ಊರಿನ ಪೂರ್ವದಿಕ್ಕಿನಲ್ಲಿನ ಕೊಳದಲ್ಲಿ ವ್ಯಕ್ತಿಯೊಬ್ಬನನ್ನು ಸ್ನಾನ ಮಾಡಿಸಿ, ಕಪ್ಪೆಯನ್ನು ಕಟ್ಟಿದ ಒನಕೆಯನ್ನು ಹೊರೆಸುತ್ತಾರೆ. ಒನಕೆ ಹೊತ್ತವರ ಮೇಲೆ ತಣ್ಣೀರನ್ನು ಸುರಿಯುತ್ತಾರೆ. ನಂತರ ಹತ್ತಾರು ಜನ ಸೇರಿ ತಮಟೆಯ ಸದ್ದಿನೊಂದಿಗೆ, ಮಳೆಯ ಹಾಡುಗಳನ್ನು ಹೇಳುತ್ತಾ ಮನೆಮನೆಗೂ ಹೋಗುತ್ತಾರೆ. ಒನಕೆಯನ್ನು ಹೊತ್ತವನು ಪ್ರತಿ ಮನೆಯ ಮುಂದೆಯೂ ಕುಕ್ಕರ ಗಾಲಿನಲ್ಲಿ ಕುಳಿತ ತಕ್ಷಣ ಆ ಮನೆಯವರು ಆತನ ಮೇಲೆ ನೀರು ಹಾಕಿ, ಬೇಳೆ, ಉಪ್ಪು ಇತ್ಯಾದಿ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ಹೀಗೆ ಪ್ರತಿ ಮನೆ ಯಲ್ಲೂ ಸಂಗ್ರಹವಾದ ಆಹಾರ ಪದಾರ್ಥಗಳಿಂದ ಊಟ ಮಾಡಿ ಮನೆಗೆ ಹೋಗುತ್ತಾರೆ.

ಬೋರೇ ದೇವರಿಗೆ ಬಿಟ್ಟ ಮೀಸಲು ಮರಿಯನ್ನು ‘ದಿಕ್ಕಿನ ಮರಿ’ ಎಂದು ಬಲಿಕೊಟ್ಟ ನಂತರ ಮಳೆ ಬಂದೇ ಬರುತ್ತದೆಂಬ ನಂಬಿಕೆ ಇದೆ.