ಪೀಠಿಕೆ

ಕರ್ನಾಟಕದ ಸೊಗಡು ಮತ್ತು ಸಂಸ್ಕೃತಿಗೆ ಕೆಲವು ಬುಡಕಟ್ಟು, ಅಲೆಮಾರಿ ಜನಾಂಗಗಳು ತಮ್ಮದೇ ಆದ ಕೊಡುಗೆಯನ್ನು ನೀಡಿ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಅಂತಹ ಜನಾಂಗಗಳಲ್ಲಿ ಕೊರವ ಜನಾಂಗವೂ ಕೂಡ ಒಂದಾಗಿದೆ. ಕರ್ನಾಟಕದ ಗಂಡು ಮೆಟ್ಟಿನ ಕ್ಷೇತ್ರವಾಗಿರುವ ಉತ್ತರ ಕರ್ನಾಟಕದಲ್ಲಿ ಇವತ್ತಿಗೂ ಕೂಡ ಕುಲಕೋಟಿ ತಮ್ಮಣ್ಣನವರ ಶ್ರೀಕೃಷ್ಣ ಪಾರಿಜಾತ ಬಯಲಾಟ ತನ್ನದೇ ಆದ ಐತಿಹ್ಯವನ್ನು, ಸಾಹಿತ್ಯ ಶ್ರೀಮಂತಿಕೆಯನ್ನು ಹೊಂದಿದೆ. ಈ ಬಯಲಾಟದಲ್ಲಿ ಬರುವ ಕೊರವಂಜಿಯ ಪಾತ್ರವನ್ನು ಇವತ್ತಿಗೂ ಕೂಡ ಜನತೆ ಮರೆಯುತ್ತಿಲ್ಲ. ಈ ಬಯಲಾಟದಲ್ಲಿ ಸತ್ಯ ಭಾಮೆಯ ಅಂತರಂಗವನ್ನು ರಿಯಲು ಪರಮಾತ್ಮನಾದ ಶ್ರೀಕೃಷ್ಣ ಕೊರವಂಜಿಯ ವೇಷಧರಿಸುತ್ತಾನೆ. ಅದೇ ರೀತಿಯಾಗಿ ಶ್ರೀವೆಂಕಟೇಶ ಪಾರಿಜಾತದಲ್ಲಿ  ವಿಷ್ಣುದೇವ ಆಕಾಶರಾಜನ ಮಗಳಾದ ಪದ್ಮವತಿಯ ಮನ ಪರೀಕ್ಷಿಸಲು ಕೊರವಂಜಿಯೆಂಬ ಸ್ತ್ರೀವೇಷದಾರಿಯಾಗುತ್ತಾನೆ. ಅದೇ ರೀತಿಯಾಗಿ ಪ್ರಸನ್ನ ವೆಂಕಟದಾಸಕೃತನಾರದ ಕೊರವಂಜಿ ನಾಟಕದಲ್ಲಿ ರುಕ್ಮಿಣಿಯನ್ನು ರಕ್ಷಿಸಲೋಸುವಾಗ ನಾರದ ಕೊರವಂಜಿಯೆಂಬ ಸ್ತ್ರೀವೇಷಧರಿಸಿ ಅವಳ ಭವಿಷ್ಯದ ಬಗ್ಗೆ ಕಣಿ ಹೇಳಿ ಅವಳನ್ನು ಅಪಾಯದಿಂದ ಪಾರುಮಾಡುತ್ತಾನೆ. ಈ ರೀತಿಯಾಗಿ ಅನ್ಯಾಯದ ವಿರುದ್ದ ಹೋರಾಡಿ ಧರ‍್ಮ ಮತ್ತು ಸತ್ಯದ ರಕ್ಷಣೆಗಾಗಿ ಸೃಷ್ಟಿಕರ್ತನಾದ ದೇವರು ಹೀಗೆ ಕೊರವಂಜಿಯೆಂಬ ಸ್ತ್ರೀವೇಷಧರಿಸಿ ಜಗತ್ತಿನ ಭವಿಷ್ಯವನ್ನು ನುಡಿದಿರುವದರಿಂದ ಕೊರವಂಜಿಯವರನ್ನು ದೈವಾಂಶ ಸಂಭೂದಿತರು ಎಂದು ಕರೆಯಬಹುದಾಗಿದೆ. ಇಂತಹ ಕೊರವಂಜಿಯವರ ಬದುಕು ಶೈಲಿ ಮೊದಲಾದವುಗಳ ಕುರಿತು ನಮ್ಮ ಜನಪದ ಸಾಹಿತ್ಯದಲ್ಲಿ ಕೊರವಂಜಿಯ ಕಾಡುಗಳೆಂಬ ಒಂದು ಪ್ರತ್ಯೇಕವಾದ ಪ್ರಕಾರವೇ ಇದೆ. ಆದರೆ ಅವರ ಆಚಾರ, ವಿಚಾರ, ಸಂಪ್ರದಾಯ ಮೊದಲಾದವುಗಳನ್ನು ಸಮಗ್ರವಾಗಿ ಸಂಶೋಧಿಸಿದವರು ವಿರಳ. ಆದರೂ ಕೂಡ ಕೊರವಂಜಿಯ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುವುದು ಈ ಪ್ರಬಂಧದ ಪ್ರಮುಖ ಗುರಿಯಾಗಿದೆ. ಕೊರವಂಜಿಗಳು ದಕ್ಷಿಣ ಭಾರತದ ಅಲೆಮಾರಿ ಜನಾಂಗಗಳಲ್ಲಿ ಕೊರವರ ಬುಡಕಟ್ಟಿಗೆ ಸೇರಿದಕಣಿ (ಭವಿಷ್ಯ) ಹೇಳುವುದನ್ನು ವೃತ್ತಿಯಾಗಿ ಮಾಡಿಕೊಂಡಿರುವ ಸ್ತ್ರೀಯರಾಗಿದ್ದಾರೆ. ದಕ್ಷಿಣ ಭಾರತದ ತುಂಬೆಲ್ಲಾ ಮಾಡಿಕೊಂಡಿರುವ ಈ ಜನಾಂಗದ ಆಡು ಭಾಷೆಯ ಪದಗಳು ದ್ರಾವಿಡ ಭಾಷೆಗಳಲ್ಲಿ ಹಾಸು ಹೊಕ್ಕಾಗಿದೆ. ಇವರಿಗೆ ತಮಿಳಿನಲ್ಲಿ ಕುರತ್ತಿ, ಕೊರವಂಜಿ, ಎರುಕುಲ ಎಂದು ಕರೆಯಲಾಗುತ್ತದೆ. ಕೆಲವಡೆ ಈ ಕೊರವರಿಗೆ ಕೊರಚ, ಕೊರಮ ಎಂಬ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವರು. ಕೊರಚ ಮತ್ತು ಕೊರಮ ಇವೆರಡೂ ಪ್ರತ್ಯೇಕ ಬುಡಕಟ್ಟುಗಳೆಂಬುದು ಕೆಲವು ವಿದ್ಯಾಂಸರು ಅಭಿಪ್ರಾಯಪಟ್ಟಿದ್ದರೂ ಕೂಡ ಈ ಎರಡೂ ಜನಾಂಗಗಳಲ್ಲಿರುವ ಆಚಾರ-ವಿಚಾರ, ರೂಢಿ ಸಂಪ್ರದಾಯಗಳನ್ನು ಪರಿಶೀಲಿಸಿದಾಗ ಇವೆರಡೂ ಒಂದೇ ಆಗಿವೆಯೆಂದು ಕಂಡುಬರುವುದು ಇನ್ನೂ ಕೆಲವು ವಿದ್ವಾಂಸರ ಪ್ರಕಾರ ತಮಿಳಿನ ಕುರ (ಕುರವಂಜಿ) ನಿಯ ಶಬ್ದದಿಂದ ಕೊರಚ ಹೆಸರು ಬಂದಿರಬಹುದೆಂದು ವಿಶ್ಲೇಷಣೆ ನೀಡುವರು. ಹೀಗಾಗಿ ಯಾವುದೇ ನಿರ್ಧಾರವನ್ನು ಕೈಕೊಳ್ಳುವುದು ಸಾಧ್ಯವಿಲ್ಲ.

ಜನಾಂಗದ ಮೂಲ

ಕೊರವ ಮೂಲದ ಕುರಿತು ಹಲವಾರ ದಂತ ಕಥೆಗಳು ಪರಚಲಿತದಲ್ಲಿರುವ ಕಾರಣದಿಂದ ಇವರ ಮೂಲವೂ ಇನ್ನೂ ಅಜ್ಞಾತವಾಗಿದ್ದರೂ ಕೂಡ ಇವರು ದ್ರಾವಿಡ ಮೂಲದವರು ಎಂಬುದಂತು ಸ್ಪಷ್ಟವಾಗಿದೆ. ಶಿವ ಪರಮಾತ್ಮ ಅರ್ಜುನನ ತಪಸ್ಸುನ್ನು ಪರೀಕ್ಷಿಸಲು ಕಿರಾತನ ವೇಷ ಧರಿಸಿದಾಗ ಪಾರ್ವತಿಯು ಕಿರಾತೆಯ ವೇಷ ಧರಿಸಿರುವದರಿಂದ ವವಳೇ ಕೊರವಿಯೆಂದು ಒಂದು ಕಥೆ ಪ್ರಚಲಿತದಲ್ಲಿದೆ. ಪಾರ್ವತಿ ದೇವಿಯು ಒಮ್ಮೆ ಉರಗ ಒದರ ಹೊಟ್ಟಯಲ್ಲಿ ಬೆಲೆಬಾಳುವ ಹರಳುಗಳನ್ನಿಟ್ಟು ಮೇದಾರನೊಬ್ಬನಿಗೆ ತೊಟ್ಟಿಲೊಂದನ್ನು ತಯಾರಿಸಲು ಆದೇಶಿಸಿದಳಂತೆ ಆಗ ಮೇದಾ ಆ ಹರಳುಗಳ ಕರ ಕರ ಶಬ್ದಕ್ಕೆ ಹೇದರಿ ಹಾವನ್ನು ಮುಟ್ಟಲು ಹಿಂಜರಿದನು. ತದ ನಂತರ ಪಾರ್ವತಿ ಆ ಕಾರ್ಯವನ್ನು ಕೊರಚನೊಬ್ಬನಿಗೆ ಒಪ್ಪಿಸಿದಳು. ಆಗ ಆ ವ್ಯಕ್ತಿ ಹೆದರದೆ ಅ ಉರಗವನ್ನು ಬಿದಿರಿನಂತೆ ಸೀಳಿ ತೊಟ್ಟಿಲು ತಯಾರಿಸಿದಂತೆ ಆಗ ಸಂತೃಪ್ತಳಾದ ಶಿವೆ ತನು ಕಣಿ ಹೇಳಲು ಬಳುಸತ್ತಿದ್ದ ಬಿದಿರಿನ ಮಾಂತ್ರಿಕ ದಂಡೆಯನ್ನು ಕೊಟ್ಟಳಂತೆ. ಅದರಿಂದಾಗಿ ಕೊರವ ಸ್ತ್ರೀಯರು ಕಣಿ ಹೇಳುವದನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಹೀಗೆ ಕೊರವ ಜನಾಂಗದವರು ತಾವು ಪಾರ್ವತಿ ಸಂಶದವರೆಂದು ಕರೆದುಕೊಳ್ಳುವರು.

ಮೂರನೇಯದಾಗಿ ಕೊರವರನ್ನು ಪಾಂಡವರ ವಂಶದವರೆಂದು ಕರೆಯುವರು. ಅದಕ್ಕೊಂದು ಕಥೆ ರೀತಿಯಾಗಿ ಪ್ರಚಲಿತದಲ್ಲಿ. ಒಮ್ಮೆ ಪಾಂಡವರು ಅಗ್ರಜನಾದ ಧರ್ಮರಾಯ ತನ್ನ ಸಹೋದರರ ಜೊತೆ ವನವಾಸದಲ್ಲಿದಾಗ ಆತನನ್ನು ಮೋಹಿಸಿದ ಒಬ್ಬ ಹೆಣ್ಣುಮಗಳು ಕಣಿ ಹೇಳುವಳ ವೇಷಧರಿಸಿ ಆತನನ್ನು ವರಿಸಿದಳು. ಆಕೆಯ ಸಂತಾನವೇ ಕೊರವರೆಂದು ಕರೆಯಲಾಗುತ್ತದೆ. ಇಂತಹ ದಂತ ಕಥೆಗಳನ್ನು ನಂಬಲು ಸಂಶಯಗಳು ಇದ್ದರೂ ಕೂಡ ಕೊರವರು ದಕ್ಷಿಣ ಭಾರತದ ಮೂಲದಿಂದ ಬಂದವರೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇವರು ಹಬ್ ಪಿಕಾ ಎಂಬ ಮುಖಂಡನ ನೇತೃತ್ವದಲ್ಲಿ ದಕ್ಷಿಣ ಕನ್ನಡ ಪ್ರದೇಶವನ್ನು ಆಳುತ್ತಿದ್ದರೆಂದು ಖ್ಯಾತ ವಿದ್ವಾಂಸ ಬುಚನನ್ ಅಭಿಪ್ರಾಯ ಪಟ್ಟಿದ್ದಾನೆ. ಅಬೆದು ಬಾಯಿಸ್ ಇವರನ್ನು ಕಳ್ಳ ಬಂಟರೆಂದು, ಬಿಟ್ಟಿ ತಯಾರಿಸು ಸಾಮಾನುಗಳ ಸರಂಜಾಮುಗಳನ್ನು ಸಾಗಿಸುವ ಅಲೆಮಾರಿಗಳೆಂದು ಕರೆದು ಇವರನ್ನು ಜಿಪ್ಸಿ ಮತ್ತು ಹಪ್ಪಿಗಳಿಗೆ ಹೊಲಿಸಿದ್ದಾರೆ. ಬೇಹುಗಾರಿಕೆ ನಡೆಯಿಸಿ ತನ್ನ ಶತ್ರುಗಳನ್ನು ಸೆದೆಬಡೆಯಲು ಟಿಪ್ಪು ಸುಲ್ತಾನ್ ತನ್ನ ಸೈನ್ಯದಲ್ಲಿ ಕಳ್ಳ ಬಂದರ ಎಂಬ ಉಲ್ಲೇಖಗಳು ದೊರೆತಿವೆ.

ವಾಸಸ್ಥಳ

ಕೊರವರು ಅಲೆಮಾರಿ ಜನಾಂಗದವರು ಆಗಿದ್ದರೂ ಕೂಡ ಇದೀಗ ಗ್ರಾಮಾ ಪಟ್ಟಣಗಳಲ್ಲಿ ನೆಲೆ  ಕಂಡುಕೊಂಡಿದ್ದಾರೆ. ಆದರೂ ಕೂಡ ಅನೇಕರಿಗೆ  ನಿಗಧಿಯಾದ ಸ್ಥಳ ಎಂಬುದೇ ಇಲ್ಲ ಸಮಾನ್ಯವಾಗಿ ಅಲೆಮಾರಿ ಕೊರವರು ಊರ ಹೊರಭಾಗದಲ್ಲಿ ಕೊಲ್ಲಾರಿ ಆಕಾರದ ತಾತ್ಕಾಲಿಕ ಗುಡಿಸಲು ಕಟ್ಟಿ ಅಲ್ಲಿ ತಮ್ಮ ಬಿಡಾರ ಹೂಡುವರು. ಕೆಲ ದಿನಗಳ ತರುವಾಯು ಅಲ್ಲಿಂದ ಮತ್ತೊಂದು ಊರಿಗೆ  ತೆರಳುವವರು ಇವರು ತಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸಲು ಎತ್ತು ಅಥವಾ ಕತ್ತೆಗಳನ್ನು ಬಳಸುವವರು. ಆದರೆ ಕಳ್ಳ ಕೊರವರು ಗುಂಪು ತಮ್ಮ ಬಿಡಾರವನ್ನು ಊರಿನ ಹೊರಭಾಗದಲ್ಲಿ ಹಾಕ ಹಾಕದೆ ಅರಣ್ಯದಲ್ಲಿನ ಸುರಕ್ಷಿತ ಸ್ಥಳವೊಂದನ್ನು ಆಯ್ಕೆ ಮಾಡಿಕೊಳ್ಳುವರು. ಕೊರವರ ಪಂಗಡಗಳು: ಮೂಲತಃ ಕೊರವರು ಒಂದೇ ಬುಡಕಟ್ಟಿನವರಾದರೂ ಕೂಡಾ ಅವರ ವರತ್ತಿಗಳಿಗನುಗುಣವಾಗಿ ಭಿನ್ನ ಭಿನ್ನ ಪಂಗಡಗಳನ್ನು ಮಾಡಿಕೊಂಡಿದ್ದಾರೆ. ಮುಖ್ಯವಾಗಿ ನಾಲ್ಕು ಪಂಗಡಗಳು ಈ ಕೆಳಗಿನಂತಿವೆ.

೧. ಊರ ಕೊರವರು
೨. ಉಪ್ಪು ಕೊರವರು,
೩. ಕುಂಚಿ ಕೊರವರು
೪. ಸನಾದಿ ಕೊರವರು,

ಧರ್ಮ ದೇವತೆಗಳು

ಒಂದು ಕಡೆ ನೆಲೆ ನಿಂತುಹಳ್ಳಿ-ಪಟ್ಟಣಗಳಲ್ಲಿ ವಾಸಿಸುವ ಕೊರವರು ಮೇಲ ಜಾತಿಯವರೊಡನೆ ಬಂದ ಸಂಪರ್ಕದ ಫಲವಾಗಿ ಗ್ರಾಮೀಣ ದೇವತೆಗಳನ್ನು ಪೂಜಿಸುತ್ತಾರೆ. ಹನುಮಂತ ದೇವರಲ್ಲಿ ಇವರಿಗೆ ಅಪಾರ ಭಕ್ತಿ. ತೀರ ಹಿಂದುಳಿದವರಲ್ಲಿ ಭೂತಾರಾಧನೆಗೆ ಮಹತ್ವವಿದೆ. ಕೊರವರ ಮುಖ್ಯದೇವತೆ ತಿರುಪತಿ ವೆಂಕಟರಮಣ. ಈ ದೇವರನ್ನು ಅವರು ತಿರುಪತಿ ತಿಮ್ಮಪ್ಪನೆಂದು ಕರೆಯುತ್ತಾರೆ. ಆಗಾಗ ತಿರುಪತಿಗೆ ಇರುವ ಯಾತ್ರೆಗೆ ಹೋಗುವುದೂ ಉಂಟು. ಮರಗಮ್ಮ ಮಾತೆಂಗೆಮ್ಮ, ಹುಲಿಗೆಮ್ಮಾ, ಎಲ್ಲಮ್ಮ ಇತ್ಯಾದಿ ದೇವತೆಗಳ ಶಕ್ತಿ ಉಪವಾಸನೆಯನ್ನು ಮಾಡುತ್ತಾರೆ ಕೆಲವಡೆ ಮುನಿಶ್ವರನೆಂಬ ಭೂತ ಪೂಜೆ ಬಳಕೆಯಲ್ಲಿದೆ, ಕುರಿ-ಆಡುಗಳನ್ನು ಈ ದೇವತೆಗಳಿಗೆ ಬಲಿಕೊಟ್ಟ ಅವುಗಳ ಮಾಂಸ ಭಕ್ಷಣ ಮಾಡುತ್ತಾರೆ. ಕೊರವರ ವಸತಿಯ ಬಳಿಯೇ ಯಾವುದಾದರೊಂದು ದೇವ ದೇವತೆಗುಡಿ ಅಥವಾ ಗುಡಿಸಲಿರುತ್ತದೆ. ಅವುಗಳಲ್ಲಿ ಕೊರವರು ತಮ್ಮದೇ ಆದ ವಿಶಿಷ್ಟ ಪೂಜೆ ಸಲ್ಲಿಸುತ್ತಾರೆ ಸಂಚಾರಿ ಕೊರವರೇ ಇರಲಿ ನೆಲೆ ನಿಂತ ಕೊರವರೇ ಇರಲಿ ಸ್ನಾನ ಮಾಡಿ ಸಮೀಪದಲ್ಲಿ ವಿಷ್ಣುವಿನ ಗುಡಿ ಇದ್ದರೆ ಅಲ್ಲಿಗೆ ಹೋಗಿ ಹೂ ಹಣ್ಣು ಸಮರ್ಪಿಸಿ ಪ್ರಸಾದ ಸ್ವೀಕರಿಸಿ ತದನಂತರ ಊಟ ಮಾಡುತ್ತಾರೆ, ಕೊರವರ ಮುಖ್ಯ ಹೆಣ್ಣು ದೇವತೆ ಮೂದೇವಿ, ನಿದ್ರೆಯ ದೇವತೆಯಾದ ಇವಳನ್ನು ಕೊರವ ಹೆಣ್ಣು ಮಕ್ಕಳು ವಿಚಿತ್ರ ರೀತಿಯಲ್ಲಿ ಪೂಜಿಸುತ್ತಾರೆ ಕುಡಿಯುತ್ತ ಕುಣಿಯುತ್ತ ಆ ದೇವತೆಗೆ ಪ್ರಾಣಿಗಳನ್ನು ಬಲಿಕೊಡುತ್ತಾರೆ. ಮಧ್ಯವನ್ನು ಹಂಚಲಾಗುತ್ತದೆ. ತಮಗೆ ನಿದ್ರೆ ಬರಬಾರದೆಂದು, ಕನ್ನ ಹಾಕುವ ಮನೆಯವರಿಗೆ ನಿದ್ರೆ ಆವರಿಸಬೇಕೆಂದೂ ಸಿಕ್ಕ ಬಿದ್ದ ತಮ್ಮ ತಮ್ಮ ವೃತ್ತ ಬಾಂಧವರು ಪಾರಾಗಲೆಂದು ಆ ದೇವತೆಯನ್ನು ಬೇಡಿಕೊಳ್ಳುತ್ತಾರೆ.

ಆಹಾರ ವೇಷ ಭೂಷಣ

ಆಹಾರ: ಕೊರುವರು ಕುರಿ, ಆಡು, ಕೋಳಿ, ಹಂದಿಗಳ ಮಾಂಸವನ್ನು ತಿನ್ನುತ್ತಾರೆ. ಎಲ್ಲ ಬಗೆಯ ಮೀನುಗಳ ಸೇವನೆಯೂ ಇದೆ. ಮೊಲಗಳ ಭೇಟೆಯಾಡಿ ಅವುಗಳ ಮಾಂಸಗಳನ್ನು ಆಹಾರಕ್ಕೆ ಬಳಸುವರು. ಆಕಳಿನ ಮಾಂಸವನ್ನು ತಿನ್ನುವುದಿಲ್ಲ ಮಂಗಗಳನ್ನು ಕೊಲ್ಲುವುದಿಲ್ಲ ಮಧ್ಯ ಸೇವನೆ ಇವರಲ್ಲಿ ಸರ್ವೇ ಸಾಮಾನ್ಯ ಮಾಂಸಹಾರವಲ್ಲದೆ ಸಸ್ಯ ಅಹಾರವು ಇವರು ಊಟದಲ್ಲಿ ಇರುತ್ತದೆ. ಗಂಡಸರು ಚೊಣ್ಣ, ರುಮಾರು, ಹಾಕಿಕೊಂಡು ಮೈಮೇಲೆ ಕಂಬಳಿ ಇಲ್ಲವೇ ಶಾಲು ಹೊದೆಯುವರು. ನಡುಕಟ್ಟು ಹಾಕಿರುತ್ತಾರೆ. ಕೆಲವರು ಕೋಟು ಹಾಕುವುದೂ ಉಂಟು. ಕಿವಿಯಲ್ಲಿ ಮೇಟಿ, ಮುರುವು ಧರಿಸುತ್ತಾರೆ, ಒಂದು ಕೈಯಲ್ಲಿ ಬೆಳ್ಳಿ ಅಥವಾ ತಾಮ್ರದ ಬಳೆ ಇರುತ್ತದೆ. ಊರುಗಳಲ್ಲಿ ವಾಸಿಸುವ ಸನಾದಿ ಕೊರವರು ಮೈ ತುಂಬಾ ಬಟ್ಟೆ ಧರಿಸುವರು. ಸ್ತ್ರೀಯರು (ಸಂಚಾತಿ ಕೊರವ) ಹಚ್ಚೆ ಚುಚ್ಚಿಸಿಕೊಳ್ಳುತ್ತಾರೆ. ತಾಯಿಯಾಗ ಪೂರ್ವದಲ್ಲಿ ಅವರು ಹಚ್ಚೆ ಹಾಕಿಸಿಕೊಳ್ಳುವುದು ಸಂಪ್ರದಾಯ. ಮೊದಲಸ ಹಚ್ಚೆ ಹಾಕಿಸಿಕೊಳ್ಳುವಾಗ ಸೋದರತ್ತೆಯನ್ನು ಆಮಂತ್ರಿಸುತ್ತಾರೆ. ಸಮಾರಂಭವನ್ನು ಏರ್ಪಡಿಸಿ ಅವಳಿಗೆ ಊಟ ಮಾಡಿಸಿ ಸೀರೆ ಕೊಡುತ್ತಾರೆ. ಇವರು ಸೀರೆ ಉಡುತ್ತಾರೆ. ಆದರೂ ಕುಪ್ಪಸ ತೊಟ್ಟು ಕೊಳ್ಳುವುದಿಲ್ಲ ಸನಾದಿ ಕೊರವ ಸ್ತ್ರೀಯರು ಹಾಗೂ ಊರ ಕೊರವರು ಕುಪ್ಪಸ ತೊಡುತ್ತಾರೆ. ಸಂಚಾರಿ ಕೊರವ ಸ್ತ್ರೀಯರು ಗಾಜಿನ ಮಣಿಗಳಿಂದ ಮಾಡಿದ ಸರವನ್ನು ಧರಿಸುತ್ತಾರೆ. ಬಳೆ ಕುಂಕುಮಗಳನ್ನು ಬಳಸುವರು.

ಭಾಷೆ : ಕೊರವರು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕನ್ನಡವನ್ನು ತೆಲಗನ್ನು ತಮಿಳನ್ನು ಬಲ್ಲವರಾಗಿರುತ್ತಾರೆ. ತಮ್ಮ ತಮ್ಮಲ್ಲಿ ಮಾತನಾಡುವಾಗ ಬೇರೆ ಬೇರೆ ಭಾಷೆಗಳಿಂದ ಆಯ್ದುಕೊಂಡ ಶಬ್ದಗಳ ಅಪಭ್ರಂಶಗಳಿಂದ ಕೂಡಿದ ಭಾಷೆಯನ್ನು ಬಳಸುತ್ತಾರೆ. ಸಾಮಾಜಿಕ ಸ್ಥಿತಿ ಸಮಾಜದ ಕುಲ ಶ್ರೇಣಿಯಲ್ಲಿ ಇವರು ಸ್ಥಿತಿ ಹೇಳಿಕೊಳ್ಳುವಂತಹದಿಲ್ಲ ನಾಯಿಯಿಂದ ಆಗಸ, ಮೇದಾರ ಮೊದಲಾವರಿಗರುವಂತಹ ಸ್ಥಾನಮಾನಗಳು ಊರಲ್ಲಿ ವಾಸಿಸುವ ಕೊರವರಿಗೆ ಇರುವದಾದರೂ ಸಂಚಾರಿ ಕೊರವರಿಗೆ ಈ ಭಾಗ್ಯವೂ ಇಲ್ಲ ಹಳ್ಳಿಗಳಲ್ಲಿ ಕೊರವರು ಬ್ರಾಹ್ಮಣರ ಕೇರಿಗಳನ್ನು ಬಿಟ್ಟು ಉಳಿದ ಕಲದವರು ವಾಸಿಸುವ ಸ್ಥಳದಲ್ಲಿ ವಾಸಿಸುತ್ತಾರೆ. ಬಿದಿನ ಕೆಲಸ ಮಾಡುವ ಮೇದಾರರು ಇವರನ್ನು ತಮಗಿಂತ ಕಡಿಮೆ ಎಂದು ಭಾವಿಸುತ್ತಾರೆ. ಕೊರವರ ಮನೆಯಲ್ಲಿ ಹರಿಜನರು, ಮಾದಿಗರು ಮಾತ್ರ ಊಟ ಮಾಡುತ್ತಾರೆ, ಮೇಲು ಕುಲದವರ ದೇವಾಲಯಗಳಲ್ಲಿ ಇವರಿಗೆ ಪ್ರವೇಶವಿಲ್ಲ. ಆದರೆ ಸರಕಾರ ಇತ್ತೀಚಿಗೆ ಇಂಥ ಹಿಂದುಳಿಂದ ಜನಾಂಗಗಳ ಬಗ್ಗೆ ವಹಿಸಿರುವ ಅಸಕ್ತಿ ಅವರ ಸುಧಾರಣೆಗೆ ಕೈಗೊಂಡ ಯೋಜನೆಗಳ ಫಲವಾಗಿ ಈಗ ಪರಿಸ್ಥಿತಿ ಭಿನ್ನವಾಗಿದೆ.

ಒಟ್ಟಿನಲ್ಲಿ ಕೊರಚರು ಅಥವಾ ಕೊರವರು ದಕ್ಷಣ ಭಾರತದ ಮೂಲನಿವಾಸಿಗಳೆಂಬುವುದು ನಿಜ. ತಮಿಳು ನಾಡಿನ ಕಳ್ಳ ಕೊರವರೆ ಬೇರೆ ಬೇರೆ ಪ್ರಾಂತಗಳಲ್ಲಿ ಹಚ್ಚಿ ಬೇರೆ ಬೇರೆ ಹೆಸರಿನಿಂದ ಜೀವಿಸುತ್ತಿರುವರೆಂದು ವಿದ್ವಾಂಸರ ಮತ. ಭಾರತದ ಎಲ್ಲಾ ಕಡೆಗೆ ಇವರು ಕಂಡು ಬರುತ್ತಾರೆ. ಹೊಟ್ಟೆ ಹೊರೆಯಲು ಪ್ರಾಮಾಣಿಕ ಉದ್ಯೋಗ ದೊರೆಯದೆ ಕಳ್ಳತನವನ್ನೇ ಸುವ್ಯವಸ್ಥಿತ ರೀತಿಯಲ್ಲಿ ನಡೆಯಿಸಿಕೊಂಡು ಬರುತ್ತಿದ್ದಾರೆ. ಈಪ್ಸಿಗಳನ್ನು ಹೋಲುವ ಸಂಚಾರಿ ಕೊರವರು ಒಂದೆಡೆ ನೆಲೆನಿಲ್ಲದೆ ಹಳ್ಳಿಯಿಂದ ಹಳ್ಳಿಗೆ ತಿರುಗುತ್ತಾರೆ. ಪೋಲಿಸ್ ದಾಖಲೆಗಳಲ್ಲಿ ಇವರನ್ನು ಅಪರಾಧಿ ಜನಾಂಗವೆಂದು ನಮೂದಿಸಲಾಗಿದೆ. ಇವರದು ಸುವ್ಯವಸ್ಥಿತ ಬುಡಕಟ್ಟಿನ ಜನಾಂಗ. ಕಳವು ಮಾಡುವಾಗ ಇವರು ಕೊಲೆ ಮಾಡದಿರುವದು ಒಂದು ವಿಶೇಷ. ಪೋಲಿಸರಿಗೆ ಚೆಳ್ಳೆಕಾಯಿ ತಿನ್ನಿಸುವಷ್ಟು ಬುದ್ದಿವಂತರು. ಈಗೀಗ ಒಂದೆಡೆ ನೆಲೆಸಲಾರಂಭಿಸಿದ್ದಾರೆ. ಸಾಂಸ್ಕೃತಿಕವಾಗಿ ಕನ್ನಡ ಜನಪದ ಲೋಕಕ್ಕೆ ಕೊರವ ಜನಾಂಗದವರು ಸಾಕಷ್ಟು  ಕೊಡುಗೆಗಳನ್ನು ನೀಡಿದ್ದರು ಕೂಡ ಇವರ ಅಲ್ಲಲ್ಲಿ ಚದುರಿ ಹೋಗಿದ್ದಾರೆ. ಜೊತೆಗೆ ಕೆಲವೊಂದು ಕಾರಣಗಳಿಂದಾಗಿ ಸಮಾಜದ ಮುಖ್ಯವಾಹಿಯಿಂದ ಇನ್ನೂ ದೂರವಿರುವರು.

* * *