ಬಾಳೆ ಮರದಿಂದ ಅಲಂಕರಿಸಿ ಹನುಮನನ್ನು ಪೂಜಿಸುವುದು. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾರ್ಗನಹಳ್ಳಿಯ ದೈವ ಹನುಮ. ಪ್ರತಿ ವರ್ಷದ ರಾಮನವಮಿ ಹಬ್ಬ ಮುಗಿದ ನಂತರ ಬರುವ ಭಾನುವಾರ ಈ ಸೇವೆ ನಡೆಯುತ್ತದೆ. ಜಾತ್ರೆಗೆ ಸೇರಿದ ಜನ ಮಾರ್ಗನಹಳ್ಳಿಯ ಕುಮಾರರಾಮನಿಗೆ ಪೂಜೆ ಸಲ್ಲಿಸಿ, ಕೋಸಂಬರಿ, ರಸಾಯನ, ನೀರು ಮುಜ್ಜಿಗೆ, ಪಾನಕಗಳನ್ನು ಹಂಚುತ್ತಾರೆ. ನಂತರ ಮಾರ್ಗನಹಳ್ಳಿಯ ಹನುಮನ ಉತ್ಸವದ ಮೂರ್ತಿಗೆ ವಿಶೇಷವಾಗಿ ಸಿಂಗರಿಸಿ, ತೊಟ್ಟಿಲಲ್ಲಿ ಇಟ್ಟು ಮೆರವಣಿಗೆ ನಡೆಸುತ್ತಾರೆ. ಆ ರಾತ್ರಿ ಹನುಮನ ಗುಡಿಯ ಮುಂದೆ ಅನ್ನಸಂತರ್ಪಣೆ ನಡೆಯುತ್ತದೆ.

ಉಪವಾಸದಿಂದ ಇರುವ ಪೂಜಾರಿ ಹನುಮನಿಗೆ ಕದಳಿಯಿಂದ ಸಿಂಗಾರ ಮಾಡುತ್ತಾನೆ; ಉದ್ದನೆಯ ಎರಡು ಬಾಳೆ ಕಂಬಗಳನ್ನು ಮೊದಲು ಹನುಮನ ಎದುರಿನ ಕಲ್ಲು ಕಂಬಕ್ಕೆ ಕಲಾತ್ಮಕವಾಗಿ ಜೋಡಿಸುತ್ತಾನೆ. ನಂತರ ಒಂದರ ಪಕ್ಕ ಒಂದರಂತೆ ಜೋಡಿಸಿ ಕದಳಿಮಂಟಪ ಸಿದ್ಧಪಡಿ ಸುತ್ತಾನೆ. ಕದಳಿ ಪಟ್ಟಿಯನ್ನು ಹರಳೆಣ್ಣೆ ದೀಪದಿಂದ ಕಪ್ಪಾಗಿಸಿ, ಕೈ ಬೆರಳು ಗಳಿಂದ ಅಪರೂಪದ ಚಿತ್ರಗಳನ್ನು ಬಿಡಿಸುತ್ತಾನೆ. ಭಕ್ತರು ಹನುಮನಿಗೆ ಭಕ್ತಿಯಿಂದ ಪೂಜಿಸಿ, ನೈವೇದ್ಯ ಅರ್ಪಿಸಿ, ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ.