮಿತಿಯಿಂದ ನೀರಾವರಿ ಸಿಬ್ಬಂದಿ ನೇಮಕ ಹೊಂದುವ ಮುನ್ನ ಅವರು ತಮ್ಮ ಕರ್ತವ್ಯಗಳ ವಿಷಯದಲ್ಲಿ ಸಮಿತಿಯ ಜೊತೆಗೆ ಕರಾರು ಮಾಡಿಕೊಳ್ಳಬೇಕು.

ತಪ್ಪಿತಸ್ಥರು :

೧. ಅನಧಿಕೃತವಾಗಿ (ಸರದಿ ಬಿಟ್ಟು) ನೀರು ಪಡೆಯುವುದು.
೨. ಜಲಮಾರ್ಗವನ್ನು ಸಂರಕ್ಷಿಸದಿರುವುದು.
೩. ನಾಲೆಯ ಸಂರಕ್ಷಣೆಯಲ್ಲಿ ಪಾಲುಗೊಳ್ಳದಿರುವುದು.

ಅನಧಿಕೃತ ನೀರು ಬಳಕೆಯ ವಿಷಯವಾಗಿ ಮೇಲ್ವಿಚಾರಕ, ಸಮಿತಿಗೆ ವರದಿ ಮಾಡುತ್ತಾನೆ. ಜುಲ್ಮಾನೆ ರೂಪದ ಶಿಕ್ಷೆಯನ್ನು ವಿಧಿಸಲಾಗುವುದು. ಜಲಮಾರ್ಗ ಸಂರಕ್ಷಣೆ ಮಾಡದಿದ್ದರೆ, ನೀರಾವರಿ ಸರದಿ ಸಿಗದಿರುವ ಶಿಕ್ಷೆಗೆ ಗುರಿಯಾಗಬಹುದು. ನಾಲೆ ಸಂರಕ್ಷಣೆಯಲ್ಲಿ ಶ್ರಮದ ರೂಪದಲ್ಲೋ ಇಲ್ಲವೆ ಹಣದ ರೂಪದಲ್ಲೋ ಪಾಲುಗೊಳ್ಳದೆ ಇದ್ದರೆ, ಅನಧಿಕೃತವಾಗಿ ನೀರು ಬಳಸಿಕೊಂಡರೆ ಹೇಗೋ ಹಾಗೆಯೇ ಕ್ರಮ ಕೈಗೊಳ್ಳಲಾಗುವುದು. ಆದರೆ ಅಂಥ ಸಂದರ್ಭಗಳು ತುಂಬ ವಿರಳ.

ಪದ್ದತಿಯ ವಿಶ್ಲೇಷಣೆ :

ಈ ಪದ್ಧತಿ ಸಲೀಸಾಗಿ ನಡೆಯಲು ಬೇಕಾದ ಮುಖ್ಯ ಅಂಶಗಳು ಇವು.

೧.ಉಪ ಘಟಕಗಳಿಗೆ ಮತ್ತು ಕ್ಷೇತ್ರಗಳಿಗೆ ನೀರಿನ ನಿಗದಿ ಹಾಗೂ ಹಂಚಿಕೆ

೨. ಒಡ್ಡು ನಾಲೆ ಇತ್ಯಾದಿಗಳ ಸಂರಕ್ಷಣೆ ಹಾಗೂ ದುರಸ್ತಿಗಾಗಿ ಮಾನವ ಮತ್ತಿತರ ಸಂಪನ್ಮೂಲಗಳ ಕ್ರೋಢೀಕರಣ.

೩. ವಿವಾದಗಳ ಇತ್ಯರ್ಥ.

ಇಡೀ ತಂಡವನ್ನು ಒಟ್ಟು ಗೂಡಿಸಿಡುವ ಶಕ್ತಿ ಎಂದರೆ ಜಮೀನುಗಳಿಗೆ ನೀರು ಒದಗಿಸಬೇಕು ಎಂಬ ಎಲ್ಲರ ಕಾಳಜಿ(ಸಾಮೂಹಿಕ ಸಾಮಾನ್ಯ ಆಸಕ್ತಿ). ತಾವೆಲ್ಲ ಒಟ್ಟಾಗಿ ಇರದಿದ್ದರೆ ಎಲ್ಲರಿಗೂ ತೊಂದರೆ ಎಂದು ಸದಸ್ಯರು ಬಲ್ಲರು. ಅಯಾ ಹಳ್ಳಿಯಲ್ಲಿ ಈ ಒಟ್ಟುಗೂಡಿಸುವ ಶಕ್ತಿ ಎಷ್ಟು ಬಲವಾಗಿದೆ ಎನ್ನುವುದಕ್ಕೆ ನಿದರ್ಶನ – ರಾಜಕೀಯ ಹಾಗೂ ಸ್ಥಳೀಯ ಮೇಲಾಟಗಳು ಏನೇ ಇರಲಿ – ರೈತರ ತಂಡಗಳು ಜಲ ನಿರ್ವಹಣೆ ಹಾಗೂ ಹಂಚಿಕೆ ವಿಷಯದಲ್ಲಿ ಸಮರಸವಾಗಿ ಕೆಲಸ ಮಾಡುತ್ತಿರುವುದು. ಪ್ರೇರಕ ಶಕ್ತಿ ಸಾಮಾನ್ಯ ಕಾಳಜಿಯೇ ಆದರೂ, ತಂಡಕ್ಕೆ ಸ್ಥಿರತೆ ದೊರಕುವುದು ಭಾಗವಹಿಸುವ ಸದಸ್ಯರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ನ್ಯಾಯಸಮ್ಮತವಾಗುವಂತೆ ನಿಯಮಗಳನ್ನು ರಚಿಸಿ ಕೊಳ್ಳುವುದರಿಂದ. ಇದು ಲಿಖಿತ ದಾಖಲೆ. ಎಲ್ಲ ರೈತರಿಗೂ ತಿಳಿದಿರುತ್ತದೆ. ಆದ್ದರಿಂದ ಅವರಿಗೆ ತಮ್ಮ ಕರ್ತವ್ಯ ಹಾಗೂ ಹೊಣೆಗಾರಿಕೆಯ ಅರಿವು ಇರುತ್ತದೆ. ಸದಸ್ಯರ ಹಾಗೂ ಪಂಚರ ಪಾತ್ರಗಳನ್ನು ಸ್ಪಷ್ಟವಾಗಿ ನಿಗದಿಮಾಡಲಾಗಿದೆ. ಘರ್ಷಣೆ ಆಗದಿರಲಿ ಎಂದೇ ನೀರು ಹಾಯಿಸುವ ಕೆಲಸವನ್ನು ಫಲಾನುಭವಿಗಳೇ ನೇಮಿಸಿ, ವೇತನ ನೀಡುವ ನೀರಾವರಿ ಸಿಬ್ಬಂದಿಗೆ ವಹಿಸಿದ್ದು. ಅಚ್ಚುಕಟ್ಟನ್ನು ಫಡ್ (ತಾಕು)ಗಳಾಗಿ ವಿಂಗಡಿಸಿರುವುದು ಹಾಗೂ ಪ್ರತಿ ಫಡ್‌ನಲ್ಲೂ ಒಂದೇ ಬೆಳೆ ಇಡುವಂತೆ ಯೋಚಿಸುವುದು ನೀರಾವರಿ ಹಂಚಿಕೆಯ ನಿರ್ವಹಣೆಗೆ ಸಹಾಯಕವಾಗಿದೆ. ಒಂದೊಂದು ಫಡ್‌ನ ನೀರಿನ ಆವಶ್ಯಕತೆ ಒಂದೇ ಆಗಿರುತ್ತದೆ. ಒಂದು ಫಡ್‌ನಿಂದ ಇಡೀ ಪ್ರದೇಶಕ್ಕೆ ಒಂದೇ ರೀತಿಯಲ್ಲಿ ನೀರು ಹಾಯಿಸಬಹುದು.

ಸಂರಕ್ಷಣೆ ನಡೆಯುವುದು ಸಾಮುದಾಯಿಕ ಪ್ರಯತ್ನದಿಂದ ಮತ್ತು ನೀರಾವರಿ ಸಿಬ್ಬಂದಿಗೆ ವೇತನ ನೀಡುವುದು ವಸ್ತುರೂಪದಲ್ಲಿ. ಸಿಬ್ಬಂದಿಗೆ ಫಸಲಿನಲ್ಲಿ ನಿಗದಿಯಾದ ಒಂದು ಪಾಲನ್ನು ನೀಡಲಾಗುತ್ತದೆ. ಈ ರೀತಿಯಲ್ಲಿ ಸಿಬ್ಬಂದಿ ವರ್ಗವು ಬೆಳೆ ತೆಗೆಯುವ ಕ್ರಮದಲ್ಲಿ ಕೊಂಚ ಮಟ್ಟಿಗೆ ಒಳಪಟ್ಟಿರುತ್ತದೆ. ಸಣ್ಣ ಪ್ರಮಾಣದ ಕ್ಷೇತ್ರ ಸಾಮೂಹಿಕ ಕಾರ್ಯ ನಿರ್ವಹಣೆಗೆ ಅಡ್ಡಿಯೋನೂ ಅಲ್ಲ ಎಂದು ಫಡ್ ಪದ್ಧತಿಯ ಅನುಭವ ತೋರಿಸಿಕೊಟ್ಟಿದೆ. ಫಡ್ ಪ್ರದೇಶದಲ್ಲಿ ಭೂಮಿಯನ್ನು ಮೊದಲೇ ಸಮ ಮಾಡಿದಂತೆ ಕಾಣುವುದಿಲ್ಲ. ಆದರೂ ಹಾಯಿಸಿದ ನೀರು ಪೋಲಾದುದು ಕಂಡು ಬಂದಿಲ್ಲ.

ಫಡ್ ಪದ್ಧತಿಯಲ್ಲಿ ನೀರಾವರಿ ಪ್ರದೇಶಗಳನ್ನು ಗುರುತು ಮಾಡುವುದು ಸಾಲಿಯಾನ ಸರಾಸರಿ ಹರಿಯುವ ಪ್ರಮಾಣದ ಮೇಲೆಯೇ ವಿನಾ ಒಳ್ಳೆ ಮಳೆಯಾದ ವರ್ಷದ ಹರಿಯುವಿಕೆ ಮೇಲೆ ಅಲ್ಲ. ಸಮೃದ್ಧಿಯಗಿ ಮಳೆ ಬಿದ್ದ ವರ್ಷಗಳಲ್ಲಿ ನೀರಾವರಿ ಆಗುವ ಪ್ರದೇಶ ಏನಿದ್ದರೂ ಹೆಚ್ಚುವರಿ ಪ್ರದೇಶವಷ್ಟೆ. ಇದರಿಂದಾಗಿ ಈ ಹೆಚ್ಚುವರಿ ಪ್ರದೇಶದ ರೈತರಿಗೆ ಕೆಲವು ವರ್ಷಗಳಿಗೆ ಒಮ್ಮೆ ತಮಗೆ ನೀರು ಸಿಗುತ್ತದೆ ಎನ್ನುವುದು ಗೊತ್ತಿರುತ್ತದೆ. ಅಂಥ ಪ್ರದೇಶ ಇರುವುದು ಬಹುತೇಕ ಕೊನೆಯಲ್ಲಿ. ಇದು ಒಳ್ಳೆಯ ಕಾರ್ಯಯೋಗ್ಯವೂ ನಿರ್ವಹಣ ಸುಲಭವೂ ಆದ ವ್ಯವಸ್ಥೆ. ಸರಾಸರಿ ಪ್ರಮಾಣದಷ್ಟು ನೀರು ಲಭ್ಯವಿಲ್ಲದಿರುವ ವರ್ಷಗಳಲ್ಲಿ ಬೆಳೆ ಮಾದರಿಯನ್ನೇ ಸೂಕ್ತವಾಗಿ ಹೊಂದಿಸಲಾಗುತ್ತದೆ. ಅಥವಾ ನೀರಾವರಿ ಅಂತರವನ್ನು ಹೆಚ್ಚಿಸಿ ಎಲ್ಲ ಸದಸ್ಯರಿಗೂ ನ್ಯಾಯ ದೊರಕುವಂತೆ ನೀರನ್ನು ಪಡಿತರ ಕ್ರಮದಲ್ಲಿ ಒದಗಿಸಲಾಗುತ್ತದೆ.

ಹೊಸದಾಗಿ ಅನುಗೊಳಿಸಿದ ನೀರಾವರಿ ಯೋಜನೆಗಳಲ್ಲಿ ನೀರಾವರಿ ಸೌಲಭ್ಯಗಳು ಹೆಚ್ಚು ಸೂಕ್ತವಾಗಿ ಬಳಕೆಯಾಗುವಂತೆ, ಜಲನಿರ್ವಹಣೆ ಹಾಗೂ ವಿತರಣೆ ಮಾಡುವಲ್ಲಿ ಫಲಾನುಭವಿಗಳನ್ನು ಒಳಪಡಿಸಿಕೊಳ್ಳುವ ಅಗತ್ಯದ ಬಗ್ಗೆ ಇಂದು ಹೆಚ್ಚಿನ ಅರಿವು ಮೂಡುತ್ತಿದೆ. ನೀರಾವರಿ ವ್ಯವಸ್ಥೆಯ ನಿರ್ವಹಣೆಯಲ್ಲಿ ಫಲಾನುಭವಿ ರೈತನನ್ನು ಹೆಚ್ಚು ಹೆಚ್ಚಾಗಿ ಜೊತೆಗೂಡಿಸಿಕೊಳ್ಳಬೇಕು ಎಂದು ವಾದಿಸುವುದರಲ್ಲಿ ಈ ಭಾವನೆ ಇದೆ. ಏನೆಂದರೆ ಅದರಿಂದ ಹಂಚಿಕೆಯ ವೆಚ್ಚ ಕಡಿಮೆ ಆಗುತ್ತದೆ. ಸಮಸ್ಯೆಗಳನ್ನು ಬಿಡಿಸಲು ಫಲಾನುಭವಿಗಳಿಗೆ ಇರುವ ಸ್ಥಳೀಯ ಸ್ಥಿತಿಗತಿಗಳ ಅರಿವು ಸಹಾಯಕವಾಗುತ್ತದೆ. ಇದರಿಂದ ಸರ್ಕಾರ ಪ್ರವೇಶಿಸುವುದು ಕಡಿಮೆ ಆಗುತ್ತದೆ. ಸ್ಥಳೀಯ ಅಗತ್ಯಗಳನ್ನು ತೊಂದರೆಗಳನ್ನು ಸರ್ಕಾರ ಯಾವಾಗಲೂ ಗ್ರಹಿಸಲಾರದು. ಭೂಹಿಡುವಳಿಗಳು ಚಿಕ್ಕವೆ ಆಗಿದ್ದರೂ ಫಲಾನುಭವಿ ರೈತರು ಒಂದುಗೂಡಿ ನೀರಾವರಿ ವ್ಯವಸ್ಥೆಯನ್ನು ಒಂದು ಸಮುದಾಯದ ಆಸ್ತಿಯಂತೆ ನಿರ್ವಹಿಸುವುದು ಸಾಧ್ಯ ಎನ್ನುವುದನ್ನು ‘ಫಡ್’ ಪದ್ಧತಿಯ ಯಶಸ್ಸು ತೋರಿಸುತ್ತದೆ.

ಆಕರ :

ವಾಟರ್ ಮ್ಯಾನೇಜ್‌ಮೆಂಟ್ ಥ್ರೂ ಫಾರ್ಮರ್ಸ್ ಆರ್ಗನೈಜೇಷನ್ – ಫಡ್ ಸಿಸ್ಟಮ್ ಎ ಕೇಸ್ ಸ್ಟಡಿ ಬೈ ಶ್ರೀ ಎಸ್. ಕುಲಕರ್ಣಿ ಅಂಡ್. ಆರ್. ಕೆ. ಪಾಟೀಲ್ ಪ್ರಸೆಂಟ್‌ಟೆಡ್ ಟು ದಿ ಟ್ಟೈಲ್ತ್ ಕಾಂಗ್ರೆಸ್ ಅಫ್ ಇಂಟರ್ ನ್ಯಾಷನಲ್ ಕಮಿಷನ್ ಆನ್ ಇರಿಗೇಷನ್ ಅಂಡ್ ಡ್ರೈನೇಜ್

ಆಧಾರಗಳು :

೧೩,೧೪,೧೫ನೇ ಅನುಬಂಧಗಳು ಭಾರತ ಸರ್ಕಾರದ ಜಲಸಂಪನ್ಮೂಲ ಮಂತ್ರಾಲಯದ ಸಿ.ಎ.ಡಿ. ಮತ್ತು ಜಲನಿರ್ವಹಣಾ ವಿಭಾಗದ ಅಡಿಷನಲ್ ಕಾರ್ಯದರ್ಶಿಯವರ ಪತ್ರ ಸಂಖ್ಯೆ ೧೦ – ೩೭:೮೫ ಸಿ.ಎ.ಡಿ. ದಿನಾಂಕ ೩೦ ಏಪ್ರಿಲ್ ೧೯೮೭. ಇದರ ಅನುಬಂಧಗಳು ಇವುಗಳನ್ನು ಜಲನಿರ್ವಹಣೆಯಲ್ಲಿ ರೈತರ ಪಾಲುಗಾರಿಕೆಯ ಮಾರ್ಗದರ್ಶಕ ಸೂಚನೆಗಳನ್ನು ಎನ್ನಲಾಗಿದೆ.