ಮದುವೆ ಸಂದರ್ಭದಲ್ಲಿ ನಡೆಯುವ ಒಂದು ಶಾಸ್ತ್ರ. ಸಂಬಂಧ ಬೆಳೆಸಲು ಗಂಡಿನ ಮನೆಯವರು ಹೆಣ್ಣಿನ ಮನೆಗೆ ಮಂಗಳ ದ್ರವ್ಯಗಳನ್ನು ತೆಗೆದುಕೊಂಡು ಹೋಗುತ್ತಾರೆ. ಗಂಡು ಹೆಣ್ಣುಗಳ ನಿಶ್ಚಿತಾರ್ಥದ ಸಂಪ್ರದಾಯ ನಡೆದು ವೀಳ್ಯೆಶಾಸ್ತ್ರ ನಡೆಯುವಾಗ ಪರಪು ಅನ್ನದ ಮಾತು ಬರುತ್ತದೆ. ತರಕಾರಿ ಮತ್ತು ಅನ್ನದೊಂದಿಗೆ ಕಲಸಿಕೊಳ್ಳುವ ಸಾರು, ಹುಳಿಗಳಿಗೆ ‘ಪರಪು’ ಅನ್ನವೆಂದು ಕರೆಯುತ್ತಾರೆ.

ಕಲಶ ಪೂಜೆಯ ನಂತರ ಹೆಣ್ಣನ್ನು ಹಸೆಮಣೆಗೆ ಕರೆತರುವ ಮುನ್ನ ಹೆಣ್ಣಿನವರು ಗಂಡಿನವರಿಗೆ “ತಾವು ಬಂದ ಸಮಾಚಾರವೇನಪ್ಪಾ” ಎಂದು ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಗಂಡಿನವರು ‘ಪರಪು’ ಅನ್ನಕ್ಕೆ ಬಂದಿದ್ದೇವೆ” ಎನ್ನುತ್ತಾರೆ. ಹೆಣ್ಣಿನವರು ‘ಆಗಲಿ ಸಂತೋಷ’ ಎಂದು ಹೇಳಿ ಹೆಣ್ಣನ್ನು ಕರೆತರುತ್ತಾರೆ. ನಂತರ ನಿಶ್ಚಿತಾರ್ಥದ ಸಂಪ್ರದಾಯ ಮಾಡಿ ಮುಗಿಸುತ್ತಾರೆ.