ಲೆನಾಡಿನ ಕೃಷಿಕರಲ್ಲಿರುವ ಕೃಷಿ ಸಂಬಂಧೀ ಆಚರಣೆ. ನಾಟಿ ಮುಗಿದ ನಂತರ ಗದ್ದೆಯಲ್ಲಿ ಕರಿಗೂಟ ನೆಡುತ್ತಾರೆ. ಅರೆಬರೆ ಸುಟ್ಟ ಕರಿದಾದ ಬಿದಿರನ್ನು ತಂದು ಗದ್ದೆಯ ಅಲ್ಲಲ್ಲಿ ಹಾಕುತ್ತಾರೆ. ಕರಿಗೂಟ ಹಾಕುವ ವ್ಯಕ್ತಿ ಬೆಳಿಗ್ಗೆಯೆದ್ದು ಕಾಣದಂತೆ ಕಾಡಿಗೆ ಹೋಗಿ ಕರಿಗೂಟ ತರುತ್ತಾನೆ. ಹಿಂದೆ ಕರಿಗೂಟ ಹಾಕುವವ ಬೆತ್ತಲೆಯಾಗಿ ಕಾಡಿಗೆ ಹೋಗುತ್ತಿದ್ದರಂತೆ. ಈ ಆಚರಣೆಯ ಹಿಂದೆ ಬೆಳೆ ಸಂರಕ್ಷಣೆಯ ತಂತ್ರಗಾರಿಕೆ ಯಿದೆ. ಬಯಲಾದ ಗದ್ದೆಯ ಪ್ರದೇಶ ಗಳಲ್ಲಿ ಹಕ್ಕಿಗಳಿಗೆ ಕೂರಲು ಕರಿಗೂಟ ಗಳು ಆಸರೆ ನೀಡುತ್ತವೆ. ಹಗಲಿನಲ್ಲಿ ಹಕ್ಕಿಗಳು ಬೆಳೆಯಲ್ಲಿ ಅಂಟಿಕೊಂಡ ಕ್ರಿಮಿ, ಕೀಟಗಳನ್ನು ತಿಂದು ಇಲ್ಲಿ ವಿರಮಿಸಿದರೆ, ರಾತ್ರಿಯ ವೇಳೆ ಗೊಬೆ ಮತ್ತಿತರ ನಿಶಾಚರಿ ಪಕ್ಷಿಗಳು ಇಲ್ಲಿ ಕುಳಿತು ಬೆಳೆ ದ್ವಂಶಕಗಳಾದ ಇಲಿ, ಹೆಗ್ಗಣಗಳಿಗಾಗಿ ಹೊಂಚು ಹಾಕುತ್ತವೆ. ಇಲ್ಲಿ ಕೃಷಿಕರು ಅವರವರ ಧರ್ಮದ ಚಿಹ್ನೆಗಳನ್ನು ಗದ್ದೆಯಲ್ಲಿ ನೆಟ್ಟಿರುವುದನ್ನು ಕಾಣಬಹುದಾಗಿದೆ. ಕ್ರಿಶ್ಚಿಯನ್ನರು ಹೊಲಗಳಲ್ಲಿ ಶಿಲುಬೆಗಳನ್ನು ನೆಟ್ಟಿರುವುದನ್ನು ಉದಾಹರಿಸಬಹುದಾಗಿದೆ.