ಕುಳಿತು ದೇವರಿಗೆ ಎಡೆ ಅರ್ಪಿಸುವುದಕ್ಕೆ ಮಣೇವು ಸೇವೆ ಎಂದು ಕರೆಯುತ್ತಾರೆ. ಮುತ್ತತ್ತಿಯ ಮುತ್ತತ್ತಿರಾಯನಿಗೆ ಭಕ್ತರು ಅರ್ಪಿಸುವ ಎಡೆಯ ಸೇವೆ. ಕಜ್ಜಾಯ, ಹಲಸಿನ ಹಣ್ಣಿನ ತೊಳೆ, ಬಾಳೆಹಣ್ಣಿನ ರಸಾಯನ, ಕಡಲೇಪುರಿ ಇತ್ಯಾದಿ ಸಸ್ಯಾಹಾರದ ತಿನಿಸುಗಳು ಎಡೆ ಯಲ್ಲಿರುತ್ತವೆ. “ಮುತ್ತತ್ತಿರಾಯನಿಗೆ ಮಣೇವು ಸೇವೆ ಮಾಡುವೆವು” ಎಂದು ಹರಕೆ ಹೊತ್ತುಕೊಂಡವರು ಈ ಸೇವೆಯನ್ನು ಸಲ್ಲಿಸುತ್ತಾರೆ.

ದೇವರ ಸನ್ನಿಧಿಗೆ ಹರಕೆ ಹೊತ್ತ ಭಕ್ತರು ಎಡೆಯೊಂದಿಗೆ ಬರುತ್ತಾರೆ. ಹೊಳೆಯಲ್ಲಿ ಸ್ನಾನ ಮಾಡಿದ ನಂತರ ಮಡಿಯುಟ್ಟು ಮಣೇವು ಸೇವೆಗೆ ಸಿದ್ಧರಾಗುತ್ತಾರೆ. ಸ್ತ್ರೀಯರು ಗಂಗಾ ಪೂಜೆ ಮಾಡಿದ ಮೇಲೆ ಮೊದಲೇ ಸಿದ್ಧ ಮಾಡಿಕೊಂಡಿರುವ ಎಡೆಯ ತಿನಿಸುಗಳನ್ನು ಹಾಸಿದ ವಸ್ತ್ರವೊಂದರ ಮೇಲೆ ಐದು ಗುಡ್ಡೆಗಳಾಗಿ ಇಡುತ್ತಾರೆ. ವಸ್ತ್ರದ ನಾಲ್ಕು ಮೂಲೆ ಹಾಗೂ ಮಧ್ಯದಲ್ಲಿ ಇರಿಸಿದ ಎಡೆಯ ರಾಶಿಯನ್ನು ಮಣೇವು ಆಡುವವನು ತಿನ್ನಲು ಪ್ರಯತ್ನಿಸುತ್ತಿರುತ್ತಾನೆ. ಅಂತ್ಯದಲ್ಲಿ ದೇವರು ಮೈಮೇಲೆ ಬಂದು ತಿನ್ನುತ್ತಾನೆ. ಹೊಳೆಯಿಂದ ದೇವಾಲಯದವರೆಗೆ ಅಲ್ಲಲ್ಲಿ ಮಣೇವು ಸೇವೆ ನಡೆಯುತ್ತದೆ. ಅಂತ್ಯದಲ್ಲಿ ದೇವಾಲಯದ ಸುತ್ತಲೂ ನಡೆಸುತ್ತಾರೆ. ಮಣೇವು ಆಡುವ ಭಕ್ತ ಸ್ನಾನ ಮಾಡಿ ವೈಷ್ಣವ ಲಾಂಛನ ಇಟ್ಟು ಬಿಳಿಯ ಬನಿಯನ್ ಹಾಗೂ ನಿಕ್ಕರ್ ಧರಿಸಿರುತ್ತಾರೆ. ಈ ಬಗೆಯ ಆಚರಣೆ ಶ್ರಾವಣ ಶನಿವಾರ ಹಾಗೂ ಜಾತ್ರೆಯ ವೇಳೆಯಲ್ಲಿ ನಡೆಯುವುದನ್ನು ಕಾಣಬಹುದಾಗಿದೆ.