ಬಿಜಾಪುರ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಈ ಜಾತ್ರೆ ನಡೆಯುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಗಡಿಭಾಗದಲ್ಲಿ ದೀಪಾವಳಿ ಹಬ್ಬದಲ್ಲಿ  ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಜಾತ್ರೆ ಯಲ್ಲಿ ಕರ್ನಾಟಕ, ಮಹಾ ರಾಷ್ಟ್ರ ಹಾಗೂ ಆಂಧ್ರ ಪ್ರದೇಶದ ಭಕ್ತರು ಸೇರು ತ್ತಾರೆ.

ಕುರುಬ ಜನಾಂಗದ ಕುಲದೈವ ಮಾಳಿಂಗರಾಯ. ಮಾಳಿಂಗರಾಯನ ಜಾತ್ರೆ ಪ್ರತಿ ದೀಪಾವಳಿಯ ಮೂರು ದಿನಗಳು ನಡೆಯುತ್ತದೆ. ದೀಪಾವಳಿಯ ಅಮವಾಸ್ಯೆಯ ಮಧ್ಯರಾತ್ರಿ ಶಿವನು ಅದೃಶ್ಯ ರೂಪದಲ್ಲಿ ಬಂದು ಮಾಳಿಂಗರಾಯನಿಗೆ ಮುಂಡಾಸು ಸುತ್ತಿ ಹೋಗುತ್ತಾನೆ ಎಂಬ ಪ್ರತೀತಿ ಇದೆ. ಜಾತ್ರೆಯ ಸಂದರ್ಭದಲ್ಲಿ ದಾಸೋಹವಿರುತ್ತದೆ.