ಕೂಡ್ಲಿಗಿಯ ಗ್ರಾಮ ದೇವತೆ ಊರಮ್ಮ. ವರ್ಷದ ಜೂನ್ ತಿಂಗಳಲ್ಲಿ ಒಂದು ಸಾರಿ ಊರವರೆಲ್ಲ ಸೇರಿ ಹೋಳಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ. ಇದನ್ನು ಹೋಳಿಗೆಮ್ಮ ಹಬ್ಬದ ಆಚರಣೆ ಎಂದು ಕರೆಯುತ್ತಾರೆ. ಮಡಿಯಿಂದ ತಯಾರಿಸಿದ ಹೋಳಿಗೆ ಇತ್ಯಾದಿ ಎಡೆಯನ್ನು ಹೆಣ್ಣುಮಕ್ಕಳು ಅಂದು ಸಂಜೆ ಊರಮ್ಮನ ಕಟ್ಟೆಗೆ ತರುತ್ತಾರೆ. ಎಡೆಯನ್ನು ತೆಗೆದುಕೊಂಡು ಹೋಗುವಾಗ ಅವರು ಯಾರೊಂದಿಗೂ ಮಾತನಾಡುವುದಿಲ್ಲ. ಮೌನವ್ರತ ಈ ಹಬ್ಬದ ನಿಯಮ. ಎಡೆಯನ್ನು ಅರ್ಪಿಸಿದ ಹೆಂಗಸರು ನಮಸ್ಕರಿಸಿ ಮರಳಿ ತಮ್ಮ ತಮ್ಮ ಮನೆಗೆ ಹೋಗುತ್ತಾರೆ. ಮನೆಯಲ್ಲಿ ಎಲ್ಲರೂ ಸೇರಿ ಹೋಳಿಗೆ ಊಟವನ್ನು ಮಾಡು ತ್ತಾರೆ.  ಅಂದಿನ ಹಬ್ಬದ ಊಟಕ್ಕೆ ಯಾರನ್ನು ಕರೆಯುವಂತಿಲ್ಲ. ಊಟ ವನ್ನು ಬೇರೆಯವರಿಗೆ ಕೊಡುವಂತಿಲ್ಲ. ಇದು ಹಬ್ಬದ ನಿಯಮವಾಗಿದೆ.

ಹೆಂಗಸರು ಮಂಗಳವಾರ ಅರ್ಪಿಸಿದ ಎಡೆಯನ್ನು, ಹಸಿದ ಬಾಲಕರು ಸೇರಿ ಪ್ರಾಣಿಗಳು ತಿನ್ನು ತ್ತವೆ. ಹೀಗೆ ಹಸಿದ ಹೊಟ್ಟೆಗಳಿಗೆ ಸಂತೃಪ್ತಿಯಾದರೆ, ಊರಮ್ಮ ದೇವತೆ ಸಂತೃಪ್ತಳಾಗುತ್ತಾಳೆ ಎಂದು ನಂಬು ತ್ತಾರೆ. ಹೋಳಿಗೆ ಹಬ್ಬದಂದು ದೇವಿಗೆ ಎಡೆ ಅರ್ಪಿಸುವುದರಿಂದ ಜನ, ಜಾನುವಾರು ಇತ್ಯಾದಿ ವ್ಯವಹಾರಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆಂದು ನಂಬುತ್ತಾರೆ.