ದೀಪಾವಳಿಯ ಗೋಪೂಜೆಯಂದು ತುಳುವರು ಬರುವವರ ಹಬ್ಬ ಆಚರಿಸುತ್ತಾರೆ. ಮುಂದೆ ಹುಟ್ಟಲಿರುವ ಮಕ್ಕಳಿಗೆ ಜೀವನಕ್ಕೆ ಆಧಾರವಾಗುವುದಕ್ಕೆ ಗೌರವ ನೀಡುವುದು ಈ ಹಬ್ಬದ ಆಶಯ. ಅಂದು ವೃತ್ತಿ ಸಂಬಂಧಿಸಿದ ಎಲ್ಲಾ ಉಪಕರಣಗಳನ್ನು ತೊಳೆದು, ಶೃಂಗರಿಸಿ, ಪೂಜಿಸುತ್ತಾರೆ. ದನಕರುಗಳನ್ನು ಮೈತೊಳೆದು, ಕೋಡುಗಳನ್ನು ಬಣ್ಣಗಳಿಂದ ಸಿಂಗರಿಸಿ, ಹಾರ, ಆಭರಣ ಇತ್ಯಾದಿಗಳಿಂದ ಅಲಂಕರಿಸಿ, ತಿಲಕವಿಟ್ಟು, ಆರತಿ ಮಾಡಿ, ನೈವೇದ್ಯವಾಗಿ ಕಡಬು ತಿನ್ನಿಸುತ್ತಾರೆ. ಹಬ್ಬದ ಅಡುಗೆಗಾಗಿ ಅಕ್ಕಿಯಿಂದ ಮಾಡಿದ ಕೋರಿ ರೊಟ್ಟಿ, ಮೀನು, ಕುಸುಬಲಕ್ಕಿ ಅನ್ನ ಇತ್ಯಾದಿಗಳನ್ನು ಮಾಡುತ್ತಾರೆ. ಅಡುಗೆಗಳನ್ನು ಎಡೆ ಮಾಡಿ, ನಂತರ ಎಲ್ಲರೂ ಊಟ ಮಾಡುತ್ತಾರೆ. ನರಕಾಸುರನು ಭೂಮಿಯ ಪುತ್ರನಾಗಿದ್ದು, ಬಲಿಯೇಂದ್ರನಾಗಿ ಪ್ರತಿ ವರ್ಷ ಪೂಜೆಗೊಳ್ಳುತ್ತಾನೆ.