ಈ ನೆಲದಲ್ಲಿ ಶತಮಾನಗಳಿಂದ ನೆಲೆಸಿರುವ ಪೂರ್ವಿಕರೆ ಬುಡಕಟ್ಟುಗಳು. ಇವರೇ ಈ ನೆಲೆದ ಅತೀಪ್ರಾಚೀನ ಆದಿವಾಸಿಗಳು. ಗುಡ್ಡ-ಗಾಡುಗಳಲ್ಲಿ ಅಲೆಮಾರಿಯಾಗಿ ವಾಸಿಸುತ್ತಿದ್ದ ಈ ಜನವರ್ಗ ನಮ್ಮ ನೈಜ ಪ್ರತಿನಿಧಿಗಳು. ನಮ್ಮ ಮಾನವ ಜನಾಂಗದ ಅತೀ ಪ್ರಾಚೀನ ಸಂಸ್ಕೃತಿಯ ಕುರುಹಾಗಿ ಇವರನ್ನು ಸಾಕ್ಷಿಕರಿಸಿದರೆ ಅಂತಹ ತಪ್ಪೇನು ಆಗುವುದಿಲ್ಲ. ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯಿಂದ ಈ ಜನಾಂಗಗಳನ್ನು ದೂರವಿರಿಸಿದ್ದೆ ಇವರ ಹಿಂದುಳಿವಿಕೆಗೆ ಪ್ರಮುಖ ಕಾರಣ ಎನ್ನಬಹುದು. ಮೇಲ್ಜಾತಿಯ ಹಿಂದುಗಳು ಹಾಗೂ ಕೆಲವು ಹಿತಾಸಕ್ತಿಗಳ ಸಂಕುಚಿತ ಮನೋದೃಷ್ಟಿಯಿಂದ ಬುಡಕಟ್ಟುಗಳು ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಿದವು.

ಬುಡಕಟ್ಟುಗಳು ಶಿಕ್ಷಣದ ಆರಂಭಿಕ ಪ್ರಯತ್ನಗಳನ್ನು ತಿಳಿಯುವಾಗ ಆ ಕಾಲದ ಜನರ ಮನಸ್ಥಿತಿ, ಬುಡಕಟ್ಟು ಹಾಗೂ ಬುಡಕಟ್ಟೇತರ ಜನವರ್ಗದ ನಡುವೆ ಇದ್ದ ಭಿನ್ನತೆಯನ್ನು ಅವಲೋಕಿಸಬೇಕಾಗುತ್ತದೆ. ಬುಡಕಟ್ಟಿನ ಜನವರ್ಗದವರ ಕುರಿತು ಅನೇಕ ಅಪನಂಬಿಕೆಗಳನ್ನು ಸೃಷ್ಟಿಸಿ, ಅವರು ಅನಾಗರಿಕರೆಂಬಂತೆ ಬಿಂಬಿಸುತ್ತಿದ್ದ ಕಾಲಘಟ್ಟವದು. ಅವರನ್ನು ಪ್ರಾಣಿಗಳಿಗಿಂತ ಕನಿಷ್ಠವಾಗಿ ನಡೆಸಿಕೊಂಡ ಜನವರ್ಗವದು. ಆ ಸಮಾಜದಲ್ಲಿ ಸಂಕುಚಿತ ಮನೋಭಾವ, ಅಷ್ಪಶೃತೆ ಹಾಗೂ ಆದಿವಾಸಿಗಳ ಕುರಿತಾದ ಅಪನಂಬಿಕೆಯೇ ಬುಡಕಟ್ಟುಗಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಯಿತು. ಬುಡಕಟ್ಟುಗಳು ನಮ್ಮ ಸಮಾಜದಲ್ಲಿ ಸಹಜವಾಗಿ ಹೊಂದಿದ್ದ ಅನೌಪಚಾರಿಕ ಶಿಕ್ಷಣ ವ್ಯವಸ್ಥೆಯೇ ಅದ್ಭುತವಾದುದಾಗಿತ್ತು. ತಮ್ಮ ಹಾಡಿಯ ನಾಯಕನಿಂದಾಗಿ ಹಿರಿಯರಿಂದ, ಅದೇ ಪರಿಸರದಲ್ಲಿ ಬೆಳೆಯುವ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಅದು ಜೀವನಾನುಭವದ ಶಿಕ್ಷಣವಾಗಿತ್ತು. ಈ ಅನೌಪಚಾರಿಕ ಮಾರ್ಗದಲ್ಲಿ ಸಂಸ್ಕೃತಿಯ ಪ್ರಸಾರದ ಕಲಿಕೆ ಮಕ್ಕಳಿಗೆ ಲಭ್ಯವಾಗುತ್ತಿತ್ತು. ಇಂದಿನ ಸಾಕ್ಷರತಾ ಶಿಕ್ಷಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದ್ದ ತಲೆ-ತಲಾಂತರಗಳಿಂದ ಮೌಖಿಕವಾಗಿ ಸಾಗಿ ಜಾನಪದೀಯ ಶಿಕ್ಷಣ ಪರಂಪರೆ ಬುಡಕಟ್ಟುಗಳ, ಅತ್ಯಂತ ರೋಚಕ ಸಂಗತಿಯಾಗಿದೆ. ಬೇಟೆ, ಆಹಾರ ಸಂಗ್ರಹಣಾ ವಿಧಾನ, ನಾಟಿ ಔಷಧಿ ವಿದ್ಯೆ, ಪ್ರಾಣಿಗಳ ಚಲನವಲನ, ನೀರಿನ ಮೂಲ, ನಿಸರ್ಗದ ವಿಕೋಪಗಳ ಪೂರ್ವಜ್ಞಾನ, ಸ್ವಯಂ ರಕ್ಷಣಾ ಕಲೆ, ದೈಹಿಕ ಕಸರತ್ತು, ವಾಸನಾಶಕ್ತಿ, ಕಾಡಿನ ಉತ್ಪಾದನೆಗಳ ಸಂಗ್ರಹ, ಹಕ್ಕಿಪಕ್ಷಿಗಳ ಕುರಿತು ಅರಿವು ಹಾಗೂ ತಮ್ಮ ಜನವರ್ಗದಲ್ಲಿ ಆಚರಿಸಬೇಕಿರುವ ಸಂಪ್ರದಾಯಗಳ ಶಿಕ್ಷಣ ಅವರಿಗೆ ಸಂಪ್ರದಾಯಕವಾಗಿ ದೊರೆಯುತ್ತಿತ್ತು. ತಮ್ಮ ಸಮುದಾಯದಲ್ಲಿ ಪಾಲಿಸಲೇಬೇಕಾದ ‘ನಿಷಿದ್ಧ’ಗಳ ತಿಳುವಳಿಕೆ ಜೀವನದ ಭಾಗವೇ ಆಗಿರುತ್ತಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಬುಡಕಟ್ಟು ಸಮುದಾಯಗಳ ಶಿಕ್ಷಣ

ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಆದಿವಾಸಿಗಳ ಕುರಿತಾಗಿ ಇದ್ದ ನಿರ್ಲಕ್ಷ್ಯದ ಧೋರಣೆಯಿಂದಾಗಿ ಅವರು ಮೂಲೆಗುಂಪಾಗಿದ್ದರು. ಬುಡಕಟ್ಟು ಸಮುದಾಯಗಳು ಹೊಂದಿದ್ದ ನಿಸರ್ಗ ಸಹಜಗುಣಗಳಾದ ನಾಚಿಕೆಯ ಸ್ವಭಾವ, ಅಲೆಮಾರಿತನ ಯಾರೊಂದಿಗೂ ನೇರವಾಗಿ ವ್ಯವಹಾರಿಸದ ಮುಜುಗರ ಸ್ವಭಾವಗಳಿಂದ ಅವರು ಶಿಕ್ಷಣದಿಂದ ವಂಚಿತರಾಗಬೇಕಾಯಿತು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು, ಲೇವಾದೇವಿಯವರು ವ್ಯಾಪಾರಿಗಳು, ಜಮೀವುದಾದರು, ಪುರೋಹಿತವರ್ಗದವರಿಂದ ಬುಡಕಟ್ಟು ವರ್ಗಗಳು ಸದಾ ಅನ್ಯಾಯಕ್ಕೆ ಒಳಗಾದವು. ನೇರವಾದ ಶಿಕ್ಷಣದ ಕಾರ್ಯಕ್ರಮಗಳೇನು ಅವರಿಗೆ ದೊರೆಯಲಿಲ್ಲ. ಇಂತ ಸಂದರ್ಭದಲ್ಲಿ ಬುಡಕಟ್ಟು ಜನಾಂಗದ ಶಿಕ್ಷಣದ ಆಶಾದೀಪವಾದವರು ಕ್ರಿಶಚಿಯನ್ ಮಿಷನರಿಗಳು. ಆದ್ದರಿಂದ ಕ್ರಿಶ್ಚಿಯನ್ ಮಿಷನರಿಗಳನ್ನು ಬುಡಕಟ್ಟು ಸಮುದಾಯಗಳ ಶಿಕ್ಷಣ ಪ್ರಸಾರದ ಆರಂಭಿಕರೆಂದು ಗುರುತಿಸಲಾಗುತ್ತದೆ. (ಸುಜಾತಾ, ೧೯೮೭ ಭಾರತದಲ್ಲಿ ನಿರ್ಲಕ್ಷಿತ ‘ಯೆನಾಡಿ’ ಬುಡಕಟ್ಟು ಶಿಕ್ಷಣ) ಮೂಲಕ: ಇಲ್ಲಿತ ಶೋಷಿತತರನ್ನು ಕ್ರೈಸ್ತ ಮತಕ್ಕೆ ಮಾತಾಂತರಗೊಳಿಸುವ ಉದ್ದೇಶ ಹೊಂದಿದ್ದರು. ದೇಶಿಯರ ಆವಕೃಪೆಗೆ ಒಳಗಾದ ಬುಡಕಟ್ಟುಗಳು ಕ್ರೈಸ್ತರ ಅನುಕಂಪಕ್ಕೆ ಮಾರುಹೋದವು. ಮತಾಂತರ ಹೊಂದಿದ್ದು ಈಗ ಇತಿಹಾಸ (ಶ್ರೀನಿವಾಸ, ೧೯೬೨)

ಸ್ವಾತಂತ್ರ್ಯ ಪೂರ್ವದಲ್ಲಿ ದಾಖಲಿಸಲೇ ಬೇಕಾದದ್ದು ಎರಡು ಸಾಮಾಜಿಕ ಚಳುವಳಿಗಳು. ಒಂದು ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ನಡೆದ ರಾಷ್ಟೀಯ ಚಳುವಳಿಹಾಗೂ ಇನ್ನೊಂದು ಮಹಾರಾಷ್ಟದಲ್ಲಿ ಗೋದಾವರಿ ಪುರಲೇಕರ ರವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಗಳು ಬುಡಕಟ್ಟು ಜನಾಂಗದ ಶಿಕ್ಷನಕ್ಕೆ ಸಾಂಸ್ಕೃತಿಕ ಸ್ವರೂಪ ನೀಡಿದವು. ಗಾಂಧೀಜಿಯವರ ತತ್ವಗಳಿಂದ ಪ್ರಭಾವಿತರಾದ ಜನಪ್ರಿಯರಾದ ಠಕ್ಕರ್ ಬಾಪು ಅವರು ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಆಶ್ರಮ ಶಾಲೆಗಳನ್ನು ತೆರೆದರು. ಗೋದಾವರಿ ಪುಲೇಕರರವರ ತಾನೆ ಜಿಲ್ಲೆಯಲ್ಲಿ ಶಾಲೆಯನ್ನೂ ಆರಂಭಿಸಿದರು.

ಸಾಕ್ಷರತೆಯಲ್ಲಿ ಒಟ್ಟು ವಿದ್ಯಾರ್ಥಿಗಳು ಸಂಖ್ಯೆಗಳ ಮತ್ತು ಬುಡಕಟ್ಟಿನ ಮಕ್ಕಳ ಸಂಖ್ಯೆಗಳ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ೧೦೦೦ ಹೆಣ್ಣು ಮಕ್ಕಳಲ್ಲಿ ಕೇವಲ ೦೨ ಮಾತ್ರ ಸಾಕ್ಷರರಾಗಿದ್ದರೆಂದರೆ, ಆಗಿನ ಶಿಕ್ಷನದ ಸಿತ್ಥಿಯನ್ನು ಊಹಿಸಲು ಸಾಧ್ಯ, ೧೯೩೧ರಲ್ಲಿ ಭಾರತದ ಒಟ್ಟು ಸಾಕ್ಷರತೆಯ ಪ್ರಮಾಣ ೬.೫೦% ಇದ್ದರೆ, ಬುಡಕಟ್ಟುಗಳ ಸಾಕ್ಷರತೆಯು ಕೇವಲ೦.೭೫% ಇರುವುದು ಕೊಂಡುಬರುತ್ತದೆ. ಸಾಮಾಜಿಕ ಜನಾಂದೋಲನಗಳು. ಮಿಷನರಿಗಳ, ಪ್ರಯತ್ನಗಳಿಂದಾಗಿ, ಕ್ರಮೇಣವಾಗಿ ಬುಡಕಟ್ಟು ಜನಸಮುದಾಯದ ಶಿಕ್ಷನ ೦೯೫೦ ಸುಮಾರಿನಲ್ಲಿ ಆಶಾದಾಯಕ ಬೆಳವಣಿಗೆಯ ಕಡೆಗೆ ಮುಕಮಾಡಿತೆಂದು ಹೇಳಬಹುದಾಗಿದೆ.

ಸ್ವಾತಂತ್ರ್ಯ ನಂತರದಲ್ಲಿ ಬುಡಕಟ್ಟು ಸಮುದಾಯಗಳ ಶಿಕ್ಷಣ

ಬುಡಕಟ್ಟು ಸಮುದಾಯಗಳ ಜೀವನಾಭಿವೃದ್ದಿ ಹಾಗೂ ಶಿಕ್ಷಣ, ಸಂಸ್ಕೃತಿಯ ಕುರಿತು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರು ಹೇಳಿದ್ದು ಹೀಗೆ ಆಧುನಿಕತೆ ಹಾಗೂ ಸುಧಾರಣಾವಾದದ ನೆಲೆಯಲ್ಲಿ ಬುಡಕಟ್ಟುಗಳ ಸಂಸ್ಕ್ರತಿಯನ್ನು ನಿರ್ಲಕ್ಷಿಸುವ ಹಾಗಿಲ್ಲ. ಶಿಕ್ಷನ, ಪಟ್ಯಕ್ರಮ ಹಾಗು ಬುಡಕಟ್ಟು ಸಮುದಾಯಗಳ ಸಂಸ್ಕೃತಿಯ ಪೂರಕ ವ್ಯವಸ್ಥೆಯು ಅಷ್ಟು ಸುಲಭಕಾರ್ಯವಲ್ಲ. ಔಪವಾರಿಕ ಶಿಕ್ಷಣದಿಂದಲೇ  ನಾವು ಬುಡಕಟ್ಟುಗಳ ಶಿಕ್ಷಣ ಅಭಿವೃದ್ದಿ ಸಾಧಿಸಲು ಸಾಧ್ಯವಿಲ್ಲ ಅದಕ್ಕಾಗಿ ವಿಶೇಷ ಶಿಕ್ಷಣದ ಕ್ರಮಗಳನ್ನು ಅವರ ಅಗತ್ಯಗಳ ಅನುಸಾರ ರೂಪಿಸಬೇಕಾದ ತುರ್ತು ಅಗತ್ಯವಿದೆ (ಜವಾಹರಲಾಲ್ ನೆಹರು, ಆದಿವಾಸಿ, ೧೯೬೫) ಇದು ನೆಹರುರವರಿಗೆ ಅವರು ಸ್ವಾತಂತ್ರ್ಯ ನಂತರ ಬುಡಕಟ್ಟು ಸಮುದಾಯದ ಶಿಕ್ಷಣದ ಕುರಿತು ಇದ್ದ  ಕಳಕಳಿಹಾಗೂ ಮುನ್ನೋಟವನ್ನು ತಿಳಿಸುತ್ತದೆ.

ಬುಡಕಟ್ಟು ಶಿಕ್ಷಣ ಹಾಗೂ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವ ಕೆಲಸ ಸೌಲಭ್ಯಗಳು ಸಂಬಿಧಾನದಲ್ಲಿ ರೂಪಿತವಾದವು. (ಕಲಂ ೪೬, ಪರಿಶಿಷ್ಟಜಾತಿ -ಜನಾಂಗದ ಶೈಕ್ಷಣಿಕ ಹಾಗೂ ಆರ್ಥಿಕ ಹಿತವನ್ನು ರಕ್ಷಿಸುವುದು ರಾಜ್ಯದ ಹೊಣೆಗಾರಿಕೆಯಾಗಿದೆ. ರಾಜ್ಯವು ಈವರ್ಗಗಳನ್ನು ಸಾಮಾಜಿಕ ಅನ್ಯಾಯ ಹಾಗೂ ಎಲ್ಲ ಬಗೆಯ ಆಕ್ರಮಣಗಳಿಂದ ರಕ್ಷಿಸಬೇಕು.) ಕೋಠಾರಿ ಶಿಕ್ಷಣ ಆಯೋಗವು (೧೯೬೪-೬೬)ರಲ್ಲಿ ತನ್ನ ಶಿಫರಸ್ಸುಗಳಲ್ಲಿ ಬುಡಕಟ್ಟು ಜನಾಂಗ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ತಿಳಿಸಿತು, ‘ನಿರ್ಲಕ್ಷಿತ ಕ್ಷೇತ್ರಗಳಿಗೆ ಶಿಕ್ಷಣವನ್ನು ಪ್ರಸಾರ ಮಾಡಬೇಕೆಂದು ಸೂಚಿಸಿತು.” ಗುಡ್ಡಗಾಡು ಪ್ರದೇಶಗಳು ಆದ್ಯತೆಯ ಕೇಂದ್ರಗಳಾಗಿ ಪರಿವರ್ತಿತವಾದವು. ಪ್ರಾಥಮಿಕ ಶಾಲಾ ಶಿಕ್ಷಣ, ವಸತಿ ಶಿಕ್ಷಣವನ್ನು  ಮಾದರಿಯ ಆಶ್ರಮ ಶಾಲೆಗಳ ಸ್ಥಾಪನೆ, ಶಾಲಾ ಆರಂಭದ ಎರಡು ವರ್ಷಗಳ ಶಿಕ್ಷಣ, ಬೋದನಾ ಮಾಧ್ಯಮ ಬುಡಕಟ್ಟು ಸಮುದಾಯದ ಬಾಷೆಯೆ ಆಗಿರಬೇಕೆಂದು, ಆನಂತರ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ಶಿಫಾರಸ್ಸು ಮಾಡಿತು. ಬುಡಕಟ್ಟು ಸಮುದಾಯಗಳ ಶಿಕ್ಷಣದ ಬೆಳವಣಿಗೆ ರಾಷ್ಟ್ರೀಯ ಶಿಕ್ಷಣ ನೀತಿ ೧೧೯೮೬ (NPE) ಅತೀ ಪ್ರಮುಕವಾದ ಕೊಡುಗೆಗಳನ್ನು ನೀಡಿತೆಂದು ಹೇಳಬಹುದು. ಬುಡಕಟ್ಟು ವಾತಾವರಣದಲ್ಲಿ  ಬೋಧಿಸಲು ಅರ್ಹ ಹಾಗೂ ಅನುಭವಿ ಶಿಕ್ಷಕರ ನೇಮಕಾತಿಯಾಗಬೇಕೆಂದು, ಶಿಕ್ಷಕರನ್ನು ಈ ಪ್ರದೇಶಗಳಿಗೆ ಆಕರ್ಷಿಸಲು ಸರ್ಕಾರ ಪ್ರಯತ್ನಿಸಬೇಕೆಂದು ಸಲಹೆ ನೀಡಿತು. ರಾಷ್ಟ್ರೀಯ ಶಿಕ್ಷಣ ನೀಡಿ (ನಡಾವಳಿ ಕಲಂ-೪ರ ಪ್ರಕಾರ) ಬುಡಕಟ್ಟುಗಳಿಗೆ ಶೈಕ್ಷಣಿಕ ಸಮಾನ ಅವಕಾಶಗಳನ್ನು ನೀಡುವುದು. ಆ ಮೂಲಕ ಸಾಮಾಜಿಕ ಈಕ್ಯತೆ, ಸಾಮಾಜಿಕ ಸಾಮರಸ್ಯ ಮೂಡಿಸಬೇಕು. ಏಕರೂಪದ ಶಲೆಗಳ ಸ್ಥಾಪನೆಗೂ ನೀತಿ ಶಿಫಾರಸ್ಸು ಮಾಡಿತು. ಕಳೆದ ಏದು ದಶಕಗಳಲ್ಲಿ ಬುಡಕಟ್ಟುಸಾಕ್ಷರತಾ ಪ್ರಮಾಣವನ್ನು ಈ ಕೆಳಗಿನಂತೆ ಮೋಡಬಹುದು.

ಜನಗಣತಿ

ಸಾಮಾನ್ಯ ಸಾಕ್ಷರತೆ

ಬುಡಕಟ್ಟುಸಾಕ್ಷರತೆ

೧೯೬೧ ೨೪.೦೦% ೧೮.೫೩%
೧೯೭೧ ೨೯.೪೫% ೧೧.೩೦%
೧೯೮೧ ೩೬.೨೩% ೦೬.೩೫%
೧೯೯೧ ೫೨.೩೩% ೨೯.೬೦%
೨೦೦೧ ೬೫.೩೮% ೪೭.೧೦%

ಆಧಾರ: ಬುಡಕಟ್ಟು ವ್ಯವಹಾರಗಳ ಸಚಿವಾಲಯ ವಾರ್ಷಿಕ ವರದಿ, ೨೦೦೬

ಐದನೇ ಶಿಕ್ಷಣದ ಅಖಿಲ ಭಾರತದ ಸರ್ವೆಕ್ಷಣವು ಬುಡಕಟ್ಟು ಸಮುದಾಯಗಳ ಶಿಕ್ಷಣ ಸ್ಥಿತಿಗತಿಯ ಅಂಕಿ-ಸಂಶಯಗಳನ್ನು ನೀಡುತ್ತದೆ. ಅದರಲ್ಲಿ ೮೩% ಬುಡಕಟ್ಟುಗಳು ೧ ಕಿ.ಮಿ. ಅಂತರದಲ್ಲಿ ಶಾಎಯನ್ನು ಪಡೆದಿವೆ. ೧೩೯% ಜನಸಮುದಾಯಕ್ಕೆ ಶಾಲೆಯ ೧.೫ ಕಿ.ಮಿ. ಅಂತರದಲ್ಲಿ  ಲಭ್ಯವಿಲ್ಲ. ೮.೩% ಬುಡಕಟ್ಟುಗಳಿಗೆ ೨. ಕಿ ಮಿ ಅಂತರದಲ್ಲಿ ಶಾಲೆಗಳ  ಲಭ್ಯತೆ ಇಲ್ಲ ಎಂದು ಸೂಚಿಸುತ್ತದೆ. ಸುಮಾರು  ೨೫೦೦೦ ಬುಡಕಟ್ಟು ನೆಲೆಗಳ ಶಾಲಾಶಿಕ್ಷನ ವ್ಯವಸ್ತೆ ಹೊಂದಿಲ್ಲವೆಂದು ತಿಳಿಸಿತು, ಪ್ರೌಢಶಿಕ್ಷಣದ ಲಭ್ಯತೆ ತೀರಾ ಹಿಂದುಳಿದ ಸ್ಥಿತಿಯನ್ನು ಪ್ರಸ್ತಾಪಿಸಿ ೧೮.೮% ಪರಿಶಿಷ್ಟರು ಮಾತ್ರ ಈ ಸೌಲಭ್ಯ ಪಡೆದುದಾಗಿ ತಿಳಿಸಿತು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸಂಘ ಸಂಸ್ಥೆಗಳು, ಸರ್ಕಾರೇತರ ಸ್ವಯಂ ಸಂಸ್ಥೆಗಳು ಶಿಕ್ಷಣ ಕಶರ್ಯಗಳಿಗೆ ಪ್ರಯತ್ನಿಸಬೇಕೆಂದು ತಿಳಿಸಿತು.

ಕರ್ನಾಟಕ ಬುಡಕಟ್ಟು ಶಿಕ್ಷಣದ ಅವಲೋಕನ

ಬಾರತತದ ಸಂವಿಧಾನದ ಪ್ರಕಾರ ಕರ್ನಾಟಕದಲ್ಲಿ  ೫೦ ಉಪಜಾತಿಗಳ್ನು ಪರಿಶಿಷ್ಟವರ್ಗಗಳಿಗೆ ಸೇರಿಸಲಾಗಿದೆ. ಇವುಗಳಲ್ಲಿ ಕೊರಗಹಾಗೂ ಜೇನುಕುರುಬಬುಡಕಟ್ಟುಗಳನ್ನು ಪ್ರಾಚೀನ ಬುಡಕಟ್ಟುಗಳೆಂದು ಗುರುತಿಸಲಾಗಿದೆ. ೨೦೦೧ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಪರಿಶಿಷ್ಟ ವರ್ಗಗಳ ಸಂಖ್ಯೆ ೨೪.೬೩,೯೮೬ ಇದ್ದು ಒಟ್ಟು ಜನಸಂಖ್ಯೆಯ ೬.೫೫% ಇದೆ. ಕರ್ನಾಟಕದ  ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ ಬುಡಕಟ್ಟುಗಳ ಶೈಕ್ಷಣೀಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗೆ ಸರ್ಕಾರ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದ ಅನುದಾನ ಹಾಗೂ ರಾಜ್ಯಪಾಲುದಾರಿಕೆಯಲ್ಲಿ ಅನೇಕ ಕಾರ್ಯಕ್ರಮಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ೧೯೯೧ರಲ್ಲಿ ಪರಿಶಿಷ್ಟವರ್ಗಗಳ ನಿರ್ದೇಶನಾಲಯವನ್ನು ತೆರೆಯಲಾಗಿದೆ. ಅತಿಹೆಚ್ಚು ಬುಡಕಟ್ಟು ಜನಸಂಕ್ಯೆ ಹೊಂದಿರುವ ಐದು ಜಿಲ್ಲೆಗಳಾದ ಮೈಸೂರು, ಕೊಡಗು, ಚಿಕ್ಕಮಂಗಳೂರು, ದಕ್ಷಣ ಕನ್ನಡ ಹಾಗೂ ಚಾಮರಾಜನಗರಗಳಲ್ಲಿ ಬುಡಕಟ್ಟು ಅಭಿವೃದ್ದಿ ಕೇಂದ್ರಗಳನ್ನು ತೆರೆಯಲಾಗಿದೆ. ೨೦೦೧-೦೨ರಲ್ಲಿ ಚಿತ್ರದುರ್ಗ, ಬೆಳಗಾವಿ, ರಾಯಚೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬುಡಕಟ್ಟು ಕಲ್ಯಾಣಾಧಿಕಾರಿಗಳನ್ನು ನೇಮಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣಾಧಿಕಾರಿಗಳು ಪರಿಶಿಷ್ಟವರ್ಗದ ಶಿಕ್ಷಣದ ಹೊಣೆಗಾರಿಕೆ ಹೊತ್ತು ಕೊಂಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ಸಮುದಾಯಗಳ ಸಾಕ್ಷರತೆ ಹಾಗೂ ಶಿಕ್ಷಣ ಪೂರಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ, ೨೦೦೧ ಜನಗಣತಿ ಪ್ರಕಾರ ಕರ್ನಾಟಕದ ಸಾಮಾನ್ಯ ಸಾಕ್ಷರತೆ ೬೨% ಪ್ರತಿಶತವಿದ್ದು ಬುಡಕಟ್ಟುಗಳ ಸಾಕ್ಷರತೆಯ ೪೮.೦೨%ರಷ್ಟು ಕಂಡುಬಂದಿದೆ. ಪುರುಷರಲ್ಲಿ ೫೩.೦೨% ಹಾಗೂ ಮಹಿಳೆಯರಲ್ಲಿ ೩೬.೦೬% ಸಾಕ್ಷರತೆ ಕಂಡು ಬಂದಿದೆ. ಸಮಾಜಕಲ್ಯಾಣ ಇಲಾಖೆ, ಕೇಂದ್ರದ ಅನುದಾನ ಬಳಸಿಕೊಂಡು ತನ್ನದೆಯಾದ ಶಿಕ್ಷಣ ಯೋಜನೆಗಳನ್ನು ಜಾರಿ ಮಾಡಿದೆ. ಬುಡಕಟ್ಟು ಮಕ್ಕಳಿಗಾಗಿ ಆಶ್ರಮ ಶಾಲೆಗಳು (ವಸತಿ ಮಾದರಿಯ ಶಾಲೆಗಳು, ೧೨೨ ಅಲ್ಲಿಯ ೯ ೨೦೦ ಮಕ್ಕಳು  ಓದುತ್ತಿದ್ದಾರೆ) ಉಚಿತ ಮೆಟ್ರೀಕ್ ಪೂರ್ವ ಹಾಸ್ಟೇಲ್‌ಗಳು (ಈಗ ಹುಡುಗರಿಗಾಗಿ ೭೨ ಹಾಗೂ ಹುಡುಗಿಯರಿಗಾಗಿ ೨೦ ಹಾಸ್ಟೇಲ್‌ಗಳು ಕಾರ್ಯ ನಿರತವಾಗಿದ್ದು. ೪೯೦೦ ಮಕ್ಕಳು ಇತರ ಲಾಭಪಡೆಯುತ್ತಿದ್ದಾರೆ) ೧೦ ಶಾಲಾ ಸಂಕಿರ್ಣಗಳು ಹಾಗೂ ಕೇಂದ್ರೀಯ ವಸತಿ ಶಾಲೆಗಳ ಕಾರ್ಯನಿರತವಾಗಿವೆ. (೦೨ ಇದ್ದು ೨೨೬ ಮಕ್ಕಳು ಇದ್ದಾರೆ) ಪರಿಶಿಷ್ಟ ಶಿಕ್ಷಣಕ್ಕಾಗಿ ಅನುದಾನಿತ ಶಾಲಾ ಕಾಲೇಜುಗಳು ಇವೆ. ಉಚಿತ ಪಠ್ಯಪುಸ್ತಕ, ವಸತಿ ಹಾಗೂ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ವಿಧ ವೃತ್ತಿಕೋರ್ಸುಗಳಲ್ಲಿ ಮೀಸಲಾತಿ ಸೌಲಭ್ಯವಿದ್ದು, ಇಂಜನಿಯರಿಂಗ್ ವೈದ್ಯಕೀಯ ಶಿಕ್ಷಣಕ್ಕಾಗಿ ಅವಕಾಶವಿದೆ. ಪರೀಕ್ಷೆಯಲ್ಲಿ ರ‍್ಯಾಂಕ್‌ಗಳಿಸುವ ಮಕ್ಕಳಿಗೆ ಬಹುಮಾನ, ಪದವಿ ಹಾಗೂ ಉನ್ನತ ಶಿಕ್ಷಣಕ್ಕೆ ಸಾಲಸೌಲಭ್ಯ ಕಲ್ಪಿಸಲಾಗಿದೆ. ‘ಬುಕ್‌ಬ್ಯಾಂಕ್’ ಎನ್ನುವ ಪುಸ್ತಕ ನೀಡುವ ಸೌಲಭ್ಯವಿದ್ದು, ಎಂ. ಫಿಲ್,ಪಿ, ಹೆಚ್,ಡಿ ಸಂಶೋಧನೆಗೆ ಹಣಕಾಸಿನ ಸೌಲಭ್ಯವನ್ನು ನೀಡಲಾಗುತ್ತಿದೆ ಬುಡಕಟ್ಟು ವರ್ಗದ ಪ್ರತಿನಿಧಿಗಳಿಗೆ ಕರಕುಶಲ ತರಬೇತಿ, ಹೊಲಿಗೆ ತರಬೇತಿ, ಡ್ರಾಯಿಂಗ್, ಪೆಂಟಿಂಗ್, ತರಬೇತಿಗಳು ಚಾಲನೆಯಲ್ಲಿವೆ. ಸ್ವಯಂ ಜೀವನ ನಡೆಸಲು ಸಶಕ್ತಿಗೊಳಿಸುವ ಅಲ್ಪಾವಧಿ ತರಬೇತಿ ಶಿಕ್ಷಣ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಜನಪ್ರಿಯವಾಗಿವೆ. ಇಲಾಖೆಯು ೨೭೮ ಸಂಸ್ಥೆಗಳನ್ನು ನಡೆಸುತ್ತಿದ್ದು, ೧೭೬೪೦ ಮಕ್ಕಳು ಲಾಭಪಡೆಯುತ್ತಿದ್ದಾರೆ. (ವಿವರವಾದ ಮಾಹಿತಿಗೆ ಬುಡಕಟ್ಟು ಕಲ್ಯಾಣ ನಿರ್ದೇಶನಾಯಲದ ಮಾಹಿತಿ ಪುಸ್ತಕವನ್ನು ನೋಡಬಹುದು) ಸರ್ಕಾರದ ಜೊತೆಗೆ ಸರ್ಕಾರೇತರ ಸಂಘ ಸಂಸ್ಥೆಗಳು ಬುಡಕಟ್ಟು ಜನಾಂಗದ ಅಭಿವೃದ್ದಿಗಾಗಿ ದುಡಿಯುತ್ತಿವೆ. ಡಾ. ಸುದರ್ಶನರವರ ನೇತೃತ್ವದ ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಬಿಳಿಗಿರಿ ರಂಗನಬೆಟ್ಟದಲ್ಲಿ ಕಾರ್ಯ  ಪ್ರವೃತ್ತವಾಗಿದೆ. ಸೋಲಿಗ ಮಕ್ಕಳ ಶಿಕ್ಷಣದ ಹೊಸ ಪ್ರಯೋಗಗಳು ಇಲ್ಲಿ ಸಾಗಿದೆ. ಹೆಗ್ಗಡದೇವನ ಕೋಟೆಯ ವಿವೇಕಾನಂದ ಯುವ ಕೇಂದ್ರ ಶಿಕ್ಷಣದ ಪ್ರಸಾರ ಮಾಡುತ್ತದೆ. ವಿಶ್ವವಿದ್ಯಾಲಯಗಳು ಈ ದಿಸೆಯಲ್ಲಿ ಕಾರ್ಯ ಪ್ರವೃತ್ತವಾಗಿದ್ದು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಬುಡಕಟ್ಟು ಅಧ್ಯಯನ ವಿಭಾಗವನ್ನು ಪ್ರಾರಂಭಿಸಿ, ಕರ್ನಾಟಕದ ಬುಡಕಟ್ಟು ಶಿಕ್ಷಣ ಸಂಶೋಧನೆ ಹಾಗೂ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗೆ ಸತತವಾಗಿ ಕಾರ್ಯ ಪ್ರವೃತ್ತವಾಗಿ ಪುಸ್ತಕ ಪ್ರಕಟಣೆ, ಕಾರ್ಯಗಾರ ವಿಚಾರಗೋಷ್ಠಿ, ಚಿಂತನ ಮಂಥನ ಮಾಡುತ್ತಿದೆ. ಇದು ಶ್ಲಾಘನೀಯ ಕಾರ್ಯವಾಗಿದೆ. ರಾಜ್ಯಸರ್ಕಾರದಡಿಯಲ್ಲಿ ‘ಬುಡಕಟ್ಟು ಸಂಶೋಧನಾ ವಿಭಾಗವು’ ೨೦೦೪-೨೦೦೫ರಿಂದ ಕಾರ್ಯ ಆರಂಭಿಸಿದೆ. ಸಂಶೋಧನೆ ತರಬೇತಿ ಹಾಗೂ ಪ್ರಕಟನಾ ವಿಭಾಗ ಹೊಂದಿರುವ ಇಲಾಖೆಯು, ಕೇಂದ್ರದೊಡನೆ ಸೂಕ್ತ ಸಮನ್ವಯ ಸಾಧಿಸಿ ರಾಜ್ಯದಲ್ಲಿ ಬುಡಕಟ್ಟು ಜನಾಂಗದ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಬುಡಕಟ್ಟು ಸಮುದಾಯವು ಶಿಕ್ಷಣ ತಜ್ಞರ, ಆರ್ಥಿಕತಜ್ಞರ ಗಮನಸೆಳೆದಿದೆ. ಶಿಕ್ಷಣದ ಕಲ್ಯಾಣಕ್ಕಾಗಿ ವ್ಯಾಪಕವಾಗಿ ಕಾರ್ಯಕ್ರಮಗಳು ಜಾರಿಯಾಗಿವೆ. ಮುಂದಿನ ದಿನಗಳು ಬುಡಕಟ್ಟು ಸಮುದಾಯಗಳ ಅಭಿವೃದ್ದಿಯನ್ನು ಸಾಧಿಸಬಲ್ಲವು ಎಂಬ ಆಶಾವಾದವನ್ನು ನಿಶ್ಚಿತವಾಗಿ ಹೊಂದಬಹುದಾಗಿದೆ.

* * *