ಮಳೆರಾಯನ ಹೆಸರಿನಲ್ಲಿ ಆಚರಿಸುವ ಹಬ್ಬ. ಅಂದು ಮಳೆರಾಯನಿಗೆ ಕುರಿ ಬಲಿ ಕೊಡುತ್ತಾರೆ. ಊರಿನ ಹನುಮಪ್ಪ ದೇವರಿಗೆ ಹರಕೆ ಹೊತ್ತು ತೊಗಲು ಗೊಂಬೆಯಾಟ, ಗೊಂದಲಿಗರ ಮೇಳಗಳನ್ನು ಆಡಿಸುವುದರಿಂದ ಮಳೆ ಬರುತ್ತದೆಂದು ನಂಬಿಕೆ ಇದೆ. ಚಿತ್ರದುರ್ಗ, ಕೋಲಾರ ಹಾಗೂ ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ತೊಗಲು ಗೊಂಬೆಯಾಟಗಳನ್ನು ಮಳೆಗಾಗಿ ಆಡಿಸುತ್ತಾರೆ.

ಹಾವೇರಿ ಜಿಲ್ಲೆಯ ಸುತ್ತಮುತ್ತಲಿನ ಜನರು  ತಾವೇ ನಿರ್ಮಿಸಿದ ಕಟ್ಟಿಗೆಯ ದುರುಗಮ್ಮನ ಗೊಂಬೆ ಮಾಡಿ, ಅದರ ಜೊತೆಗೆ ನೀರು ತುಂಬಿದ ಕುಡಿಕೆಗಳನ್ನು ಊರಾಚೆಯ ಗಡಿಗೆ ತಂದು ಬಿಡುವ ಪದ್ಧತಿ ಇದೆ. ಮಳೆ ಬಂದರೆ ದುರ್ಗಿಯ ಕೃಪೆ ಎಂದೂ, ಇಲ್ಲವಾದರೆ ಯಾವುದೋ ಪಾಪ ಎಂದು ತಿಳಿಯುತ್ತಾರೆ.